ಮೀನಾಕ್ಷಿ ನಟರಾಜನ್‌ ನಾಮಪತ್ರ ರದ್ದತಿ; ಸೋಲುವ ಪಂದ್ಯವನ್ನು ಮೋಸದಿಂದ ಗೆದ್ದ ಬಿಜೆಪಿ!

Date:

ಇದು ನಿಯಮಗಳನ್ನ ಗಾಳಿಗೆ ತೂರಿ ಬಿಜೆಪಿ ಹೆಣೆದ ಒಂದು ವ್ಯವಸ್ಥಿತ 'ಮೋಸದ ಕತೆ'. ಈ ಇಡೀ ಷಡ್ಯಂತ್ರದ ಮೂಲಕ ಆಡಳಿತ ಪಕ್ಷ ಬಿಜೆಪಿ ಸದ್ಯಕ್ಕೆ ತಾನು ಬಯಸಿದ ರಾಜಕೀಯ ಲಾಭವನ್ನು ಪಡೆದು ತನ್ನ ಮೂರನೇ ಅಭ್ಯರ್ಥಿಯನ್ನು ಸಂಸತ್ತಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ, ನ್ಯಾಯಾಂಗ ವ್ಯವಸ್ಥೆಯನ್ನೂ ತನ್ನ ಮೂಗಿನ ನೇರಕ್ಕೆ ಬಗ್ಗಿಸಿಕೊಂಡು, ಕೊಳಕು ಕೃತ್ಯದಲ್ಲಿ ಭಾಗಿಯಾಗಿಸಿದೆ, ಅಪಕೀರ್ತಿ ಅಂಟಿಸಿದೆ.

ನಮ್ಮ ಪ್ರಜಾಪ್ರಭುತ್ವದ ಬಲ ಇರುವುದು ಅದರ ಸಾಂವಿಧಾನಿಕ ಸಂಸ್ಥೆಗಳ ನಿಷ್ಪಕ್ಷಪಾತ ನಡೆ ಮತ್ತು ಮುಕ್ತ ಚುನಾವಣಾ ಪ್ರಕ್ರಿಯೆಯಲ್ಲಿ. ಆದರೆ, ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ಬಳಿಕ ನಡೆಯುತ್ತಿರುವ ಸರಣಿ ವಿದ್ಯಮಾನಗಳು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಿರುವುದಂತೂ ನಿಜ. ಇಲ್ಲೂ ಬಿಜೆಪಿಯ ಕುತಂತ್ರ ಎದ್ದು ಕಾಣುತ್ತಿದೆ. ಜತೆಗೆ ದೇಶದ ಸ್ವಾಯತ್ತ ಸಂಸ್ಥೆಗಳು ಆಡಳಿತ ಪಕ್ಷದ ಕೈಗೊಂಬೆಗಳಾಗಿ ಹೇಗೆ ಕೆಲಸ ನಿರ್ವಹಿಸುತ್ತವೆ ಎಂಬುದೂ ಸ್ಪಷ್ಟವಾಗಿ ಗೋಚರಿಸುತ್ತದೆ.

- Advertisement -

ಮಧ್ಯ ಪ್ರದೇಶದಲ್ಲಿ 3 ರಾಜ್ಯಸಭಾ ಸೀಟ್ ಖಾಲಿಯಾಗಿತ್ತು. ವಿಧಾನಸಭೆಯ ಒಟ್ಟು ಸಂಖ್ಯಾಬಲದಲ್ಲಿ ಬಿಜೆಪಿಗೆ ತನ್ನಿಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ಶಕ್ತಿ ಇತ್ತು. ಆದರೆ, ಮೂರನೇ ಸ್ಥಾನಕ್ಕೆ ಬಿಜೆಪಿಯ ಅಭ್ಯರ್ಥಿ ಮಹೇಶ್ ಕೇವತ್ ಅವರಿಗೆ ಕನಿಷ್ಠ 10 ಶಾಸಕರ ಮತಗಳ ಕೊರತೆ ಇತ್ತು. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷ ತನ್ನ 64 ಶಾಸಕರ ಬಲದೊಂದಿಗೆ ಮೀನಾಕ್ಷಿ ನಟರಾಜನ್ ಅವರನ್ನು ಅತ್ಯಂತ ಸುಲಭವಾಗಿ ಗೆಲ್ಲಿಸಿಕೊಳ್ಳುವ ಸನ್ನಾಹದಲ್ಲಿತ್ತು. ಆರಂಭದಲ್ಲಿ ಬಿಜೆಪಿ ಎಂದಿನಂತೆ ಕಾಂಗ್ರೆಸ್ ಶಾಸಕರನ್ನು ಸೆಳೆಯಲು, ಅವರಲ್ಲಿ ಗೊಂದಲ ಸೃಷ್ಟಿಸಲು ಮತ್ತು ‘ಅಡ್ಡ ಮತದಾನ’ ಮಾಡಿಸಲು ತಂತ್ರ ಹೂಡಿತ್ತು. ಇದನ್ನು ಅರಿತ ಕಾಂಗ್ರೆಸ್ ಬಿಜೆಪಿಯ ಕುದುರೆ ವ್ಯಾಪಾರದ ಆಟಕ್ಕೆ ಬ್ರೇಕ್ ಹಾಕಿತ್ತು. ಯಾವಾಗ ಶಾಸಕರ ಒಗ್ಗಟ್ಟು ಮುರಿಯಲು ಸಾಧ್ಯವಾಗಲಿಲ್ಲವೋ, ಆಗ ಬಿಜೆಪಿ ಚುನಾವಣಾ ಕಣದ ನಿಯಮಗಳನ್ನೇ ಬದಲಾಯಿಸಲು ಮುಂದಾಯಿತು. ರಾಜಕೀಯವಾಗಿ ಎದುರಿಸಲು ಸಾಧ್ಯವಾಗದಿದ್ದಾಗ ‘ಚುನಾವಣಾ ಆಯೋಗ’ವನ್ನೇ ವಿರೋಧ ಪಕ್ಷದ ವಿರುದ್ಧ ದಾಳವಾಗಿ ಬಳಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಯಾವಾಗ ಸಂಖ್ಯಾಬಲದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಖಾತ್ರಿಯಾಯಿತೋ, ಆವಾಗಲೇ ತೆರೆಮರೆಯ ಆಟಕ್ಕೆ ಬಿಜೆಪಿ ಶುರುವಿಟ್ಟುಕೊಂಡಿತು. ಬಿಜೆಪಿ ಅಭ್ಯರ್ಥಿ ಮಹೇಶ್ ಕೇವತ್ ಸಲ್ಲಿಸಿದ ಒಂದೇ ಒಂದು ಆಕ್ಷೇಪಣೆಯ ಆಧಾರದ ಮೇಲೆ ಚುನಾವಣಾ ಅಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ಅವರ ನಾಮಪತ್ರವನ್ನು ತಿರಸ್ಕರಿಸಿದ ರೀತಿ ಅವರ ಪಕ್ಷಪಾತಿ ಧೋರಣೆಯನ್ನು ಬಯಲಿಗೆಳೆದಿದೆ. ತೆಲಂಗಾಣದ ನ್ಯಾಯಾಲಯವೊಂದರಲ್ಲಿ ಮೀನಾಕ್ಷಿ ನಟರಾಜನ್‌ ಅವರ ವಿರುದ್ಧ ನೋಟಿಸ್ (Summons) ಜಾರಿಯಾಗಿತ್ತು. ಅದನ್ನೇ ಮುಂದಿಟ್ಟುಕೊಂಡು, ಅವರು ಕ್ರಿಮಿನಲ್ ಪ್ರಕರಣವನ್ನು ಮುಚ್ಚಿಟ್ಟಿದ್ದಾರೆ ಎಂದು ಬಿಂಬಿಸಲಾಯಿತು.

ದೇಶದ ಜನಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 33A ಪ್ರಕಾರ, ಯಾವುದೇ ಅಭ್ಯರ್ಥಿಯ ವಿರುದ್ಧ ಅಧಿಕೃತವಾಗಿ FIR ದಾಖಲಾಗಿ, ತನಿಖೆ ನಡೆದು, ನ್ಯಾಯಾಲಯವು ದೋಷಾರೋಪಣೆ ಪಟ್ಟಿ (Chargesheet) ಸಿದ್ಧಪಡಿಸಿದರೆ ಮಾತ್ರ ಅದನ್ನು ಅಫಿಡವಿಟ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಆದರೆ ಮೀನಾಕ್ಷಿ ಅವರ ಪ್ರಕರಣದಲ್ಲಿ ನ್ಯಾಯಾಲಯವು ಇನ್ನು ದೂರನ್ನೇ ಅಧಿಕೃತವಾಗಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಕೇವಲ ಪ್ರಾಥಮಿಕ ವಿವರಣೆ ಕೇಳಿ ಬಂದಿದ್ದ ಸಮನ್ಸ್ ಅನ್ನು “ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆ” ಎಂದು ವ್ಯಾಖ್ಯಾನಿಸಿ ನಾಮಪತ್ರವನ್ನೇ ರದ್ದುಗೊಳಿಸಿದ್ದರು ಚುನಾವಣಾ ಅಧಿಕಾರಿ. ಕಾಂಗ್ರೆಸ್ ಪರ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು ಮಂಡಿಸಿದ ಎಲ್ಲಾ ಕಾನೂನು ಆಧಾರಗಳನ್ನು ಆಯೋಗ ಕಣ್ಣುಮುಚ್ಚಿ ತಿರಸ್ಕರಿಸಿತು.

ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸಬೇಕಾದ ಚುನಾವಣಾ ಆಯೋಗವು, ಇಂದು ಆಡಳಿತ ಪಕ್ಷದ ಒಂದು ಅಂಗಸಂಸ್ಥೆಯಂತೆ ಅಥವಾ ಅದರ ಐಟಿ ಸೆಲ್‌ನಂತೆ ವರ್ತಿಸುತ್ತಿದೆ ಎಂಬ ಆರೋಪಕ್ಕೆ ಈ ಘಟನೆ ಮತ್ತಷ್ಟು ಪುಷ್ಟಿ ನೀಡಿದೆ. ವಿರೋಧ ಪಕ್ಷದ ಪ್ರಬಲ, ಪ್ರಭಾವಿ ಅಭ್ಯರ್ಥಿಯನ್ನು ಯಾವುದೇ ಆಧಾರವಿಲ್ಲದೆ ಕಣದಿಂದಲೇ ಹೊರದಬ್ಬುವ ಮೂಲಕ, ಬಿಜೆಪಿಯ ಮೂರನೇ ಅಭ್ಯರ್ಥಿಯ ಹಾದಿಯನ್ನು ಆಯೋಗವೇ ಸುಗಮಗೊಳಿಸಿಕೊಟ್ಟಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ತಾಂತ್ರಿಕ ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅಭ್ಯರ್ಥಿಗಳಿಗೆ ಕಾಲಾವಕಾಶ ನೀಡಬೇಕಿರುವುದು ಆಯೋಗದ ಕರ್ತವ್ಯ. ಆದರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಯಾವುದೇ ನ್ಯಾಯಯುತ ಅವಕಾಶ ನೀಡದೆ ಆತುರಾತುರವಾಗಿ ನಿರ್ಧಾರ ಪ್ರಕಟಿಸಲಾಗಿದೆ.

ನಾಮಪತ್ರ ರದ್ದತಿಯ ಬೆನ್ನಲ್ಲೇ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ನ್ಯಾಯಾಲಯವು ಅರ್ಜಿಯ ತುರ್ತು ವಿಚಾರಣೆಗೆ ಒಪ್ಪಿತಾದರೂ ಜೂನ್ 18 ರಂದು ನಡೆಯಲಿರುವ ಚುನಾವಣೆಯ ಫಲಿತಾಂಶ ಘೋಷಣೆಗೆ ತಡೆ ನೀಡಲು ನಿರಾಕರಿಸಿತು. “ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಅದರಲ್ಲಿ ಹಸ್ತಕ್ಷೇಪ ಮಾಡಲಾಗದು, ಫಲಿತಾಂಶದ ನಂತರ ‘ಚುನಾವಣಾ ಅರ್ಜಿ’ (Election Petition) ಸಲ್ಲಿಸುವುದೊಂದೇ ಮಾರ್ಗ” ಎಂದಿದೆ ಕೋರ್ಟ್. ಜತೆಗೆ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, “ನಾಮಪತ್ರ ತಿರಸ್ಕೃತವಾದ ಬಳಿಕ ಸಾಮಾನ್ಯವಾಗಿ ಪರಿಹಾರಕ್ಕಾಗಿ ಚುನಾವಣಾ ಆಯೋಗದ ಮೊರೆ ಹೋಗಬೇಕಾಗುತ್ತದೆ” ಎಂದು ಹೇಳಿ ಅವರ ಅರ್ಜಿಯನ್ನು ವಜಾಗೊಳಿಸಿ ಕೈತೊಳೆದುಕೊಂಡಿದೆ.

ಆಡಳಿತ ಪಕ್ಷ ಬಿಜೆಪಿ ಬಯಸಿದ್ದೂ ಇದನ್ನೇ! ಸುಪ್ರೀಂ ಕೋರ್ಟ್‌ನ ತೀರ್ಪನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ, ಸದ್ಯಕ್ಕೆ ಚುನಾವಣೆಯನ್ನು ಗೆದ್ದು ತನ್ನ ಮೂರನೇ ಅಭ್ಯರ್ಥಿಯನ್ನು ಸಂಸತ್ತಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಕಾನೂನು ಹೋರಾಟದ ನಂತರ ಕಾಂಗ್ರೆಸ್‌ಗೆ ನ್ಯಾಯ ಸಿಕ್ಕರೂ, ಸದ್ಯದ ರಾಜಕೀಯ ಲಾಭ ಮಾತ್ರ ಬಿಜೆಪಿಯ ಪಾಲಾಗಿದೆ. ಇಂತಹ ಸಣ್ಣಪುಟ್ಟ ಅವಕಾಶಗಳನ್ನೂ ಬಿಡದೆ ಬಳಸಿಕೊಂಡು ಇಡೀ ಚುನಾವಣಾ ಪ್ರಕ್ರಿಯೆಯನ್ನೇ ನಿಯಂತ್ರಿಸುವ ಬಿಜೆಪಿಯ ಹೈಜಾಕ್ ಸಂಸ್ಕೃತಿಗೆ ಮೀನಾಕ್ಷಿ ಅವರ ಉದಾಹರಣೆ ಸೇರ್ಪಡೆಯಾಗಿದೆ.

ಇದನ್ನೂ ಓದಿ: BREAKING | ರಾಜ್ಯಸಭೆ ನಾಮಪತ್ರ ತಿರಸ್ಕಾರ ವಿರುದ್ಧದ ಮೀನಾಕ್ಷಿ ನಟರಾಜನ್ ಅರ್ಜಿ ವಜಾ

“ಈ ಹೋರಾಟ ಕೇವಲ ಒಂದು ರಾಜ್ಯಸಭಾ ಸೀಟಿನ ನಷ್ಟಕ್ಕೆ ಸೀಮಿತವಾಗಿಲ್ಲ. ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಪ್ರತಿಪಾದಿಸುತ್ತಿರುವ ‘ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆ’ಯ ಹೋರಾಟದ ಪ್ರತಿಬಿಂಬವಾಗಿದೆ. ವಿರೋಧ ಪಕ್ಷಗಳನ್ನು ರಾಜಕೀಯ ಮೈದಾನದಲ್ಲಿ ನೇರವಾಗಿ ಎದುರಿಸಲಾಗದ ಆಡಳಿತ ಪಕ್ಷ, ಇಡೀ ಪ್ರಭುತ್ವದ ಶಕ್ತಿಯನ್ನು, ತನಿಖಾ ಸಂಸ್ಥೆಗಳನ್ನು ಮತ್ತು ಕೊನೆಗೆ ಚುನಾವಣಾ ಆಯೋಗವನ್ನೂ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಶಾಸಕರ ಒಗ್ಗಟ್ಟನ್ನು ಮುರಿಯಲು ಸಾಧ್ಯವಾಗದಿದ್ದಾಗ, ಅಭ್ಯರ್ಥಿಯ ನಾಮಪತ್ರವನ್ನೇ ಇಲ್ಲದಂತೆ ಮಾಡುವ ಈ ‘ಮೋಸದ ಆಟ’ ಪ್ರಜಾಪ್ರಭುತ್ವದ ಅಡಿಪಾಯಕ್ಕೇ ಕೊಡಲಿ ಪೆಟ್ಟು. ಗೆಲ್ಲಲಾಗದ ಪಂದ್ಯವನ್ನು ಮೈದಾನದ ಹೊರಗಡೆಯೇ ಆಯೋಗದ ಸಹಾಯದಿಂದ ಗೆದ್ದುಕೊಳ್ಳುವ ಬಿಜೆಪಿಯ ಈ ಕೊಳಕು ರಾಜಕಾರಣ ಮತ್ತು ಅಧಿಕಾರದ ಅಹಂಕಾರ, ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಉಳಿಯಲಿದೆ” ಎಂದಿದ್ದಾರೆ ಮೀನಾಕ್ಷಿ ನಟರಾಜನ್.

ಇದು ನಿಯಮಗಳನ್ನ ಗಾಳಿಗೆ ತೂರಿ ಬಿಜೆಪಿ ಹೆಣೆದ ಒಂದು ವ್ಯವಸ್ಥಿತ ‘ಮೋಸದ ಕತೆ’. ಪ್ರಾಥಮಿಕ ಹಂತದ ಕೋರ್ಟ್ ಸಮನ್ಸ್ ಅನ್ನು ‘ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆ’ ಎಂದು ತಪ್ಪಾಗಿ ವ್ಯಾಖ್ಯಾನಿಸಿ, ಪ್ರತಿಪಕ್ಷದ ಪ್ರಬಲ ಅಭ್ಯರ್ಥಿಯ ನಾಮಪತ್ರವನ್ನೇ ರದ್ದುಗೊಳಿಸಿದ ನಡೆ, ಚುನಾವಣಾ ಆಯೋಗವನ್ನೇ ತನ್ನ ದಾಳವಾಗಿ ಬಳಸಿಕೊಂಡಿರುವುದಕ್ಕೆ ಸಾಕ್ಷಿ. ಈ ಇಡೀ ಷಡ್ಯಂತ್ರದ ಮೂಲಕ ಆಡಳಿತ ಪಕ್ಷವು ಸದ್ಯಕ್ಕೆ ತಾನು ಬಯಸಿದ ರಾಜಕೀಯ ಲಾಭವನ್ನು ಪಡೆದು ತನ್ನ ಮೂರನೇ ಅಭ್ಯರ್ಥಿಯನ್ನು ಸಂಸತ್ತಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ, ನ್ಯಾಯಾಂಗ ವ್ಯವಸ್ಥೆಯನ್ನೂ ತನ್ನ ಮೂಗಿನ ನೇರಕ್ಕೆ ಬಗ್ಗಿಸಿಕೊಂಡು, ಕೊಳಕು ಕೃತ್ಯದಲ್ಲಿ ಭಾಗಿಯಾಗಿಸಿದ್ದು, ಅಪಕೀರ್ತಿ ಅಂಟಿಸಿದ್ದು… ದೇಶದ ಜನರಿಗೆ ಅರ್ಥವಾಗಬೇಕಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು...

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...