AI ಕನ್ನಡಕ | ಡಿಜಿಟಲ್‌ ಕಣ್ಗಾವಲಿನಲ್ಲಿ ವೈಯಕ್ತಿಕ ಗೌಪ್ಯತೆ!

Date:

ತಂತ್ರಜ್ಞಾನ ಯಾವಾಗಲೂ ಹೊಸ ಆಯಾಮಗಳನ್ನು ತೆರೆಯುತ್ತಲೇ ಇರುತ್ತದೆ. ಬೆರಗುಗೊಳಿಸುವ ಅಸಂಖ್ಯ ಹೊಸ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಅಂತಹ ಆವಿಷ್ಕಾರಗಳ ಸಾಲಿನಲ್ಲಿ ಇದೀಗ ‘ಸ್ಮಾರ್ಟ್ ಗ್ಲಾಸ್‌’ಗಳು (Smartglasses- ಸ್ಮಾರ್ಟ್‌ ಕನ್ನಡಕ) ಹೊಸ ಸಂಚಲನ ಮೂಡಿಸಿವೆ. ಮೆಟಾ (Meta) ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಕನಸಿನ ಕೂಸಾಗಿರುವ ಈ ಸಾಧನ, ನೈಜ ಸಮಯದಲ್ಲಿ ಭಾಷಾಂತರ, ದೃಶ್ಯಗಳ ವಿವರಣೆ ಮತ್ತು ದೈನಂದಿನ ಕೆಲಸಗಳಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಈ ಸುಧಾರಿತ ತಂತ್ರಜ್ಞಾನದ ಹಿಂದೆ, ವೈಯಕ್ತಿಕ ಗೌಪ್ಯತೆಯನ್ನ ಅಲುಗಾಡಿಸಬಲ್ಲ ಒಂದು ಗಂಭೀರ ಆತಂಕವೂ ಇದೆ.

- Advertisement -

ತಂತ್ರಜ್ಞಾನದ ಬೆಳವಣಿಗೆ ಎಷ್ಟು ವೇಗ ಪಡೆದುಕೊಳ್ಳುತ್ತಿದೆ ಎಂದರೆ, ನಮ್ಮ ದಿನನಿತ್ಯದ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುವ ಹಂತಕ್ಕೆ ಬಂದಿದೆ. ಸ್ಮಾರ್ಟ್‌ಫೋನ್‌ಗಳ ನಂತರದ ಯುಗದಲ್ಲಿ ‘ಸ್ಮಾರ್ಟ್ ಗ್ಲಾಸ್‌’ಗಳೇ (Smartglasses) ಜಗತ್ತಿನ ಪ್ರಬಲ ಸಾಧನವಾಗಲಿದೆ ಎಂಬುದು ಜುಕರ್‌ಬರ್ಗ್ ಅವರ ಬಲವಾದ ನಂಬಿಕೆ. ಫ್ಲಿಪ್ ಫೋನ್‌ಗಳನ್ನು ಸ್ಮಾರ್ಟ್‌ಫೋನ್‌ಗಳು ಹೇಗೆ ಆಕ್ರಮಿಸಿಕೊಂಡವೋ, ಅದೇ ರೀತಿ ಮುಂದಿನ 5 ವರ್ಷಗಳಲ್ಲಿ ಸ್ಮಾರ್ಟ್ ಗ್ಲಾಸ್‌ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲಿವೆ ಎಂಬುದು ಅವರ ವಿಶ್ವಾಸ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಮೆಟಾದ ಸ್ಮಾರ್ಟ್ ಗ್ಲಾಸ್‌ಗಳು ದೃಷ್ಟಿ ಸುಧಾರಿಸುವ ಸಾಧನಗಳು ಎನ್ನುವುದಕ್ಕಿಂತ ಹೆಚ್ಚಾಗಿ, ಇವು ಅತ್ಯಾಧುನಿಕ ಎಐ (AI) ಕ್ಯಾಮೆರಾ, ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿರುವ ಡಿಜಿಟಲ್ ಕಣ್ಣುಗಳು. ಈ ಕನ್ನಡಕಗಳು ಅಥವಾ ಮೆಟಾ ಅಭಿವೃದ್ಧಿಪಡಿಸುತ್ತಿರುವ ಸಣ್ಣ ಪಿನ್ ಅಥವಾ ಆಭರಣಗಳ ರೂಪದ ಎಐ ಸಾಧನಗಳು, ನಮ್ಮ ಪ್ರತಿಯೊಂದು ಚಲನವಲನವನ್ನೂ ಸೆರೆಹಿಡಿಯಬಲ್ಲವು. ನಾವು ಯಾರೊಂದಿಗೆ ಮಾತನಾಡುತ್ತಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ, ಯಾವ ವಿಷಯದ ಬಗ್ಗೆ ಚರ್ಚಿಸುತ್ತಿದ್ದೇವೆ.. ಇವೆಲ್ಲವೂ ಈ ಸಾಧನಗಳ ಮೂಲಕ ಸುಲಭವಾಗಿ ರೆಕಾರ್ಡ್ ಆಗಬಹುದು.

image 95 5

ಅತ್ಯಂತ ಆತಂಕಕಾರಿ ವಿಷಯವೆಂದರೆ, ಈ ಸಾಧನಗಳು ನಮ್ಮ ಅರಿವಿಗೆ ಬಾರದೆಯೇ ಚಿತ್ರೀಕರಣ ಮಾಡಬಲ್ಲವು. ಹಿಂದೆ ಈ ಸಾಧನಗಳು ರೆಕಾರ್ಡ್ ಮಾಡುತ್ತಿರುವಾಗ ಒಂದು ಸಣ್ಣ ‘ವೈಟ್ ಲೈಟ್’ ಬೆಳಗುತ್ತಿತ್ತು. ಆದರೆ, ಹಲವು ಬಳಕೆದಾರರು ಈ ಸಂಕೇತವನ್ನು ನಿಷ್ಕ್ರಿಯಗೊಳಿಸಿ, ಅನ್ಯರ ಖಾಸಗಿತನವನ್ನು ಕಸಿದುಕೊಳ್ಳುತ್ತಿರುವುದು ವರದಿಯಾಗಿದೆ.‌ ಹೀಗೆ ಮಾಡುವುದರಿಂದ, ಆ ವ್ಯಕ್ತಿ ಕೇವಲ ಕನ್ನಡಕವನ್ನು ಧರಿಸಿದ್ದಾನೋ ಅಥವಾ ನಿಮ್ಮನ್ನು ಗುಪ್ತವಾಗಿ ಚಿತ್ರೀಕರಿಸುತ್ತಿದ್ದಾನೋ ಎಂಬುದನ್ನು ಪತ್ತೆಹಚ್ಚುವುದು ಅಸಾಧ್ಯವಾಗುತ್ತದೆ. ಈ ದೋಷಪೂರಿತ ನಡವಳಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಸಗಿ ಔತಣಕೂಟಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಯಾವಾಗ ಬೇಕಾದರೂ ಕಣ್ಗಾವಲಿಗೆ ಒಳಗಾಗಬಹುದು ಎಂಬ ತೀವ್ರ ಅಭದ್ರತೆಯನ್ನು ಸೃಷ್ಟಿಸಿದೆ.

ಮೆಟಾ ಸಂಸ್ಥೆಯು ಕಳೆದ ಕೆಲವು ವರ್ಷಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬೆಲೆ ಶ್ರೇಣಿಯ ಸ್ಮಾರ್ಟ್ ಗ್ಲಾಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳಲ್ಲಿ ಮುಖ್ಯವಾಗಿ ಎಐ-ಆಧಾರಿತ ಫಿಟ್‌ನೆಸ್ ಟ್ರ್ಯಾಕಿಂಗ್ ಮತ್ತು ಪ್ರೇರಣೆ ನೀಡುವ $499 ಬೆಲೆಯ ಓಕ್ಲಿ ಸ್ಪೋರ್ಟ್ಸ್ ಗ್ಲಾಸ್‌ಗಳು, ಜನಪ್ರಿಯ ಮೆಟಾ ರೇ-ಬ್ಯಾನ್ ಮಾದರಿಗಳು $379 ಕ್ಕೆ, ಮತ್ತು ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಬಿಡುಗಡೆ ಮಾಡಲಾದ $299 ರ ಸಾಮಾನ್ಯ ಮಾದರಿಯ ಗ್ಲಾಸ್‌ಗಳು ಸೇರಿವೆ. ಈ ಕಡಿಮೆ ಬೆಲೆಯ ಕನ್ನಡಕಗಳನ್ನು ಬಿಡುಗಡೆ ಮಾಡುವ ಹಿಂದಿನ ಪ್ರಮುಖ ತಂತ್ರವೆಂದರೆ, ಸ್ಮಾರ್ಟ್ ಸಾಧನಗಳ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿಯನ್ನು ತೀವ್ರವಾಗಿ ವಿಸ್ತರಿಸಿಕೊಳ್ಳುವುದೇ ಆಗಿದೆ.

ಇದಲ್ಲದೆ, ಮೆಟಾದ ‘ನೇಮ್‌ಟ್ಯಾಗ್’ (NameTag) ತಂತ್ರಜ್ಞಾನ ನಿಮ್ಮನ್ನು ಬೆಚ್ಚಿಬೀಳಿಸುವಂತಿದೆ. ರಸ್ತೆಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯನ್ನು ನೀವು ನೋಡಿದರೆ, ನಿಮ್ಮ ಕನ್ನಡಕ ಆ ವ್ಯಕ್ತಿಯ ಮುಖವನ್ನು ಸ್ಕ್ಯಾನ್ ಮಾಡಿ, ಅವರ ಹೆಸರು ಮತ್ತು ಹಿಂದಿನ ಮಾಹಿತಿಗಳನ್ನು ತಕ್ಷಣವೇ ನಿಮ್ಮ ಕಿವಿಯಲ್ಲಿ ಪಿಸುಗುಡುತ್ತದೆ. ನೀವು ಯಾರೆಂಬುದನ್ನು ಮರೆಮಾಚುವ ಹಕ್ಕೂ ಇನ್ನು ಉಳಿಯುವುದಿಲ್ಲ! “ನಿಮ್ಮ ಗ್ಲಾಸ್‌ಗಳಿಗೆ ನನ್ನ ಹೆಸರು ಗೊತ್ತಿರಬಾರದು” ಎಂದು ಸಿವಿಲ್ ಲಿಬರ್ಟೀಸ್ ಯೂನಿಯನ್ (ACLU) ನಂತಹ ಸಂಸ್ಥೆಗಳು ವ್ಯಕ್ತಪಡಿಸಿರುವ ಅಸಮಾಧಾನವೇ ಇದಕ್ಕೆ ಸಾಕ್ಷಿ.

image 97 3

ಮೆಟಾದ ಮಹತ್ವಾಕಾಂಕ್ಷೆ ಸ್ಮಾರ್ಟ್‌ ಕನ್ನಡಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ಪೇಟೆಂಟ್ ಮಾಹಿತಿಗಳ ಪ್ರಕಾರ, ಬಳಕೆದಾರರ ಮನಸ್ಥಿತಿಯನ್ನು ಅಳೆಯಲು ಕಂಪನಿಯು ದಿನವಿಡೀ ಅವರನ್ನು ಆಲಿಸಲು ಮತ್ತು ಗಮನಿಸಲು ಬಯಸಿದೆ! ನೀವು ಯಾರೊಂದಿಗಾದರೂ ಡಿನ್ನರ್ ಮಾಡುವಾಗ ನಗುವುದು, ಕೆಲಸದ ಒತ್ತಡದಲ್ಲಿ ನಿಟ್ಟುಸಿರು ಬಿಡುವುದು, ಅಥವಾ ಹತಾಶೆಯಿಂದ ಮೌನವಾಗಿರುವುದು.. ಇವೆಲ್ಲವನ್ನೂ ಎಐ ದಾಖಲಿಸಿ, ಆ ಆಧಾರದ ಮೇಲೆ ನಿಮಗಾಗಿ ವರ್ಕೌಟ್ ಪ್ಲಾನ್ ಅಥವಾ ಸಲಹೆಗಳನ್ನು ನೀಡುವ ತಂತ್ರಜ್ಞಾನವನ್ನು ಮೆಟಾ ಅಭಿವೃದ್ಧಿಪಡಿಸುತ್ತಿದೆ. ಇದು ನಮ್ಮ ಖಾಸಗಿ ಭಾವನೆಗಳನ್ನೂ ಡೇಟಾ ರೂಪದಲ್ಲಿ ಸಂಗ್ರಹಿಸುವ ಒಂದು ಹೊಸ ಬಗೆಯ ‘ಡಿಜಿಟಲ್ ಕಣ್ಗಾವಲೇ’ ಆಗಿದೆ.

ಮೆಟಾ ಈ ಸಾಧನಗಳನ್ನು ಜನಪ್ರಿಯಗೊಳಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. 2025ರ ಒಂದೇ ವರ್ಷದಲ್ಲಿ ಏಳು ಮಿಲಿಯನ್ ಜೋಡಿ ಗ್ಲಾಸ್‌ಗಳನ್ನು ಮಾರಾಟ ಮಾಡುವ ಮೂಲಕ ಮೆಟಾ ದೊಡ್ಡ ಯಶಸ್ಸನ್ನು ಸಾಧಿಸಿದೆ. ಕೈಲಿ ಜೆನ್ನರ್ ಅವರಂತಹ ಸೆಲೆಬ್ರಿಟಿಗಳ ಮೂಲಕ ಫ್ಯಾಷನ್ ಟ್ರೆಂಡ್ ಆಗಿ ಬಿಂಬಿಸುತ್ತಿದೆ. ಅಲ್ಲದೆ, 1,00,000ಕ್ಕೂ ಹೆಚ್ಚು ಗ್ಲಾಸ್‌ಗಳನ್ನು ಅಂಧ ಅನುಭವಿಗಳಿಗೆ ದಾನ ಮಾಡುವ ಮೂಲಕ ಮಾನವೀಯ ಮುಖವಾಡವನ್ನು ಧರಿಸುವ ಪ್ರಯತ್ನವನ್ನೂ ಕಂಪನಿ ಮಾಡಿದೆ. ರೇ-ಬ್ಯಾನ್‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಜೊತೆಗಿನ ಪಾಲುದಾರಿಕೆ, ಈ ಗ್ಲಾಸ್‌ಗಳನ್ನು ಜನಸಾಮಾನ್ಯರ ಫ್ಯಾಷನ್ ಐಕಾನ್ ಆಗಿ ಪರಿವರ್ತಿಸಿದೆ. ಸದ್ಯ, ಮೆಟಾ ತನ್ನ ಹೊಸ ಪೀಳಿಗೆಯ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ಗಳನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಈ ತಂತ್ರಜ್ಞಾನದ ಪ್ರಭಾವವನ್ನು ಅರಿತ ನ್ಯೂಯಾರ್ಕ್ ನ್ಯಾಯಾಲಯಗಳು, ತಮ್ಮ ಆವರಣದಲ್ಲಿ ಸ್ಮಾರ್ಟ್ ಗ್ಲಾಸ್‌ಗಳನ್ನು ಧರಿಸುವುದನ್ನು ಈಗಾಗಲೇ ನಿಷೇಧಿಸಿವೆ. ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಸಾಕ್ಷಿಗಳ ಗೌಪ್ಯತೆಯನ್ನು ರಕ್ಷಿಸಲು ಈ ಕ್ರಮ ಅತ್ಯಗತ್ಯವಾಗಿದೆ. ಆದರೆ, ಇಂತಹ ನಿಷೇಧಗಳು ಕೇವಲ ಸೀಮಿತ ಸ್ಥಳಗಳಲ್ಲಿ ಮಾತ್ರ ಇವೆ. ಇಡೀ ಸಮಾಜದ ಮಟ್ಟದಲ್ಲಿ ಗೌಪ್ಯತೆಯನ್ನು ಕಾಪಾಡುವ ಕಾನೂನುಗಳು ಇನ್ನೂ ರೂಪುಗೊಂಡಿಲ್ಲ. 70ಕ್ಕೂ ಹೆಚ್ಚು ನಾಗರಿಕ ಹಕ್ಕುಗಳ ಸಂಘಟನೆಗಳು ಮೆಟಾಗೆ ಪತ್ರ ಬರೆದು, ಗೌಪ್ಯತೆಯನ್ನು ಉಲ್ಲಂಘಿಸುವ ಫೀಚರ್‌ಗಳನ್ನು ಸ್ಥಗಿತಗೊಳಿಸಲು ಒತ್ತಾಯಿಸಿವೆ.

ಮೆಟಾ ಸಂಸ್ಥೆಯು “ನಾವು ಗೌಪ್ಯತೆಯನ್ನು ರಕ್ಷಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ” ಎಂದು ಸಮರ್ಥಿಸಿಕೊಳ್ಳುತ್ತದೆ. ಆದರೆ, ಪ್ರಶ್ನೆ ಇರುವುದು ಅವರ ಉದ್ದೇಶದ ಬಗ್ಗೆ ಅಲ್ಲ, ಆ ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ. ತಂತ್ರಜ್ಞಾನವು ಒಮ್ಮೆ ಜನಸಾಮಾನ್ಯರ ಕೈಗೆ ಸೇರಿದರೆ, ಅದನ್ನು ತಡೆಯುವುದು ಅಸಾಧ್ಯ. ಡಿಜಿಟಲ್ ಕಣ್ಣುಗಳು ನಮ್ಮ ಬದುಕಿನ ಪ್ರತಿ ಕ್ಷಣವನ್ನು ರೆಕಾರ್ಡ್ ಮಾಡುತ್ತಿದ್ದರೆ, ನಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅರ್ಥವಿದೆಯೇ?

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳ ಹಾನಿ ತಡೆಯಲು ಬ್ರಿಟನ್ ಹೊಸ ನಿಯಮ: ಹದಿಹರೆಯದವರಿಗೆ ರಾತ್ರಿ ಕರ್ಫ್ಯೂ

image 96 2

ತಂತ್ರಜ್ಞಾನದ ಅನುಕೂಲಗಳಿಗಾಗಿ ನಮ್ಮ ಗೌಪ್ಯತೆಯನ್ನು ಅಡವಿಡಲು ನಾವು ಸಿದ್ಧರಿದ್ದೇವೆಯೇ? ಅಥವಾ ಇಂತಹ ಕಣ್ಗಾವಲು ಸಾಧನಗಳ ವಿರುದ್ಧ ದನಿ ಎತ್ತುತ್ತೇವೆಯೇ? ಎಂಬುದು ಮುಂದಿನ ದಿನಗಳ ಸವಾಲು. ಕಂಪನಿಗಳ ಲಾಭ ಮತ್ತು ಬಳಕೆದಾರರ ಸ್ವಾತಂತ್ರ್ಯದ ನಡುವಿನ ಈ ಸಮರ, ಮುಂದಿನ ದಶಕದ ಅತ್ಯಂತ ದೊಡ್ಡ ರಾಜಕೀಯ ಮತ್ತು ನೈತಿಕ ಚರ್ಚೆಯಾಗಲಿದೆ ಎಂಬುದು ನಿಸ್ಸಂಶಯ. ಒಟ್ಟಿನಲ್ಲಿ, ಈ ಸ್ಮಾರ್ಟ್ ಸಾಧನಗಳು ಮಾನವನ ಬದುಕಿನ ಪ್ರತಿ ಕ್ಷಣವನ್ನೂ ದಾಖಲಿಸುವ ಡಿಜಿಟಲ್ ಕಣ್ಣುಗಳಾಗಿವೆ. ಅನುಕೂಲದ ಹೆಸರಿನಲ್ಲಿ ನಾವು ಒಪ್ಪಿಕೊಳ್ಳುತ್ತಿರುವ ಈ ‘ಡಿಜಿಟಲ್ ಶರಣಾಗತಿ’, ಭವಿಷ್ಯದಲ್ಲಿ ನಮ್ಮ ಖಾಸಗಿ ಬದುಕನ್ನು ಉಳಿಸುತ್ತದೆಯೇ ಅಥವಾ ಡಿಜಿಟಲ್ ಪಂಜರದಲ್ಲಿ ಬಂಧಿಸುತ್ತದೆಯೇ ಎಂಬುದು ಈಗಿನ ದೊಡ್ಡ ಕುತೂಹಲ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...