ಟ್ರಂಪ್-ನೆತನ್ಯಾಹು ಎಂಬ ಅರಿವುಗೇಡಿಗಳ ಅಣುಬಾಂಬ್ ಯುದ್ಧ; ಮನುಕುಲ ಪ್ರಪಾತದತ್ತ!

Date:

ಜಾಗತಿಕವಾಗಿ ಮೂಲೆಗುಂಪಾಗಿರುವ ಈ ಇಬ್ಬರು ತಿಕ್ಕಲು ದೊರೆಗಳು ಅಹಂಕಾರದಿಂದ ಇರಾನ್ ಮೇಲೆ ಅಣುಬಾಂಬ್ ಪ್ರಯೋಗಿಸಿದರೆ, ಅದು ಆ ದೇಶವನ್ನು ನಿರ್ನಾಮ ಮಾಡಿ ಜಗತ್ತಿನಾದ್ಯಂತ ವಿಕಿರಣ ಹರಡಿ ಇಡೀ ವಿಶ್ವವನ್ನು ಒಂದು ಕರಾಳ 'ಪರಮಾಣು ಚಳಿಗಾಲ'ಕ್ಕೆ ದೂಡಲಿದೆ. ಇದು ಅಂತಿಂಥ ಚಳಿಗಾಲವಲ್ಲ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಹಂಕಾರ, ಹಠಮಾರಿತನದ ನಿರ್ಧಾರಗಳು ಇಂದು ಜಗತ್ತನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿವೆ. ಯುದ್ಧ ಆರಂಭವಾದಾಗ ಟ್ರಂಪ್ ಕೇವಲ ನಾಲ್ಕೈದು ವಾರಗಳಲ್ಲಿ ಇರಾನ್ ಮಂಡಿಯೂರಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಇಂದು ಆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಪರ್ಷಿಯನ್ ಗಲ್ಫ್‌ನಲ್ಲಿ ಅಜೇಯ ಎನಿಸಿಕೊಂಡಿದ್ದ ಅಮೆರಿಕದ ಐದು ಪ್ರಮುಖ ಮಿಲಿಟರಿ ನೆಲೆಗಳು ಇರಾನ್‌ನ ನಿಖರ ಕ್ಷಿಪಣಿ ದಾಳಿಗೆ ತುತ್ತಾಗಿ ಧೂಳೀಪಟವಾಗಿವೆ. ಅರಬ್ಬಿ ಸಮುದ್ರದಲ್ಲಿ ಅಧಿಪತ್ಯ ಸಾಧಿಸಿದ್ದ ಅಮೆರಿಕದ ಬೃಹತ್ ಯುದ್ಧನೌಕೆಗಳೇ ಇಂದು ಪ್ರಾಣ ಉಳಿಸಿಕೊಳ್ಳಲು ಸಾವಿರಾರು ಕಿಲೋಮೀಟರ್ ದೂರ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅಮೆರಿಕದ ಜಾಗತಿಕ ಪ್ರತಿಷ್ಠೆಗೆ ಬಲವಾದ ಪೆಟ್ಟು ಕೊಟ್ಟಿದೆ.

- Advertisement -

ಅಮೆರಿಕ ಮತ್ತು ಇಸ್ರೇಲ್ ಈ ಭೀಕರ ಯುದ್ಧದಿಂದ ಹಿಂದೆ ಸರಿಯದಿರಲು ಮುಖ್ಯ ಕಾರಣ ಆಯಾ ದೇಶಗಳ ನಾಯಕರ ವೈಯಕ್ತಿಕ ರಾಜಕೀಯ ಭವಿಷ್ಯ ಮತ್ತು ಅಸ್ತಿತ್ವದ ಭಯ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಈ ಯುದ್ಧ ಒಂದು ರಕ್ಷಣಾ ಕವಚದಂತೆ. ಯುದ್ಧ ನಿಂತ ಕೂಡಲೇ ಅವರು ಅಧಿಕಾರ ಕಳೆದುಕೊಳ್ಳುವುದಲ್ಲದೆ, ಅವರ ಮೇಲಿರುವ ಗಂಭೀರ ಭ್ರಷ್ಟಾಚಾರದ ಪ್ರಕರಣಗಳ ವಿಚಾರಣೆಯನ್ನು ಎದುರಿಸಿ ಜೈಲು ಕಂಬಿ ಎಣಿಸಬೇಕಾಗುತ್ತದೆ. ಹೀಗಾಗಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವರು ಇಸ್ರೇಲ್‌ನ ಸೈನ್ಯವನ್ನು ಮತ್ತು ಜನರನ್ನು ಯುದ್ಧದ ಬೆಂಕಿಗೆ ದೂಡಿ ಆಟ ನೋಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...
image 2026 03 31T182627.077

ಅತ್ತ ಟ್ರಂಪ್, ನೆತನ್ಯಾಹು ಅವರ ಇಕ್ಕಳಕ್ಕೆ ಸಿಕ್ಕಿ, ತಮ್ಮನ್ನು ಒಬ್ಬ ನಗೆಪಾಟಲಿನ ನಾಯಕ ಎಂದು ಜಗತ್ತಿನೆದುರು ಸಾಬೀತು ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ ಮತ್ತು ಇರಾನ್ ಎದುರು ಮಣಿದರೆ ಅಮೆರಿಕದ ಜಾಗತಿಕ ಅಧಿಪತ್ಯ ಕೊನೆಯಾಗುತ್ತದೆಯಲ್ಲಾ ಎಂಬ ಆತಂಕ ಟ್ರಂಪ್ ಅವರನ್ನು ಈ ಅಕ್ರಮ ಯುದ್ಧದಲ್ಲಿ ಮುಂದುವರಿಯುವಂತೆ ಮಾಡುತ್ತಿದೆ. ಸೋಲೊಪ್ಪಿಕೊಳ್ಳುವುದು ತಮ್ಮ ಬುಡಕ್ಕೇ ಬೆಂಕಿ ಇಟ್ಟುಕೊಂಡಂತೆ ಎಂದು ಇಬ್ಬರೂ ಭಾವಿಸಿದಂತಿದೆ.

ಇನ್ನೊಂದೆಡೆ, ಇರಾನ್ ಕೂಡ ಯಾವುದೇ ಕಾರಣಕ್ಕೂ ಮಣಿಯುವಂತೆ ಕಾಣುತ್ತಿಲ್ಲ. ದಶಕಗಳಿಂದ ಅಮೆರಿಕದ ನಿರ್ಬಂಧಗಳನ್ನು, ನಿರ್ದಾಕ್ಷಿಣ್ಯ ದಾಳಿಗಳನ್ನು ಎದುರಿಸುತ್ತಲೇ ಬಂದಿರುವ ಇರಾನ್, ತನ್ನ ಸಾರ್ವಭೌಮತ್ವದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಈ ಬಾರಿ ಸಿದ್ಧವಿಲ್ಲ. ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಸಾಬೀತುಪಡಿಸಿದೆ. ತನ್ನ ದೇಶದ ಶಾಲಾ ಮಕ್ಕಳ ಮೇಲೆ ನಡೆದ ಅಮಾನವೀಯ ದಾಳಿಯು ಇರಾನ್ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ದಶಕಗಳಿಂದ ಉರಿಯುತ್ತಿದ್ದ ದೇಶಪ್ರೇಮ ಹಾಗೂ ಹುತಾತ್ಮ ಕಿಚ್ಚಿಗೆ ಮತ್ತಷ್ಟು ಎಣ್ಣೆ ಸುರಿದಿದೆ. ಮಾತುಕತೆಯ ಮೇಜಿನಿಂದ ಎದ್ದು ಅಮೆರಿಕವೇ ಹೊರನಡೆದಿರುವುದರಿಂದ, ಈಗ ಶರಣಾಗುವುದು ಎಂದರೆ ತಮ್ಮ ರಾಷ್ಟ್ರದ ಅಸ್ತಿತ್ವವನ್ನೇ ಅಡವಿಟ್ಟಂತೆ ಎಂಬುದನ್ನು ಇರಾನ್ ನಾಯಕರು ಮನಗಂಡಿದ್ದಾರೆ.

ಜಗತ್ತಿನ ತೈಲ ಪೂರೈಕೆಯ ನಾಡಿಮಿಡಿತವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಸಂಪೂರ್ಣ ಹತೋಟಿ ಹೊಂದಿರುವುದು ಅದಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ಅಮೆರಿಕದ ಬೆದರಿಕೆಗಳಿಗೆ ಬಗ್ಗುವ ಬದಲು, ಎದುರಿಸುವ ಹಾದಿಯನ್ನೇ ಇರಾನ್ ಆಯ್ಕೆ ಮಾಡಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಬಳಿ ಈಗ ರಾಜತಾಂತ್ರಿಕ ಮಾತುಕತೆಯ ಹಾದಿಯೂ ಇಲ್ಲ, ಯುದ್ಧ ಗೆಲ್ಲುವ ಸ್ಪಷ್ಟ ಮಾರ್ಗವೂ ಕಾಣಿಸುತ್ತಿಲ್ಲ.

ಟ್ರಂಪ್ ಅವರ ನಿರ್ಧಾರಗಳು ಅಮೆರಿಕನ್ನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಅಮೆರಿಕದ ಜನಸಾಮಾನ್ಯರು ಕಂಗಾಲಾಗಿದ್ದರೆ. ಮಿಲಿಟರಿ ತಜ್ಞರ ಎಚ್ಚರಿಕೆಯನ್ನು ಮೀರಿ ಕೇವಲ ಏಳು ಸಾವಿರ ಕಮಾಂಡೋಗಳನ್ನು ಇರಾನ್ ನೆಲದ ಮೇಲೆ ಯುದ್ಧಕ್ಕೆ ಕಳುಹಿಸಿರುವುದು ಟ್ರಂಪ್ ಅವರ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ. ವರ್ಷಗಳಿಂದ ಇಂತದ್ದೇ ಸಂದರ್ಭಕ್ಕಾಗಿ ಸಿದ್ಧವಾಗಿರುವ ಇರಾನ್ ಪಡೆಯ ಎದುರು ಈ ಸಣ್ಣ ಸೈನ್ಯವನ್ನು ಕಳುಹಿಸುವುದು ಅವರನ್ನು ನೇರವಾಗಿ ಸಾವಿಗೆ ದೂಡಿದಂತೆ ಎನ್ನುವುದು ತಜ್ಞರ ವಾದ. ನೆತನ್ಯಾಹು ಅವರೊಂದಿಗಿನ ನಿರಂತರ ಭೇಟಿಗಳೂ ಟ್ರಂಪ್‌ರನ್ನು ಒಬ್ಬ ಅಶಕ್ತ ಮತ್ತು ಮಾಹಿತಿ ಇಲ್ಲದ ನಾಯಕನನ್ನಾಗಿ ಜಗತ್ತಿನ ಮುಂದೆ ಬಿಂಬಿಸಿವೆ.

ವಿಶ್ವಸಂಸ್ಥೆಯಲ್ಲಿ ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಅವರು ವಿವರಿಸಿರುವ ಕರಾಳ ದೃಶ್ಯಗಳು ಮಾನವೀಯತೆಯ ಪತನಕ್ಕೆ ಸಾಕ್ಷಿಯಾಗಿವೆ. “ಶಜಾರತ್ ಹಯಾಬಾ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 175ಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹತ್ಯೆ ಮಾಡಿರುವುದು ಉದ್ದೇಶಪೂರ್ವಕ ಜನಾಂಗೀಯ ಹತ್ಯೆಯ ಸಂಚಿನಂತೆ ಕಾಣುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಒಂದು ಶಾಲೆಯನ್ನು ತಪ್ಪಾಗಿ ಗುರಿಯಾಗಿಸಲು ಸಾಧ್ಯವೇ ಇಲ್ಲ” ಎಂದು ಅವರು ವಾದಿಸಿದ್ದಾರೆ. ಇಂತಹ ಕ್ರೌರ್ಯಗಳು ಇರಾನ್‌ನ ಪ್ರತಿರೋಧವನ್ನು ಕುಗ್ಗಿಸುವ ಬದಲು, ಯುದ್ಧವನ್ನು ಮತ್ತಷ್ಟು ಭೀಕರಗೊಳಿಸಿವೆ.

image 2026 03 31T182716.451

ಅಮೆರಿಕ ಹಾಗೂ ಇಸ್ರೇಲ್‌ ನಾಯಕರ ಹಠಮಾರಿ ಧೋರಣೆ ಮತ್ತು ಇರಾನ್‌ನ ಬಲವಾದ ಪ್ರತಿರೋಧ ಜಗತ್ತನ್ನು ಅಣುಬಾಂಬ್ ಪ್ರಯೋಗದ ಭೀಕರ ಘಟ್ಟಕ್ಕೆ ತಂದು ನಿಲ್ಲಿಸಿದೆ. ಇಸ್ರೇಲ್‌ನ ಸಾಂಪ್ರದಾಯಿಕ ಯುದ್ಧ ಸಾಮಗ್ರಿಗಳು ಮತ್ತು ರಕ್ಷಣಾ ಕ್ಷಿಪಣಿಗಳು ಬಹುತೇಕ ಖಾಲಿಯಾಗುತ್ತಿರುವುದರಿಂದ, ಸೋಲಿನ ಭೀತಿಯಲ್ಲಿರುವ ನೆತನ್ಯಾಹು ಅಂತಿಮ ಅಸ್ತ್ರವಾಗಿ ಪರಮಾಣು ಬಾಂಬ್ ಪ್ರಯೋಗಿಸುವ ಸಾಧ್ಯತೆ ದಟ್ಟವಾಗಿದೆ. ಅವರ ರಾಜಕೀಯ ಉಳಿವಿಗಾಗಿ ಇರಾನ್ ಅನ್ನು ಸಂಪೂರ್ಣವಾಗಿ ಧ್ವಂಸ ಮಾಡಲೇಬೇಕಾದ ಅನಿವಾರ್ಯತೆಯನ್ನು ನೆತನ್ಯಾಹು ಮುಂದಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಒಂದು ಇರುವೆಯ ಬೆಲೆ ₹21 ಸಾವಿರ! ʼಕೆಂಪು ರಾಣಿʼ ಖರೀದಿದಾರರ ವಿಚಿತ್ರ ಶೋಕಿ ಬಲ್ಲಿರಾ?

ಜಾಗತಿಕವಾಗಿ ಮೂಲೆಗುಂಪಾಗಿರುವ ಈ ಇಬ್ಬರು ತಿಕ್ಕಲು ದೊರೆಗಳು ಅಹಂಕಾರದಿಂದ ಇರಾನ್ ಮೇಲೆ ಅಣುಬಾಂಬ್ ಪ್ರಯೋಗಿಸಿದರೆ, ಅದು ಆ ದೇಶವನ್ನು ನಿರ್ನಾಮ ಮಾಡಿ ಜಗತ್ತಿನಾದ್ಯಂತ ವಿಕಿರಣ ಹರಡಿ ಇಡೀ ವಿಶ್ವವನ್ನು ಒಂದು ಕರಾಳ ‘ಪರಮಾಣು ಚಳಿಗಾಲ’ಕ್ಕೆ ದೂಡಲಿದೆ. ಇದು ಅಂತಿಂತ ಚಳಿಗಾಲವಲ್ಲ. ಭಾರೀ ಪ್ರಮಾಣದ ಪರಮಾಣು ಯುದ್ಧದ ನಂತರ ಉಂಟಾಗಬಹುದಾದ ದೀರ್ಘಕಾಲೀನ ಹವಾಮಾನ ವೈಪರೀತ್ಯ. ಅಣುಬಾಂಬ್ ಸ್ಫೋಟದಿಂದ ಉಂಟಾಗುವ ಬೆಂಕಿ, ನಗರಗಳನ್ನು ಸುಟ್ಟು ಟನ್‌ಗಟ್ಟಲೆ ಮಸಿ ಮತ್ತು ಧೂಳನ್ನು ವಾತಾವರಣಕ್ಕೆ (ಮಧ್ಯಮ ವಾಯುಮಂಡಲ) ಸೇರಿಸುತ್ತದೆ. ಈ ದಟ್ಟವಾದ ಹೊಗೆ ಸೂರ್ಯನ ಬೆಳಕನ್ನು ತಡೆದು, ಭೂಮಿಯ ತಾಪಮಾನವನ್ನು ತೀವ್ರವಾಗಿ ತಗ್ಗಿಸಿ, ಜಾಗತಿಕ ಕ್ಷಾಮಕ್ಕೆ ಕಾರಣವಾಗುತ್ತದೆ.

ಇಬ್ಬರು ಅರಿವುಗೇಡಿ ಮಹಾನಾಯಕರ ಈ ಮೂರ್ಖತನದ ಸಂಘರ್ಷವು ಪ್ರಕೃತಿ ಮತ್ತು ಮಾನವ ಸಂಕುಲದ ಮೇಲೆ ಶಾಶ್ವತವಾದ ಕಪ್ಪು ಚುಕ್ಕೆಯಾಗಿ ಉಳಿಯುವ ಆತಂಕ ಎದುರಾಗಿದೆ. ಅಧಿಕಾರದ ಹಪಾಹಪಿ, ರಾಜಕೀಯ ಅಸ್ತಿತ್ವದ ಉಳಿವಿನ ಆಟದಲ್ಲಿ ಅಮಾಯಕ ಜನಸಾಮಾನ್ಯರು ಬೆಲೆ ತೆರಬೇಕಾಗಿರುವುದು ಇಂದಿನ ನಾಗರಿಕತೆಯ ಅತ್ಯಂತ ದೊಡ್ಡ ದುರಂತ. ಈಗಲಾದರೂ ವಿಶ್ವ ಸಮುದಾಯ ಮತ್ತು ಪ್ರಭಾವಿ ದೇಶಗಳು ಈ ‘ತಿಕ್ಕಲು ದೊರೆ’ಗಳ ನಡೆಯನ್ನು ನಿಯಂತ್ರಿಸದಿದ್ದರೆ, ಮುಂದಿನ ಪೀಳಿಗೆಗೆ ನಾವು ವಿಕಿರಣಯುಕ್ತ ಬೂದಿಯ ರಾಶಿಯನ್ನು ಬಿಟ್ಟು ಹೋಗಬೇಕಾದೀತು. ಪ್ರಕೃತಿ ಮನುಷ್ಯನ ಅಗತ್ಯಗಳನ್ನು ಪೂರೈಸಬಲ್ಲದು, ಅವನ ದುರಾಸೆಯನ್ನಲ್ಲ. ಮನುಷ್ಯನ ಮೂರ್ಖತನದ ಸಂಘರ್ಷ ಪ್ರಕೃತಿ ಮತ್ತು ಮಾನವ ಸಂಕುಲದ ಮೇಲೆ ಶಾಶ್ವತ ಕಪ್ಪು ಮಸಿ ರಾಚುವ ಮುನ್ನ ಮಾನವ ವಿವೇಕ ಜಾಗೃತಗೊಳ್ಳಲಿ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...