ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

Date:

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. 

ಇದು ವಿಚಿತ್ರವೂ ಅಲ್ಲ; ಅನಿರೀಕ್ಷಿತವೂ ಅಲ್ಲ. ನಮ್ಮ ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ ಅನಾವೃಷ್ಟಿಯ ಭೂತ ಬಾಗಿಲಿಗೆ ಬರುವುದರೊಟ್ಟಿಗೆ ನದಿನೀರಿನ ಹಂಚಿಕೆಯ ವಿವಾದವೂ ಭುಗಿಲೇಳುತ್ತದೆ. ಬಂದ್, ಪ್ರತಿಭಟನೆ ಸಿನೆಮಾ ಕಲಾವಿದರ ಷೋ ರ್‍ಯಾಲಿಗಳ ಭರ್ಜರಿ ಪ್ರದರ್ಶನ ನಡೆಯುತ್ತವೆ.

- Advertisement -

ಅಷ್ಟರಲ್ಲೆ ಮಳೆಯಾದರೆ ರೈತರು ಖುಷಿಯಿಂದ ಹೊಲಗದ್ದೆಗೆ ತೆರಳುತ್ತಾರೆ. ಪ್ರತಿಭಟನಾಕಾರರು ತಣ್ಣಗಾಗುತ್ತಾರೆ. ನಮ್ಮ ನಾಯಕರು ಈ ವಿವಾದದಿಂದ ತಮಗೆಷ್ಟು ರಾಜಕೀಯ ಲಾಭನಷ್ಟವಾಗಬಹುದೆಂಬ ಲೆಕ್ಕಾಚಾರದಲ್ಲೆ ಮುಳುಗಿ ಹೋಗುತ್ತಾರೆ. ಕೊನೆಗೂ ನದಿನೀರಿನ ಹಂಚಿಕೆಯ ನ್ಯಾಯವೆಂಬುದು ರಾಜ್ಯದ ಪಾಲಿಗೆ ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಹೀಗೇಕೆ ಆಗುತ್ತಿದೆ? ಇದಕ್ಕೊಂದು ಶಾಶ್ವತ ಪರಿಹಾರವಿಲ್ಲವೆ?

ಖಂಡಿತ ಇದೆ. ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ ಈ ಕಾರ್ಯಾಚರಣೆಯ ಮುಖ್ಯ
ಉದ್ದೇಶವಾಗಿದೆ. ಯಾವುದೇ ನದಿಯ ಅಚ್ಚುಕಟ್ಟು ಮತ್ತು ಜಲಾನಯನ ಪ್ರದೇಶದ ಹಳ್ಳಕೊಳ್ಳಗಳಿಗೆ ವೈಜ್ಞಾನಿಕವಾದ, ಗುಣಮಟ್ಟದ ಚೆಕ್ ಡ್ಯಾಮ್ ನಿರ್ಮಿಸುವುದು, ಈಗಾಗಲೇ ಕೆರೆಗಳಿದ್ದಲ್ಲಿ ಅವುಗಳ ಹೂಳೆತ್ತಿ ಪುನರುಜ್ಜೀವಗೊಳಿಸುವುದು, ಅಗತ್ಯ ಹಾಗೂ ಅನುಕೂಲವಿರುವ ಪ್ರದೇಶದಲ್ಲಿ ಹೊಸ ಕೆರೆಗಳನ್ನು ನಿರ್ಮಿಸುವುದು ಅಲ್ಲದೇ, ಅವುಗಳಿಗೆ ನೀರು ತುಂಬಿಸುವುದು. ಇಂತಹ ಕ್ರಮಗಳಿಂದ ಅಂತರ್ಜಲದ ಮಟ್ಟವೂ ಸುಧಾರಿಸುತ್ತದೆ. ಅನಾವೃಷ್ಟಿಯಲ್ಲಿ ಉದ್ಭವಿಸುವ ನೀರಿನ ಅಭಾವದ ಬವಣೆಯೂ ತಪ್ಪುತ್ತದೆ.

ಅತಿವೃಷ್ಟಿ ಸಂದರ್ಭದಲ್ಲಿ ಅಣೆಕಟ್ಟಿನ ಕೆಳಭಾಗದಲ್ಲಾಗುವ ನೆರೆ ಹಾವಳಿಯನ್ನೂ ಸ್ವಲ್ಪಮಟ್ಟಿಗೆ ನಿಯಂತ್ರಿಸಿದಂತಾಗುತ್ತದೆ. ನಮ್ಮ ಜನನಾಯಕರಿಗೆ ಇದೆಲ್ಲ ಗೊತ್ತಿಲ್ಲವೆ? ಗೊತ್ತಿದೆ! ಆದರೆ ಅಂಥ ಕೆಲಸಗಳು ಇಲ್ಲಿ ನಾಮ್ ಕೆ ವಾಸ್ತೆ ಆಗಿವೆ.

ಇದನ್ನು ಓದಿದ್ದೀರಾ?: ಬರ, ಸರ್ವಪಕ್ಷ ನಿಯೋಗ ಮತ್ತು ರಾಜಕಾರಣಿಗಳ ಕಪಟ ನಾಟಕ

ಗ್ರಾಮಪಂಚಾಯ್ತಿ ಮಟ್ಟದಲ್ಲೆ ಇಂಥ ಯೋಜನೆಗಳು ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಚಾಲ್ತಿಯಲ್ಲಿವೆ. ಇದಕ್ಕಾಗಿಯೇ ಜೇಸಿಬಿಗಳನ್ನು ಸಾಕಿರುವ ಗ್ರಾ.ಪಂ. ಸದಸ್ಯರೊ, ಶಾಸಕರ ಭಟ್ಟಂಗಿ ಬೆಂಬಲಿಗರೊ ಅವರ ಸಂಬಂಧಿಕರೊ… ಈ ಕಾಮಗಾರಿಗಳನ್ನು ಮಾಡಿ ಮುಗಿಸಿ ದುಡ್ಡು ಹೊಡೆಯುತ್ತಾರೆ. ಇವುಗಳ ಗುಣಮಟ್ಟ ಹೇಗಿರುತ್ತದೆ ಎಂದರೆ ಈ ವರ್ಷ ಕಟ್ಟಿದ ಚೆಕ್ ಡ್ಯಾಮ್  ಮುಂಗಾರಿನ ಮೊದಲ ಮಳೆಗೆ ಕೊಚ್ಚಿ ಹೋಗಿರುತ್ತದೆ.

ಬರ 12

ಎರಡುವರ್ಷ ಬಿಟ್ಟು ಮತ್ತೆ ಕಟ್ಟುತ್ತಾರೆ. ಒಂದು ಚೆಕ್ ಡ್ಯಾಮ್ ಕಟ್ಟಿದ ಮೇಲೆ ಅದರ ಮೇಲುಸ್ತುವಾರಿಯೂ ಅಗತ್ಯ. ಅದಕ್ಕೊಂದು ವ್ಯವಸ್ಥೆ ಬೇಕು. ಅದನ್ನು ಗ್ರಾಮಸ್ಥರೆ ನೋಡಿಕೊಳ್ಳುವಂತೆ ಅವರನ್ನು ಜಾಗೃತಗೊಳಿಸಬೇಕು. ಆದರಿದು ಆಗುತ್ತಿಲ್ಲವಷ್ಟೆ. ಗ್ರಾ.ಪಂ. ಚುನಾವಣೆಯಲ್ಲೂ ಈಗೀಗ ಉಮೇದುವಾರರು ಆಯ್ಕೆ ಬಯಸಿ ಲಕ್ಷಲಕ್ಷ  ರೂ. ಖರ್ಚು ಏಕೆ ಮಾಡುತ್ತಿದ್ದಾರೆ ಎಂಬುದಕ್ಕೂ ಕೂಡ ಕಾರಣಗಳು ಇಲ್ಲೇ ಸಿಗುತ್ತವೆ. ಇದು ನಮ್ಮ ಕೆಳಮಟ್ಟದ ರಾಜಕಾರಣದ ಪರಿಣಾಮವಾದರೆ, ಇನ್ನು ಕೋಟಿಗಟ್ಟಲೆ ನುಂಗಬೇಕೆನ್ನುವವರಿಗೆ ಬೃಹತ್ ನೀರಾವರಿ ಇಲಾಖೆ ಸರ್ವಋತು ಕಾಮಧೇನು ಇದ್ದಂತೆ. ಹೀಗಾಗಿ ಇಲ್ಲಿ ಸರ್ಕಾರಗಳೆ ಸಣ್ಣ ನೀರಾವರಿ ಯೋಜನೆಗಳಿಗಿಂತ ಹೆಚ್ಚಾಗಿ ಬೃಹತ್ ನೀರಾವರಿಗೆ ಆದ್ಯತೆ ಮತ್ತು ಮಹತ್ವ ಕೊಡುತ್ತಿವೆ. ಬೃಹತ್ ನೀರಾವರಿ ಎನ್ನುವುದು ಭ್ರಷ್ಟಾಚಾರದ ತಾಯಿ. ಅದರಿಂದ ವಿವಿಧೋದ್ದೇಶದ ಪ್ರಯೋಜನ ಆಗುವುದು ನಿಜ. ಆದರೆ ಅದಕ್ಕಾಗಿ ಭೂಮಿ, ಅರಣ್ಯ ಮುಳುಗಡೆ,  ಜನವಸತಿ ಪ್ರದೇಶಗಳ ಸ್ಥಳಾಂತರ ಇವೇ ಮೊದಲಾದ ಹತ್ತು ಹಲವು ವಿಪತ್ತುಗಳೂ ಇರುತ್ತವೆ. ಬೃಹತ್ ನೀರಾವರಿ ಯೋಜನೆಗಳು ನಿಸರ್ಗದ ಮೇಲಿನ ಮಾನವನ ಅತ್ಯಾಚಾರವಲ್ಲದೆ ಬೇರೇನೂ ಅಲ್ಲ.

ಬೃಹತ್ ಅಣೆಕಟ್ಟೆಗಳಿರುವ ಪ್ರದೇಶಗಳಲ್ಲಿ ಭೂಕಂಪ ಸಾಧ್ಯತೆಯನ್ನು ಭೂಗೋಳತಜ್ಞರೆ ಸಾರಿ ಸಾರಿ ಹೇಳುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಇನ್ನೂ ಅದಕ್ಕೆ ಏಕೆ ಜೋತುಬಿದ್ದಿವೆ? ಕಾರಣ ಸ್ಪಷ್ಟವಾಗಿಯೇ ಇದೆ. ಇವತ್ತಿನ ಭ್ರಷ್ಟ ರಾಜಕೀಯ ಪಕ್ಷಗಳಿಗೆ ಹಣ ಬೇಕು. ಅದಕ್ಕಾಗಿ ಅವರಿಗೆ ಬೃಹತ್ ನೀರಾವರಿ ಯೋಜನೆಗಳು ಬೇಕು. ಕೊನೆಗೆ ಜನಸಾಮಾನ್ಯರ ಹೆಣ ಎತ್ತಬೇಕು. ಎಂಥ ನಿರ್ಲಜ್ಜ ವ್ಯವಸ್ಥೆ ಇದು!

ಇದನ್ನು ಓದಿದ್ದೀರಾ?: ‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಈಗಲಾದರು ನಮ್ಮ ನಾಡಿನ ಜನನಾಯಕರು ಎಚ್ಚೆತ್ತುಕೊಳ್ಳಬೇಕು. ಮಹಾರಾಷ್ಟ್ರ ಸರ್ಕಾರ ಕೃಷ್ಣಾ ಮತ್ತು ಭೀಮಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸಣ್ಣ ನೀರಾವರಿಗೆ ಆದ್ಯತೆ ಕೊಡುವ ಮೂಲಕ ರಾಜ್ಯಕ್ಕೆ ಹರಿದು ಬರಬೇಕಿದ್ದ ನೀರನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದರ ಕುರಿತು ಚಿಂತಿಸಬೇಕು. ಅದೇ ರೀತಿಯ ಕ್ರಮಗಳನ್ನು ಕಾವೇರಿಯೂ ಸೇರಿದಂತೆ ಎಲ್ಲ ನದಿಗಳ ಜಲಾನಯನ ಪ್ರದೇಶಗಳಲ್ಲಿ ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು. ಇದು ಸಾಧ್ಯವಾದಾಗ ಮಾತ್ರ ನಾವು ನೆರೆರಾಜ್ಯಗಳ ರಾಜಕೀಯ ದಾಳಕ್ಕೆ ಬಲಿಯಾಗುವುದು ತಪ್ಪೀತು! ಇದು ಸಾಧ್ಯವೇ?

ಚಂಸು ಪಾಟೀಲ
ಚಂಸು ಪಾಟೀಲ
+ posts

ಕೃಷಿಯನ್ನು ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ, ಕವಿ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974) ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು.

ಕೃಷಿ ಸಮಸ್ಯೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು, ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಚಂಸು ಪಾಟೀಲ
ಚಂಸು ಪಾಟೀಲ
ಕೃಷಿಯನ್ನು ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ, ಕವಿ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974) ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು. ಕೃಷಿ ಸಮಸ್ಯೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು, ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಕಂದಾ, ನೀನು ನ್ಯಾಯಾಲಯ ಕಂಡ ಅತಿ ಧೈರ್ಯಶಾಲಿ ಬಾಲಕಿ’: ಪೋಕ್ಸೊ ಸಂತ್ರಸ್ತೆಗೆ ನ್ಯಾಯಾಧೀಶರ ಭಾವುಕ ಪತ್ರ

ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪುಗಳು ಕೇವಲ ಶಿಕ್ಷೆ ಮತ್ತು ದಂಡಕ್ಕೆ...

ಹವಾಮಾನ | ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭಾರಿ ಮಳೆ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 30ರಿಂದ 40...

ಕೋಡಿಹಳ್ಳಿ ಚಂದ್ರಶೇಖರ್ ಬಂಧನ ಖಂಡಿಸಿ ಮುಧೋಳದಲ್ಲಿ ರೈತರ ಪ್ರತಿಭಟನೆ

ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರೈತಪರ ಹೋರಾಟ ನಡೆಸಿದ್ದ ರಾಜ್ಯ ರೈತ...

ತಾಳಿಕೋಟಿ | ₹2,500 ಬರ ಪರಿಹಾರಕ್ಕೆ ವಿರೋಧ: ಸರ್ಕಾರಕ್ಕೇ ದೇಣಿಗೆ ನೀಡಲು ರೈತ ಸಂಘ ಸಿದ್ಧತೆ

ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ₹2,500 ಬರ...