ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಸಹಬಾಳ್ವೆಯ ಕಥನ- ಮಾದರಿಯಾದ ಹುಕ್ಕೇರಿಯ ಮುಸ್ಲಿಂ ದಂಪತಿ

Date:

ಹಿಂದು – ಮುಸ್ಲಿಂ ಎಂಬ ವಿಭಜನೆಯನ್ನೇ ರಾಜಕೀಯ ಬಂಡವಾಳವಾಗಿಸಿಕೊಂಡು, ದ್ವೇಷದ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿರುವ ಹೊತ್ತಿನಲ್ಲಿ, ‘ಮಾನವೀಯತೆಯೇ ಧರ್ಮ’ ಎಂಬ ಸಂದೇಶವನ್ನು ಸಾರುವ ಘಟನೆಗಳು ಸಮಾಜಕ್ಕೆ ನಿರಾಳತೆಯ ಉಸಿರನ್ನು ನೀಡುತ್ತಿವೆ. ಇಂತಹದ್ದೇ ಒಂದು ಸಹಬಾಳ್ವೆಯ ಹೃದಯಸ್ಪರ್ಶಿ ಘಟನೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

- Advertisement -

ದೇಶದಲ್ಲಿ ದ್ವೇಷವೇ ರಾಜಕೀಯ ಅಸ್ತ್ರವಾಗಿರುವ ಕಾಲವಿದು. ಟಿವಿ ಚರ್ಚೆಗಳಿಂದ ಹಿಡಿದು ಚಹಾ ಅಂಗಡಿಯ ಮಾತುಕತೆಗಳವರೆಗೂ ಹಿಂದು – ಮುಸ್ಲಿಂ ವಿಭಜನೆ ಬಗ್ಗೆ ವಿಷಕಾರುವ ಮಾತುಕತೆಗಳೇ. ಮುಸ್ಲಿಂ ಎಂಬ ಗುರುತನ್ನೇ ಅಪರಾಧವೆಂಬಂತೆ ಬಿಂಬಿಸಿ, ಒಂದು ಸಮುದಾಯವನ್ನು ಇಡೀ ದೇಶದ ಮುಂದೆ ಆರೋಪಿ ಸ್ಥಾನದಲ್ಲಿಡುವ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಂರು ಪಾಕಿಸ್ತಾನದವರು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನಗಳು ಎಗ್ಗಿಲ್ಲದೇ ನಡೆಯುತ್ತಿವೆ. ಆದರೆ, ಇಂತಹ ದ್ವೇಷ ಹರಡುವ ಘಟನೆಗಳಿಗೆ ಇತ್ತೀಚೆಗೆ, ದೇಶದಲ್ಲಿ ನಡೆದ ಸಹಬಾಳ್ವೆಯ ಘಟನೆಗಳು ಸವಾಲು ಹಾಕಿವೆ. ‘ದ್ವೇಷಕ್ಕಿಂತ ಮನುಷ್ಯತ್ವ ದೊಡ್ಡದು’ ಎಂಬುದನ್ನ ಸಾರಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇತ್ತೀಚೆಗೆ, ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ನಡೆದ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಬಜರಂಗದಳ ಕಾರ್ಯಕರ್ತರಿಂದ ಕಿರುಕುಳಕ್ಕೆ ಒಳಗಾಗಿದ್ದ 70 ವರ್ಷದ ಮುಸ್ಲಿಂ ವ್ಯಕ್ತಿಯ ಪರವಾಗಿ ನಿಂತ ದೀಪಕ್ ಕುಮಾರ್ ಅವರು ‘ಮೊಹಮ್ಮದ್ ದೀಪಕ್’ ಆದರು. ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ’ ತೆರೆದರು. ದ್ವೇಷಕ್ಕಿಂತ, ಧರ್ಮಕ್ಕಿಂತ ‘ಮಾನವೀಯತೆ’, ‘ಮನುಷ್ಯತ್ವವೇ’ ದೊಡ್ಡದು ಎಂದು ಇಡೀ ಜಗತ್ತಿಗೆ ತೋರಿಸಿ ಕೊಟ್ಟು ಹೀರೋ ಆದರು.

ಹಿಂದು – ಮುಸ್ಲಿಂ ಎಂಬ ವಿಭಜನೆಯನ್ನೇ ರಾಜಕೀಯ ಬಂಡವಾಳವಾಗಿಸಿಕೊಂಡು, ದ್ವೇಷದ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿರುವ ಹೊತ್ತಿನಲ್ಲಿ, ‘ಮಾನವೀಯತೆಯೇ ಧರ್ಮ’ ಎಂಬ ಸಂದೇಶವನ್ನು ಸಾರುವ ಘಟನೆಗಳು ಸಮಾಜಕ್ಕೆ ನಿರಾಳತೆಯ ಉಸಿರನ್ನು ನೀಡುತ್ತಿವೆ. ಇಂತಹದ್ದೇ ಒಂದು ಸಹಬಾಳ್ವೆಯ ಹೃದಯಸ್ಪರ್ಶಿ ಘಟನೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಹಿಂದು – ಮುಸ್ಲಿಂ ಎಂದು ಕಿತ್ತಾಟ ಹಚ್ಚುವವರ ನಡುವೆ, ಮನುಷ್ಯತ್ವವೇ ನಿಜವಾದ ಧರ್ಮ ಎಂದು ಮುಸ್ಲಿಂ ದಂಪತಿ ಸಾರಿದ್ದಾರೆ. ಧರ್ಮ ಎಂಬ ಬೇಗುದಿಗೆ ಬೀಳದೇ ಇರುವ ಇವರು ಚಿಕ್ಕ ವಯಸ್ಸಿನ ಹಿಂದು ಅನಾಥ ಮಕ್ಕಳನ್ನ ಕೈಬಿಡದೆ ತಮ್ಮ ಮಕ್ಕಳಂತೆ ಸಾಕಿ ಸಲುಹಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ್ದಾರೆ. ಇದು ಕೇವಲ ಒಂದು ಕುಟುಂಬದ ಕತೆಯಲ್ಲ, ಬದಲಾಗಿ ಈ ದ್ವೇಷ ರಾಜಕಾರಣಕ್ಕೆ, ಮತಾಂಧತೆಗೆ ಹಿಡಿದ ಕನ್ನಡಿಯಾಗಿದೆ.

task 01kh37kxm4ff0sfh12w07q5dja 1770709006 img 0

ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಮತ್ತು ನೂರ್ಜಾನ್ ದಂಪತಿಗಳು ಚಿಕ್ಕ ವಯಸ್ಸಿನಲ್ಲೇ ತಂದೆ – ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಹಿಂದೂ–ಲಿಂಗಾಯತ ಸಮಾಜದ ಶಿವಾನಂದ ಕಾಡಯ್ಯ ಪೂಜಾರ ದಂಪತಿಯ ಇಬ್ಬರು ಮಕ್ಕಳಾದ ಸೋಮಶೇಖರ್ (ನಾಲ್ಕು ವರ್ಷ), ವಸಂತ (ಎರಡು ವರ್ಷ) ಅವರನ್ನು ಸಾಕಿ ಸಲುಹಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೆಹಬೂಬ್ ಹಸನ್ ನಾಯಿಕವಾಡಿ ದಂಪತಿಗೂ ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಒಟ್ಟು ಏಳು ಮಕ್ಕಳನ್ನು ಒಂದೇ ಮನೆಯಲ್ಲಿಟ್ಟು, ಊಟ, ಬಟ್ಟೆ, ಶಿಕ್ಷಣ ಎಲ್ಲವನ್ನೂ ಸಮಾನವಾಗಿ ಕೊಟ್ಟು ನೋಡಿಕೊಂಡಿದ್ದಾರೆ. ಅನಾಥರಾಗಿ ದಿಕ್ಕಿಲ್ಲದೇ ಕುಳಿತಿದ್ದ ಮಕ್ಕಳಿಗೆ ದಾರಿದೀಪವಾಗಿದ್ದಾರೆ. ತಮ್ಮ ಮಕ್ಕಳ ಜತೆಗೆ ಇನ್ನಿಬ್ಬರು ಮಕ್ಕಳನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಪ್ರೀತಿ – ಕಾಳಜಿಯಿಂದ ಸಾಕಿದ್ದಾರೆ. ಕಷ್ಟದಲ್ಲಿಯೇ ಜೀವನ ನಡೆಯುತ್ತಿದ್ದರೂ ತಲೆಕೆಡಿಸಿಕೊಳ್ಳದೇ ತಮ್ಮೇಲ್ಲ ಮಕ್ಕಳನ್ನ ಓದಿಸಿ ಬೆಳೆಸಿದ್ದಾರೆ. ಇದರ ಪ್ರತಿಫಲವಾಗಿ ಸೋಮಶೇಖರ್ ಮತ್ತು ಪಿಯು ಪೂರ್ಣಗೊಳಿಸಿದ ವಸಂತ ಇಬ್ಬರೂ ಯಮಕನಮರಡಿ ಬಳಿಯ ವಿಶೇಷ ಆರ್ಥಿಕ ವಲಯದ ಏಕಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಮೃತ ಕಾಡಯ್ಯ ಪೂಜಾರ ಕೂಡ ಖಾಸಗಿ ಬಸ್ ಚಾಲಕರಾಗಿದ್ದರು.

ಈ ಸುದ್ದಿ ಓದಿದ್ದೀರಾ? ಮೆಟ್ರೋ ದರ ಏರಿಕೆ; ರಾಜ್ಯ ಅಥವಾ ಕೇಂದ್ರ ಯಾರು ಹೊಣೆ?

ಮಹಾರಾಷ್ಟ್ರದ ಗಡಹಿಂಗ್ಲಜ ತಾಲ್ಲೂಕಿನ ತನೂಡಿ ಗ್ರಾಮದ ಪೂನಂ ಹಿರಿಯ ಪುತ್ರ ಸೋಮಶೇಖರ್ (24) ಮದುವೆ ರವಿವಾರ ಕಾಡಸಿದ್ದೇಶ್ವರ ಸಭಾಭವನದಲ್ಲಿ ನಡೆಯಿತು. ಈ ಮದುವೆ ನಡೆದಿದ್ದು ಹಿಂದೂ ಸಂಪ್ರದಾಯದಂತೆ, ಮದುವೆಯ ವಧು – ವರರು ಹಿಂದೂಗಳು ಆದರೆ, ಈ ಮದುವೆಯ ಸಂಪೂರ್ಣ ಖರ್ಚು – ವೆಚ್ಚ, ಓಡಾಟ, ಕಾಳಜಿ ಮತ್ತು ಮದುವೆಯ ಸಂಪೂರ್ಣ ಜವಾಬ್ದಾರಿ ಮುಸ್ಲಿಂ ಕುಟುಂಬದ್ದಾಗಿದೆ.

ಮುಸ್ಲಿಂ ಮನೆತನದವರು ಹಿಂದೂ ಲಿಂಗಾಯತ ಸಂಪ್ರದಾಯದಂತೆ ಮದುವೆ ನೆರವೇರಿದಿದ್ದಾರೆ. ಈ ಮದುವೆಗೆ ನಾಯಿಕವಾಡಿ ಕುಟುಂಬದವರು, ಊರಿನ ಹಿರಿಯರು ಸಾಕ್ಷಿಯಾಗಿದ್ದಾರೆ.

ತಂದೆ–ತಾಯಿ ಇಲ್ಲದ ಆ ಮಕ್ಕಳ ಬದುಕಿಗೆ ಆಸರೆಯಾಗಿ ನಿಂತ ಈ ದಂಪತಿ, ಯಾವುದೇ ಧರ್ಮದ ಲೆಕ್ಕಾಚಾರವಿಲ್ಲದೆ, ಮಾನವೀಯತೆಯ ನೆಲೆಯಲ್ಲಿ ಅವರನ್ನು ಬೆಳೆಸಿದ್ದಾರೆ. ಶಿಕ್ಷಣ, ಆರೈಕೆ, ಸಂಸ್ಕಾರ—ಎಲ್ಲವನ್ನೂ ನೀಡಿದ ಅವರು, ಮಕ್ಕಳ ಜೀವನದ ಮಹತ್ವದ ಘಟ್ಟವಾದ ಮದುವೆಯನ್ನೂ ಹಿಂದೂ ಸಂಪ್ರದಾಯದ ಪ್ರಕಾರವೇ ನೆರವೇರಿಸಿದ್ದಾರೆ.
ಇದೊಂದು ಸರಳ ಘಟನೆ ಅಲ್ಲ; ದೇಶದಲ್ಲಿ ಹರಡುತ್ತಿರುವ ದ್ವೇಷದ ರಾಜಕಾರಣಕ್ಕೆ ಇದು ಸವಾಲು. ಒಂದು ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿಟ್ಟು ಬಿಂಬಿಸುವ ಕೋಮುವಾದಿ ರಾಜಕಾರಣಕ್ಕೆ ಈ ಘಟನೆ ತಿರುಗೇಟು ನೀಡುತ್ತದೆ.

ಮದುವೆ

ದ್ವೇಷ ಹಬ್ಬಿಸುವ ರಾಜಕಾರಣ ಎಷ್ಟೇ ಜೋರಾಗಿದ್ದರೂ, ಅದಕ್ಕಿಂತ ಜೋರಾಗಿರುವುದು ಈ ದೇಶದ ಮಣ್ಣಿನ ಗುಣವಾಗಿರುವ ಸಹಬಾಳ್ವೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲು ಯತ್ನಿಸುವವರಿಗೆ, “ಮನುಷ್ಯತ್ವವೇ ಧರ್ಮ” ಎಂದು ಗಟ್ಟಿಯಾಗಿ ಹೇಳುವ ಘಟನೆ ಇದು.

ಅನಾಥ ಹಿಂದು ಮಕ್ಕಳಿಗೆ ತಂದೆ–ತಾಯಿಯಾಗಿ ನಿಂತು, ಅವರ ಬದುಕಿನ ಅತಿ ಪವಿತ್ರ ಕ್ಷಣವಾದ ಮದುವೆಯನ್ನು ಅವರದೇ ಸಂಪ್ರದಾಯದಲ್ಲಿ ನೆರವೇರಿಸಿದ ಈ ದಂಪತಿ, ಮುಸ್ಲಿಂ ಸಮುದಾಯದ ಮೇಲೆ ವ್ಯವಸ್ಥಿತವಾಗಿ ಹೇರಲಾಗುತ್ತಿರುವ ಅಪವಾದಗಳಿಗೆ ಜೀವಂತ ತಿರುಗೇಟು ನೀಡಿದ್ದಾರೆ. ಮುಸ್ಲಿಮರು ಈ ದೇಶದ ಹೊರಗಿನವರು ಅಲ್ಲ, ಶತ್ರುಗಳಲ್ಲ; ಈ ನೆಲದ ಹಕ್ಕುದಾರ ನಾಗರಿಕರು ಎಂಬ ಸತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸುತ್ತದೆ.

ಇತಿಹಾಸ ಬರೆಯುವುದು ಅಧಿಕಾರದಲ್ಲಿರುವವರ ಭಾಷಣಗಳಿಂದಲ್ಲ, ಇಂತಹ ಮನುಷ್ಯತ್ವದ ಕಾರ್ಯಗಳಿಂದ. ದ್ವೇಷ ರಾಜಕಾರಣ ತಾತ್ಕಾಲಿಕವಾಗಿ ಗೆಲ್ಲಬಹುದು. ಆದರೆ, ಅಂತಿಮವಾಗಿ ಸಮಾಜವನ್ನು ಉಳಿಸುವುದು ಇಂತಹ ಸಹಬಾಳ್ವೆಯ ಕತೆಗಳೇ. ಬೆಳಗಾವಿಯ ಈ ಘಟನೆ, ಒಡೆದ ಮನಸ್ಸುಗಳಿಗೆ ಸೇತುವೆ ಕಟ್ಟುವ ಕೆಲಸ ಮಾಡುತ್ತದೆ. ಹಿಂದು – ಮುಸ್ಲಿಂ ಎಂದು ಅಬ್ಬರಿಸುವ ಹಿಂದುತ್ವವಾದಿಗಳು ಈ ಘಟನೆಯನ್ನ ಮನಗಂಡು ಇನ್ನಾದರೂ ಬದಲಾಗಬೇಕಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...