ನಾನು ಜನರಿಗೆ ಪರಿಚಯವಾಗಲು ಯಡಿಯೂರಪ್ಪ ಕೊಟ್ಟ ಅವಕಾಶ ಕಾರಣ: ಕುಮಾರಸ್ವಾಮಿ

Date:

ಕುಮಾರಸ್ವಾಮಿ ಜನರಿಗೆ ಪರಿಚಯವಾಗಲು 2006ರಲ್ಲಿ ನನಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದ ಯಡಿಯೂರಪ್ಪನವರೇ ಕಾರಣ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ 19 ಜನ ಎನ್‍ಡಿಎ ಸಂಸದರ ಸನ್ಮಾನ, ರಾಜ್ಯದ ಕೇಂದ್ರ ಸಚಿವರ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮ, ನಾಡಿನ ಜನತೆಯ ಆಶೀರ್ವಾದಕ್ಕೆ ಧನ್ಯವಾದ ತಿಳಿಸಿದರು.

“ನಾಡಿನ ಜನತೆ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಶಾಶ್ವತ ಇರಬೇಕು ಎಂದು ಬಯಸಿದ್ದರು. ಹೊಂದಾಣಿಕೆ ಮುಂದುವರಿಯಬೇಕೆಂಬುದು ನನ್ನ ಸ್ವಂತ ಇಚ್ಛೆ ಕೂಡ ಆಗಿತ್ತು. ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಲು ಆಗದ್ದು ನನ್ನಿಂದಾದ ತಪ್ಪು ಅಲ್ಲ. ಕೆಲವರು ಕುತಂತ್ರ ಮಾಡಿದ ಕಾರಣಕ್ಕೆ ಆ ರೀತಿ ಆಯಿತು. ಆಗ ನಮ್ಮಿಂದ ಆದ ತಪ್ಪಿನಿಂದ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಉಳಿದುಕೊಂಡಿದೆ. ಅಂದು ನಡೆದ ಘಟನೆಗಳು ಕೆಟ್ಟ ಘಟನೆಗಳು, ಕೆಟ್ಟ ಕನಸುಗಳು. ಬೇರೆ ಬೇರೆ ಸಮಸ್ಯೆಗಳು ಬಂದಿದ್ದರೂ ನಮ್ಮಲ್ಲಿ ಹೊಂದಾಣಿಕೆಯಲ್ಲಿ ಏನೂ ಸಮಸ್ಯೆ ಇರಲಿಲ್ಲ” ಎಂದು ಕುಮಾರಸ್ವಾಮಿ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಜೆಡಿಎಸ್- ಬಿಜೆಪಿ ಮೈತ್ರಿ ಅತ್ಯಂತ ಸಹಜವಾದುದು. ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಹೊಂದಾಣಿಕೆಯನ್ನು ಮುಕ್ತ ಮನಸ್ಸಿನಿಂದ ಒಪ್ಪಿ ಆಶೀರ್ವಾದ ಮಾಡಿದ್ದಾರೆ. ವಿಶ್ವದಲ್ಲೇ ಮೋದಿಯವರ ಬಗ್ಗೆ ಅತ್ಯಂತ ಗೌರವ- ವಿಶ್ವಾಸದ ಭಾವನೆ ಇದೆ” ಎಂದರು.

“ಸಚಿವ ಸೋಮಣ್ಣ ಅವರ ಇಲಾಖೆಯಲ್ಲಿ ರಾಜ್ಯಕ್ಕೆ ದೊಡ್ಡ ಮಟ್ಟದ ಅಭಿವೃದ್ಧಿ ತರಲು ಅವಕಾಶವಿದೆ. ಯಾವುದೇ ಸಣ್ಣಪುಟ್ಟ ಘರ್ಷಣೆಗಳು ಸ್ಥಳೀಯವಾಗಿ ಇದ್ದರೂ ಅಸೂಯೆ ಮನೋಭಾವ ಇಲ್ಲದೇ ಎರಡೂ ಪಕ್ಷಗಳ ಕಾರ್ಯಕರ್ತರು ಕೆಲಸ ಮಾಡಬೇಕು. ಬಿಬಿಎಂಪಿ, ಮೈಸೂರು ಮಹಾನಗರ ಪಾಲಿಕೆ, ಜಿಪಂ., ತಾ.ಪಂ ಚುನಾವಣೆಗಳು ನಮ್ಮ ಮುಂದೆ ಇವೆ. ಕಾಂಗ್ರೆಸ್ ವಿರುದ್ಧ ನಾವು ಜೊತೆಗೂಡಿ ಹೋರಾಟ ಮುಂದುವರಿಸಬೇಕು” ಎಂದು ಕರೆ ನೀಡಿದರು.

“ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಅಂತಾ ಕರ್ನಾಟಕದ ಸಿದ್ಧರು ಸಂದೇಶ ಕೊಟ್ಟಿದ್ದಾರೆ. ಹಿಂದೆ ಯಡಿಯೂರಪ್ಪ ಮತ್ತು ನಾನು ಮಾಡಿದ ರೀತಿಯ ಸರ್ಕಾರ ಮತ್ತೆ ರಾಜ್ಯದಲ್ಲಿ ತರಬೇಕು. ನಮ್ಮಲ್ಲಿ ಒಡಕು ತರುವ ಪ್ರಯತ್ನ ಆಗಬಹುದು. ಭಿನ್ನಾಭಿಪ್ರಾಯ, ಸಂಶಯ ಮೂಡಿಸಲು ಮಾಡುವ ಪ್ರಯತ್ನಕ್ಕೆ ಕಿವಿಗೊಡಬಾರದು” ಎಂದು ಅವರು ಕಾರ್ಯಕರ್ತರು, ನಾಯಕರಿಗೆ ಕಿವಿಮಾತು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ: ಮುತ್ತಪ್ಪ ಎಸ್ ಆಕ್ರೋಶ

ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿದ್ದು, ಪ್ರವೇಶ ಶುಲ್ಕದ ಹೆಸರಿನಲ್ಲಿ...

ರೈತನಿಗೆ ಅವಮಾನ | ಏಳು ದಿನ ಜಿ ಟಿ ಮಾಲ್‌ ಮುಚ್ಚಿಸಲು ರಾಜ್ಯ ಸರ್ಕಾರ ಕ್ರಮ

ರೈತರ ವಿಷಯದಲ್ಲಿ ಯಾರೇ ಅವಮಾನ ಮಾಡಿದರೂ ಸಹಿಸುವುದಿಲ್ಲ ಎಂದು ವಾರದ ಹಿಂದೆ...

ಯುಪಿ ಬಿಜೆಪಿಯಲ್ಲಿ ಯೋಗಿ-ಮೌರ್ಯ ನಡುವೆ ಗುದ್ದಾಟ; ಮೋದಿ-ಶಾ ಚರ್ಚೆ

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ತೀರಾ ಕಳಪೆ ಪ್ರದರ್ಶನ ನೀಡಿದೆ....

ಕನ್ನಡಿಗರಿಗೆ ಉದ್ಯೋಗ | ‘ಅಸ್ತು’ ಎಂದು ಹೆಜ್ಜೆ ಇಟ್ಟ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’: ವಿಜಯೇಂದ್ರ ವ್ಯಂಗ್ಯ

ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?...