ಖರ್ಗೆಯವರೇ ನಿಮ್ಮನ್ನು ಮುಟ್ಟಿದರೆ ಮತ್ತೆ ಮೂಗು ಒರೆಸಿದೆ ಅಂತಾರೇನೋ: ರಾಹುಲ್ ಗಾಂಧಿ ವ್ಯಂಗ್ಯ

Date:

  • ಖರ್ಗೆ ಅವರು ಗಾಂಧಿ ಕುಟುಂಬಕ್ಕೆ ಟಿಶ್ಯೂ ಪೇಪರ್ ಎಂದಿದ್ದ ಬಿಜೆಪಿ
  • ಬಿಜೆಪಿ ಟೀಕೆ ಪ್ರಸ್ತಾಪಿಸಿದ ಕೈ ನಾಯಕರ ಕಾಲೆಳೆದ ರಾಹುಲ್ ಗಾಂಧಿ

ಮಲ್ಲಿಕಾರ್ಜುನ ಖರ್ಗೆಯವರೇ ಈಗ ನಾನು ನಿಮ್ಮನ್ನು ಮುಟ್ಟಿದರೆ ನಿಮ್ಮ ಬೆನ್ನಿಗೆ ಮೂಗು ಒರೆಸುತ್ತಿದ್ದೀನಿ ಅಂತಾರೇನೋ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನು ಮುಟ್ಟಿ ತಮ್ಮ ಜೊತೆಗೆ ಕಾರಿನಲ್ಲಿ ಕುಳಿತುಕೊಳ್ಳುವಂತೆ ಕರೆದ ವಿಡಿಯೋವೊಂದನ್ನು ಎಡಿಟ್ ಮಾಡಿ ಕೇವಲ ಬೆನ್ನು ಮುಟ್ಟಿದ ಭಾಗವನ್ನಷ್ಟೇ ಮುಂದಿಟ್ಟು ಕರ್ನಾಟಕ ಬಿಜೆಪಿ ವೈರಲ್ ಮಾಡಿತ್ತು.

ಬಿಜೆಪಿಯಂತೂ, “ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನಿಗೆ ಮೂಗು ಒರೆಸಿದ್ದಾರೆ. ಕಾಂಗ್ರೆಸ್‌ನ ಉನ್ನತ ನಾಯಕನನ್ನು ಗಾಂಧಿ ಪರಿವಾರ ‘ಟಿಶ್ಯೂ ಪೇಪರ್‌’ನಂತೆ ಬಳಸಿಕೊಳ್ಳುತ್ತಿದೆ” ಎಂದು ಟೀಕಿಸಿತ್ತು.

ಬಿಜೆಪಿ ಹಂಚಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ರಾಹುಲ್ ಗಾಂಧಿ ಬಿಜೆಪಿಗರಿಗೆ ಟಾಂಗ್ ಕೊಟ್ಟಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದರು. ಬಳಿಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಹೊರಬರುತ್ತಿದ್ದ ವೇಳೆ ಈ ವಿಚಾರವನ್ನು ರಾಹುಲ್ ಎತ್ತಿದ್ದರು. ವೈರಲ್ ವಿಡಿಯೋವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿವರಿಸಿ, “ಖರ್ಗೆ ಅವರೇ, ನಾನು ನಿಮ್ಮನ್ನು ಮುಟ್ಟಿದರೆ ಮತ್ತೆ ಮೂಗು ಒರೆಸಿದೆ ಎನ್ನುತ್ತಾರೆನೋ” ಎಂದು ವ್ಯಂಗ್ಯವಾಡಿದ್ದಾರೆ.

“ನೀವು ಆ ವಿಡಿಯೋ ನೋಡಿದ್ರಾ? ನಾನು ನಿಮಗೆ ಸಹಾಯ ಮಾಡುವ ಉದ್ದೇಶದಿಂದ ನಿಮ್ಮ ಬೆನ್ನು ಮುಟ್ಟಿದೆ. ಆದರೆ, ಅವರು ನಿಮ್ಮ ಬೆನ್ನಿಗೆ ಮೂಗು ಒರೆಸಿದ್ದೇನೆ ಎಂದು ಅಪಪ್ರಚಾರ ಮಾಡಿದರು. ನೋಡಿ ಎಂಥಾ ಅವಿವೇಕ ಇದು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಹಿಂದೆ ಕಾರಿನಿಂದ ಇಳಿದು ಹೋಗುತ್ತಿರುವಾಗ ಮಲ್ಲಿಕಾರ್ಜುನ ಖರ್ಗೆಯವರು ಮುಂದಿದ್ದರು ಆಗ ರಾಹುಲ್ ಗಾಂಧಿ ಮುಖದ ಮೇಲೆ ಬೆರಳಿಟ್ಟು ಬಳಿಕ ಖರ್ಗೆಯವರನ್ನು ಮುಟ್ಟಿದ್ದರು ಆಗ ಬಿಜೆಪಿಯು ರಾಹುಲ್ ಗಾಂಧಿಯವರು ಖರ್ಗೆಯವರನ್ನು ಟಿಶ್ಯೂ ಪೇಪರ್​ನಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಜೋರಾಂ | ಝೆಡ್‌ಪಿಎಂಗೆ ಬಹುಮತ: ಇಂದಿರಾ ಭದ್ರತಾ ಉಸ್ತುವಾರಿಯಾಗಿದ್ದವ ನೂತನ ಸಿಎಂ !

ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಒಟ್ಟು 40...

ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಸಾಮಾಜಿಕ ಹೋರಾಟಗಾರ ಸಿ ಎಸ್ ​ಸಿದ್ದರಾಜು ಅವರಿಂದ ದೂರು ಚುನಾವಣಾ...

2022 ರಲ್ಲಿ ದೇಶದಲ್ಲಿ 28,522 ಕೊಲೆ ಪ್ರಕರಣಗಳು ದಾಖಲು: ಉತ್ತರ ಪ್ರದೇಶ ಹೆಚ್ಚು

ದೇಶದಲ್ಲಿ 2022ರಲ್ಲಿ ಒಟ್ಟು 28,522 ಕೊಲೆಗಳ ಎಫ್ಐಆರ್‌ಗಳು ದಾಖಲಾಗಿವೆ ಎಂದು ರಾಷ್ಟ್ರೀಯ...