‘ನಮ್ಮ ಕ್ಲಿನಿಕ್’ ರಿಯಾಲಿಟಿ ಚೆಕ್‌ | ಬಡವರಿಗಾಗಿ ಆರೋಗ್ಯ ಸೇವೆ ಎಂದಿದ್ದ ಯೋಜನೆ; ಬಾಗಿಲೇ ತೆರೆಯದ ಕ್ಲಿನಿಕ್‌ಗಳು!

Date:

‘ನಮ್ಮ ಕ್ಲಿನಿಕ್’ಗಳ ಸ್ಥಿತಿ ಮತ್ತು ಕಾರ್ಯಕ್ಷಮತೆ ಹೇಗಿದೆ ಎನ್ನುವುದುʼಈದಿನʼ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾಗಿದೆ. ನಗರದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲೆಂದೇ ಆರಂಭಿಸಲಾದ ಈ ʼನಮ್ಮ ಕ್ಲಿನಿಕ್ʼ ಯೋಜನೆಯು ಬೆಂಗಳೂರಿನ ಮಹಾಕವಿ ಕುವೆಂಪು ರಸ್ತೆ ಹಾಗೂ ಶ್ರೀರಾಂಪುರ ಪ್ರದೇಶಗಳಲ್ಲಿ ಆತಂಕಕಾರಿ ಸ್ಥಿತಿಗೆ ತಲುಪಿದೆ. ಹೆಸರಿಗಷ್ಟೇ ಇವು ನಮ್ಮ ಕ್ಲಿನಿಕ್‌ಗಳು, ಆದರೆ ನಮಗೆ ಸಿಗಬೇಕಾದ ವೈದ್ಯಕೀಯ ಸೇವೆಯ ಸುಳಿವೇ ಇಲ್ಲಿಲ್ಲ.  

ನಗರ ಪ್ರದೇಶದ ವಲಸೆ ಕಾರ್ಮಿಕರು, ಬಡವರು ಹಾಗೂ ಅಂಚಿನಲ್ಲಿರುವ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರ 2022ರಲ್ಲಿ ‘ನಮ್ಮ ಕ್ಲಿನಿಕ್’ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನಗರ ಪ್ರದೇಶಗಳಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಆದರೆ ಯೋಜನೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ, ‘ನಮ್ಮ ಕ್ಲಿನಿಕ್’ಗಳ ಸ್ಥಿತಿ ಮತ್ತು ಕಾರ್ಯಕ್ಷಮತೆ ಹೇಗಿದೆ ಎನ್ನುವುದುʼಈದಿನʼ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾಗಿದೆ.

- Advertisement -

ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ 2022ರಲ್ಲಿ 100 ಕ್ಲಿನಿಕ್‌ಗಳು ಆರಂಭಗೊಂಡಿದ್ದವು. 2023ರ ಫೆಬ್ರವರಿಯಲ್ಲಿ ಏಕ ಕಾಲಕ್ಕೆ 108 ʼನಮ್ಮ ಕ್ಲಿನಿಕ್‌’ʼಗಳು ಕಾರ್ಯಾರಂಭ ಮಾಡಿದ್ದವು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಕ್ಲಿನಿಕ್‌ಗಳಿಗೆ ಚಾಲನೆ ನೀಡಿದ್ದರು. ಸದ್ಯ ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 243 ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ನಮ್ಮ ಕ್ಲಿನಿಕ್‌ಗಳಲ್ಲಿ ತಲಾ ಒಬ್ಬರು ವ್ಯೆದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಸೇರಿ ಒಟ್ಟು 4 ಮಂದಿ ಸಿಬ್ಬಂದಿ ಇರಬೇಕಾಗಿರುವುದು ನಿಯಮ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ನಗರದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲೆಂದೇ ಆರಂಭಿಸಲಾದ ಈ ʼನಮ್ಮ ಕ್ಲಿನಿಕ್ʼ ಯೋಜನೆಯು ಬೆಂಗಳೂರಿನ ಮಹಾಕವಿ ಕುವೆಂಪು ರಸ್ತೆ ಹಾಗೂ ಶ್ರೀರಾಂಪುರ ಪ್ರದೇಶಗಳಲ್ಲಿ ಆತಂಕಕಾರಿ ಸ್ಥಿತಿಗೆ ತಲುಪಿದೆ. ಹೆಸರಿಗಷ್ಟೇ ಇವು ನಮ್ಮ ಕ್ಲಿನಿಕ್‌ಗಳು, ಆದರೆ ನಮಗೆ ಸಿಗಬೇಕಾದ ವೈದ್ಯಕೀಯ ಸೇವೆಯ ಸುಳಿವೇ ಇಲ್ಲಿಲ್ಲ. ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಕೆಲವು ಕ್ಲಿನಿಕ್‌ಗಳನ್ನು ಹೊರತುಪಡಿಸಿ, ಹಲವು ಕ್ಲಿನಿಕ್‌ಗಳು ನಗರದ ಒಳ ಭಾಗದಲ್ಲಿವೆ. ಇದರಿಂದ ಇಂಥದ್ದೊಂದು ಕ್ಲಿನಿಕ್‌ ಇದೆ ಎನ್ನುವುದೇ ಹಲವು ಸ್ಥಳೀಯರಿಗೆ ತಿಳಿದಿಲ್ಲ. ತಿಳಿದ ಒಬ್ಬಿಬ್ಬರು ಮಾತ್ರ ಆಸ್ಪತ್ರೆ ಕಡೆ ಮುಖ ಮಾಡಬಹುದು. ಅವರಿಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ, ಅಗತ್ಯ ಔಷಧಿ ಸಿಗುವ ಖಚಿತತೆ ಇಲ್ಲ. ಖುದ್ದು ವೈದ್ಯರು, ವೈದ್ಯಾಧಿಕಾರಿಯನ್ನು ಸಂಪರ್ಕಿಸಿದರೆ, ಕನಿಷ್ಠ ಒಳ್ಳೆಯ ಸ್ಪಂದನೆಯೂ ಇಲ್ಲ.

ಮಹಾಕವಿ ಕುವೆಂಪು ರಸ್ತೆಯಲ್ಲಿರುವ ನಮ್ಮ ಕ್ಲಿನಿಕ್‌ಗೆ ಭೇಟಿ ನೀಡಿದಾಗ, ಅಲ್ಲಿ ವೈದ್ಯರೂ ಇಲ್ಲ, ವೈದ್ಯಾಧಿಕಾರಿಯೂ ಇಲ್ಲ. ಮಾಹಿತಿ ಕೇಳಿದಾಗಲೂ, ʼಕ್ಲಿನಿಕ್‌ನಲ್ಲಿ ಯಾರೂ ಲಭ್ಯವಿಲ್ಲʼ ಎನ್ನುವುದೇ ಸಿಬ್ಬಂದಿಯ ಉತ್ತರ. ಫೋಟೋ ಕ್ಲಿಕ್ಕಿಸಲೂ ಸಹ ಅವಕಾಶ ನೀಡದಂತ ಪರಿಸ್ಥಿತಿ. ಸಾರ್ವಜನಿಕ ಆಸ್ಪತ್ರೆಯೋ ಅಥವಾ ಖಾಸಗಿ ಕ್ಲಿನಿಕ್ಕೋ? ಅವರೇ ಹೇಳಬೇಕು. ವೈದ್ಯಾಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಸಭೆಗಳ ಮೇಲೆ ಸಭೆಗಳು. ಈ ರೀತಿ ನಮ್ಮ ಕ್ಲಿನಿಕ್‌ಗಳು ನಿಯಮಿತವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ಹಾಗೂ ವಯೋವೃದ್ಧರು ಗಂಭೀರ ಅಪಾಯವನ್ನು ಎದುರಿಸಬೇಕಾಗಬಹುದು. ಸಮಯಕ್ಕೆ ಚಿಕಿತ್ಸೆ ಸಿಗದೇ ಹೋದರೆ ಜೀವಾಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಇಂತಹ ಸಂದರ್ಭದಲ್ಲಿ ಉಂಟಾಗುವ ಅನಾಹುತಗಳಿಗೆ ಯಾರು ಹೊಣೆ?

ಇನ್ನು ಶ್ರೀರಾಂಪುರದಲ್ಲಿರುವ ನಮ್ಮ ಕ್ಲಿನಿಕ್‌ನ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಅಲ್ಲಿನ ಕ್ಲಿನಿಕ್‌ನ ಕಾರ್ಯನಿರ್ವಹಣೆಯ ಯಾವುದೇ ಲಕ್ಷಣಗಳು ಕಾಣಲಿಲ್ಲ. ಇತರ ಎಲ್ಲಾ ನಮ್ಮ ಕ್ಲಿನಿಕ್‌ಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಕೆಲಸದ ಅವಧಿ ನಿಗದಿಯಾಗಿದ್ದರೆ, ಶ್ರೀರಾಂಪುರ ಕ್ಲಿನಿಕ್‌ನಲ್ಲಿ ಮಾತ್ರ ವಿಭಿನ್ನ ಸಮಯ ನಿಗದಿಪಡಿಸಲಾಗಿದೆ. ಇಲ್ಲಿ ಬೆಳಿಗ್ಗೆ 6.45ರಿಂದ 10.15ರವರೆಗೆ ಹಾಗೂ ಸಂಜೆ 4ರಿಂದ 7.30ರವರೆಗೆ ಮಾತ್ರ ಕೆಲಸದ ಅವಧಿ ಎಂದು ತಿಳಿಸಲಾಗಿದೆ. ಆದರೆ ಆ ಸಮಯದಲ್ಲಿಯೂ ಕ್ಲಿನಿಕ್ ತೆರೆದಿರುವುದಕ್ಕೆ ಯಾವುದೇ ಖಾತರಿ ಇಲ್ಲ ಎಂಬುದು ಸ್ಥಳೀಯರ ಆರೋಪ.

ಸರ್ಕಾರದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯಾದ ನಮ್ಮ ಕ್ಲಿನಿಕ್‌ಗಳು ಈ ರೀತಿ ಕಾರ್ಯನಿರ್ವಹಿಸದೇ ಇರುವುದರಿಂದ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಉಚಿತ ಹಾಗೂ ಸುಲಭವಾಗಿ ಲಭ್ಯವಾಗಬೇಕಾದ ಆರೋಗ್ಯ ಸೇವೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮೇಲ್ವಿಚಾರಣೆಯ ಕೊರತೆಯಿಂದ ಜನರಿಗೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಸಾರ್ವಜನಿಕ ಹಣದಿಂದಲೇ ನಡೆಯುವ ಈ ಕ್ಲಿನಿಕ್‌ಗಳು ನಿಜಕ್ಕೂ ಜನರಿಗಾಗಿ ಕೆಲಸ ಮಾಡುತ್ತಿವೆಯೇ? ಇಲ್ಲವೇ ಕೇವಲ ಔಪಚಾರಿಕತೆಗೆ ರೂಪಿಸಿದ ಯೋಜನೆಯಾಗಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೊಳಪಟ್ಟಿವೆ. ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಈ ಕ್ಲಿನಿಕ್‌ಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಜನರಿಗೆ ಅಗತ್ಯವಾದ ಆರೋಗ್ಯ ಸೇವೆ ಒದಗಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.

“ಐದಾರು ವರ್ಷಗಳಿಂದ ಪ್ರತಿ ದಿನ ಇಲ್ಲೇ ಓಡಾಡುತ್ತಿದ್ದರೂ ಇಲ್ಲಿ ʼನಮ್ಮ ಕ್ಲಿನಿಕ್‌ʼ ಇರುವುದೇ ಗೊತ್ತಿರಲಿಲ್ಲ. ಇತ್ತೀಚೆಗಷ್ಟೇ ತಿಳಿಯಿತು. ಚಳಿಗಾಲವಾದ್ದರಿಂದ ಶೀತವಾಗಿತ್ತು. ಮೊನ್ನೆ ಕ್ಲಿನಿಕ್‌ಗೆ ಬಂದಿದ್ದೆ. ಆದರೆ ಡಾಕ್ಟರ್‌ ಇರಲಿಲ್ಲ. ಕೆಲ ಮಾತ್ರೆಗಳಾದರೂ ಸಿಗಬಹುದೆಂದು ಕೇಳಿ, ಪಡೆದುಕೊಂಡು ಹೋದೆ. ಶೀತ ಕಡಿಮೆಯಾಗದ್ದಕ್ಕೆ ಮತ್ತೆ ಇಂದು ಬಂದೆ, ನೋಡಿದರೆ ಇಂದೂ ವೈದ್ಯರಿಲ್ಲ. ಯೋಜನೆ ಮಾಡಿರುವ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎನ್ನುವುದು ನನ್ನ ಅಭಿಪ್ರಾಯ. ನಾವಾದರೆ ಅಷ್ಟೋ ಇಷ್ಟೋ ಓದಿಕೊಂಡಿದ್ದೇವೆ, ಒಂದಿಲ್ಲೊಂದು ಕಡೆ ಚಿಕಿತ್ಸೆ ಪಡೆದುಕೊಳ್ಳಬಲ್ಲೆವು. ಆದರೆ, ಅನಕ್ಷರಸ್ಥರೋ, ವಯೋವೃದ್ಧರೋ, ದೀರ್ಘ ಕಾಲೀನ ರೋಗಿಗಳೋ ಬಂದರೆ, ಅಂತವರೇನು ಮಾಡಿಯಾರು? ಪಕ್ಷ ಯಾವುದಾದರೇನು, ಜನಪರ ಯೋಜನೆಗಳನ್ನು ರೂಪಿಸುವುದು ಮುಖ್ಯ. ಅದರ ಜತೆಗೆ ಅವು ಯಾರಿಗಾಗಿ ರೂಪುಗೊಂಡಿವೆಯೋ ಅವರಿಗೆ ತಲುಪುವಂತೆ ಮಾಡುವುದೂ ಕೂಡ ಮುಖ್ಯ. ಒಳ್ಳೆಯ ಯೋಜನೆಗಳು ಬಂದಾಗ ಸ್ವೀಕರಿಸುತ್ತೇವೆ, ಯೋಜನೆಗಳು ಕುಂಟುತ್ತಿದ್ದರೆ ಟೀಕಿಸುತ್ತೇವೆ. ನಾವು ಸಾರ್ವಜನಿಕರು, ಸಾರ್ವಜನಿಕರಿಂದಲೇ ಸರ್ಕಾರ, ಸರ್ಕಾರವೆಂದರೆ ಜನರೇ. ಹಾಗಾಗಿ ಪ್ರಶ್ನಿಸುವ, ಟೀಕಿಸುವ, ಬೇಡಿಕೆ ಇಡುವ ಎಲ್ಲಾ ಹಕ್ಕು-ಬಾಧ್ಯತೆಗಳು ನಮಗಿವೆ. ʼನಮ್ಮ ಕ್ಲಿನಿಕ್‌ʼ ಒಳ್ಳೆಯ ಯೋಜನೆ. ಅದನ್ನು ಸರಿಯಾಗಿ ಕಾರ್ಯಗತಗೊಳಿಸಬೇಕಷ್ಟೇ” ಎಂದರು ಸ್ಥಳೀಯ ನಿವೃತ್ತ ಶಿಕ್ಷಕ ಸದಾಶಿವ ಆರಾಧ್ಯ.

ಕ್ಲಿನಿಕ್‌ಗಳಲ್ಲಿ ಸಿಗುವ ಆರೋಗ್ಯ ಸೇವೆಗಳೆಂತು?

1.ತಾಯಿ ಆರೋಗ್ಯ: ಗರ್ಭಿಣಿ ಹಾಗೂ ಬಾಣಂತಿ ಸೇವೆ
2.ನವಜಾತ ಶಿಶು ಆರೈಕೆ ಹಾಗೂ ಚುಚ್ಚುಮದ್ದು ಸೇವೆ
3.ಮಕ್ಕಳ ಹಾಗೂ ಹದಿಹರೆಯದವರ ಆರೋಗ್ಯ ಸೇವೆ
4.ಕುಟುಂಬ ಕಲ್ಯಾಣ ಯೋಜನೆಗಳ ಸಮಗ್ರ ಅನುಷ್ಠಾನ
5.ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ
6.ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ
7.ಹಿರಿಯ ನಾಗರಿಕರ ಆರೋಗ್ಯ ಸೇವೆಗಳ ಅನುಷ್ಠಾನ
8.ಮಾನಸಿಕ ಆರೋಗ್ಯ ಸೇವೆಗಳ ಅನುಷ್ಠಾನ



ಸುಟ್ಟ ಗಾಯಗಳು, ಅಪಘಾತ ಇತರೆ ಗಾಯಗಳು ಸೇರಿದಂತೆ ತುರ್ತು ಚಿಕಿತ್ಸೆ ಹಾಗೂ ಅಗತ್ಯವಿದ್ದರೆ ಹೆಚ್ಚುವರಿ ಚಿಕಿತ್ಸೆಗೆ ವಿಶೇಷ ಆಸ್ಪತ್ರೆಗಳಿಗೆ ಉಚಿತ ರೆಫರಲ್ ಸೇವೆಗಳು ಲಭ್ಯ ಎನ್ನುವುದು ಯೋಜನೆಯ ಮುಖ್ಯಾಂಶ ಹಾಗೂ ಉದ್ದೇಶ. ಆದರೆ ಈ ಸೇವೆಗಳು ತಲುಪುವವರಿಗೆ ತಲುಪುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಇದನ್ನೂ ಓದಿ: ‘ಆರೋಗ್ಯ ಹಕ್ಕಿನ ಜಾಥಾ–2026’ | ಉಚಿತ ಔಷಧಿ, ಆರೋಗ್ಯ ಹಕ್ಕಿಗಾಗಿ ರಾಜ್ಯವ್ಯಾಪಿ ಸಂಚಾರ

ʼನಮ್ಮ ಕ್ಲಿನಿಕ್’ ಯೋಜನೆ ನಗರ ಪ್ರದೇಶದ ಬಡ ಮತ್ತು ಅಂಚಿನಲ್ಲಿರುವ ಜನರಿಗೆ ಆರೋಗ್ಯ ಭರವಸೆಯಾಗಬೇಕಿತ್ತು. ಆದರೆ ಇಂದು ಹಲವೆಡೆ ಕ್ಲಿನಿಕ್‌ಗಳು ತೆರೆದಿದ್ದರೂ ಸೇವೆ ಲಭ್ಯವಿಲ್ಲದ ಹಾಗೂ ಕೆಲವೆಡೆ ಬಾಗಿಲೇ ತೆರೆಯದ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರಿದ್ದರೆ, ಅಧಿಕಾರಿಯಿಲ್ಲ, ಇಬ್ಬರೂ ಇರುವೆಡೆ ಮಾಹಿತಿ ಕೊರತೆಯಿಂದ ರೋಗಿಗಳೇ ಇಲ್ಲ. ಸಮಯಪಾಲನೆ ಮತ್ತು ಮೇಲ್ವಿಚಾರಣೆಯ ಕೊರತೆಯಿಂದ ನಗರದ ಹಲವು ಕ್ಲಿನಿಕ್‌ಗಳು ಬಿಕೋ ಎನ್ನುತ್ತಿವೆ. ಆರೋಗ್ಯ ಸೇವೆ ಎಂಬುದು ಸರ್ಕಾರದ ದಾನವಲ್ಲ, ಅದು ಸಂವಿಧಾನಾತ್ಮಕ ಹೊಣೆಗಾರಿಕೆ. ಸಾರ್ವಜನಿಕರ ಹಕ್ಕು ಕೂಡ. ಯಾವುದೇ ಸರ್ಕಾರ ಯೋಜನೆಗಳನ್ನು ಆರಂಭಿಸುವುದಕ್ಕಿಂತ ಅವು ಸರಿಯಾಗಿ ಕಾರ್ಯಗತಗೊಳ್ಳುವಂತೆ ನೋಡಿಕೊಳ್ಳುವುದು ಮುಖ್ಯ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ‘ನಮ್ಮ ಕ್ಲಿನಿಕ್’ಗಳು ನಿಜಕ್ಕೂ ‘ನಮ್ಮವರ’ ಕ್ಲಿನಿಕ್‌ಗಳಾಗುವಂತೆ ಮಾಡುವುದೇ ಈಗಿನ ಅಗತ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರೋಧಿ ಹೋರಾಟ: ಯುವ ಪೀಳಿಗೆಗೆ ಕರ್ನಾಟಕ ನಾಗರಿಕ ಸಮಾಜ ಬೆಂಬಲ, ಕೇಂದ್ರ ಸರ್ಕಾರಕ್ಕೆ ನೂರ್ ಶ್ರೀಧರ್ ಎಚ್ಚರಿಕೆ

ದೆಹಲಿಯಲ್ಲಿ ನಡೆಯಲಿರುವ ಎಸ್‌ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಯುವ ಹೋರಾಟಗಾರರ ಮೇಲೆ...

ಮೋಶಾ ಜೋಡಿ ಪ್ರಜಾಪ್ರಭುತ್ವದ ಹತ್ಯೆಗೆ ಸಂಚು ರೂಪಿಸಿದೆ; ಅಭಿಜೀತ್ ದೀಪ್ಕೆ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗವು ಸೇರಿ ದೇಶದಲ್ಲಿ...

ಎಸ್‌ಐಆರ್ ವಿರುದ್ಧದ ಹೋರಾಟ ಜನರ ಹಕ್ಕಿನ ಹೋರಾಟ: ಪ್ರಕಾಶ್ ರಾಜ್

“ಕಳೆದ ಒಂದು ವರ್ಷದಿಂದ ಕರ್ನಾಟಕದ ನಾಗರಿಕ ಸಂಘಟನೆಗಳು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ...