ಕೇರಳ ರಾಜಕೀಯದಲ್ಲಿ ಮಿಂಚಿದ ಪ್ರಭಾವಿ ದಂಪತಿಗಳಿವರು

Date:

ಕೇರಳದ ಈ ರಾಜಕೀಯ ದಂಪತಿಗಳು ಕೇವಲ ಅಧಿಕಾರಕ್ಕಾಗಿ ಒಂದಾದವರಲ್ಲ. ಬದಲಾಗಿ ಸಮಾಜದಲ್ಲಿ ಒಂದು ಬದಲಾವಣೆ ತರುವ ನಿಟ್ಟಿನಲ್ಲಿ ಒಂದಾಗಿ ಕಾರ್ಯನಿರ್ವಹಿಸಿರುವ ಹಲವು ನಿದರ್ಶನಗಳಿವೆ. ಕೆಲವೊಮ್ಮೆ ಸೈದ್ಧಾಂತಿಕವಾಗಿ ಬೇರೆ ಬೇರೆಯಾಗಿ ಹೋರಾಡಿರುವುದೂ ಇದೆ.

ಕೇರಳ ರಾಜಕೀಯ ಇತಿಹಾಸವು ಕೇವಲ ಸಿದ್ಧಾಂತಗಳ ಸಂಘರ್ಷ ಮಾತ್ರವಲ್ಲ. ಕೇರಳ ರಾಜಕೀಯದಲ್ಲಿ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸುವುದು ಸಾಮಾನ್ಯ. ಇತರೆ ರಾಜ್ಯಗಳಲ್ಲಿ ಇರುವ ಕುಟುಂಬ ರಾಜಕಾರಣವನ್ನು ನಾವು ಹೋಲಿಸಿದರೆ ಕೇರಳದ್ದು ಸ್ವಲ್ಪ ಭಿನ್ನ. ಕೇರಳ ರಾಜಕೀಯದಲ್ಲಿ ಹಲವು ದಂಪತಿಗಳು ಒಂದೇ ಕಾಲದಲ್ಲಿ ಅಥವಾ ಬೇರೆ ಬೇರೆ ಅವಧಿಯಲ್ಲಿ ಶಾಸಕರಾಗಿ ಅಥವಾ ಸಚಿವರಾಗಿ ಮಿಂಚಿದ್ದಾರೆ.

- Advertisement -

ಅಷ್ಟಕ್ಕೂ ಕೇರಳದ ಈ ರಾಜಕೀಯ ದಂಪತಿಗಳು ಕೇವಲ ಅಧಿಕಾರಕ್ಕಾಗಿ ಒಂದಾದವರಲ್ಲ. ಬದಲಾಗಿ ಸಮಾಜದಲ್ಲಿ ಒಂದು ಬದಲಾವಣೆ ತರುವ ನಿಟ್ಟಿನಲ್ಲಿ ಒಂದಾಗಿ ಕಾರ್ಯನಿರ್ವಹಿಸಿರುವ ಹಲವು ನಿದರ್ಶನಗಳಿವೆ. ಕೆಲವೊಮ್ಮೆ ಸೈದ್ಧಾಂತಿಕವಾಗಿ ಬೇರೆ ಬೇರೆಯಾಗಿ ಹೋರಾಡಿರುವುದೂ ಇದೆ. ಈ ರೀತಿಯಲ್ಲಿ ಭಾರತೀಯ ರಾಜಕೀಯದಲ್ಲಿ ವಿಶಿಷ್ಟ ದಾಖಲೆ ಬರೆದವರು ಕೇರಳ ರಾಜಕಾರಣಿಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಪ್ರಗತಿಪರ ರಾಜ್ಯದಲ್ಲಿ ಮಹಿಳೆಯರಿಗಿಲ್ಲ ಟಿಕೆಟ್: ಪರಂಪರಾಗತ ಅನ್ಯಾಯ ಮುಂದುವರಿಕೆ

ಟಿ.ವಿ. ಥಾಮಸ್ ಮತ್ತು ಕೆ.ಆರ್. ಗೌರಿ ಅಮ್ಮ

ಕೇರಳ ರಾಜಕೀಯದಲ್ಲಿ ಅತ್ಯಂತ ಪ್ರಸಿದ್ಧ ಜೋಡಿ ಟಿ.ವಿ. ಥಾಮಸ್ ಮತ್ತು ಕೆ.ಆರ್. ಗೌರಿ ಅಮ್ಮ ದಂಪತಿ. ಕೇರಳದ ಕಮ್ಯುನಿಸ್ಟ್ ಚಳವಳಿಯ ಈ ಇಬ್ಬರು ದಿಗ್ಗಜರು ಸಮಾಜಕ್ಕೆ ನೀಡಿದ ಕೊಡುಗೆ ಅಗಾಧ. 1957ರಲ್ಲಿ ಇ.ಎಂ.ಎಸ್. ನಂಬೂದಿರಿಪಾಡ್ ನೇತೃತ್ವದಲ್ಲಿ ರಚನೆಯಾದ ವಿಶ್ವದ ಮೊದಲ ಚುನಾಯಿತ ಕಮ್ಯುನಿಸ್ಟ್ ಸರ್ಕಾರದಲ್ಲಿ ಇವರಿಬ್ಬರೂ ಸಚಿವರಾಗಿದ್ದರು. ಸಚಿವ ಸಂಪುಟದಲ್ಲಿದ್ದಾಗಲೇ ಇಬ್ಬರ ನಡುವೆ ಪ್ರೀತಿ ಹುಟ್ಟಿ 1957ರಲ್ಲಿ ವಿವಾಹವಾದರು. ಆ ಕಾಲದಲ್ಲಿ ಈ ಮದುವೆ ತೀವ್ರ ಚರ್ಚಿತವಾಗಿತ್ತು. ಟಿ.ವಿ. ಥಾಮಸ್‌ ಕೇರಳದ ಕೈಗಾರಿಕಾ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಗೌರಿ ಅಮ್ಮ ಕೇರಳದ ಮೊದಲ ಕಂದಾಯ ಸಚಿವೆಯಾಗಿ ಕ್ರಾಂತಿಕಾರಿ ‘ಭೂ ಸುಧಾರಣಾ ಕಾಯ್ದೆ’ಯನ್ನು ಜಾರಿಗೆ ತಂದವರು. ಗೌರಿ ಅಮ್ಮ ಅವರನ್ನು ಕೇರಳದ ರಾಜಕಾರಣದ ‘ಉಕ್ಕಿನ ಮಹಿಳೆ’ ಎಂದು ಕರೆಯಲಾಗುತ್ತಿತ್ತು.

gauri Picsart AiImageEnhancer
ಟಿ.ವಿ. ಥಾಮಸ್ ಮತ್ತು ಕೆ.ಆರ್. ಗೌರಿ ಅಮ್ಮ ದಂಪತಿ

1964ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷವು (CPI) ವಿಭಜನೆಯಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಅಥವಾ ಸಿಪಿಐಎಂ ಅಸ್ತಿತ್ವಕ್ಕೆ ಬಂತು. ಈ ಸಂದರ್ಭದಲ್ಲಿ ಇಬ್ಬರೂ ವಿಭಿನ್ನ ಹಾದಿಯನ್ನು ತುಳಿದರು. ಟಿ.ವಿ. ಥಾಮಸ್ ಅವರು ಮೂಲ ಪಕ್ಷವಾದ ಸಿಪಿಐನಲ್ಲೇ ಉಳಿದುಕೊಂಡರೆ, ಗೌರಿ ಅಮ್ಮ ಹೊಸದಾಗಿ ರಚನೆಯಾದ ಸಿಪಿಐಎಂ ಪಕ್ಷವನ್ನು ಸೇರಿದರು. ಅಂತಿಮವಾಗಿ ಇಬ್ಬರಿಗೂ ಸಿದ್ಧಾಂತ ಮತ್ತು ಪಕ್ಷದ ನಿಷ್ಠೆ ತಮ್ಮ ವೈಯಕ್ತಿಕ ಸಂಬಂಧಕ್ಕಿಂತ ಮುಖ್ಯ ಎನಿಸಿತು. ಇದರ ಪರಿಣಾಮ ಅಧಿಕೃತವಾಗಿ ಇಬ್ಬರು ಬೇರ್ಪಟ್ಟರು.

ಪಕ್ಷ ವಿಭಜನೆಯಾದ ನಂತರವೂ ಇಬ್ಬರು ತಿರುವನಂತಪುರಂನ ತಮ್ಮ ಅಧಿಕೃತ ನಿವಾಸ ‘ಪ್ರಶಾಂತ್’ನಲ್ಲಿ ವಾಸವಿದ್ದರು. ಆದರೆ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಹೆಚ್ಚಾದಂತೆ, ಇಬ್ಬರ ನಡುವೆ ವೈಮನಸ್ಸು ಹುಟ್ಟಿತು. ಕೊನೆಗೆ ಪಕ್ಷದ ಒತ್ತಡ ಮತ್ತು ಸೈದ್ಧಾಂತಿಕ ಸಂಘರ್ಷಗಳಿಂದಾಗಿ ಬೇರ್ಪಟ್ಟರು.

ಕೆ. ಕುಂಜಂಬು ಮತ್ತು ವಿ. ಕುಟ್ಟಿಯಮ್ಮ

ಕೇರಳದ ಕಾಸರಗೋಡು ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಕೆ. ಕುಂಜಂಬು ಮತ್ತು ವಿ. ಕುಟ್ಟಿಯಮ್ಮ ದಂಪತಿಗಳು ಅತ್ಯಂತ ಪ್ರಭಾವಶಾಲಿ ಮತ್ತು ಅಪರೂಪದ ಜೋಡಿ ಎಂದು ಗುರುತಿಸಿಕೊಂಡಿದ್ದಾರೆ. ಕಮ್ಯುನಿಸ್ಟ್ ಚಳವಳಿಯ ಮೂಲಕ ರಾಜಕೀಯ ಪ್ರವೇಶಿಸಿದ ಇಬ್ಬರೂ ಶಾಸಕರಾಗಿ ಸೇವೆ ಸಲ್ಲಿಸಿದವರು. ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಬೇರೆ ಬೇರೆ ಅವಧಿಗಳಲ್ಲಿ ಶಾಸಕರಾಗಿ ಆಯ್ಕೆಯಾದ ಕೆಲವೇ ಕೆಲವು ಉದಾಹರಣೆಗಳಲ್ಲಿ ಕೆ. ಕುಂಜಂಬು ಮತ್ತು ವಿ. ಕುಟ್ಟಿಯಮ್ಮ ದಂಪತಿ ಸೇರುತ್ತಾರೆ.

ಇದನ್ನು ಓದಿದ್ದೀರಾ? ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ

ಸಿಪಿಐಎಂ ನಾಯಕರಾದ ಇಬ್ಬರೂ ಸರಳತೆ, ಜನಪರ ಕಾಳಜಿಗೆ ಹೆಸರಾಗಿದ್ದವರು. ಅಧಿಕಾರದಲ್ಲಿದ್ದಾಗಲೂ ಸಾಮಾನ್ಯ ಜನರಂತೆ ಬದುಕಿದ ಈ ದಂಪತಿ ಕಾಸರಗೋಡಿನ ಜನಮಾನಸದಲ್ಲಿ ಇಂದಿಗೂ ಗೌರವ ಉಳಿಸಿಕೊಂಡಿದ್ದಾರೆ. ಮಂಜೇಶ್ವರ ಮತ್ತು ಕಾಸರಗೋಡು ನಡುವೆ ಕನ್ನಡ ಹಾಗೂ ಮಲಯಾಳಂ ಭಾಷಿಕರಲ್ಲಿ ಸಾಮರಸ್ಯ ಕಾಪಾಡುವಲ್ಲಿ, ಆ ಪ್ರದೇಶದ ಮೂಲಸೌಕರ್ಯ ವೃದ್ಧಿಸುವಲ್ಲಿ ಈ ದಂಪತಿ ಕೊಡುಗೆ ಮಹತ್ವದ್ದು.

ಕೆ. ಕುಂಜಂಬು 1980 ಮತ್ತು 1982ರ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಇಕ್ಕೇರಿ (ಈಗಿನ ಮಂಜೇಶ್ವರ/ಕಾಸರಗೋಡು ಭಾಗದ ವ್ಯಾಪ್ತಿ) ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವಿ. ಕುಟ್ಟಿಯಮ್ಮ 1967ರಲ್ಲಿ ನಡೆದ ಚುನಾವಣೆಯಲ್ಲಿ ಇವರು ಶಾಸಕಿಯಾಗಿ ಆಯ್ಕೆಯಾಗಿದ್ದರು.

ದಾಮೋದರ ಮೆನನ್ ಮತ್ತು ಲೀಲಾ

ಕೇರಳ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಪ್ರಭಾವಿ ದಂಪತಿಗಳು ಕೆ.ಎ. ದಾಮೋದರ ಮೆನನ್ ಮತ್ತು ಲೀಲಾ ದಾಮೋದರ ಮೆನನ್. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿಂದ ಬಂದ ಇವರಿಬ್ಬರೂ ಕೇರಳ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದವರು. ರಾಜಕೀಯದ ಜತೆಗೆ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳಿಗಾಗಿಯೂ ಹೋರಾಡಿದವರು. ರಾಜಕೀಯ ಅಧಿಕಾರವು ಕೇವಲ ಒಂದು ಕುಟುಂಬದ ಸೊತ್ತಾಗದೆ, ದಂಪತಿಗಳಿಬ್ಬರೂ ತಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವ ಮತ್ತು ಜನಪ್ರಿಯತೆಯಿಂದ ಶಾಸನಸಭೆ ಪ್ರವೇಶಿಸಿದವರು. ಲೀಲಾ ಶಾಸಕರಾಗಿದ್ದಾಗಲೇ ಅವರ ಪತಿ ದಾಮೋದರ ಸಚಿವರಾಗಿದ್ದರು. ಪತಿ-ಪತ್ನಿ ಇಬ್ಬರೂ ಏಕಕಾಲದಲ್ಲಿ ಶಾಸನಸಭೆಯಲ್ಲಿ ಸಕ್ರಿಯರಾಗಿದ್ದ ಅಪರೂಪದ ಉದಾಹರಣೆ ಇವರದ್ದು.

ದಾಮೋದರ ಮೆನನ್ ಪ್ರಖ್ಯಾತ ‘ಮಾತೃಭೂಮಿ’ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು. 1960ರಲ್ಲಿ ಪಟ್ಟಂ ತಾನು ಪಿಳ್ಳೈ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ದಾಮೋದರ ಮೆನನ್ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ದೇಶದ ಮೊದಲ ಲೋಕಸಭೆಯ (1952) ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಲೀಲಾ ಕೇರಳದ ಆರಂಭಿಕ ಮಹಿಳಾ ಶಾಸಕರಲ್ಲಿ ಒಬ್ಬರು. ಬರಹಗಾರ್ತಿ ಮತ್ತು ಸಮಾಜ ಸೇವಕಿಯೂ ಹೌದು. 1957 ಮತ್ತು 1960ರಲ್ಲಿ ಕೇರಳ ವಿಧಾನಸಭೆಗೆ ಸತತವಾಗಿ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯೆಯಾಗಿಯೂ (1974) ಕಾರ್ಯನಿರ್ವಹಿಸಿದ್ದರು.

ಎ.ಕೆ. ಬಾಲನ್ ಮತ್ತು ಡಾ. ಪಿ.ಕೆ. ಜಮೀಲಾ

ಸಿಪಿಐಎಂ ಪಕ್ಷದ ಹಿರಿಯ ನಾಯಕ ಎ.ಕೆ. ಬಾಲನ್ ಮತ್ತು ಡಾ. ಪಿ.ಕೆ. ಜಮೀಲಾ ಕೇರಳದ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಒಂದು ಮಾದರಿ ದಂಪತಿಯಾಗಿ ಗುರುತಿಸಿಕೊಂಡವರು. ಇವರದ್ದು ಅಂತರ್ ಧರ್ಮೀಯ ವಿವಾಹ. ವೈದ್ಯಕೀಯ ಕ್ಷೇತ್ರದಲ್ಲಿ ಜಮೀಲಾ ಅವರ ಅನುಭವ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬಾಲನ್ ಅವರ ಅನುಭವವು ಇಬ್ಬರನ್ನೂ ಕೇರಳದ ಪ್ರಭಾವಿ ದಂಪತಿಗಳನ್ನಾಗಿಸಿದೆ. ಎ.ಕೆ. ಬಾಲನ್ ಸೈದ್ಧಾಂತಿಕ ರಾಜಕಾರಣದಲ್ಲಿ ತೊಡಗಿದ್ದರೆ, ಡಾ. ಜಮೀಲಾ ಆಡಳಿತಾತ್ಮಕ ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.

balan jameela Picsart AiImageEnhancer
ಎ.ಕೆ. ಬಾಲನ್ ಮತ್ತು ಡಾ. ಪಿ.ಕೆ. ಜಮೀಲಾ ದಂಪತಿ

ಎ.ಕೆ. ಬಾಲನ್ ಕೇರಳದ ಮಾಜಿ ಸಚಿವರು, ಸಿಪಿಐಎಂನ ರಾಜ್ಯ ಸಮಿತಿಯ ಹಿರಿಯ ಸದಸ್ಯರಾಗಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಕುಜ್ಹಲ್ಮನ್ನಂ ಮತ್ತು ತಾರೂರು ಕ್ಷೇತ್ರಗಳಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 2016-2021ರ ನಡುವೆ ಪಿಣರಾಯಿ ವಿಜಯನ್ ಸಚಿವ ಸಂಪುಟದಲ್ಲಿ ಕಾನೂನು, ಸಾಂಸ್ಕೃತಿಕ ವ್ಯವಹಾರಗಳು ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಪಿ.ಕೆ. ಜಮೀಲಾ ಕೇರಳ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕೇರಳದ ಆರೋಗ್ಯ ಸೇವೆಗಳ ನಿರ್ದೇಶಕಿಯಾಗಿ (ಡಿಎಚ್‌ಎಸ್‌) ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 2021ರಲ್ಲಿ ಕೆ. ಬಾಲನ್ ಅವರು ಪ್ರತಿನಿಧಿಸುತ್ತಿದ್ದ ತಾರೂರು ಕ್ಷೇತ್ರದಲ್ಲಿ ಜಮೀಲಾ ಅವರ ಹೆಸರನ್ನು ಅಭ್ಯರ್ಥಿಯಾಗಿ ಪರಿಗಣಿಸಲಾಗಿತ್ತು. ಆದರೆ ಕುಟುಂಬ ರಾಜಕಾರಣದ ಟೀಕೆಗೆ ಒಳಗಾದ ಕಾರಣ ಜಮೀಲಾ ಸ್ಪರ್ಧಿಸಲಿಲ್ಲ.

ಹೀಗೆ ಕೇರಳದಲ್ಲಿ ಹಲವು ದಂಪತಿಗಳು ರಾಜಕೀಯದಲ್ಲಿ ಕಾಣಿಸಿಕೊಂಡಿದ್ದು ವಿಧಾನಸಭೆ ಚುನಾವಣೆಗೂ ಮುನ್ನ ಇತಿಹಾಸವನ್ನು ಮೆಲುಕು ಹಾಕುವ ಪ್ರಯತ್ನ ಮಾಡಲಾಗಿದೆ. ಈ ಮೇಲೆ ಉಲ್ಲೇಖಿಸಲಾದ ದಂಪತಿಗಳನ್ನು ಹೊರತುಪಡಿಸಿ ಈಗ ಹೊಸದಾಗಿ ಚರ್ಚೆಯಲ್ಲಿರುವುದು ಪಿ.ಎ. ಮುಹಮ್ಮದ್ ರಿಯಾಸ್ ಮತ್ತು ವೀಣಾ ವಿಜಯನ್ ದಂಪತಿಗಳು.
ವೀಣಾ ರಾಜಕೀಯದಲ್ಲಿ ಸಕ್ರಿಯರಲ್ಲದಿದ್ದರೂ ಪ್ರಬಲ ರಾಜಕೀಯ ಕುಟುಂಬಕ್ಕೆ ಸೇರಿದವರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಗಳು. ಸದ್ಯ ಕೇರಳ ಸರ್ಕಾರದ ಲೋಕೋಪಯೋಗಿ (PWD) ಮತ್ತು ಪ್ರವಾಸೋದ್ಯಮ ಸಚಿವರಾಗಿರುವ ಪಿ.ಎ. ಮುಹಮ್ಮದ್ ರಿಯಾಸ್ ಮತ್ತು ವೀಣಾ ವಿಜಯನ್ ಅಂತರ್‌ ಧರ್ಮಿಯ ವಿವಾಹವು ದೇಶಾದ್ಯಂತ ಸುದ್ದಿಯಾಗಿತ್ತು. ಇಬ್ಬರಿಗೂ ಎರಡನೇ ವಿವಾಹವಾಗಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...