ಕಾಂಕ್ರೀಟ್‌ ಭಗ್ನಾವಶೇಷಗಳಾಗುತಿವೆ ನೆಹರೂ ಕಾಲದ ಕಟ್ಟಡಗಳು…

Date:

ದಶಕಗಳ ಕಾಲ ಭಾರತದ ಆಡಳಿತ ಯಂತ್ರದ ಹೃದಯಭಾಗವಾಗಿ, ಸಾವಿರಾರು ಅಧಿಕಾರಿಗಳ ಕಾರ್ಯಕ್ಷೇತ್ರವಾಗಿ ಮೆರೆದಿದ್ದ ನಿರ್ಮಾಣ ಭವನ, ಉದ್ಯೋಗ ಭವನಗಳು ಇಂದು ಕಾಂಕ್ರೀಟ್‌ನ ಭಗ್ನಾವಶೇಷಗಳಾಗಿ ಉಳಿಯುತ್ತಿವೆ. ನೆಹರೂ ಅವರ ಕನಸಿನ ಭಾರತದಲ್ಲಿ ಮಿತವ್ಯಯ ಮತ್ತು ದೂರದೃಷ್ಟಿಯ ಪ್ರತೀಕವಾಗಿದ್ದ ಈ ಕಟ್ಟಡಗಳು ಈಗ ಕಾಲದ ತೆರೆಯಲ್ಲಿ ಕಣ್ಮರೆಯಾಗುತ್ತಿವೆ.

- Advertisement -

ದೆಹಲಿಯ ಸೆಂಟ್ರಲ್ ವಿಸ್ಟಾ ಯೋಜನೆಯಡಿ ನೆಹರೂ ಯುಗದ ಐತಿಹಾಸಿಕ ಸೆಕ್ರೆಟೇರಿಯಟ್ ಕಟ್ಟಡಗಳನ್ನು ಕೆಡವಿ ಹೊಸ ಐಶಾರಾಮಿ ಕಟ್ಟಡಗಳ ನಿರ್ಮಾಣಗಳನ್ನು ಕೈಗೆತ್ತಿಕೊಂಡಿದೆ ಮೋದಿ ಸರ್ಕಾರ. ಅಚ್ಚರಿಯ ವಿಷಯವೆಂದರೆ, ಈ ಕಟ್ಟಡಗಳ ತೆರವಿನ ಹಿಂದಿನ ಕಾರಣವೂ, ಇಂದು ಸಾರ್ವಜನಿಕ ಸ್ವಾಮ್ಯದ ಲಾಭದಾಯಕ ಸಂಸ್ಥೆಗಳನ್ನು ಖಾಸಗಿ ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡುತ್ತಿರುವ ಅದೇ ‘ಖಾಸಗೀಕರಣ’ದ ಸಿದ್ಧಾಂತಕ್ಕೆ ಪೂರಕವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ರಾಜಧಾನಿ ದೆಹಲಿಯ ರಾಜಪಥದ ಆಸುಪಾಸಿನಲ್ಲಿ ದಶಕಗಳಿಂದ ನೆಲೆಸಿದ್ದ ಐತಿಹಾಸಿಕ ಕಟ್ಟಡಗಳು ಇಂದು ಒಂದೊಂದಾಗಿ ಧರೆಗುರುಳುತ್ತಿವೆ. ಮೇ ತಿಂಗಳಲ್ಲಿ ʼನಿರ್ಮಾಣ ಭವನʼವನ್ನು ನೆಲಸಮ ಮಾಡಲಾಗಿತ್ತು. ಇದೀಗ ಉದ್ಯೋಗ ಭವನವನ್ನು ಕೆಡವಲಾಗುತ್ತಿದೆ. ಈ ಸಾಲಿಗೆ ಕೃಷಿ ಭವನ ಮತ್ತು ಶಾಸ್ತ್ರಿ ಭವನಗಳು ಸೇರ್ಪಡೆಯಾಗಲಿವೆ.

image 88 6
Udyog Bhawan

1947ರಲ್ಲಿ ಭಾರತ ಸ್ವತಂತ್ರವಾದಾಗ, ಸರ್ಕಾರವು ಬ್ರಿಟಿಷರು ನಿರ್ಮಿಸಿದ್ದ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್‌ನಿಂದಷ್ಟೇ ಕಾರ್ಯನಿರ್ವಹಿಸುತ್ತಿತ್ತು. ಆಡಳಿತದ ವ್ಯಾಪ್ತಿ ವಿಸ್ತರಿಸಿದಂತೆ ಹೆಚ್ಚಿನ ಜಾಗದ ಅಗತ್ಯವಿತ್ತು. ಆಗ ದ್ವಿತೀಯ ಮಹಾಯುದ್ಧದ ಕಾಲದ ಸಣ್ಣ ಪುಟ್ಟ ಶೆಡ್‌ಗಳೇ (hutments) ಆಡಳಿತಗಾರರಿಗೆ ಆಸರೆಯಾಗಿದ್ದವು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ನೂತನ ಭಾರತದ ಆಡಳಿತ ಕೇಂದ್ರವನ್ನು ವಿಸ್ತರಿಸುವ ಜವಾಬ್ದಾರಿ ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ (CPWD) ಹೆಗಲೇರಿತು.

ಅಂದಿನ CPWD ಮುಖ್ಯ ವಾಸ್ತುಶಿಲ್ಪಿ ಶ್ರೀಧರ್ ಕೃಷ್ಣ ಜೋಗ್ಲೆಕರ್ ಅವರ ನೇತೃತ್ವದಲ್ಲಿ ಈ ಐತಿಹಾಸಿಕ ಕಟ್ಟಡಗಳ ನಿರ್ಮಾಣ ಕಾರ್ಯ ನಡೆದಿದ್ದು, 1952ರಿಂದ 1968ರ ಅವಧಿಯಲ್ಲಿ ಇವು ಪೂರ್ಣಗೊಂಡವು. ಅಂದಿನ ಹಿರಿಯ ವಾಸ್ತುಶಿಲ್ಪಿಗಳು ಆಧುನಿಕ ಭಾರತದ ವಿನ್ಯಾಸಕಾರರಾಗಿದ್ದರು ಎಂಬುದು ಇತಿಹಾಸಕಾರರಾದ ಪೀಟರ್ ಸ್ಕ್ರೈವರ್ ಮತ್ತು ಅಮಿತ್ ಶ್ರೀವಾಸ್ತವ ಅವರ ಬರವಣಿಗೆಯಲ್ಲಿ ದಾಖಲಾಗಿದೆ.

ಮಿತವ್ಯಯದ ಸಂಕೇತ ʼಕೃಷಿ ಭವನʼ: ಈ ಸಾಲಿನಲ್ಲಿ ಮೊದಲಿಗೆ ನಿರ್ಮಾಣವಾದದ್ದು ಕೃಷಿ ಭವನ. 1952ರ ಜೂನ್ 16ರಂದು ಅಂದಿನ ನಿರ್ಮಾಣ ಸಚಿವ ಸರ್ದಾರ್ ಸ್ವರ್ಣಸಿಂಗ್ ಅವರು ಇದರ ಶಂಕುಸ್ಥಾಪನೆ ನೆರವೇರಿಸಿದ್ದರು. 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡವು ಆ ಕಾಲದ ಆರ್ಥಿಕ ಮಿತವ್ಯಯ ಮತ್ತು ದೂರದೃಷ್ಟಿಯ ಸಂಕೇತವಾಗಿತ್ತು. ಅಂದಿನ ‘ಇಂಡಿಯನ್ ಬಿಲ್ಡರ್’ ನಿಯತಕಾಲಿಕೆಯು ಈ ಕಟ್ಟಡದ ವಿನ್ಯಾಸವನ್ನು ಶ್ಲಾಘಿಸಿತ್ತು. ಹವಾನಿಯಂತ್ರಣ ವ್ಯವಸ್ಥೆಗಾಗಿ ಕಾರಿಡಾರ್‌ಗಳ ಮೇಲ್ಚಾವಣಿಯಲ್ಲಿ ಡಕ್ಟ್‌ಗಳನ್ನು ಅಳವಡಿಸಿದ್ದು, 11 ಅಡಿಗಳ ಎತ್ತರದ ಮಿತಿಯನ್ನು ಇರಿಸಿದ್ದು ಇವೆಲ್ಲವೂ ಅಂದಿನ ಆರ್ಥಿಕ ಅರಿವನ್ನು ತೋರಿಸುತ್ತಿದ್ದವು.

image 89 1
Krishi Bhawan

ವಿಜಯ್ ಚೌಕ್‌ನ ಘನತೆ ಮತ್ತು ನೆಹರೂ ಅವರ ನಿರ್ಧಾರ: ಈ ಕಟ್ಟಡಗಳ ನಿರ್ಮಾಣದ ಹಿಂದೆ ಕೇವಲ ಇಂಜಿನಿಯರಿಂಗ್ ಇರಲಿಲ್ಲ, ಅದೊಂದು ರಾಜಕೀಯ ಮತ್ತು ಸೌಂದರ್ಯಶಾಸ್ತ್ರದ ಚರ್ಚೆಯೂ ಇತ್ತು. 1957ರಲ್ಲಿ ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡದ ಪ್ರಸ್ತಾವನೆ ಬಂದಾಗ ದೊಡ್ಡ ವಿವಾದವೇ ಉಂಟಾಗಿತ್ತು. ಟೌನ್ ಪ್ಲಾನಿಂಗ್ ಆರ್ಗನೈಸೇಶನ್ (TPO) ವಿಜಯ್ ಚೌಕ್ ಬಳಿ 20 ಅಂತಸ್ತಿನ ಗೋಪುರಗಳನ್ನು ನಿರ್ಮಿಸಲು ಸಲಹೆ ನೀಡಿತ್ತು.

ಆದರೆ, ಮುಖ್ಯ ವಾಸ್ತುಶಿಲ್ಪಿ ಜೋಗ್ಲೆಕರ್ ಇದನ್ನು ಬಲವಾಗಿ ವಿರೋಧಿಸಿದರು. ಲೂಟಿಯನ್ಸ್ ನಿರ್ಮಿಸಿದ ನಾರ್ತ್ ಮತ್ತು ಸೌತ್ ಬ್ಲಾಕ್‌ನ ವೈಭವಕ್ಕೆ ಇಂತಹ ಎತ್ತರದ ಕಟ್ಟಡಗಳು ಧಕ್ಕೆ ತರುತ್ತವೆ ಎಂದು ಅವರು ವಾದಿಸಿದರು. ಸ್ವತಃ ಪ್ರಧಾನಿ ಜವಾಹರಲಾಲ್ ನೆಹರೂ ಅವರಿದ್ದ ಸಂಪುಟ ಸಭೆಯಲ್ಲಿ ಈ ಚರ್ಚೆ ನಡೆಯಿತು. ರಾಜಧಾನಿಯ ಸೌಂದರ್ಯಕ್ಕೆ ಧಕ್ಕೆಯಾಗಬಾರದು, ವಿಜಯ್ ಚೌಕ್ ಸುತ್ತ ಯಾವುದೇ ಬೃಹತ್‌ ಕಟ್ಟಡ ನಿರ್ಮಾಣವಾಗಬಾರದು ಎಂಬ ನೆಹರೂ ಸರ್ಕಾರದ ನಿರ್ಧಾರ ಬಹಳ ಸ್ಪಷ್ಟವಾಗಿತ್ತು.

ಗಗನಚುಂಬಿ ಕಟ್ಟಡಗಳಿಗೆ ವಿರೋಧ: ಮಿತವ್ಯಯಕ್ಕೆ ಕೇವಲ ಸೌಂದರ್ಯ ಮಾತ್ರವಲ್ಲದೆ, ಅಂದಿನ ಆರ್ಥಿಕ ಪರಿಸ್ಥಿತಿಯೂ ಒಂದು ಕಾರಣವಾಗಿತ್ತು. “ದೇಶದಲ್ಲಿ ಬಡತನ ತಾಂಡವವಾಡುತ್ತಿರುವಾಗ, ಬಹುಮಹಡಿ ಐಷಾರಾಮಿ ಕಟ್ಟಡಗಳಿಗೆ ವಿದೇಶಿ ವಿನಿಮಯವನ್ನು ವೆಚ್ಚ ಮಾಡುವುದು ಸರಿಯಲ್ಲ” ಎಂಬ ಸ್ಪಷ್ಟ ಎಚ್ಚರಿಕೆಯನ್ನು ಅಂದಿನ ಸಂಪುಟ ನೀಡಿತ್ತು. 6 ಅಂತಸ್ತುಗಳಿಗಿಂತ ಹೆಚ್ಚಿನ ಕಟ್ಟಡಗಳಿಗೆ ಉಕ್ಕು ಮತ್ತು ಹೆಚ್ಚಿನ ವೆಚ್ಚದ ಅಗತ್ಯವಿರುತ್ತದೆ, ಹಾಗಾಗಿ ಕಟ್ಟಡಗಳನ್ನು 6 ರಿಂದ 9 ಅಂತಸ್ತಿಗೆ ಸೀಮಿತಗೊಳಿಸಬೇಕು ಎಂಬ ನಿರ್ಧಾರವನ್ನು ನೆಹರೂ ಅವರ ಸರ್ಕಾರ ತೆಗೆದುಕೊಂಡಿತ್ತು. ಆ ಕಾಲದ ನಾಯಕರಿಗೆ ಇವು ಕೇವಲ ಕಟ್ಟಡಗಳಾಗಿರಲಿಲ್ಲ, ದೇಶದ ಸಾಮಾನ್ಯ ಪ್ರಜೆಯ ತೆರಿಗೆ ಹಣದ ಮೌಲ್ಯವಾಗಿದ್ದವು.

ಬದಲಾಗುತ್ತಿರುವ ಇತಿಹಾಸದ ಮುಖಚಿತ್ರ: ಶಾಸ್ತ್ರಿ ಭವನವು ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಸ್ಮರಣಾರ್ಥ ನಿರ್ಮಾಣವಾಗಿತ್ತು. ಮುಂದೆ ಸಾರ್ವಜನಿಕ ಚರ್ಚೆಯಲ್ಲಿದ್ದ ರಾಷ್ಟ್ರೀಯ ರಂಗಮಂದಿರದ ಯೋಜನೆ ಕೈಬಿಡಲ್ಪಟ್ಟಿತು. ಆ ಕಾಲದಲ್ಲಿ ಕೈಬಿಡಲ್ಪಟ್ಟಿದ್ದ ಮತ್ತೊಂದು ಪ್ರಸ್ತಾವನೆಯೆಂದರೆ, ಪ್ಲಾಟ್ 36 ರಲ್ಲಿ ನಿರ್ಮಿಸಬೇಕಾಗಿದ್ದ ವೃತ್ತಾಕಾರದ ಕಟ್ಟಡ. ದಶಕಗಳ ನಂತರ, ಇದೇ ಪ್ಲಾಟ್ 36 ಮತ್ತು 38 ರ ಜಾಗದಲ್ಲಿ ಈಗ ಪ್ರಧಾನ ಮಂತ್ರಿಯವರ ಕಚೇರಿ (PMO) ‘ಸೇವಾ ತೀರ್ಥ’ ತಲೆ ಎತ್ತಿದ್ದು, ಅದು ಈ ವರ್ಷದ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿದೆ.

ತೆರವಾಗುತ್ತಿರುವ ನೆಹರೂ ಕಾಲದ ಇತರ ಕಟ್ಟಡಗಳು

‘ಸೆಂಟ್ರಲ್ ವಿಸ್ಟಾ’ ಯೋಜನೆಯ ಭಾಗವಾಗಿ ಕೇವಲ ಇಲಾಖಾ ಕಚೇರಿಗಳು ಮಾತ್ರವಲ್ಲ, ಇತಿಹಾಸದ ಭಾಗವಾಗಿದ್ದ ಅನೇಕ ರಚನೆಗಳು ಅಳಿಸಿಹೋಗುತ್ತಿವೆ ಅಥವಾ ರೂಪಾಂತರಗೊಳ್ಳುತ್ತಿವೆ

  • ರಾಷ್ಟ್ರೀಯ ವಸ್ತುಸಂಗ್ರಹಾಲಯ (National Museum): ಹಳೆಯ ಕಟ್ಟಡವನ್ನು ಕೆಡವಿ ಹೊಸ ಮ್ಯೂಸಿಯಂ ನಿರ್ಮಿಸಲು ನಿರ್ಧರಿಸಲಾಗಿದೆ. ಇಲ್ಲಿನ ಸಾವಿರಾರು ವರ್ಷಗಳ ಇತಿಹಾಸವನ್ನು ಸಾರುವ ಅಮೂಲ್ಯ ಕಲಾಕೃತಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
  • ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (IGNCA): ಈ ಪ್ರತಿಷ್ಠಿತ ಸಾಂಸ್ಕೃತಿಕ ಕೇಂದ್ರದ ಹಳೆಯ ಕಚೇರಿಗಳನ್ನು ತೆರವುಗೊಳಿಸಲಾಗಿದೆ.
  • ಅನೇಕ ‘ಬಂಗಲೆಗಳು’ ಮತ್ತು ವಸತಿ ಸಮುಚ್ಚಯಗಳು: ರಾಷ್ಟ್ರಪತಿ ಭವನದ ಸುತ್ತಮುತ್ತಲಿದ್ದ ಹಳೆಯ ಸರ್ಕಾರಿ ಅಧಿಕಾರಿಗಳ ನಿವಾಸಗಳನ್ನು ಕೆಡವಿ, ಅಲ್ಲಿ ಪ್ರಧಾನಿ ಮತ್ತು ಉಪರಾಷ್ಟ್ರಪತಿಗಳಿಗೆ ಹೊಸ ಅರಮನೆಯಂತಹ ನಿವಾಸಗಳನ್ನು ನಿರ್ಮಿಸಲಾಗಿದೆ.

ಮೋದಿಯವರ ಕಾರ್ಪೊರೇಟ್‌ ಹಿತಾಸಕ್ತಿ

ಮೋದಿ ಸರ್ಕಾರವು ‘ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್‌ಲೈನ್’ (NMP) ಹೆಸರಿನಲ್ಲಿ ನೆಹರೂ ಕಾಲದ ಸಂಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸುತ್ತಿದೆ. ಇದರ ಕೆಲವು ಪ್ರಮುಖ ನಿದರ್ಶನಗಳು:

image 90 2
Delhi’s Old Secretariat
  • ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳು: ಐತಿಹಾಸಿಕವಾಗಿ ಭಾರತದ ಜೀವನದಿಯಂತಿರುವ ಭಾರತೀಯ ರೈಲ್ವೆಯ ಆಸ್ತಿಗಳು, ನಿಲ್ದಾಣಗಳ ಅಭಿವೃದ್ಧಿಯ ಹೆಸರಿನಲ್ಲಿ ದೀರ್ಘಾವಧಿಯ ಗುತ್ತಿಗೆಗೆ (ಅಂದರೆ ಪರೋಕ್ಷ ಖಾಸಗೀಕರಣ) ನೀಡಲಾಗುತ್ತಿದೆ.
  • ಎಲ್‌ಐಸಿ (LIC) ಮತ್ತು ಸಾರ್ವಜನಿಕ ಬ್ಯಾಂಕ್‌ಗಳು: ದೇಶದ ಆರ್ಥಿಕತೆಯ ಬೆನ್ನೆಲುಬಾದ ಎಲ್‌ಐಸಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲು ಬಂಡವಾಳವನ್ನು ಹಿಂತೆಗೆದುಕೊಳ್ಳುವ (Disinvestment) ಮೂಲಕ ಖಾಸಗೀಕರಣದ ಹಾದಿ ಸುಗಮಗೊಳಿಸಲಾಗಿದೆ.
  • ವಿಮಾನ ನಿಲ್ದಾಣಗಳು ಮತ್ತು ಬಂದರುಗಳು: ಅದಾನಿ ಗ್ರೂಪ್‌ನಂತಹ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ನಿರ್ವಹಣೆಯನ್ನು ದಶಕಗಳ ಕಾಲಕ್ಕೆ ವಹಿಸಲಾಗಿದೆ.
  • ಪಿಎಸ್‌ಯು (PSU) ಮಾರಾಟ: ಏರ್ ಇಂಡಿಯಾದಂತಹ ಸಂಸ್ಥೆಗಳನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡಲಾಗಿದೆ. ಬಿಪಿಸಿಎಲ್ (BPCL), ಎಸ್‌ಸಿಐ (SCI) ನಂತಹ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ವಿವಿಧ ಹಂತದಲ್ಲಿದೆ.
  • ಖನಿಜ ಮತ್ತು ಇಂಧನ ಸಂಪನ್ಮೂಲ: ಕಲ್ಲಿದ್ದಲು ಗಣಿಗಳು, ತೈಲ ಕ್ಷೇತ್ರಗಳು ಮತ್ತು ಟೆಲಿಕಾಂ ವಲಯದಲ್ಲಿ ಕಾರ್ಪೊರೇಟ್ ಕುಳಗಳ ಹಿಡಿತ ಹೆಚ್ಚಾಗುವಂತಹ ನೀತಿಗಳನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಮೋದಿಜೀ.. ಈ ವಿಷಯಗಳಲ್ಲಿ ನಿಮಗೆ ನೀವೇ ಸಾಟಿ!

ನೆಹರೂ ಅವರ ಆಲೋಚನೆಯಲ್ಲಿ, ಸರ್ಕಾರಿ ಕಟ್ಟಡಗಳು ಜನರಿಗೆ ದಾರಿದ್ರ್ಯದ ವಿರುದ್ಧ ಹೋರಾಡುವ ಆತ್ಮವಿಶ್ವಾಸ ನೀಡಬೇಕೇ ಹೊರತು, ಅತಿಯಾದ ವೈಭವದ ಮೂಲಕ ಪ್ರತ್ಯೇಕವಾಗಿ ಕಾಣಬಾರದು ಎಂಬ ದರ್ಶನವಿತ್ತು. ಆದರೆ ಇಂದು ಕಾಲ ಬದಲಾಗಿದೆ, ಅಗತ್ಯಗಳು ಬದಲಾಗಿವೆ. ಮೋದಿ ಸರ್ಕಾರದ ಈ ಯೋಜನೆಗಳು ‘ಕಲ್ಯಾಣಕಾರಿ ರಾಜ್ಯ’ (Welfare State) ಎಂಬ ಮೂಲಭೂತ ತತ್ವದಿಂದ ದೂರವಾಗಿ, ‘ಬಂಡವಾಳಶಾಹಿ ಕೇಂದ್ರೀಕೃತ ರಾಜ್ಯ’ದ ಕಡೆಗೆ ಭಾರತ ವೇಗವಾಗಿ ಹೊರಳುತ್ತಿರುವ ಸಂಕೇತವಾಗಿವೆ. ಸರ್ಕಾರಿ ಸಂಸ್ಥೆಗಳನ್ನು, ರೈಲ್ವೆಯನ್ನು, ಬಂದರುಗಳನ್ನು ಮತ್ತು ವಿಮಾನ ನಿಲ್ದಾಣಗಳನ್ನು ಕಾರ್ಪೊರೇಟ್ ಕುಳಗಳಿಗೆ ಹಸ್ತಾಂತರಿಸುವ ಮೂಲಕ, ಸಾರ್ವಜನಿಕ ಹಿತಾಸಕ್ತಿಯ ಆಡಳಿತವನ್ನು ಕಾರ್ಪೊರೇಟ್ ಕಾರ್ಯಸೂಚಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ನೆಹರೂ ಕಾಲದ ಕಟ್ಟಡಗಳು ಇತಿಹಾಸದ ದಾಖಲೆಗಳಲ್ಲಿ ಕಣ್ಮರೆಯಾಗಬಹುದು, ಆದರೆ ಈ ವೈಭವೀಕರಣ ಮತ್ತು ಖಾಸಗೀಕರಣದ ಪ್ರಕ್ರಿಯೆಯು ಭಾರತದ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ. ಅಧಿಕಾರದ ಕೇಂದ್ರಗಳು ಹಿಂದಿನ ಮೌಲ್ಯ ಕಳೆದುಕೊಂಡು ಹೊಸ ಹೊಳಪನ್ನು ಪಡೆಯುತ್ತಿವೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...