- ಐವರು ನೇಕಾರರಿಗೆ ಟಿಕೆಟ್ ನೀಡುವಂತೆ ಸ್ವಾಮೀಜಿಗಳ ಆಗ್ರಹ
- ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದ ಸಮುದಾಯದ ಮುಖಂಡರು
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೇಕಾರ ಸಮುದಾಯದ ಐವರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ನೇಕಾರ ಸಮುದಾಯದ ಸ್ವಾಮೀಜಿಗಳು ಬಿಜೆಪಿಯನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸ್ವಾಮೀಜಿಗಳು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕುರುಹೀನಶೆಟ್ಟಿ ಸಮಾಜದ ಜಗದ್ಗುರುಗಳಾದ ಶಿವಶಂಕರ ಮಹಾಸ್ವಾಮೀಜಿ ಮತ್ತು ಹಟಗಾರ ಸಮಾಜದ ಜಗದ್ಗುರುಗಳಾದ ಚನ್ನಬಸವ ದೇವರು ಆಳಂದ ಇವರು ಬಿಜೆಪಿ ನಾಯಕರನ್ನು ಭೇಟಿಯಾದರು.
ಈ ವೇಳೆ ತೇರದಾಳ ಮತಕ್ಷೇತ್ರವನ್ನೂ ಒಳಗೊಂಡಂತೆ ರಾಜ್ಯದ 5 ಕಡೆಗಳಲ್ಲಿ ನೇಕಾರರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿಗಳು, ತೇರದಾಳ ಮತಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ, ಹಟಗಾರ ಸಮುದಾಯದ ರಾಜೇಂದ್ರ ಅಂಬಲಿ ಹಾಗೂ ಕುರುಹೀನಶೆಟ್ಟಿ ಸಮಾಜದಿಂದ ಮನೋಹರ ಶಿರೋಳ ಅವರಿಗೆ ಟಿಕೆಟ್ ಕೊಡಬೇಕೆಂದು ಆಗ್ರಹಿಸಿದರು.