‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಜಿರಳೆ ಪಕ್ಷ ಹುಟ್ಟಿದ್ದೇಕೆ?

Date:

'ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ' ಎಂಬ ಟ್ಯಾಗ್‌ಲೈನ್ ಹೊಂದಿರುವ ಕಾಕ್ರೋಚ್ ಜನತಾ ಪಾರ್ಟಿಯು, 'ವ್ಯವಸ್ಥೆಯು ಲೆಕ್ಕ ಹಾಕಲು ಮರೆತುಹೋದ ಜನರನ್ನು ನಾವು ಪ್ರತಿನಿಧಿಸುತ್ತೇವೆ' ಎಂದಿದೆ.

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಚಳವಳಿಯು ಭಾರತದ ಯುವ ಜನಸಂಖ್ಯೆಯ ಕಳವಳಗಳು, ಅಗತ್ಯಗಳು ಹಾಗೂ ಆಶಾವಾದಗಳನ್ನು ತಲುಪಲಿದೆ. ಇಂದಿನ ಯುವಜನರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ವಾಸ್ತವವನ್ನು ದೇಶವು ಅರಿತುಕೊಳ್ಳಬೇಕು ಎಂದು ಒತ್ತಾಯಿಸುತ್ತದೆ. ಏಕೆಂದರೆ, ಈ ವ್ಯವಸ್ಥೆಯು ಯುವಜನರಿಗಾಗಿ ಕೆಲಸ ಮಾಡುತ್ತಿಲ್ಲ, ಅವರ ಮಾತುಗಳನ್ನು ಕೇಳುತ್ತಿಲ್ಲ ಅಥವಾ ಕನಿಷ್ಠ ಅವರನ್ನು ಪರಿಗಣಿಸುತ್ತಲೂ ಇಲ್ಲ. ವ್ಯವಸ್ಥೆಯು ಇದನ್ನು ಎಷ್ಟು ದೀರ್ಘಕಾಲ ನಿರ್ಲಕ್ಷಿಸುತ್ತದೆಯೋ, ಅಷ್ಟು ದೊಡ್ಡ ಮಟ್ಟದಲ್ಲಿ ಹತಾಶೆ ಮತ್ತು ಆಕ್ರೋಶ ಬೆಳೆಯುತ್ತಲೇ ಹೋಗುತ್ತದೆ – ಇದು ಸಿಜೆಪಿ ಕರ್ತೃ ಅಭಿಜೀತ್ ದಿಪ್ಕೆ ಅವರ ದಿಟ್ಟ ಮಾತುಗಳು.

- Advertisement -

ಇತ್ತೀಚೆಗೆ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿ ಯುವಕರನ್ನು ‘ಜಿರಳೆ’ಗಳಿಗೆ ಹೋಲಿಸಿ ಮಾತನಾಡಿದ್ದರು. ಅವರ ಹೇಳಿಕೆಯ ವರದಿಗಳು ಹೊರಬಂದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ತಾವೇ ಸ್ವತಃ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಎಂದು ಕರೆದುಕೊಳ್ಳುವ ವ್ಯಂಗ್ಯಾತ್ಮಕ ರಾಜಕೀಯ ಗುಂಪೊಂದು ಹುಟ್ಟಿಕೊಂಡಿತು. ಈ ಗುಂಪು ಆರಂಭವಾದ ಕೇವಲ ಎರಡು ದಿನಗಳಲ್ಲೇ 40,000ಕ್ಕೂ ಹೆಚ್ಚು ಸದಸ್ಯರನ್ನು ಸೆಳೆದುಕೊಂಡಿದೆ. ಈ ವ್ಯಂಗ್ಯಾತ್ಮಕ ಪಕ್ಷವನ್ನು ಆಮ್ ಆದ್ಮಿ ಪಕ್ಷದ ಮಾಜಿ ಸೋಷಿಯಲ್ ಮೀಡಿಯಾ ಕಾರ್ಯಕರ್ತ ಅಭಿಜೀತ್ ದಿಪ್ಕೆ ಆರಂಭಿಸಿದ್ದಾರೆ. ಇದಕ್ಕೆ, ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಕೂಡ ಸಾಥ್ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

2020 ರಿಂದ 2023ರವರೆಗೆ ಆಮ್ ಆದ್ಮಿ ಪಕ್ಷದ ಸೋಷಿಯಲ್ ಮೀಡಿಯಾ ತಂಡದಲ್ಲಿದ್ದ ಅಭಿಜೀತ್ ಅವರು ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು ಸಿಜೆಐ ಸೂರ್ಯಕಾಂತ್‌ ಅವರು ನಿರುದ್ಯೋಗಿ ಯುವಜನರನ್ನು ‘ಜಿರಳೆ’ಗಳೆಂದು ಕರೆದ ಮರುದಿನ, ಮೇ 16 ರಂದು ‘ಎಕ್ಸ್’ನಲ್ಲಿ ಗೂಗಲ್ ಫಾರ್ಮ್ ಒಂದನ್ನು ಪೋಸ್ಟ್ ಮಾಡಿದ್ದರು. ‘ಸಿಜೆಪಿ’ಗೆ ನೋಂದಾಯಿಸಿಕೊಳ್ಳುವಂತೆ ಜನರನ್ನು ಆಹ್ವಾನಿಸಿದರು.

ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕೀರ್ತಿ ಆಜಾದ್, “ನಾನು ಕಾಕ್ರೋಚ್ ಜನತಾ ಪಾರ್ಟಿಗೆ ಸೇರಲು ಬಯಸುತ್ತೇನೆ. ಇದಕ್ಕೆ ಅಗತ್ಯವಿರುವ ಅರ್ಹತೆಗಳೇನು?” ಎಂದು ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಪಿ, “1983ರ ವಿಶ್ವಕಪ್ ಗೆದ್ದಿರುವುದು ಅತ್ಯಂತ ಸೂಕ್ತವಾದ ಅರ್ಹತೆಯಾಗಿದೆ” ಎಂದು ಉತ್ತರಿಸಿತು. ಇತ್ತ ಮಹುವಾ ಮೊಯಿತ್ರಾ ಕೂಡ ಸಿಜೆಪಿ ಪೋಸ್ಟ್ ಒಂದನ್ನು ರೀ-ಟ್ವೀಟ್‌ ಮಾಡಿದ್ದು, ತಾವು ‘ದೇಶವಿರೋಧಿ ಪಕ್ಷದ ಕಾರ್ಡ್-ಹೊಂದಿರುವ ಸದಸ್ಯೆಯಾಗಿರುವುದರ ಜೊತೆಗೆ’ ಈ ಪಕ್ಷಕ್ಕೂ ಸೇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಪಕ್ಷವು, “ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಹೋರಾಟಗಾರ್ತಿ” ಎಂದು ಬಣ್ಣಿಸಿದೆ.

ಇದೆಲ್ಲದರ ನಡುವೆ, ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಸಿಜೆಐ ಸೂರ್ಯಕಾಂತ್, “ತಮ್ಮ ಹೇಳಿಯು ಕಾನೂನು ಮತ್ತು ಮಾಧ್ಯಮಗಳಂತಹ ವೃತ್ತಿಗಳನ್ನು ಪ್ರವೇಶಿಸಲು ನಕಲಿ ಪದವಿಗಳನ್ನು ಬಳಸುವವರನ್ನು ಉದ್ದೇಶಿಸಿತ್ತೇ ಹೊರತು, ನಿರುದ್ಯೋಗಿ ಯುವಕರನ್ನಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಆ ವೇಳೆಗಾಗಲೇ ಅವರ ಹಿಂದಿನ ಹೇಳಿಕೆಯು ಯುವಸಮುದಾಯದ ಭಾವನೆಗಳಿಗೆ ತೀವ್ರವಾಗಿ ಧಕ್ಕೆ ತಂದಿತ್ತು. ಅದರ ಪರಿಣಾಮ, ಸಿಜೆಪಿಯ ನೋಂದಣಿಯೊಂದಿಗೆ ಪ್ರತಿಫಲನವಾಯಿತು. ಕೆಲವೇ ಗಂಟೆಗಳಲ್ಲಿ ಸಿಜೆಪಿಗೆ 5,000ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ಒಂದು ವ್ಯಂಗ್ಯ ಮತ್ತು ಹಾಸ್ಯವಾಗಿ ಹುಟ್ಟಿಕೊಂಡ ಸಿಜೆಪಿ ಎಂಬ ಪಕ್ಷವು, ಈಗ ಸಾರ್ವಜನಿಕ ಅಸಮಾಧಾನ, ಹಾಸ್ಯ ಹಾಗೂ ರಾಜಕೀಯ ಹತಾಶೆಯನ್ನು ವ್ಯಕ್ತಪಡಿಸುವ ಒಂದು ಅನಧಿಕೃತ ಸಂಘಟನೆಯಾಗಿ ಪರಿವರ್ತನೆಗೊಂಡಿದೆ.

ಸಿಜೆಪಿಯ ಕರ್ತೃ ಅಭಿಜೀತ್ ಹೇಳುವಂತೆ; “ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಯುವಜನರನ್ನು ಜಿರಳೆಗಳು ಮತ್ತು ಪರಾವಲಂಬಿಗಳು ಎಂದು ಕರೆದಿದ್ದಾರೆ. ಅವರ ಹೇಳಿಕೆಯ ವಿರುದ್ಧ ಯುವಜನರ ಭಿನ್ನಾಭಿಪ್ರಾಯ ಮತ್ತು ಪ್ರತಿರೋಧವನ್ನು ಕಾಕ್ರೋಚ್ ಜನತಾ ಪಾರ್ಟಿ ವ್ಯಕ್ತಪಡಿಸುತ್ತದೆ. ಸಂವಿಧಾನ ಮತ್ತು ವಾಕ್ ಸ್ವಾತಂತ್ರ್ಯದ ರಕ್ಷಕರಾಗಬೇಕಾಗಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ಯುವಜನರನ್ನು ಕೀಳಾಗಿ ವಿಮರ್ಶೆ ಮಾಡಿರುವುದನ್ನು ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

“ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರಿನೊಂದಿಗೆ ಯುವಜನರು ಜಿರಳೆ ಎಂಬ ಗುರುತನ್ನು ನಮ್ಮದಾಗಿಸಿಕೊಂಡಿದ್ದೇವೆ ಎಂಬುದನ್ನು ತೋರಿಸುತ್ತದೆ. ಯುವಜನರ ಧ್ವನಿಯನ್ನು ಕೇಳಿಸಿಕೊಳ್ಳಲು ಅದೇ ಮಾರ್ಗವಾಗಬೇಕಾದರೆ ಅದಕ್ಕೂ ನಾವು ಸಿದ್ಧ. ಜಿರಳೆಗಳು ಕೇವಲ ಕೊಳೆ ಮತ್ತು ಕೊಳೆತ ಜಾಗದಲ್ಲಿ ಮಾತ್ರ ಬದುಕುತ್ತವೆ ಎಂಬ ಸಂದೇಶವನ್ನು ರವಾನಿಸುವ ಉದ್ದೇಶವೂ ಇದರ ಹಿಂದೆ ಇದೆ. ಇದರರ್ಥ ದೇಶದ ವ್ಯವಸ್ಥೆಯು ಎಷ್ಟು ಕೊಳೆತುಹೋಗಿದೆ ಎಂದರೆ, ಈಗ ಜಿರಳೆಗಳು ಅನಿವಾರ್ಯವಾಗಿ ಹೊರಬರಬೇಕಾಗಿದೆ,” ಎಂದು ಅವರು ಹೇಳುತ್ತಾರೆ.

ಅವರು ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ವೆಬ್‌ಸೈಟ್‌ಅನ್ನೂ ತೆರೆದಿದ್ದಾರೆ. ಅದನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ, ಅದರ ಧ್ಯೇಯ ಮತ್ತು ದೃಷ್ಟಿಕೋನದ ಸಂಪೂರ್ಣ ಚಿತ್ರಣ ಸಿಗುತ್ತದೆ. “ನಾವು ಇಲ್ಲಿ ಮತ್ತೊಂದು ಪಿಎಂ-ಕೇರ್ಸ್ ಸ್ಥಾಪಿಸಲು ಬಂದಿಲ್ಲ. ತೆರಿಗೆದಾರರ ಸಂಬಳದ ಹಣ ಬಳಸಿಕೊಂಡು ದಾವೋಸ್‌ನಲ್ಲಿ ರಜೆ ಕಳೆಯಲು ಬಂದಿಲ್ಲ ಅಥವಾ ಭ್ರಷ್ಟಾಚಾರಕ್ಕೆ ‘ಕಾರ್ಯತಂತ್ರದ ವೆಚ್ಚ’ ಎಂದು ಮರುನಾಮಕರಣ ಮಾಡಲು ಬಂದಿಲ್ಲ. ನಾವು ಇಲ್ಲಿಗೆ ಬಂದಿರುವುದು – ಲಿಖಿತ ರೂಪದಲ್ಲಿ, ಜೋರಾಗಿ ಹಾಗೂ ಪದೇ ಪದೇ – ಆ ಹಣ ಎಲ್ಲಿಗೆ ಹೋಯಿತು ಎಂಬುದನ್ನು ಕೇಳಲು,” ಎಂದು ಅದರಲ್ಲಿ ಬರೆಯಲಾಗಿದೆ.

‘ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ’ ಎಂಬ ಟ್ಯಾಗ್‌ಲೈನ್ ಹೊಂದಿರುವ ಕಾಕ್ರೋಚ್ ಜನತಾ ಪಾರ್ಟಿಯು, ‘ವ್ಯವಸ್ಥೆಯು ಲೆಕ್ಕ ಹಾಕಲು ಮರೆತುಹೋದ ಜನರನ್ನು ನಾವು ಪ್ರತಿನಿಧಿಸುತ್ತೇವೆ’ ಎಂದು ಹೇಳಿಕೊಂಡಿದೆ. ಶೂನ್ಯ ಪ್ರಾಯೋಜಕರು ಮತ್ತು ಕೇವಲ ಐದು ಬೇಡಿಕೆಗಳನ್ನು ಹೊಂದಿರುವ ಈ ಪಕ್ಷವು ತನ್ನನ್ನು ‘ಒಂದು ದೊಡ್ಡ, ಹಠಮಾರಿಗಳ ಹಿಂಡು’ ಎಂದು ಗುರುತಿಸಿಕೊಂಡಿದೆ.

ಮೇ 18 ರ ಹೊತ್ತಿಗೆ, ಈ ‘ಹಿಂಡು’ 50,000 ಕ್ಕೂ ಹೆಚ್ಚು ಜನರ ಒಕ್ಕೂಟವಾಗಿ ಬೆಳೆದಿದೆ. ಈ ಪಕ್ಷದ ಸದಸ್ಯರಾಗಲು ನಿಗದಿಪಡಿಸಲಾದ ನಾಲ್ಕು ಅಂಶಗಳ ಅರ್ಹತಾ ಮಾನದಂಡಗಳಿವೆ. ಅವುಗಳು -‘ನಿರುದ್ಯೋಗಿ, ಸೋಮಾರಿ, ಸದಾ ಆನ್‌ಲೈನ್‌ನಲ್ಲಿರುವವರು ಹಾಗೂ ವೃತ್ತಿಪರರಂತೆ ಆಕ್ರೋಶ ಹೊರಹಾಕಬಲ್ಲವರಾಗಿರಬೇಕು.

“ಸಿಜೆಪಿಯ ದೃಷ್ಟಿಕೋನವು ಇನ್ನೂ ವಿಕಸನಗೊಳ್ಳುತ್ತಿದೆ. ಸೈದ್ಧಾಂತಿಕವಾಗಿ ನಾವು ಜಾತಿ ವಿರೋಧಿ, ಜಾತ್ಯತೀತ, ಸಮಾಜವಾದಿ ಹಾಗೂ ಪ್ರಜಾಸತ್ತಾತ್ಮಕ ಸಂಘಟನೆಯಾಗಿದ್ದೇವೆ. ನಮ್ಮ ಸಿದ್ಧಾಂತವು ಗಾಂಧಿ, ಅಂಬೇಡ್ಕರ್ ಹಾಗೂ ನೆಹರೂ ಅವರಿಂದ ಪ್ರೇರಿತವಾಗಿದೆ,” ಎಂದು ಅಭಿಜೀತ್ ವಿವರಿಸುತ್ತಾರೆ.

ಇನ್ನು, ಸಿಜೆಪಿ ಐದು ಅಂಶಗಳ ಪ್ರಣಾಳಿಕೆಯನ್ನು ಹೊಂದಿದೆ. ಅವುಗಳು ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆಗಳನ್ನು ವಿಮರ್ಷಿಸುತ್ತವೆ. ಪ್ರಣಾಳಿಕೆಯಲ್ಲಿ;

  1. ಎಲ್ಲ ಕ್ಯಾಬಿನೆಟ್ ಸ್ಥಾನಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲಾಗುತ್ತದೆ
  2. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ಶಾಸಕರು ಮತ್ತು ಸಂಸದರ ಮೇಲೆ 20 ವರ್ಷಗಳ ನಿಷೇಧ ಹೇರಲಾಗುತ್ತದೆ
  3. ‘ಗೋದಿ ಮೀಡಿಯಾ’ ಆಂಕರ್‌ಗಳ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.
  4.  ಯಾವುದೇ ಮಾನ್ಯವಾದ ಮತವನ್ನು ಡಿಲೀಟ್ ಮಾಡಿದರೆ ಮುಖ್ಯ ಚುನಾವಣಾ ಆಯುಕ್ತರನ್ನು (CEC) ಯುಎಪಿಎ ಕಾಯ್ದೆಯಡಿ ಬಂಧಿಸಲಾಗುತ್ತದೆ. ಹಾಗೂ,
  5. ಯಾವುದೇ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ರಾಜ್ಯಸಭೆಗೆ ನೇಮಕ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುತ್ತದೆ.

ಜೊತೆಗೆ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) ಮರುಮೌಲ್ಯಮಾಪನ ಶುಲ್ಕವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿರುವ ಪಕ್ಷವು, ಇದನ್ನು ‘ಸರಾಸಗಟು ಭ್ರಷ್ಟಾಚಾರ’ ಎಂದು ಕರೆದಿದೆ. ನೀಟ್ ಪರೀಕ್ಷೆಯ ವಿವಾದದಿಂದ ಸಮಸ್ಯೆಗೆ ತುತ್ತಾಗಿರುವ ವಿದ್ಯಾರ್ಥಿಗಳಿಗೆ ಪಕ್ಷವು ತನ್ನ ಬೆಂಬಲ ಘೋಷಿಸಿದೆ. ಯುವಜನರನ್ನು ಒಟ್ಟುಗೂಡಿಸಿ, ವರ್ಚುವಲ್ ‘ಜೆನ್-ಝೆಡ್’ ಸಮಾವೇಶವನ್ನು ಆಯೋಜಿಸುವ ಯೋಜನೆಗಳನ್ನು ಪಕ್ಷ ಪ್ರಕಟಿಸಿದೆ.

ಈ ಲೇಖನ ಓದಿದ್ದೀರಾ?: ಜಿರಲೆಯೊಂದರ ಬಹಿರಂಗ ಪತ್ರ | ಹಲೋ… ನಾನು ಕಾಕಾರಾವ್ ಸಿ.ಎಚ್, ಮಾತಾಡ್ತಾ ಇದ್ದೀನಿ…

ಕಾಕ್ರೋಚ್ ಜನತಾ ಪಾರ್ಟಿಯು ಭವಿಷ್ಯದಲ್ಲಿ ಔಪಚಾರಿಕವಾಗಿ ನೋಂದಾಯಿತ ಪಕ್ಷವಾಗುತ್ತದೆಯೇ ಅಥವಾ ಕೇವಲ ಒಂದು ಡಿಜಿಟಲ್ ಬಂಡಾಯವಾಗಿ ಉಳಿಯುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ, ಈ ವ್ಯಂಗ್ಯಾತ್ಮಕ ಪಕ್ಷವು ಭಾರತೀಯ ಯುವಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಹತಾಶೆಯ ಭಾವನೆಯನ್ನು ಯಶಸ್ವಿಯಾಗಿ ತಲುಪಿದೆ ಎಂಬುದಂತೂ ನಿಜ.

“ಕಾಕ್ರೋಚ್ ಜನತಾ ಪಾರ್ಟಿಯು ಭಾರತಕ್ಕೆ ಒಂದು ಸುದೀರ್ಘ ಪರಂಪರೆಯನ್ನು ಪರಿಚಯಿಸುತ್ತಿದೆ. ಇದು ಮುಖ್ಯವಾಹಿನಿಯ ರಾಜಕೀಯವನ್ನು ವಿಮರ್ಶಿಸಲು ವ್ಯಂಗ್ಯ ಮತ್ತು ಪ್ರದರ್ಶನಗಳನ್ನು ಬಳಸಿದ ಸಾಂಸ್ಕೃತಿಕ ವಿರೋಧಿ ರಾಜಕೀಯ ಚಳವಳಿಗಳ ಭಾಗವಾಗಿದೆ. ಅಮೆರಿಕದಲ್ಲಿ, ಈ ಪ್ರವೃತ್ತಿಯು 1960ರ ದಶಕದಲ್ಲಿ ಹಂಟರ್ ಎಸ್. ಥಾಂಪ್ಸನ್ ನೇತೃತ್ವದ ‘ಫ್ರೀಕ್ ಪವರ್’ ಚಳವಳಿ ಮತ್ತು ಕಾರ್ಯಕರ್ತರಾದ ಅಬ್ಬಿ ಹಾಫ್ಮನ್ ಮತ್ತು ಜೆರ್ರಿ ರೂಬಿನ್ ಸ್ಥಾಪಿಸಿದ ‘ಯೂತ್ ಇಂಟರ್ನ್ಯಾಷನಲ್ ಪಾರ್ಟಿ’ ಅಥವಾ ‘ಯಿಪ್ಪೀಸ್’ ಮೂಲಕ ಹೊರಹೊಮ್ಮಿತು. 2000ರ ದಶಕದ ಆರಂಭದಲ್ಲಿ, ಸ್ವೀಡನ್‌ನಲ್ಲಿ ‘ಪೈರೇಟ್ ಪಾರ್ಟಿ’ ಉದಯಿಸಿತು. ಇದು ಡಿಜಿಟಲ್ ಹಕ್ಕುಗಳು, ಗೌಪ್ಯತೆ ಹಾಗೂ ನಾಗರಿಕ ಸ್ವಾತಂತ್ರ್ಯಗಳಿಗಾಗಿನ ಅಭಿಯಾನದಲ್ಲಿ ಅಂತರ್ಜಾಲ ಸಂಸ್ಕೃತಿ ಮತ್ತು ವ್ಯವಸ್ಥೆಯ ವಿರೋಧಿ ಸೆಂಟ್‌ಮೆಂಟ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತ್ತು. ಅಂತೆಯೇ, ಈಗ ಸಿಜೆಪಿ ಉದಯಿಸಿದೆ,” ಎಂದು ಅಭಿಜೀತ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಲಸೂರ | ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕಸಾಪ ಮನವಿ

ಮಹಾರಾಷ್ಟ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಉರ್ದು ಹಾಗೂ...

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...