ಮುಸ್ಲಿಂ ಮಹಿಳೆಯರು ವೃದ್ಧೆಯನ್ನು ನಮ್ಮ ನೆರೆಮನೆಯವರೆಂದು ಹೇಳಿರುವುದು ಸುಳ್ಳು ಇರಬಹುದು. ಆದರೆ, ಅವರು ಸಚಿವರನ್ನು ಯಾಮಾರಿಸಲು ಅವರ ಸ್ವಂತಕ್ಕಾಗಿ ನೆರವು ಕೇಳಿಕೊಂಡು ಹೋಗಿರಲಿಲ್ಲ ಅಥವಾ ಖಜಾನೆಯ ಹಣ ಕೊಳ್ಳೆ ಹೊಡೆಯಲು ಹೋಗಿರಲಿಲ್ಲ.... ಅವರು ಹೋಗಿದ್ದೂ ಕೂಡ ಮತ್ತೊಬ್ಬರ ನೆರವಿಗಲ್ಲವೇ? ಇದರಲ್ಲೇನು ಯಾಮಾರಿಸುವುದಿದೆ.
‘ಗಿರಿಜಾ ಶೆಟ್ಟಿಗಾರ್ ಅವರ ಪರ ನ್ಯಾಯ ಕೇಳಿಕೊಂಡು ಬಂದವರು ನೆರೆಮನೆಯ ಮುಸ್ಲಿಂ ಮಹಿಳೆಯರಲ್ಲ. ಗಿರಿಜಾ ಶೆಟ್ಟಿಗಾರ್ ಪರವಾಗಿ ಕಣ್ಣೀರು ಹಾಕಿ ನ್ಯಾಯ ಕೇಳಿದ ಮಹಿಳೆಯರಲ್ಲಿ ಒಬ್ಬರು ಅವರ ಪುತ್ರಿಯೇ ಆಗಿದ್ದಾರೆ. ಉಡುಪಿಯವರಿಗೆ ಸಚಿವರು ಪಾಠ ಮಾಡುವ ಅಗತ್ಯವಿಲ್ಲ’ವೆಂದು ಬಿಜೆಪಿಗರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಕಿಚಾಯಿಸಿದ್ದಾರೆ.
ಶನಿವಾರದಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗೆಸ್ಟ್ ಹೌಸ್ ಬಳಿಗೆ ಇಬ್ಬರು ಮುಸ್ಲಿಂ ಮಹಿಳೆಯರು, ಹಿಂದೂ ಬಡ ಮಹಿಳೆಗೆ ನೆರವಾಗಿ ಎಂದು ಕೇಳಿಕೊಂಡು ಬಂದಿದ್ದು, ಅವರ ಬಳಿ ಅಹವಾಲು ಮಂಡಿಸಿದ್ದರು. ʼನಮಗೇನೂ ಬೇಡ, ಆ ಮಹಿಳೆಗೆ ಒಂದು ಸಹಾಯ ಮಾಡಿ, ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅವರು ನಮ್ಮ ನೆರೆಮನೆಯವರು ಅವರು ಒಬ್ಬರೇ ಒಂಟಿಯಾಗಿದ್ದಾರೆ. ಹಾಗಾಗಿ ಈಗ ನಾವೇ ಅವರನ್ನು ನಿಮ್ಮ ಬಳಿ ಕರೆದುಕೊಂಡು ಬಂದಿದ್ದೇವೆʼ ಎಂದು ಹೇಳಿದ್ದರು. ಇದನ್ನು ಕೇಳಿದ ಸಚಿವರು, ʼಇದು ನೋಡಿ ನಮ್ಮ ಭಾರತ. ಬಡ ಹಿಂದೂ ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿಯ ಬಿಜೆಪಿಗರು ಇವರನ್ನು ನೋಡಿ ಕಲಿಯಬೇಕುʼ ಎಂದಿದ್ದರು. ಮಹಿಳೆಯ ಪರವಾಗಿ ಭೂಮಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆಂದು ಹೇಳಿ ಭರವಸೆಯನ್ನು ನೀಡಿದರು. ನೀಡಿದ್ದಾರೆ.
ಹಿಂದೂ-ಮುಸ್ಲಿಮರು ಒಟ್ಟಿಗೆ ಬಂದಿದ್ದನ್ನು ಸಚಿವರು ಪ್ರಶಂಸಿಸಿ, ಇದು ನಮ್ಮ ಭಾರತ. ಹಿಂದೂ ಮಹಿಳೆಯ ಸಂಕಷ್ಟಕ್ಕೆ ಮುಸ್ಲಿಂ ಮಹಿಳೆಯರು ತುಡಿಯುತ್ತಿರುವುದೇ ನಮ್ಮ ಸೌಹಾರ್ದ ಭಾರತಕ್ಕೆ ಸಾಕ್ಷಿ…. ಎಂದು ಹೇಳಿದ್ದರು.
ಇದೀಗ ಬಿಜೆಪಿಗರು ವಾಸ್ತವತೆ ಅರಿಯದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಾಲಗೆ ಹರಿಬಿಟ್ಟಿದ್ದು, “ಬುರ್ಕಾಧಾರಿಗಳು ಸುಮಾರು ಎರಡು ದಶಕಗಳ ಹಿಂದೆ ಸಲಹುದ್ದೀನ್ ಅವರನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಅವರು ಅವರ ಸ್ವಂತ ತಾಯಿ ನೆರೆಮನೆಯವರಲ್ಲ….. ಇತ್ಯಾದಿಗಳೆಲ್ಲವನ್ನೂ ಹೇಳುತ್ತ ಸಾಮಾಜಿಕ ಜಾಲಾತಾಣದಲ್ಲಿ ಸಚಿವೆ ಹೇಳಿಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಸ್ಥಳೀಯರೊಬ್ಬರು ಈ ದಿ.ಕಾಮ್‌ನೊಂದಿಗೆ ಮಾತನಾಡಿ, “ಹಿಂದೂ ಮಹಿಳೆಗೆ ನೆರವು ಕೇಳಿಕೊಂಡು ಬಂದಿದ್ದನ್ನು, ಅವರ ನಡುವಿನ ಪರಸ್ಪರ ಪ್ರೀತಿಯನ್ನು ಕಂಡು ಲಕ್ಷ್ಮಿ ಹೆಬ್ಬಾಳಕರ್ ಅವರು ಉಡುಪಿ ಅಂದ್ರೆ ಸೌಹಾರ್ದತೆಯ ಸಂಕೇತ…. ಇದರಿಂದ ಬಿಜೆಪಿಗರು ಪಾಠ ಕಲಿಯಬೇಕು ಎಂದಿದ್ದರು. ಮುಸ್ಲಿಂ ಮಹಿಳೆಯರು ವೃದ್ಧೆಯನ್ನು ನಮ್ಮ ನೆರೆಮನೆಯವರೆಂದು ಹೇಳಿರುವುದು ಸುಳ್ಳು ಇರಬಹುದು. ಆದರೆ, ಅವರು ಸಚಿವರನ್ನು ಯಾಮಾರಿಸಲು ಅವರ ಸ್ವಂತಕ್ಕಾಗಿ ನೆರವು ಕೇಳಿಕೊಂಡು ಹೋಗಿರಲಿಲ್ಲ ಅಥವಾ ಖಜಾನೆಯ ಹಣ ಕೊಳ್ಳೆ ಹೊಡೆಯಲು ಹೋಗಿರಲಿಲ್ಲ…. ಅವರು ಹೋಗಿದ್ದೂ ಕೂಡ ಮತ್ತೊಬ್ಬರ ನೆರವಿಗಲ್ಲವೇ? ಇದರಲ್ಲೇನು ಯಾಮಾರಿಸುವುದಿದೆ. ಹಾಗಿದ್ದರೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಚಿವರನ್ನು ಟ್ರೋಲ್ ಮಾಡುತ್ತಿರುವವರು ಏಕೆ ಹಿಂದೂ ಮಹಿಳೆಗೆ ನೆರವಾಗಲಿಲ್ಲ…. ಅವರೇ ಆ ಮಹಿಳೆಗೆ ಯಾಕೆ ಮನೆ ನಿರ್ಮಿಸಿ ಕೊಡಲಿಲ್ಲ, ಕಚೇರಿಗಳಿಗೆ ಹೋಗಲು ಯಾಕೆ ಸಹಾಯ ಮಾಡಲಿಲ್ಲ… ಹಾಗಾದರೆ ಆ ವೃದ್ಧೆ ಹಿಂದೂ ಅಲ್ಲವೇ?” ಎಂದರು.
“ಬಿಜೆಪಿಗರು ಆರಂಭದಿಂದಲೇ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಗೋ ಬ್ಯಾಕ್, ಗೋ ಬ್ಯಾಕ್ ಎನ್ನುತ್ತಿದ್ದರು. ಅವರಿಗೆ ಹೀಗೆ ಹೇಳುವ ಬಿಜೆಪಿ ಮಹಿಳಾ ಯುವ ಮೋರ್ಚಾದವರು, ಹತ್ತು ವರ್ಷಗಳ ಕಾಲ ಆಡಳಿತದಲ್ಲಿದ್ದ ಶೋಬಾ ಕರಂದ್ಲಾಜೆ ಅವರನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ. ಉಡುಪಿಗೆ ಶೋಭಾ ಕರಂದ್ಲಾಜೆಯವರ ಕೊಡುಗೆ ಏನು? ಎಂಬುದನ್ನು ಹೇಳಿ. ಮೊದಲು ಹಿಂದೂ ಮಹಿಳೆ ಗಿರಿಜಾ ಶೆಟ್ಟಿಗಾರ್ ಅವರಿಗೆ ನ್ಯಾಯ ಒದಗಿಸಿ ಕೊಡಿ” ಎಂದು ಬಿಜೆಪಿಗರಿಗೆ ಮತ್ತು ಟ್ರೋಲ್ ಮಾಡುತ್ತಿರುವವರಿಗೆ ಈ ಮೂಲಕ ಸಲಹೆ ನೀಡಿದರು.
ಘಟನೆ ಹಿನ್ನೆಲೆ
ಗಿರಿಜಾ ಶೆಟ್ಟಿಗಾರ್ ಅವರ ಮಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರೂ ತಾಯಿಯೊಂದಿಗಿನ ಸಂಬಂಧ ಕಡಿದುಕೊಳ್ಳದೇ ಸಂಕಷ್ಟದಲ್ಲಿರುವ ತಾಯಿಗೆ ನೆರವಿಗೆ ಬಂದಿದ್ದರು.
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವಯಸ್ಕ ಮಹಿಳೆ ಗಂಡನನ್ನು ಕಳಕೊಂಡಿದ್ದು, ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆದರೆ ಇವರಿಗೆ 1989ರಲ್ಲಿ ಭೂರಹಿತರಿಗೆ ವಿತರಿಸಲಾಗುವ ವಸತಿ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿತ್ತು. ಇದರ ಹಕ್ಕುಪತ್ರವನ್ನೂ ಮಹಿಳೆಗೆ ನೀಡಲಾಗಿತ್ತು. ಆದರೆ ಆ ಭೂಮಿ ರಕ್ಷಿತಾರಣ್ಯ ವ್ಯಾಪ್ತಿಗೆ ಸೇರಿದ್ದೆಂದು ಅರಣ್ಯ ಅಧಿಕಾರಿಗಳು ವಾಸ್ತವ್ಯಕ್ಕೆ ಅಡ್ಡಿಪಡಿಸಿದ್ದು ಮಹಿಳೆಯ ಸ್ವಾಧೀನಕ್ಕೆ ಬಿಟ್ಟುಕೊಡಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಮಹಿಳೆ ಹೋರಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಬಡ ಮಹಿಳೆಯಾಗಿದ್ದರಿಂದ ಭೂಮಿಯ ವಾಸ್ತವ್ಯ ಸಿಗದೆ ಮನೆಯನ್ನೂ ಕಟ್ಟಲಾಗದೆ ಕೂಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಕಾನೂನು ಪ್ರಕಾರ ಭೂಮಿಯ ವಾಸ್ತವ್ಯ ಪಡೆಯಲು, ಸಲಹುದ್ದೀನ್ ಎಂಬವರ ಮನೆಯ ಕುಟುಂಬಸ್ಥರು ಗಿರಿಜಾ ಅವರನ್ನು ಹಲವು ಅಧಿಕಾರಿಗಳ ಬಳಿಗೆ ಕರೆದೊಯ್ದಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ಜಾಗ ಸ್ವಂತದ್ದು ಇದ್ದರೆ ಮನೆ ಕಟ್ಟಿಕೊಡಲು ನೆರವು ಕೊಡುವ ಉದಾರಿಗಳಿದ್ದಾರೆ. ಆದರೆ ಹಕ್ಕುಪತ್ರ ಇದ್ದರೂ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಮೊರೆ ಹೋಗಿದ್ದರು.
https://www.facebook.com/reel/4418462401740851
ಮುಸ್ಲಿಂ ಮಹಿಳೆಯರ ನೆರವಿನೊಂದಿಗೆ ಮನೆ ನಿವೇಶನಕ್ಕಾಗಿ ಅರ್ಜಿ ಹಿಡಿದು ಬಂದಿದ್ದ ವೃದ್ಧೆ ಗಿರಿಜಾ ಶೆಟ್ಟಿಗಾರ್ ಅಹವಾಲು ಆಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುರ್ತಾಗಿ ಸ್ಪಂದಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚಿಸಿದ್ದರು.
“80 ಬಡಗಬೆಟ್ಟು ಗ್ರಾಮದ ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ಮಹಿಳೆ ತನ್ನ ನೆರೆಮನೆಯ ಮುಸ್ಲಿಂ ಮಹಿಳೆಯರ ನೆರವಿನೊಂದಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಸಹಾಯ ಕೇಳಿದ್ದರು. 1990ರಲ್ಲಿ ವಸತಿ ಯೋಜನೆಯಡಿ ಮಂಜೂರಾಗಿದ್ದ 5 ಸೆಂಟ್ಸ್ ಜಾಗದ ಹಕ್ಕುಪತ್ರವಿದ್ದರೂ ಪ್ರಸ್ತುತ ಅರಣ್ಯ ಇಲಾಖೆಯು ಡೀಮ್ಡ್ ಫಾರೆಸ್ಟ್ ಎಂದು ಜಾಗದ ಸ್ವಾಧೀನಕ್ಕೆ ಆಕ್ಷೇಪಿಸುತ್ತಿರುವುದು ಮತ್ತು ಗ್ರಾಮ ಪಂಚಾಯಿತಿಯು ಮನೆ ನಿರ್ಮಾಣಕ್ಕೆ ಪರವಾನಗಿ ನೀಡದಿರುವ ವಿಚಾರದ ಬಗ್ಗೆ ಮಹಿಳೆ ಕಷ್ಟಪಡುತ್ತಿದ್ದಾರೆ” ಎಂಬುದನ್ನು ತಿಳಿಸಿದ ಸಚಿವರು ಆಕೆಯ ಅರ್ಜಿಯನ್ನು ಲಗತ್ತಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿದ್ದೀರಾ? ಗೃಹಲಕ್ಷ್ಮಿ ಹಣದಲ್ಲಿ ರೊಟ್ಟಿ ಉದ್ಯಮ: ಮಹಿಳೆಯರ ಸಬಲೀಕರಣಕ್ಕೆ ಆಸರೆಯಾಯಿತು ಗ್ಯಾರಂಟಿ
ತಕ್ಷಣವೇ ಈ ವಿಷಯದಲ್ಲಿ ಸ್ಪಂದಿಸಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ಮಾನವೀಯತೆ ಆಧಾರದಲ್ಲಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸಬೇಕೆಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.





