ಕೆ.ಟಿ. ಶಿವಪ್ರಸಾದ್ ಹೇಳಿದ ‘ಮಾಯಾಕನ್ನಡಿ’ ಕತೆ

Date:

ಉಡುಪು, ಆಹಾರದಲ್ಲಿ ಸಾಮಾನ್ಯ ಮನುಷ್ಯನಂತೆ ಕಂಡರೂ ಶಿವಪ್ರಸಾದ್ ಒಬ್ಬ ಜೋಗಿ, ಜಂಗಮ. ಮನುಷ್ಯನ ಸ್ವಾತಂತ್ರ್ಯವೇ ಅವನ ಸಿದ್ದಿಗೆ ಮೂಲವೆಂಬ ನಂಬಿಕೆ ಅವರದು. ಹಾಗಾಗಿ ಎಲ್ಲಾ ಬಗೆಯ ಬಂಧನಗಳ ವಿರುದ್ಧ ಹೋರಾಟ ಅವರಿಗೆ ಸಹಜವಾಗಿ ಬಂದಿತ್ತು.

ಒಂದಾನೊಂದು ಕಾಲದಲ್ಲಿ ಒಬ್ಬ ಕಳ್ಳನಿದ್ದ. ಅವನು ಅಂತಿಂಥ ಕಳ್ಳನಲ್ಲ, ಐನಾತಿ ಕಳ್ಳ. ಕದಿಯುವ ಗೀಳು ಹಿಡಿದಿತ್ತು. ಏನನ್ನೇ ಆಗಲಿ ಕದಿಯುವ ಕೌಶಲ್ಯ ಸಿದ್ಧಿಸಿತ್ತು. ಅವನು ಸಿಕ್ಕಿದ್ದನ್ನೆಲ್ಲ ಕದಿಯುತ್ತಾ ಹೋದ. ಅವನ ದಾಳಿಗೆ ಸಿರಿವಂತರು ಬೆಚ್ಚಿದರು. ತಮ್ಮ ಸಿರಿಯನ್ನು ಬಚ್ಚಿಡಲು ನಾನಾ ಮಾರ್ಗೋಪಾಯಗಳನ್ನು ಹುಡುಕಿದರು. ಆದರೆ ಕಳ್ಳನ ಮುಂದೆ ಅವರೆಲ್ಲರ ಪ್ರಯತ್ನ ನಿಷ್ಪಲವಾಯಿತು. ಭೂಮಿಯಲ್ಲಿ ಹುಗಿದಿಟ್ಟದ್ದನ್ನು ಅಗೆದು ತೆಗೆದ. ಬಾವಿಯಲ್ಲಿ ಬಚ್ಚಿಟ್ಟಿದ್ದನ್ನು ಮುಳುಗಿ ಹೆಕ್ಕಿದ. ತಿಜೋರಿಯನ್ನು ಒಡೆದ. ಸಿಕ್ಕಿದ್ದೆಲ್ಲವನ್ನೂ ದೋಚಿದ. ಸಿರಿವಂತರ ಮನೆಯ ಚಿನ್ನ, ಬೆಳ್ಳಿ, ಒಡವೆ, ವಸ್ತ್ರ, ವಜ್ರ, ವೈಡೂರ್ಯಗಳೆಲ್ಲ ಇವನ ಮನೆಯಲ್ಲಿ ಸಂಗ್ರಹವಾಗುತ್ತಾ ಹೋದವು. ಹಗಲಿನಲ್ಲಿ ಬೆಳಕನ್ನೇ ನೋಡದೆ, ಇರುಳಿನಲ್ಲೇ ಬದುಕನ್ನು ಕಳೆದ ಕಳ್ಳನಿಗೆ ಬೆಳಕೆಂದರೆ ಮಾತ್ರ ಭಯ.

- Advertisement -

ಅವನಿಗಿದ್ದ ಸಂಗಾತಿಯೆಂದರೆ ಒಂದು ಮಾಯಾಕನ್ನಡಿ. ಏನೇ ಸಲಹೆ ಕೇಳಬೇಕೆಂದರೂ ಅದರ ಮುಂದೆ ನಿಲ್ಲುತ್ತಿದ್ದ. ಕನ್ನಡಿ ಚಿತ್ರದಲ್ಲೋ ಪದದಲ್ಲೋ ಉತ್ತರ ಮೂಡಿಸಿ ಅವನೊಡನೆ ಸಂವಹನ ಸಾಧಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಮನೆಯಲ್ಲಿ ಸಿರಿ ಮನೆಮಾಡಿದರೂ ಕಳ್ಳನಿಗೆ ಏನೋ ಅತೃಪ್ತಿ. ನಿರಾಶೆ, ಕಾತರ, ತಳಮಳ, ಯಾವುದೋ ಒಂದು ಕೊರತೆ. ಯಾಕೆ ಹೀಗೆ ಎಂದು ಕನ್ನಡಿಯ ಮುಂದೆ ನಿಂತ.

‘ನಿನಗೆ ಭೌತಿಕವಾದದ್ದನ್ನೆಲ್ಲ ಕದ್ದೆಯೆಂಬ ಹೆಮ್ಮೆ. ಆದರೆ ಕದಿಯುವ ಗೀಳು ಅಳಿದಿಲ್ಲ. ಈಗ ನೀನು ಪರರ ರುಚಿ, ಶಬ್ದ, ಭಾವನೆ, ಅನುಭವ, ಕನಸುಗಳನ್ನು ಕದಿಯಲು ಹೊರಡು’ ಎಂಬ ಪದಗಳು ಕನ್ನಡಿಯಲ್ಲಿ ಮೂಡಿದವು.

ಸರಿ ಕಳ್ಳ ಅದರಂತೆ ಸೂರೆ ಮಾಡುತ್ತಾ ಹೋದ. ಹೊಸ ಶಬ್ದಗಳನ್ನು ಕೇಳಿದ. ರುಚಿಗಳನ್ನು ಸವಿದ. ಭಾವನೆಗಳ ತರಂಗದಲ್ಲೂ ತೇಲಾಡಿದ. ಪರರ ಅನುಭವಗಳನ್ನು ಕದ್ದು ಅನುಭವಿಸಿ ರೋಮಾಂಚನಗೊಂಡ. ಕದ್ದ ಕನಸುಗಳಲ್ಲೂ ವಿಹರಿಸಿದ. ಆರಂಭದಲ್ಲೂ ಕಂಡ ತೃಪ್ತಿ, ಸುಖ ಕ್ರಮೇಣ ಕರಗಿ ಕೊರತೆ, ಅತೃಪ್ತಿ, ಆತಂಕ ಮರುಕಳಿಸಿದವು. ಮತ್ತೆ ಕನ್ನಡಿಯ ಮುಂದೆ ಬಂದು ನಿಂತ.

‘ನಿನಗಿನ್ನೂ ಕದಿಯುವ ಗೀಳು ಬಿಟ್ಟಿಲ್ಲ. ಈಗ ಬಂಧನಗಳನ್ನು ಕಳಚುವ ವಿಧಾನಗಳನ್ನು ಸೂರೆ ಮಾಡು. ಅದಕ್ಕೆ ನಿನ್ನ ಹತಾರುಗಳು ಕೆಲಸಕ್ಕೆ ಬರುವುದಿಲ್ಲ. ನೀನು ಆ ವಿಧಾನಗಳನ್ನು ಅರಸುತ್ತಾ, ಅಂಥ ಸಾಧಕನ ಅಂತರಂಗವನ್ನು ಕದಿಯಬೇಕು. ಬಾ ನನ್ನೊಳಗೆ’ ಎಂದು ಮೂಡಿಸಿತು ಕನ್ನಡಿ.

ಇದನ್ನು ಓದಿದ್ದೀರಾ?: ಕೆ.ಟಿ. ಶಿವಪ್ರಸಾದ್‌ ಎಂಬ ಕಲಾವಿದನೊಡನೆ ಕಲರವ

ಕಳ್ಳ ಕನ್ನಡಿಯೊಳಗೆ ಜಾರಿದ. ಕತ್ತಲೆಯಲ್ಲೇ ನಡೆಯುತ್ತಾ ಹೋದ. ಬಯಲೊಂದರಲ್ಲಿ ಮಸಿಯಂತೆ ಮೂಡಿದ್ದ ಬೋಧಿವೃಕ್ಷದ ಕೆಳಗೆ ಬೆಳಕಾಗಿ ವ್ಯಕ್ತಿ ಕೂತಿದ್ದ. ಕಳ್ಳ ಅವನ ಅಂತರಂಗವನ್ನು ಕದ್ದ. ಕೂಡಲೇ ಕನ್ನಡಿಯಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದ. ಬಿದ್ದ ಮನೆಯೆಲ್ಲಾ ಬಯಲಾಗಿತ್ತು. ಮನೆಯಲ್ಲಿದ್ದ ಸಿರಿಯೆಲ್ಲ ಮಾಯವಾಗಿತ್ತು. ರುಚಿ, ಶಬ್ದ, ಅನುಭವ, ಕನಸುಗಳೆಲ್ಲ ಕರಗಿಹೋಗಿದ್ದವು. ಮೈಮೇಲೆ ತುಂಡು ಬಟ್ಟೆ. ಕತ್ತಲು ಹರಿದು ಬೆಳಕು ಮೂಡಿತ್ತು. ಬೆಳಕಿನಲ್ಲೂ ಹೆಜ್ಜೆ ಹಾಕಿದ ಕಳ್ಳ ಕಾಲದ ಜೊತೆಯಲ್ಲಿ ನಡೆಯತೊಡಗಿದ. ಹಾಗೆ ನಡೆಯುತ್ತಿರುವಾಗ ಕೊಳವೊಂದು ಎದುರಾಯಿತು. ‘ಕೀಳುಜಾತಿಯವರಿಗೆ ಇಲ್ಲಿ ನಿಷೇಧ’ ಎಂಬ ಫಲಕ ಕಾಣಿಸಿತು. ಕೂಡಲೇ ತಳಮಳ, ನಿರಾಶೆ, ಆತಂಕ, ಕಾತರಗಳು ಅವನ ಮನಸ್ಸಿನಲ್ಲಿ ಮರುಕಳಿಸಿದವು.

ಮತ್ತೆ ಕನ್ನಡಿಯ ಮುಂದೆ ನಿಂತ. ‘ನೀರನ್ನು ಕದಿ. ಬಂಧನಗಳನ್ನು ಬಿಡಿಸು’ ಎಂದಿತು ಕನ್ನಡಿ.

ಕದಿಯುವ ಗೀಳು ಜಾಗೃತಿಯಾಯಿತು. ಎಲ್ಲರೂ ನೆರದಿರುವಂತೆಯೇ ನೀರನ್ನು ಕದ್ದ. ಕೊಳದ ಬಳಿಯ ಜನರ ಗದ್ದಲವೆಲ್ಲ ಕರಗಿ ‘ಜೈ ಭೀಮ್’ ಘೋಷಣೆ ಅನುರಣಿಸಿದವು. ಕೊಳದಿಂದ ಹೊರಕ್ಕೆ ಬಂದಾಗ ಹಗುರಾಗಿದ್ದ. ಎದುರಲ್ಲಿ ಅನೇಕ ದಾರಿಗಳು ಎದುರಾದವು. ಮೊದಲ ಬಾರಿಗೆ ಆಯ್ಕೆಯ ಅವಕಾಶ ಬಂದಿತ್ತು. ತನಗಿಷ್ಟ ಬಂದ ದಾರಿಯನ್ನು ಆರಿಸಿದ. ನಡೆಯುತ್ತಾ ಹೋದ. ಹಿಂದೆ ಘೋಷಣೆ ಅನುಸರಿಸುತ್ತಾ ಬಂತು. ನಡೆದ, ನಡೆದ. ಮತ್ತೆ ಅತೃಪ್ತಿ ಇಣುಕಿತು. ಮತ್ತೆ ಕನ್ನಡಿಯ ಮುಂದೆ ಬಂದು ನಿಂತ. ‘ಸ್ವಾತಂತ್ರ್ಯವನ್ನು ಕದಿ’ ಎಂದು ಹೇಳಿತು.

ಕಳ್ಳ ತೊಟ್ಟ ಬಟ್ಟೆಯನ್ನು ಬಿಸುಟ. ಗೊಮ್ಮಟನಿಗೆ ಜೀವ ಬಂದಂತಾಯಿತು. ಕೈಕಾಲುಗಳ ಮೇಲಿದ್ದ ಬಳ್ಳಿಯನ್ನು ಕೊಡವಿದ. ಕನ್ನಡಿಯ ಮುಂದೆ ಬಂದು ನಿಂತ. ‘ಇಲ್ಲಿ ಯಾರೂ ಮುಖ್ಯರಲ್ಲ… ಯಾರೂ ಅಮುಖ್ಯರಲ್ಲ…’ ಸಾಲುಗಳು ಗೋಚರಿಸಿದವು. ಸ್ವಾತಂತ್ರ್ಯದ ಅನಂತ ಸಾಧ್ಯತೆಗಳನ್ನು ನೆನೆಯುತ್ತಾ ಎಲ್ಲ ತತ್ವದೆಲ್ಲೆಗಳ ಮೀರಿ ನಿರ್ದಿಗಂತವಾಗಿ ಏರಿ, ಅನಿಕೇತನವಾದ.

ಇದು ಸ್ವತಃ ಕೆ.ಟಿ. ಶಿವಪ್ರಸಾದ್ ಹೇಳಿದ ಕತೆ.

ಈ ಕತೆಯನ್ನು ಇಲ್ಲಿ ನೆನೆಯಲು ಕಾರಣವಿದೆ. ಉಡುಪು, ಆಹಾರದಲ್ಲಿ ಸಾಮಾನ್ಯ ಮನುಷ್ಯನಂತೆ ಕಂಡರೂ ಶಿವಪ್ರಸಾದ್ ಒಬ್ಬ ಜೋಗಿ, ಜಂಗಮ. ಮನುಷ್ಯನ ಸ್ವಾತಂತ್ರ್ಯವೇ ಅವನ ಸಿದ್ದಿಗೆ ಮೂಲವೆಂಬ ನಂಬಿಕೆ ಅವರದು. ಹಾಗಾಗಿ ಎಲ್ಲಾ ಬಗೆಯ ಬಂಧನಗಳ ವಿರುದ್ಧ ಹೋರಾಟ ಅವರಿಗೆ ಸಹಜವಾಗಿ ಬಂದಿತ್ತು.

(ಕೃಪೆ: ಕಲ್ಲರಳಿ ಹೂವ್ವಂತೆ, ಸಂ: ಡಾ.ಕೆ. ಪುಟ್ಟಸ್ವಾಮಿ, ಪ್ರ: ಅಭಿನವ ಪ್ರಕಾಶನ)

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಪೊಲೀಸ್ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಪತ್ರಕರ್ತೆ ಸೇರಿ 17 ಮಂದಿ ಬಂಧನ

ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ವರದಿಗಾರಿಕೆ ವೇಳೆ ತಮ್ಮ...

ದೀಪ್ಕೆ, ಇತರೆ ಸಿಜೆಪಿ ನಾಯಕರ ಬಂಧನಕ್ಕೆ ಸರ್ಕಾರ ಸಂಚು: ಜೈಲಿಗೆ ಹೋಗಲು ಹೆದರಲ್ಲ ಎಂದ ಸೌರವ್ ದಾಸ್

ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೂ...

ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ದೆಹಲಿ ಪೊಲೀಸರು ಅನುಮತಿ...