ಪ್ರೀಮಿಯಂ ಲೇಖನ | ಆಲ್ಕೋಹಾಲ್ ಹಿಂದಿನ ಕಥೆ-ವ್ಯಥೆ

Date:

ರಕ್ತದಲ್ಲಿನ ಆಲ್ಕೋಹಾಲ್‌ ಪ್ರಮಾಣ (BAC) ಶೇಕಡಾ 0.30ರಿಂದ 0.40 ಮೀರಿದರೆ, ಉಸಿರಾಟ ನಿಧಾನಗೊಳ್ಳುತ್ತದೆ, ಮೆದುಳಿನ ಕಾರ್ಯಶೀಲತೆ ಬಹುತೇಕ ನಿಲ್ಲುತ್ತದೆ. ಇದು ಕೋಮಾ ಹಂತ. ತಕ್ಷಣ ವೈದ್ಯಕೀಯ ನೆರವು ಸಿಗದಿದ್ದರೆ ಇದು ಮರಣವೂ ಸಂಭವಿಸಬಹುದು.

- Advertisement -

ಮನುಷ್ಯನ ಕೆಲವು ಚಟಗಳಲ್ಲಿ ಆಲ್ಕೋಹಾಲ್‌ ಕೂಡ ಒಂದು. ಹಬ್ಬ-ಹರಿದಿನ-ಸಮಾರಂಭಗಳಿಂದ ಹಿಡಿದು ಒತ್ತಡ ನಿವಾರಣೆಯವರೆಗೆ, ಸಂತೋಷದ ಕ್ಷಣಗಳನ್ನ ಸೆಲೆಬ್ರೇಟ್‌ ಮಾಡುವುದರಿಂದ ಹಿಡಿದು ದುಃಖ ಮರೆಸಿಕೊಳ್ಳುವ ತನಕ ಮದ್ಯಪಾನವನ್ನು ಸಮಾಜ ಹಲವು ರೀತಿಯಲ್ಲಿ ಒಪ್ಪಿಕೊಂಡಿದೆ. ಆದರೆ ಇದೇ ಆಲ್ಕೋಹಾಲ್‌ ಮನುಷ್ಯನ ದೇಹ, ಮನಸ್ಸು, ಕುಟುಂಬ ಮತ್ತು ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳು ದಿನೇದಿನೇ ಗಂಭೀರವಾಗುತ್ತಿವೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ನಿಯಮಿತವಾಗಿ ಮದ್ಯ ಸೇವಿಸುತ್ತಿರುವಾಗ, ಆಲ್ಕೋಹಾಲ್‌ ಕನ್ಸ್ಯೂಮಿಂಗ್‌ ಕುರಿತು ತಿಳಿದುಕೊಳ್ಳಲೇಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ಇತ್ತೀಚಿನ ಅಂಕಿ-ಅಂಶಗಳು ಆತಂಕಕಾರಿಯಾಗಿವೆ. ಜಗತ್ತಿನ ಸುಮಾರು 2.3 ಬಿಲಿಯನ್ ಜನರು ನಿಯಮಿತವಾಗಿ ಆಲ್ಕೋಹಾಲ್‌ ಸೇವಿಸುತ್ತಿದ್ದಾರೆ. ಪ್ರತಿವರ್ಷ 25 ರಿಂದ 30 ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಮದ್ಯಪಾನ ನೇರ ಅಥವಾ ಪರೋಕ್ಷ ಕಾರಣವಾಗುತ್ತಿದೆ. ಯುರೋಪ್‌, ರಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಪ್ರತಿ ವ್ಯಕ್ತಿಗೆ ಮದ್ಯ ಸೇವನೆಯ ಶೇಕಡಾವಾರು ಪ್ರಮಾಣ ಹೆಚ್ಚಿದ್ದರೆ, ಏಷ್ಯಾದಲ್ಲಿ ವಿಶೇಷವಾಗಿ ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆಯೇ ಗಣನೀಯವಾಗಿ ಏರಿಕೆಯಾಗುತ್ತಿದೆ.

NFHS-5 (National Family Health Survey-5) ವರದಿ ಪ್ರಕಾರ, ಭಾರತದಲ್ಲಿ ಸುಮಾರು ಶೇ.22 ರಿಂದ 24 ರಷ್ಟು ಪುರುಷರು ಆಲ್ಕೋಹಾಲ್‌ ಸೇವಿಸುತ್ತಾರೆ. ಮಹಿಳೆಯರಲ್ಲಿ ಈ ಪ್ರಮಾಣ ಶೇಕಡಾ 1 ಕ್ಕಿಂತ ಕಡಿಮೆ ಇದ್ದರೂ, ನಗರ ಪ್ರದೇಶಗಳಲ್ಲಿ ಅದು ನಿಧಾನವಾಗಿ ಏರುತ್ತಿರುವುದು ಗಮನಾರ್ಹ. ಗೋವಾ, ಅರುಣಾಚಲ ಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮದ್ಯಪಾನ ಹೆಚ್ಚು ಕಂಡುಬರುತ್ತದೆ. ಇತ್ತ, ಗುಜರಾತ್‌ ಮತ್ತು ಬಿಹಾರದಲ್ಲಿ ಕಾನೂನಾತ್ಮಕವಾಗಿ ಮದ್ಯ ನಿಷೇಧ ಇದ್ದರೂ, ಅಕ್ರಮ ಮದ್ಯದ ಸಮಸ್ಯೆ ಸಂಪೂರ್ಣವಾಗಿ ನಿಂತಿಲ್ಲ.

Advertisements

ಮದ್ಯಪಾನ ಚಟವಾಗಿ ಮಾರ್ಪಟ್ಟಾಗ ಅದು ಮೊದಲು ಹೊಡೆದುರುಳಿಸುವುದು ಮನುಷ್ಯನ ಮೆದುಳನ್ನು. ನಿಧಾನಕ್ಕೆ ಆಲ್ಕೋಹಾಲ್ ಕಿಕ್ಕು ಏರಿದಂತೆ‌ ಮೆದುಳಿನ ಕಾರ್ಯಕ್ಷಮತೆ ನಿಧಾನಗೊಳ್ಳುತ್ತದೆ. ಪ್ರತಿಕ್ರಿಯಿಸುವ ಸಮಯ ಕುಸಿಯುತ್ತದೆ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಳಾಗುತ್ತದೆ, ಸ್ಮರಣೆ ದುರ್ಬಲವಾಗುತ್ತದೆ. ಪೆಗ್‌ ಮೇಲೆ ಪೆಗ್‌ ಏರಿಸಿದವರು ತೂರಾಡುವುದನ್ನು ನೋಡಿ ನಾವಿದನ್ನು ಅರ್ಥೈಸಬಹುದು.  ದೀರ್ಘಾವಧಿಯಲ್ಲಿ ಇದು ಡಿಪ್ರೆಷನ್‌, ಆಂಗ್ಸೈಟಿ ಮತ್ತು ಆಲ್ಕೋಹಾಲ್‌ ಅವಲಂಬನೆ (dependence)ಗೆ ಅಥವಾ ಡೀಪ್‌ ಅಡಿಕ್ಷನ್‌ಗೆ ದಾರಿ ಮಾಡಿಕೊಡುತ್ತದೆ. ನರ ವ್ಯವಸ್ಥೆಯ ಮೇಲೆ ಆಗುವ ಈ ಪರಿಣಾಮವೇ ಅನೇಕ ಅಪಘಾತಗಳು ಮತ್ತು ಹಿಂಸಾಚಾರಗಳ ಮೂಲವಾಗುತ್ತದೆ.

ಹಾಗಾದರೆ ಎಷ್ಟು ಪ್ರಮಾಣದ ಆಲ್ಕೋಹಾಲ್‌ ಕಡಿಮೆ ಅಪಾಯ?

WHO ಪ್ರಕಾರ ʼಯಾವ ಪ್ರಮಾಣದ ಆಲ್ಕೋಹಾಲ್‌ ಕೂಡ ಸಂಪೂರ್ಣವಾಗಿ ಸುರಕ್ಷಿತವಲ್ಲʼ. ಆದರೂ, ಸಾಮಾನ್ಯ ಮಾರ್ಗಸೂಚಿಗಳ ಪ್ರಕಾರ ಪುರುಷರು ದಿನಕ್ಕೆ ಒಂದು ಅಥವಾ ಎರಡು ಸ್ಟ್ಯಾಂಡರ್ಡ್‌ ಡ್ರಿಂಕ್‌ಗಿಂತ ಹೆಚ್ಚು ಸೇವಿಸಬಾರದು; ಮಹಿಳೆಯರು ದಿನಕ್ಕೆ ಒಂದು ಡ್ರಿಂಕ್‌ ಮೀರಬಾರದು. ಸಾಮಾನ್ಯವಾಗಿ ಬೀರ್‌ನಲ್ಲಿ ಶೇ.4-6 ಕಡಾ, ವೈನ್‌ನಲ್ಲಿ ಶೇ.10-14 ಮತ್ತು ವಿಸ್ಕಿ ಅಥವಾ ರಮ್‌ನಲ್ಲಿ ಸುಮಾರು ಶೇ.40 ರಷ್ಟು ಆಲ್ಕೋಹಾಲ್‌ ಇರುತ್ತದೆ.

ಈ ಪ್ರಯೋಜನವನ್ನು ನೀವು ವ್ಯಾಯಾಮ, ಹಣ್ಣುಗಳು ಮತ್ತು ಉತ್ತಮ ಆಹಾರ ಪದ್ಧತಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪಡೆಯಬಹುದು. ​​ಒಂದು ವೇಳೆ ನೀವು ಕುಡಿಯುವುದಾದರೆ, ​ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ​ಲಿವರ್ ಅಥವಾ ಕಿಡ್ನಿ ಸಮಸ್ಯೆ ಇರುವವರಿಂದ ಖಂಡಿತವಾಗಿಯೂ ದೂರವಿರಬೇಕು.

ಮದ್ಯಪಾನ ಮಾಡಿದಾಗ ಜನರು ತೂರಾಡುವುದಕ್ಕೂ ವೈಜ್ಞಾನಿಕ ಕಾರಣವಿದೆ. ಆಲ್ಕೋಹಾಲ್‌ ಮೆದುಳಿನ ಸೆರೆಬೆಲ್ಲಂ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಈ ಭಾಗವೇ ದೇಹದ ಸಮತೋಲನ ಮತ್ತು ಚಲನೆಯನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ ದೃಷ್ಟಿ ಮತ್ತು ಸ್ನಾಯುಗಳ ಸಂಯೋಜನೆ ಹಾಳಾಗಿ, ತೂರಾಡುವುದು, ಮಾತು ತೊದಲುವುದು ಸಾಮಾನ್ಯವಾಗುತ್ತದೆ. ರಕ್ತದಲ್ಲಿನ ಆಲ್ಕೋಹಾಲ್‌ ಪ್ರಮಾಣ (BAC) ಶೇಕಡಾ 0.30ರಿಂದ 0.40 ಮೀರಿದರೆ, ಉಸಿರಾಟ ನಿಧಾನಗೊಳ್ಳುತ್ತದೆ, ಮೆದುಳಿನ ಕಾರ್ಯಶೀಲತೆ ಬಹುತೇಕ ನಿಲ್ಲುತ್ತದೆ. ಇದು ಕೋಮಾ ಹಂತ. ತಕ್ಷಣ ವೈದ್ಯಕೀಯ ನೆರವು ಸಿಗದಿದ್ದರೆ ಇದು ಮರಣವೂ ಸಂಭವಿಸಬಹುದು.

image 2026 02 10T184524.889

ಮದ್ಯಪಾನದ ಪರಿಣಾಮ

ಬಹುತೇಕ ರಸ್ತೆ ಅಪಘಾತಗಳ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಮದ್ಯಪಾನ. ಗೃಹ ಹಿಂಸೆ, ಅಪರಾಧ, ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತವೆ. ಕೆಲಸದ ಉತ್ಪಾದಕತೆ ಕುಸಿಯುತ್ತದೆ. ಮಕ್ಕಳ ಮೇಲೆ ಮಾನಸಿಕ ಪರಿಣಾಮ ಬೀರಿ, ಕುಟುಂಬ ವ್ಯವಸ್ಥೆಯೇ ಅಸ್ಥಿರಗೊಳ್ಳುತ್ತದೆ. ಅನೇಕ ಕುಟುಂಬಗಳು ಮದ್ಯಪಾನದಿಂದಾಗಿ ಬಡತನ ಮತ್ತು ಸಾಲದ ಸುಳಿಗೆ ಸಿಲುಕುತ್ತವೆ.

ಇಷ್ಟೆಲ್ಲಾ ಅಪಾಯಗಳಿದ್ದರೂ ಸರ್ಕಾರಗಳು ಮದ್ಯವನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡುವುದಕ್ಕೆ ಹಿಂದೇಟು ಹಾಕುತ್ತವೆ. ಮದ್ಯದಿಂದ ರಾಜ್ಯ ಸರ್ಕಾರಗಳಿಗೆ ಭಾರೀ ತೆರಿಗೆ ಆದಾಯ ಸಿಗುತ್ತದೆ. ಸಂಪೂರ್ಣ ನಿಷೇಧ ಹೇರಿದರೆ ಕಳ್ಳಸಾಗಣೆ ಮತ್ತು ವಿಷಮದ್ಯದ (ಕಳ್ಳಬಟ್ಟಿ) ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಸರ್ಕಾರಗಳು ನಿಷೇಧಕ್ಕಿಂತ ನಿಯಂತ್ರಣ ಮತ್ತು ಜಾಗೃತಿಯ ಮಾರ್ಗವನ್ನು ಹೆಚ್ಚು ಆಯ್ಕೆ ಮಾಡುತ್ತಿವೆ. ಅದರಲ್ಲಿ ಇನ್ನೂ ಕಠಿಣ ಕ್ರಮಗಳ ಜಾರಿಯಾಗಬೇಕಾಗಿದೆ. ಭಾರತದಲ್ಲಿ ಗುಜರಾತ್‌, ಬಿಹಾರ, ನಾಗಾಲ್ಯಾಂಡ್‌ ಮತ್ತು ಲಕ್ಷದ್ವೀಪದಲ್ಲಿ ಮದ್ಯ ನಿಷೇಧ ಇದ್ದರೂ, ಅಕ್ರಮ ಮದ್ಯದ ಸಮಸ್ಯೆ ಅಲ್ಲಿಯೂ ಸವಾಲಾಗಿಯೇ ಉಳಿದಿದೆ. ಇದರಿಂದ ನಿಷೇಧ ಮಾತ್ರ ಸಾಕಾಗುವುದಿಲ್ಲ.

ಮದ್ಯಪಾನ ಮಾಡುವವರಲ್ಲಿ ಆರೋಗ್ಯದ ಅಪಾಯ ಹೆಚ್ಚು, ಡಿಪ್ರೆಷನ್‌ ಮತ್ತು ಒತ್ತಡದ ಸಾಧ್ಯತೆ ಜಾಸ್ತಿ. ಆರ್ಥಿಕ ವೆಚ್ಚವೂ ಹೆಚ್ಚು. ಕೌಟುಂಬಿಕ ಜೀವನ ಬರ್ಬಾದ್‌ ಆಗುತ್ತದೆ. ಇತ್ತ, ಮದ್ಯಪಾನ ಮಾಡದವರಲ್ಲಿ ಆರೋಗ್ಯ ಉತ್ತಮವಾಗಿದ್ದು, ಮನಸ್ಸಿನ ಸ್ಥಿರತೆ, ಉಳಿತಾಯ ಮತ್ತು ಕುಟುಂಬದ ಸಮತೋಲನ ಹೆಚ್ಚು ಕಂಡುಬರುತ್ತದೆ.

ಮದ್ಯ ಎಂದರೆ ಸಾಮಾನ್ಯವಾಗಿ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಮ್ಮೆಲ್ಲರ ಧೋರಣೆ. ಅತಿಯಾದ ಮದ್ಯಪಾನ ಖಂಡಿತ ಅಪಾಯಕಾರಿ. ಆದರೆ ಮಿತಿಯಾದ ಪ್ರಮಾಣದಲ್ಲಿ, ನಿಯಮಿತವಾಗಿ ಸೇವಿಸಿದರೆ ಕೆಲವು ಆರೋಗ್ಯ ಲಾಭಗಳೂ ಇರಬಹುದು ಎಂಬುದು ಹಲವು ಸಂಶೋಧನೆಗಳ ಒಳನೋಟ. ಆಲ್ಕೋಹಾಲ್‌ ಸಹಜವಾಗಿ ದೇಹದಲ್ಲಿ ʼಗುಡ್ ಕೊಲೆಸ್ಟ್ರಾಲ್ʼ (HDL) ಪ್ರಮಾಣವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಗಟ್ಟಿಯಾಗುವ ಪ್ರಕ್ರಿಯೆಯನ್ನೂ ನಿಧಾನಗೊಳಿಸುತ್ತದೆ. ಇದರಿಂದ ಹೃದಯ, ಮೆದುಳು ಮತ್ತು ಕತ್ತಿನ ರಕ್ತನಾಳಗಳಲ್ಲಿ ತಡೆ ಉಂಟಾಗುವ (Blood Clot) ಸಾಧ್ಯತೆ ಕಡಿಮೆಯಂತೆ. ಆರೋಗ್ಯಕ್ಕಾಗಿ ಮದ್ಯಪಾನ ಮಾಡುವುದು ದಡ್ಡತನ.

ವಿಶ್ವದಾದ್ಯಂತ ನಡೆದ 100ಕ್ಕೂ ಹೆಚ್ಚು ದೀರ್ಘಾವಧಿಯ ಅಧ್ಯಯನಗಳ ಪ್ರಕಾರ, ಕಡಿಮೆ ಅಥವಾ ಮಿತಿಯಾದ ಮದ್ಯಪಾನ ಮಾಡುವವರಲ್ಲಿ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಸ್ಟ್ರೋಕ್‌, ಹೃದಯಾಘಾತದಿಂದಾಗುವ ಅಕಾಲಿಕ ಸಾವುಗಳ ಅಪಾಯವು ಶೇ.25 ರಿಂದ 40 ರವರೆಗೆ ಕಡಿಮೆಯಾಗಿರುವುದು ಕಂಡುಬಂದಿದೆ. ಈ ಲಾಭವು ಗಂಡಸರು ಮತ್ತು ಮಹಿಳೆಯರು ಇಬ್ಬರಿಗೂ ಅನ್ವಯಿಸುತ್ತದೆ. ಮಧುಮೇಹ, ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದಲ್ಲಿರುವವರಲ್ಲಿಯೂ ಈ ಲಾಭ ಕಂಡುಬಂದಿದೆ ಎನ್ನುತ್ತವೆ ಅಧ್ಯಯನಗಳು.

ಮಹಿಳೆಯರ ಮೇಲೆ ನಡೆದ ಅಧ್ಯಯನಗಳೂ ಹೇಳುವುದು ಇದನ್ನೇ. ವಾರದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ದಿನಗಳಲ್ಲಿ ದಿನಕ್ಕೆ ಒಂದು ಪೆಗ್‌ ಮೀರದಂತೆ ಮದ್ಯ ಸೇವಿಸಿದ ಮಹಿಳೆಯರಲ್ಲಿ, ಒಂದು ಅಥವಾ ಎರಡು ದಿನ ಹೆಚ್ಚು ಕುಡಿದವರಿಗಿಂತ ಒಟ್ಟಾರೆ ಮರಣ ಪ್ರಮಾಣ ಕಡಿಮೆ ಕಂಡುಬಂದಿದೆ. ಅಂದರೆ, ಮಿತಿಯೂ ನಿಯಮಿತವೂ ಮುಖ್ಯ ಎನ್ನುವುದು ಸ್ಪಷ್ಟ.

ಏನು ಕುಡಿಯುತ್ತೇವೆ ಎಂಬುದಕ್ಕಿಂತ ಹೇಗೆ ಕುಡಿಯುತ್ತೇವೆ ಎಂಬುದೇ ಮುಖ್ಯ. ವಾರದ ಒಂದೇ ದಿನ ಹೆಚ್ಚು ಮದ್ಯ ಸೇವಿಸುವುದಕ್ಕಿಂತ, ದಿನಕ್ಕೆ ಸ್ವಲ್ಪ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಕಡಿಮೆ ಅಪಾಯಕಾರಿ. ಅಧ್ಯಯನಗಳ ಪ್ರಕಾರ ವಾರದಲ್ಲಿ ಮೂರು ಅಥವಾ ನಾಲ್ಕು ದಿನದ ಮಿತಿಯಲ್ಲಿ ಕುಡಿದವರಲ್ಲಿ ಹೃದಯಾಘಾತದ ಅಪಾಯ ಕಡಿಮೆ ಕಂಡುಬಂದಿದೆ. ಮದ್ಯಪಾನವು ದೇಹದ ಮೇಲೆ ಬೀರುವ ಪರಿಣಾಮ ವ್ಯಕ್ತಿಯ ಜೀನ್ಸ್‌ಗಳ ಮೇಲೆಯೂ ಅವಲಂಬಿತವಾಗಿರುತ್ತದೆ. ಕೆಲವರ ದೇಹದಲ್ಲಿ ಮದ್ಯ ನಿಧಾನವಾಗಿ ಜೀರ್ಣವಾಗುತ್ತದೆ. ಅಂಥವರಲ್ಲಿ ಹೃದಯಕ್ಕೆ ಆಗುವ ಲಾಭ ಹೆಚ್ಚು. ಇನ್ನು ಕೆಲವರ ದೇಹದಲ್ಲಿ ಮದ್ಯ ಬೇಗ ಜೀರ್ಣವಾಗುತ್ತದೆ. ಅವರಿಗೆ ಈ ರಕ್ಷಣಾತ್ಮಕ ಲಾಭ ಕಡಿಮೆ ಇರಬಹುದು.

ಮದ್ಯ ಎಂದರೆ ಅಲ್ಲೊಂದು ವಿನೋದ ಇರಲೇಬೇಕು!

ಮದ್ಯವನ್ನು ವೈಭವೀಕರಿಸುವ ಸಮಾಜವಿದು. ಮದ್ಯವನ್ನು ಸಂಭ್ರಮಿಸುವ ಸಮಾಜವಿದು. ಆದರೆ ಮದ್ಯವನ್ನು ಮೋಜಿಗೆ ಕುಡಿಯಲು ಹೊರಟವರಲ್ಲಿ ಅದಕ್ಕೆ ದಾಸರಾದವರೇ ಹೆಚ್ಚು. ಪ್ರಪಂಚದ ಮೊದಲ ನವ್ಯ ಸಾಹಿತಿ ಎಂದೇ ಗುರುತಿಸಲ್ಪಡುವ ಚಾರ್ಲ್ಸ್ ಬೋದಿಲೇರ್‌ನ ಒಂದು ಕವಿತೆಯನ್ನು (ಪಾಪದ ಹೂವುಗಳು) ಪಿ. ಲಂಕೇಶ್ ಹೀಗೆ ಅನುವಾದಿಸುತ್ತಾರೆ..

“ಮನುಷ್ಯ ಯಾವಾಗಲೂ ಕುಡಿದ ಸ್ಥಿತಿಯಲ್ಲಿರಬೇಕು?
ಏನನ್ನು ಕುಡಿಯುವುದು?
ವೈನ್, ಕಾವ್ಯ, ಋಜುತ್ವ
ಯಾವುದನ್ನಾದರೂ;
ಕುಡಿಯಬೇಕು ಮಾತ್ರ”

ಕುಡಿತವನ್ನೇ ಉಸಿರಾಡಿದ ಕವಿ ಚಾರ್ಲ್ಸ್ ಬೋದಿಲೇರ್, ತನ್ನ 41ನೇ ವಯಸ್ಸಿಗೆ ಸಾವನ್ನಪ್ಪಿದರು. 41ನೇ ವರ್ಷಕ್ಕೆ 80ರ ವಯಸ್ಸಿನವರಂತೆ ಕಾಣುತ್ತಿದ್ದರಂತೆ. ಮನುಷ್ಯ‌ ಜೀವನವನ್ನು ತೀವ್ರವಾಗಿ ಬದುಕಬೇಕೆಂದು ಹೋದ ಬೋದಿಲೇರ್, ಅಸ್ವಸ್ಥರಂತೆ ಬದುಕಲು ಈ ಕಡಿತವೂ ಕಾರಣವಾಗಿದ್ದಿರಬಹುದು ಎಂದು ಯಾರಾದರೂ ಊಹಿಸಬಹುದು.

ಮದ್ಯವನ್ನು ಹೇಗೆಲ್ಲ ವೈಭವೀಕರಿಸಲಾಗುತ್ತದೆ ಎಂಬುದಕ್ಕೆ ಮದ್ಯದ ಕುರಿತು ಬಂದಿರುವ ಹಲವು ಚಿತ್ರಗೀತೆಗಳು ಗಮನಸೆಳೆಯುತ್ತವೆ. ಅಂದಿನ ಹಂಸಲೇಖರ “ಕುಡಿಯೋದೆ ನನ್ನ ವೀಕ್ನೆಸ್ಸು”, ಎಸ್‌ ನಾರಾಯಣ್‌ ಅವರ “ಸಾರಾಯಿ ಸೀಸೆಯಲಿ ನನ ದೇವಿ ಕಾಣುವಳು” ಇಂದ ಹಿಡಿದು, ಈಗಿನ ರ್ಯಾಪರ್‌ ಚಂದನ್‌ ಶೆಟ್ಟಿಯ “ಮೂರೆ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಅಂದಿದೆ”, ಯೋಗರಾಜ್‌ ಭಟ್ಟರ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು, ಆಚೆಗ್‌ ಹಾಕವ್ಳೆ ವೈಫು”, “ಎಣ್ಣೆನೂ ಸೋಡನೂ ಎಂತ ಒಳ್ಳೆ ಫ್ರೆಂಡು, ಒಂದನೊಂದು ಬಿಟ್ಟು ಎಂದು ಇರೋದಿಲ್ಲ”.. ಈ ಹಾಡುಗಳಲ್ಲಿ ಎಣ್ಣೆ(ಮದ್ಯ)ಯ ಪರಿಣಾಮ, ಅಲ್ಲೊಂದು ಮೋಜು, ಜೀವನಕ್ಕೊಂದು ಪಾಠ ಎಲ್ಲವೂ ಇದೆ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ಇಂಡಿಯಾ vs ಜಪಾನ್‌- ವರ್ಕ್‌ ಕಲ್ಚರ್‌ಗಳು ಮುಖಾಮುಖಿಯಾದಾಗ…

“ಜಾಲಿ ಬಾರಿನಲ್ಲಿ ಕೂತ ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು”

ಬಿ ಆರ್ ಲಕ್ಷ್ಮಣ ರಾವ್ ಅವರ ಈ ಹಾಡನ್ನು ಕುಡುಕರು ಎಂಜಾಯ್ ಮಾಡದೆ ಇರುವುದಿಲ್ಲ. ಇನ್ನು ಜೀವನದಲ್ಲಿ ಒಮ್ಮೆಯೂ ಕುಡಿಯದೆ ಇದ್ದ ಜಿ ಪಿ ರಾಜರತ್ನಂ ಬರೆದ “ಹೆಂಡ ಹೆಂಡ್ತಿ ಕನ್ನಡ ಪದಗೊಳ್‌ ಅಂದ್ರೆ ರತ್ನಂಗ್‌ ಪ್ರಾಣ” ಎನ್ನುವ ಕುಡಕ ರತ್ನನ ಪದಗಳು ಎಲ್ಲ ಕುಡುಕರಿಗೂ ಅಚ್ಚುಮೆಚ್ಚು.

ಕೊನೆಯದಾಗಿ ಆಲ್ಕೋಹಾಲ್‌ ಒಳ್ಳೆಯದೋ ಕೆಟ್ಟದೋ ಎಂಬ ಪ್ರಶ್ನೆಗೆ ಸರಳವಾಗಿ ಉತ್ತರಿಸಲು ಸಾಧ್ಯವಿಲ್ಲ. ಆದರೆ, ಮಿತಿ ಮತ್ತು ಜವಾಬ್ದಾರಿ ಇಲ್ಲದ ಮದ್ಯಪಾನ ನಿಜವಾಗಿ ಅಪಾಯಕಾರಿ. ದೇಹ, ಆರೋಗ್ಯ, ಕುಟುಂಬ ಮತ್ತು ಭವಿಷ್ಯದ ಬಗ್ಗೆ ಜಾಗರೂಕರಾಗಿರುವುದು ನಿಸ್ಸಂಶಯವಾಗಿ ಪ್ರತಿಯೊಬ್ಬರ ಸಾಮಾಜಿಕ ಹೊಣೆ. ʼಕುಡಿಯಬೇಕಾ ಬೇಡವಾ?ʼ ಎನ್ನುವುದಕ್ಕಿಂತ, ʼನನ್ನ ಆರೋಗ್ಯ ಮತ್ತು ಬದುಕಿಗೆ ನಾನೆಷ್ಟು ಮೌಲ್ಯ ನೀಡುತ್ತೇನೆ?ʼ ಎನ್ನುವುದು ಮುಖ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಸಂಗೀತದಲ್ಲಿ ಅಪಸ್ವರ ನುಡಿಸುತ್ತಿರುವ ಹವಾಮಾನ ಬದಲಾವಣೆ!

ಹವಾಮಾನ ಬದಲಾವಣೆಯು ಕೇವಲ ಕೃಷಿ ಅಥವಾ ಪರಿಸರದ ಸಮಸ್ಯೆಯಲ್ಲ. ಅದರ ಪರಿಣಾಮ...

ಪ್ರೀಮಿಯಂ ಲೇಖನ | ಎಐ ಡೇಟಾ ಸೆಂಟರ್‌ಗಳ ವಿಸ್ತರಣೆ ಮತ್ತು ಪರಿಸರ ಸವಾಲು

2025ರಲ್ಲಿ ಅಮೆರಿಕದಲ್ಲಿ ಸ್ಥಳೀಯ ವಿರೋಧದ ಕಾರಣ ಸುಮಾರು 152 ಬಿಲಿಯನ್ ಡಾಲರ್...

ಪ್ರೀಮಿಯಂ ಲೇಖನ | ಅಮೆರಿಕೆಯ ಭಾರತೀಯರ ತ್ರಿಶಂಕು ಸ್ಥಿತಿ: ʼಮೌನಂ ಸರ್ವತ್ರ ಸಾಧನಂʼ- ಉಳಿವಿನ ತಂತ್ರ

ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ, ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ...

ಸರ್ಕಾರಕ್ಕೆ 3 ವರ್ಷ | ಗ್ಯಾರಂಟಿ ಯೋಜನೆಗಳು ಮತ್ತು ಅದರಾಚೆಗೆ ಮಹಿಳಾ ಸಬಲೀಕರಣಕ್ಕೆ ಆಗಬೇಕಿರುವುದು ಏನು?

ಕರ್ನಾಟಕದ ಮಹಿಳೆಯರು ಇಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದರೆ, ಮುಂದಿನ ದಶಕದಲ್ಲಿ ಅವರು...