ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರಕ್ಕೆ ಆರ್‌ಎಸ್‌ಎಸ್ ಮುಖವಾಣಿ ಎಚ್ಚರಿಕೆ!

Date:

ಆಗಸ್ಟ್ 17ರ ಸಂಚಿಕೆಯ ಲೇಖನವೊಂದರಲ್ಲಿ ಸ್ವಸ್ತಿಕಾ, "ರಾಜ್ಯದ ಕೈಗಾರಿಕಾ ವಲಯದಲ್ಲಿ ಅಪನಂಬಿಕೆಯ ವಾತಾವರಣ ಆವರಿಸಿದ್ದು, ಅದನ್ನು ಹೋಗಲಾಡಿಸಬೇಕು. ಪಕ್ಷಕ್ಕೆ ನುಸುಳಿರುವ ಶೇ 5ರಷ್ಟು ಗೂಂಡಾಗಳನ್ನು ಬಿಜೆಪಿ ತೊಲಗಿಸಬೇಕು” ಎಂದು ಪ್ರಕಟಿಸಿತ್ತು.

ಪಶ್ಚಿಮ ಬಂಗಾಲದ ಆರ್‌ಎಸ್‌ಎಸ್ ಮುಖವಾಣಿ ‘ಸ್ವಸ್ತಿಕಾ’ ವಾರಪತ್ರಿಕೆಯು ಇಲ್ಲಿನ ಆಡಳಿತರೂಢ ಬಿಜೆಪಿಗೆ ಎಚ್ಚರಿಕೆಯನ್ನು ರವಾನಿಸಿದೆ. ವಿರೋಧ ಪಕ್ಷಗಳಿಗೆ ಬಲವಿಲ್ಲದಿದ್ದರೂ ಜನರ ವಿರೋಧ ಕಟ್ಟಿಕೊಂಡರೆ ಉಳಿಗಾಲವಿಲ್ಲ ಎಂಬ ಭವಿಷ್ಯವನ್ನು ನುಡಿದಿದೆ.

- Advertisement -

“ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರಿಸುತ್ತಿರುವ ನಿಜವಾದ ಸವಾಲು- ಯಾವುದೇ ವಿರೋಧ ಪಕ್ಷದ ಬೆಳೆಯುವಿಕೆಯಲ್ಲ, ಬದಲಾಗಿ ಜನರು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವುದಾಗಿದೆ” ಎಂದು ಇತ್ತೀಚಿನ ಸಂಚಿಕೆಯಲ್ಲಿ ಅಭಿಪ್ರಾಯಪಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಬಿಜೆಪಿಯೊಳಗಿನ ಗೂಂಡಾ ಸಂಸ್ಕೃತಿಯ ಕುರಿತು ಪದೇಪದೇ ಮಾತನಾಡುತ್ತಿರುವ ‘ಸ್ವಸ್ತಿಕಾ’ ವಾರಪತ್ರಿಕೆ, “ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷವು ಗೂಂಡಾ ಪ್ರವೃತ್ತಿಯಿಂದಾಗಿಯೇ ಜನರ ವಿಶ್ವಾಸ ಕಳೆದುಕೊಂಡಿತು. ಬಿಜೆಪಿ ಇದನ್ನು ಮರೆಯಬಾರದು” ಎಂದು ಕುಟುಕಿದೆ.

“ರಾಜಕೀಯ ಪಕ್ಷಗಳು ಶಕ್ತಿಶಾಲಿ ಆಗುತ್ತಿರುವುದು ಸವಾಲಲ್ಲ. ಬಿಜೆಪಿಯನ್ನು ಎದುರಿಸಲು ಯಾವುದೇ ವಿರೋಧ ಪಕ್ಷವಿಲ್ಲ. ಆದರೆ ಜನರ ಎದುರು ನಿಲ್ಲುವ ಒತ್ತಡ ಪಕ್ಷಕ್ಕಿದೆ. ಇದು ವಿರೋಧ ಪಕ್ಷಕ್ಕಿಂತಲೂ ಹೆಚ್ಚು ಪ್ರಬಲವಾದದ್ದು” ಎಂದು ಪ್ರಕಟಿತ ಲೇಖನವೊಂದರಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿರಿ: ಹರಿಯಾಣ ಖಾಪ್‌ ಪಂಚಾಯತ್‌ಗಳನ್ನು ‘ಜೆನ್‌ ಝೀ’ ವಿರೋಧಿಸುತ್ತಿರುವುದೇಕೆ?

ಪಶ್ಚಿಮ ಬಂಗಾಳದ ಜನರಿಂದ ಚುನಾವಣೆಯಲ್ಲಿ ತಿರಸ್ಕರಿಸಲ್ಪಟ್ಟ ರಾಜಕೀಯ ಪಕ್ಷವೊಂದು ಒಮ್ಮೆ ಸೋತರೆ, ಎಂದಿಗೂ ಮರುಪ್ರವೇಶ ಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ಎತ್ತಿ ತೋರಿಸಿರುವ ಲೇಖನವು, “15 ವರ್ಷಗಳ ಭ್ರಷ್ಟ ಸರ್ಕಾರವು ಸರ್ವನಾಶವಾಗಿದೆ. ಎಡರಂಗ ಮತ್ತು ಕಾಂಗ್ರೆಸ್ ಪಕ್ಷಗಳು ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ನಗಣ್ಯ ಶಕ್ತಿಗಳಾಗಿ ಮಾರ್ಪಟ್ಟಿವೆ. ಈಗ ಬಿಜೆಪಿಯ ಮುಂದೆ ಮುಕ್ತ ಮೈದಾನವಿದೆ” ಎಂದಿದೆ.

swatika
‘ಸ್ವಸ್ತಿಕಾ’ ವಾರಪತ್ರಿಕೆ

“ಈಗಿನ ಬಿಜೆಪಿ ಕೂಡ ರಾಜ್ಯವನ್ನು 15 ವರ್ಷಗಳ ಕಾಲ ಆಳಿದ (ತೃಣಮೂಲ) ಗೂಂಡಾಗಳ ಪ್ರತಿರೂಪವೆಂದು ಶೇ 2ರಷ್ಟು ಮತದಾರರಿಗೆ ಅನಿಸಿದರೂ ಸಾಕು, ಶೇ 90ರಷ್ಟು ಮತದಾರರು ಬಿಜೆಪಿಯಿಂದ ದೂರ ಸರಿಯಲಿದ್ದಾರೆ” ಎಂದು ಮುನ್ಸೂಚನೆ ನೀಡಿದೆ.

ಆಗಸ್ಟ್ 17ರ ಸಂಚಿಕೆಯ ಲೇಖನವೊಂದರಲ್ಲಿ ಸ್ವಸ್ತಿಕಾ, “ರಾಜ್ಯದ ಕೈಗಾರಿಕಾ ವಲಯದಲ್ಲಿ ಅಪನಂಬಿಕೆಯ ವಾತಾವರಣ ಆವರಿಸಿದ್ದು, ಅದನ್ನು ಹೋಗಲಾಡಿಸಬೇಕು. ಪಕ್ಷಕ್ಕೆ ನುಸುಳಿರುವ ಶೇ 5ರಷ್ಟು ಗೂಂಡಾಗಳನ್ನು ಬಿಜೆಪಿ ತೊಲಗಿಸಬೇಕು” ಎಂದು ಪ್ರಕಟಿಸಿತ್ತು.

ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್ ಮತ್ತು ಜಾವೇದ್ ಖಾನ್ ರಂತಹ ನಾಯಕರ ವಿರುದ್ಧ ಬಿಜೆಪಿ ಏಕೆ ಕ್ರಮ ಕೈಗೊಳ್ಳುತ್ತಿಲ್ಲ, ಬದಲಿಗೆ ಅವರನ್ನು ಜತೆಗೇ ಕರೆದುಕೊಂಡು ಏಕೆ ಹೋಗುತ್ತಿದೆ ಎಂದು ಜನರು ಪ್ರಶ್ನಿಸಬಹುದು. ಬಿಜೆಪಿಯ ರಾಷ್ಟ್ರೀಯ ರಾಜಕಾರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದೆ.

ನೂರು ದಿನಗಳಲ್ಲಿ ನಾನಾ ಅವತಾರ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಇತ್ತೀಚೆಗಷ್ಟೇ ನೂರು ದಿನಗಳನ್ನು ಪೂರೈಸಿದೆ. ಆದರೆ ಈ ನೂರು ದಿನಗಳೊಳಗೆ ಸರ್ಕಾರ, ಜನರ ಆಂದೋಲನಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡಿದೆ. ಬಿಜೆಪಿ ಬೆಂಬಲಿಗರ ಪುಂಡಾಟಗಳು ವರದಿಯಾಗಿವೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶದ್ಯಾಂತ ಆಕ್ರೋಶ ಭುಗಿಲೆದ್ದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿಯೂ ಯುವಜನರು ಹೋರಾಟಕ್ಕೆ ಇಳಿದರು. ಜೆನ್‌ ಝೀಗಳನ್ನು ಚದುರಿಸಲು ಲಾಠಿ ಪ್ರಹಾರ ಮಾಡಲಾಯಿತು. ಗೃಹ ಖಾತೆಯನ್ನೂ ತಮ್ಮಲ್ಲೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಹೋರಾಟನಿರತ ಯುವಜನರನ್ನು “ವಿದೇಶಿ ಫಂಡ್ ಪಡೆದ ಮೂಲಭೂತವಾದಿಗಳು, ಶುಕ್ರವಾರ ಗೈರು ಹಾಜರಾಗಿರುವವರು” ಎಂದು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದರು. ಕೋಮು ಕೇಂದ್ರಿತ ಹೆಜ್ಜೆಗಳನ್ನು ಇಟ್ಟ ಸರ್ಕಾರ ಹಲವರನ್ನು ಬಂಧಿಸಿತು. ಇದನ್ನು ಕೊಲ್ಕತ್ತಾ ಹೈಕೋರ್ಟ್‌ ನಲ್ಲಿ ಪ್ರಶ್ನಿಸಲಾಯಿತು. ಕೊನೆಗೆ ಬಂಧಿಸಲ್ಪಟ್ಟವರಲ್ಲಿ ಅನೇಕರನ್ನು ಬಿಡುಗಡೆ ಮಾಡಬೇಕಾಯಿತು.

ಸಿಜೆಪಿ ಕೈಗೊಡಿದ್ದ ‘ಸ್ಕೂಲ್ ಥಿಕ್ ಕರೋ’ ಅಭಿಯಾನದ ಭಾಗವಾಗಿ ತಮ್ಮ ಗ್ರಾಮದ ಶಾಲೆಯ ಸ್ಥಿತಿಯನ್ನು ಅಬ್ದುಲ್ ಹಫೀಜ್ ಎಂಬ ಯುವಕ ತೋರಿಸಲು ಯತ್ನಿಸಿದ್ದನು. ಇದಕ್ಕೆ ಆಕ್ರೋಶಗೊಂಡ ಬಿಜೆಪಿ ಬೆಂಬಲಿಗರು ಯುವಕನ ಮನೆಗೆ ನುಗ್ಗಿ ಅಬ್ದುಲ್ ಮತ್ತು ಅವರ ತಂದೆ ಶೇಖ್ ಮೊಹಮ್ಮದ್ ಮಾಫಿಕ್ ಅವರನ್ನು ಥಳಿಸಿದ್ದರು. ಗಾಯಗೊಂಡಿದ್ದ ಮಾಫಿಕ್ ಸಾವಿಗೀಡಾಗಿದ್ದರು. ಕೊಂದವರು ಬಿಜೆಪಿಗರಲ್ಲ ಎಂದು ಸುವೇಂದು ಪ್ರತಿಕ್ರಿಯಿಸಿದರು. ಮೃತ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ವಿತರಿಸಿ, ಕೆಲವರನ್ನು ಬಂಧಿಸಿದೆ. ಆದರೆ ಬಂಗಾಳದಲ್ಲಿ ದ್ವೇಷ ರಾಜಕಾರಣ ತಲೆ ಎತ್ತಿರುವುದು ಸುಳ್ಳಲ್ಲ.

ಇದನ್ನೂ ಓದಿರಿ: ಬಯಲಾಟದ ಉಳಿವಿಗೆ ಬೇಕಿದೆ ಹೊಸ ದಾರಿ: ಯುವಪೀಳಿಗೆ ಕೈ ಹಿಡಿದಾಗಲೇ ಜನಪದ ರಂಗಕಲೆಗೆ ಭವಿಷ್ಯ

ಆಗಸ್ಟ್ 20 ಮತ್ತು 21 ರ ಮಧ್ಯರಾತ್ರಿ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿಯೂ ಇದೇ ರೀತಿಯ ಇಕ್ಕಟ್ಟು ಮುನ್ನಲೆಗೆ ಬಂದಿತು. ಎಬಿವಿಪಿ ಕಾರ್ಯಕರ್ತರು ಮುಖ್ಯ ಆಡಳಿತ ಕಟ್ಟಡದ ಮೇಲೆ ದಾಳಿ ಮಾಡಿ ದಿಗ್ಗಜ ಭಾರತೀಯ ಕಲಾವಿದ ನಂದಲಾಲ್ ಬೋಸ್ ಅವರು ವಿನ್ಯಾಸಗೊಳಿಸಿದ ಐತಿಹಾಸಿಕ ಲಾಂಛನವನ್ನು ತುಳಿದುಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, “ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಕುಚ್ ನಹಿ ಹುವಾ” (“ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಏನೂ ಸಂಭವಿಸಿಲ್ಲ”) ಎಂದರು.

“ಭಾಯ್ ನೊಯ್, ಭೋರ್ಷಾ” (“ಭಯವಲ್ಲ, ವಿಶ್ವಾಸ”) ಎಂಬುದು ಬಿಜೆಪಿಯ ಪ್ರಮುಖ ಘೋಷಣೆಯಾಗಿತ್ತು. ರಾಜಕೀಯ ಹಿಂಸಾಚಾರ ಮತ್ತು ಧ್ರುವೀಕರಣದಿಂದ ಸುಸ್ತಾಗಿರುವ ಮತದಾರರಿಗೆ ನೀಡಿದ ಕರೆ ಇದಾಗಿತ್ತು. ಆದರೆ ಬಂಗಾಲದಲ್ಲಿ ಅಧಿಕಾರ ಹಿಡಿದ ದಿನಗಳಿಂದಲೇ ವಿರೋಧಿಗಳನ್ನು, ಭಿನ್ನಾಭಿಪ್ರಾಯ ಉಳ್ಳವರನ್ನು ದಮನ ಮಾಡುವ ದ್ವೇಷ ರಾಜಕೀಯ ಬಿರುಸಾಗಿರುವುದು ಕಂಡುಬರುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2 ರೂ.ಗಾಗಿ ಆಸೆಪಟ್ಟ ಹೋಟೆಲ್‌ಗೆ 1 ಲಕ್ಷ ರೂ. ದಂಡ!

ಮುದ್ರಿತ ‘ಗರಿಷ್ಠ ಚಿಲ್ಲರೆ ಬೆಲೆ’ಗಿಂತ (MRP) 2 ರೂಪಾಯಿ ಹೆಚ್ಚುವರಿ ವಸೂಲಿ...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ...

ಸಮಯೋಚಿತ ಕ್ರಮದಿಂದ ದೊಡ್ಡ ಮಟ್ಟದ ಅಶಾಂತಿ ತಪ್ಪಿತು: ಸುಪ್ರೀಂಗೆ ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಕೈಗೊಂಡ ಸಮಯೋಚಿತ,...