ಸುದ್ದಿ ವಿವರ | ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದರೇನು? ಭಾರತಕ್ಕೂ ಈ ಸೀಮೆಗೂ ಏನು ಸಂಬಂಧ?

Date:

ಇತ್ತೀಚಿನ ವರ್ಷಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಆಹಾರ ಹಾಗೂ ಉದ್ಯೋಗ ಸಿಗುತ್ತಿಲ್ಲ. ಪಾಕಿಸ್ತಾನ ಸರ್ಕಾರವು ಆ ಭಾಗದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದೆ. ಆದರೆ, ಅಲ್ಲಿನ ಜನರನ್ನು ತಾರತಮ್ಯದಿಂದ ನೋಡುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಇದೇ ಕಾರಣಕ್ಕಾಗಿ ಅಲ್ಲಿನ ಜನರು ಪಾಕ್ ಸರ್ಕಾರದ ವಿರುದ್ಧ ಆಕ್ರೋಶಗೊಂಡು, ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವಾರ ನಡೆದ ಪ್ರತಿಭಟನೆ ವೇಳೆ, ಪಾಕ್ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, 17 ಮಂದಿ ಮೃತಪಟ್ಟಿದ್ದಾರೆ.

- Advertisement -

ಅಂದಹಾಗೆ PoK ಎಂದರೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಪಾಕ್ ಆಕ್ರಮಿತ ಕಾಶ್ಮೀರ (Pakistan Occupied Kashmir — PoK) ಎಂಬುದು ಭಾರತದ ಜಮ್ಮು-ಕಾಶ್ಮೀರ ರಾಜ್ಯದ ಒಂದು ಭಾಗ. ಅದನ್ನು 1947ರಲ್ಲಿ ಪಾಕಿಸ್ತಾನ ಬಲವಂತವಾಗಿ ಆಕ್ರಮಿಸಿಕೊಂಡಿತು. ಅಂದಿನಿಂದ, ಈ ಪ್ರದೇಶವನ್ನು ಭಾರತವು ‘PoK’ ಎಂದು ಕರೆಯುತ್ತದೆ. ಆದರೆ, ಪಾಕಿಸ್ತಾನ ಮಾತ್ರ ಇದನ್ನು ‘ಆಜಾದ್ ಕಾಶ್ಮೀರ’ (ಸ್ವತಂತ್ರ ಕಾಶ್ಮೀರ) ಎಂದು ಕರೆಯುತ್ತದೆ.

ಅದೇನೇ ಇದ್ದರೂ, ಭಾರತ ಮತ್ತು ಅಂತರರಾಷ್ಟ್ರೀಯ ಕಾನೂನಿನ ದೃಷ್ಟಿಯಿಂದ ಈ ಪ್ರದೇಶವು ಭಾರತದ ಅವಿಭಾಜ್ಯ ಅಂಗ.

ಪಿಒಕೆ ಎಂದು ಕರೆಯಲಾಗುವ ಪ್ರದೇಶವು ಸರಿಸುಮಾರು 13,297 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಮಿರ್ಪುರ್, ಮುಝಫ್ಫರಾಬಾದ್, ರಾವಲಕೋಟ್ ಹಾಗೂ ಸ್ಕರ್ದು ಇಲ್ಲಿನ ಪ್ರಮುಖ ನಗರಗಳು.

ಪಿಒಕೆ ಸೃಷ್ಟಿಯಾಗಿದ್ದು ಹೇಗೆ?

ಪಿಒಕೆ ಸೃಷ್ಟಿಯ ಹಿಂದೆ 1947ರ ಭಾರತ-ಪಾಕ್ ವಿಭಜನೆ ಮತ್ತು ಅಂದಿನ ರಾಜಕೀಯ ಪರಿಸ್ಥಿತಿಯ ದೊಡ್ಡ ಇತಿಹಾಸವಿದೆ.

1947ರಲ್ಲಿ ಭಾರತವು ಸ್ವಾತಂತ್ರ್ಯಗೊಂಡಾಗ, ಪಾಕಿಸ್ತಾನವೂ ರಚನೆಯಾಯಿತು. ಆಗ, ಭಾರತವು ಒಂದು ರಾಷ್ಟ್ರವಾಗಿರಲಿಲ್ಲ. ಬದಲಾಗಿ, ಹಲವು ರಾಜಪ್ರಭುತ್ವಗಳು ಅಸ್ತಿತ್ವದಲ್ಲಿದ್ದವು. ತಮ್ಮದೇ ಭೂಭಾಗದಲ್ಲಿ ಆಡಳಿತ ನಡೆಸುತ್ತಿದ್ದವು. ಸ್ವಾತಂತ್ರ್ಯದ ಬಳಿಕ, ಸಮಗ್ರ ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಯ ಕೆಲಸಗಳು ಆರಂಭವಾದವು. ರಾಜ ಸಂಸ್ಥಾನಗಳು ಭಾರತ ಅಥವಾ ಪಾಕಿಸ್ತಾನದೊಂದಿಗೆ ವಿಲೀನ ಆಗಬೇಕಿತ್ತು.

ಆ ಸಮಯದಲ್ಲಿ ಜಮ್ಮು-ಕಾಶ್ಮೀರವನ್ನು ಮಹಾರಾಜ ಹರಿ ಸಿಂಗ್ ಆಳುತ್ತಿದ್ದರು. ಅವರು ಹಿಂದು ಸಮುದಾಯಕ್ಕೆ ಸೇರಿದ್ದರೂ, ರಾಜ್ಯದ ಬಹುಸಂಖ್ಯಾತರು ಮುಸ್ಲಿಮರಾಗಿದ್ದರು. ಆದ್ದರಿಂದ, ರಾಜ ಹರಿಸಿಂಗ್‌ ಅವರು ತಮ್ಮ ರಾಜ್ಯವನ್ನು ಸ್ವಿಟ್ಜರ್‌ಲ್ಯಾಂಡ್‌ನಂತೆ ಸ್ವತಂತ್ರ ದೇಶವಾಗಿ ಉಳಿಸಿಕೊಳ್ಳಲು ಬಯಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವತಂತ್ರ ರಾಷ್ಟ್ರವಾಗಿ ಉಳಿಯಬೇಕು ಎಂಬ ಬೇಡಿಕೆ ಇಟ್ಟಿದ್ದರು. ಎರಡೂ ರಾಷ್ಟ್ರಗಳೊಂದಿಗೆ ಸೇರಲು ನಿರಾಕಿಸಿದ್ದರು.

ಆದ್ದರಿಂದ, ಹರಿ ಸಿಂಗ್‌ ಜೊತೆಗೆ ಭಾರತದ ನೇತಾರರು ಚರ್ಚೆ ನಡೆಸುತ್ತಿದ್ದರು. ಇದೇ ಸಮದಯಲ್ಲಿ, ಕಾಶ್ಮೀರವನ್ನು ಹೇಗಾದರೂ ಮಾಡಿ ತನ್ನದಾಗಿಸಿಕೊಳ್ಳಬೇಕೆಂದು ಪಾಕಿಸ್ತಾನವೂ ಹವಣಿಸುತ್ತಿತ್ತು. ಜಮ್ಮು-ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಲು ಪಾಕಿಸ್ತಾನ ಸೇನೆಯು 1947ರ ಅಕ್ಟೋಬರ್‌ 22ರಂದು ಕಾಶ್ಮೀರದ ಮೇಲೆ ದಾಳಿ ಮಾಡಿತು. ದಾಳಿಯಲ್ಲಿ ಭಾರೀ ಲೂಟಿ, ಕೊಲೆ ಹಾಗೂ ಅತ್ಯಾಚಾರಗಳು ನಡೆದವು.

ಪಾಕಿಸ್ತಾನದ ಆಕ್ರಮಣದಿಂದ ದಿಕ್ಕೆಟ್ಟ ಮಹಾರಾಜ ಹರಿ ಸಿಂಗ್, ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬಳಿ ಸೈನಿಕ ನೆರವಿಗಾಗಿ ವಿನಂತಿಸಿದರು. ಆದರೆ, ಕಾಶ್ಮೀರವು ಅಧಿಕೃತವಾಗಿ ಭಾರತದ ಭಾಗವಾಗದ ಹೊರತು ಭಾರತೀಯ ಸೇನೆಯನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಅಂದಿನ ಸರ್ಕಾರ ಸ್ಪಷ್ಟಪಡಿಸಿತು.

ಇದಕ್ಕೆ ಒಪ್ಪಿದ ಮಹಾರಾಜ ಹರಿ ಸಿಂಗ್, 1947ರ ಅಕ್ಟೋಬರ್ 26ರಂದು ಭಾರತದೊಂದಿಗೆ ವಿಲೀನಗೊಳ್ಳುವ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕದ ಜವಾಬ್ದಾರಿ ಭಾರತದ ಹೆಗಲೇರಿತು. ಅಂತೆಯೇ, ಜಮ್ಮು-ಕಾಶ್ಮೀರದ ಅಸ್ಮಿತೆ, ಅಭಿವೃದ್ಧಿಗೆ ಸಂವಿಧಾನದಲ್ಲಿ 370ನೇ ವಿಧಿಯನ್ನು ಸೇರಿಸಲಾಯಿತು.

ಭಾರತದೊಂದಿಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವ ಒಪ್ಪಂದವಾದ ಬೆನ್ನಲ್ಲೇ, ಭಾರತೀಯ ವಾಯುಸೇನೆ ಮತ್ತು ಭೂಸೇನೆ ಶ್ರೀನಗರಕ್ಕೆ ಧಾವಿಸಿ ಪಾಕಿಸ್ತಾನಿ ಆಕ್ರಮಣಕಾರರನ್ನು ಹಿಮ್ಮೆಟ್ಟಿತು. ಇದೇ ಸಮಯದಲ್ಲಿ, ಪ್ರಧಾನಿ ನೆಹರೂ ಅವರು ಈ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು.

ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ನಂತರ, 1947ರ ಜನವರಿ 1ರಂದು ಕದನ ವಿರಾಮ ಘೋಷಿಸಲಾಯಿತು. ಆ ಸಮಯದಲ್ಲಿ ಯಾವ ದೇಶದ ಸೇನೆ ಎಲ್ಲಿತ್ತೋ, ಅದೇ ಗಡಿಯಾಯಿತು. ಇದನ್ನು ‘ಕದನ ವಿರಾಮ ರೇಖೆ’ (Ceasefire Line) ಎಂದು ಕರೆಯಲಾಯಿತು (ಈ ರೇಖೆಯನ್ನು 1972ರ ಶಿಮ್ಲಾ ಒಪ್ಪಂದದ ನಂತರ ನಿಯಂತ್ರಣ ರೇಖೆ (Line of Control – LoC) ಎನ್ನಲಾಗುತ್ತಿದೆ). 1947ರ ಕದನ ವಿರಾಮ ಘೋಷಣೆಯಾಗುವ ವೇಳೆಗೆ ಕಾಶ್ಮೀರದ ಮೂರನೇ ಒಂದು ಭಾಗವು ಪಾಕಿಸ್ತಾನದ ವಶದಲ್ಲಿತ್ತು. ಆ ಭಾಗವನ್ನೇ ಇಂದು ಪಿಒಕೆ ಎಂದು ಕರೆಯಲಾಗುತ್ತದೆ.

ಈ ಲೇಖನ ಓದಿದ್ದೀರಾ?: ಮೋದಿಗೆ ಎದುರಾಗುತ್ತಿವೆ ಕೆಟ್ಟ ದಿನಗಳು!

ಇದು ಭಾರತ ಮರಳಿ ಪಡೆಯಬಹುದಾಗಿದ್ದ ಪ್ರದೇಶ. ಆದರೆ, ಕದನ ವಿರಾಮ ಅದಕ್ಕೆ ಅವಕಾಶ ಕೊಡಲಿಲ್ಲ. ನಂತರದಲ್ಲಿಯೂ ಅದು ಭಾರತದ ಆಡಳಿತ ವ್ಯಾಪ್ತಿಗೆ ಬರಲಿಲ್ಲ. ಆದಾಗ್ಯೂ, ಈ ಭಾಗವು ಭೂಪಟ ಮತ್ತು ಕಾನೂನಿನ ಪ್ರಕಾರ ಭಾರತದ ಭಾಗವೇ ಆಗಿದೆ. ಆ ಭಾಗಕ್ಕೆ ಲೋಕಸಭಾ ಸ್ಥಾನವನ್ನೂ ಭಾರತ ಒಳಗೊಂಡಿದೆ. ಆದರೆ, ಅದನ್ನು ಪಾಕಿಸ್ತಾನ ನಿಯಂತ್ರಿಸುತ್ತಿದ್ದು, ಅಲ್ಲಿ ಭಾರತದ ಲೋಕಸಭಾ ಚುನಾವಣೆ ಸಮಯದಲ್ಲಿ ಯಾವುದೇ ಚುನಾವಣೆಯೂ ನಡೆಯುವುದಿಲ್ಲ.

ಪಿಒಕೆ ಮತ್ತು ಭಾರತ

ಮಹಾರಾಜ ಹರಿ ಸಿಂಗ್ ಅವರು ಇಡೀ ಕಾಶ್ಮೀರ ಸಂಸ್ಥಾನವನ್ನು ಭಾರತಕ್ಕೆ ಒಪ್ಪಿಸಿದ್ದರಿಂದ, ಪಿಒಕೆ ಸೇರಿದಂತೆ ಇಡೀ ಜಮ್ಮು-ಕಾಶ್ಮೀರ ಸಂಪೂರ್ಣವಾಗಿ ಭಾರತದ ಭೂಪ್ರದೇಶ. ಭಾರತದ ಸಂವಿಧಾನವೂ ಅದನ್ನೇ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ, ಪಿಒಕೆ ಭಾರತದ ಕಾನೂನುಬದ್ಧ ಭೂಭಾಗವಾಗಿದೆ.

ಅಂತೆಯೇ, ಭಾರತದ ಸಂಸತ್ತು 1994ರ ಫೆಬ್ರವರಿ 22ರಂದು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಅದರ ಪ್ರಕಾರ, “ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಭಾರತವು ಮರಳಿ ಪಡೆಯಲಿದೆ” ಎಂದು ಘೋಷಿಸಲಾಗಿದೆ.

ಪಿಒಕೆ ಭೌಗೋಳಿಕ ಮಹತ್ವ

ಪಿಒಕೆ ಭಾರತಕ್ಕೆ ಭೌಗೋಳಿಕವಾಗಿ ಅತ್ಯಂತ ಮಹತ್ವದ ಪ್ರದೇಶ. ಸ್ವಾಭಾವಿಕ ಸಂಪತ್ತಿನಿಂದ ಕೂಡಿದ ಶ್ರೀಮಂತ ಭಾಗ. ಇಲ್ಲಿ ಕಾಡು, ನೀರಿನ ಮೂಲ, ಖನಿಜ ಸಂಪತ್ತು ಹೇರಳವಾಗಿದೆ. . K2 ಪರ್ವತವೂ (ವಿಶ್ವದ ಎರಡನೇ ಅತಿ ಎತ್ತರದ ಶಿಖರ) ಈ ಪ್ರದೇಶದಲ್ಲಿದೆ. ಇಲ್ಲಿ ನೀರಿನ ಸಂಪನ್ಮೂಲ ಅಪಾರ — ಸಿಂಧೂ ನದಿ ಮತ್ತು ಅದರ ಉಪನದಿಗಳು ಈ ಪ್ರದೇಶದಿಂದ ಹರಿಯುತ್ತವೆ. ಮಧ್ಯ ಏಷ್ಯಾ ಮತ್ತು ಅರಬ್ಬೀ ಸಮುದ್ರ ನಡುವಿನ ಕಾರಿಡಾರ್ ಆಗಿ ಪಿಒಕೆ ಕಾರ್ಯ ನಿರ್ವಹಿಸುತ್ತದೆ.

ಜೊತೆಗೆ, ಗಿಲ್ಗಿಟ್-ಬಾಲ್ಟಿಸ್ತಾನ್ ಅಫ್ಘಾನಿಸ್ತಾನ, ಚೀನಾ ಹಾಗೂ ತಜಿಕಿಸ್ತಾನದೊಂದಿಗೆ ಈ ಪ್ರದೇಶವನ್ನು ಗಡಿಯನ್ನು ಹೊಂದಿದೆ. ಆದರೆ, ಇಲ್ಲಿನ ಜನರ ಜೀವನ ಮಟ್ಟ ತೀರಾ ಹಿಂದುಳಿದಿದೆ. ಪರಿಣಾಮವಾಗಿ, ಉತ್ತಮ ಬದುಕು ಹರಸಿ ಆ ಭಾಗದ ಜನರು ಬ್ರಿಟನ್ ಮತ್ತು ಯೂರೋಪ್‌ಗೆ ವಲಸೆ ಹೋಗಿದ್ದಾರೆ. ಪ್ರಸ್ತುತ, ಪಿಒಕೆಯ ಒಟ್ಟು ಜನಸಂಖ್ಯೆ ಸುಮಾರು 40-45 ಲಕ್ಷವೆಂದು ಅಂದಾಜಿಸಲಾಗಿದೆ.

ಪಿಒಕೆಯಲ್ಲಿ ಪಾಕಿಸ್ತಾನದ ಧೋರಣೆ ಮತ್ತು ಭಾರತದ ನಿಲುವು

ಪ್ರಸ್ತುತ, ಪಿಒಕೆ ಪ್ರದೇಶವು ತಾಂತ್ರಿಕವಾಗಿ ‘ಸ್ವ-ಆಡಳಿತ’ ಪ್ರದೇಶ ಎಂದು ಕರೆಸಿಕೊಳ್ಳುತ್ತದೆ. ಅಲ್ಲಿ ಪ್ರತ್ಯೇಕ ವಿಧಾನಸಭೆ ಮತ್ತು ಪ್ರಧಾನಮಂತ್ರಿ ಇದ್ದಾರೆ. ಆದರೆ, ವಾಸ್ತವದಲ್ಲಿ ಪಿಒಕೆ ಮೇಲೆ ಪಾಕಿಸ್ತಾನ ಸರ್ಕಾರ ಮತ್ತು ಪಾಕ್‌ ಸೇನೆಗಳು ನೇರ ನಿಯಂತ್ರಣ ಹೊಂದಿವೆ.

ಆದ್ದರಿಂದಲೇ, ಪಿಒಕೆ ಮೂಲಕವೇ ಹಾದುಹೋಗುವ ಚೀನಾ-ಪಾಕ್ ಆರ್ಥಿಕ ಕಾರಿಡಾರ್‌ಅನ್ನು (CPEC) ನಿರ್ಮಿಸಲು ಚೀನಾಗೆ ಪಾಕಿಸ್ತಾನ ಅವಕಾಶ ನೀಡಿದೆ. ಈ ಯೋಜನೆಯಡಿ ಚೀನಾದ ಕ್ಸಿಂಜಿಯಾಂಗ್‌ನಿಂದ ಪಾಕಿಸ್ತಾನದ ಗ್ವಾದಾರ್‌ಗೆ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದೆ. ಆದರೆ, ಈ ಯೋಜನೆಯನ್ನು ಭಾರತವು ತೀವ್ರವಾಗಿ ವಿರೋಧಿಸಿದೆ. ‘ಭಾರತ ಭೂಮಿಯ ಮೇಲೆ ಭಾರತದ ಅನುಮತಿ ಇಲ್ಲದೆ ಮೂರನೇ ದೇಶ ಯೋಜನೆ ಕೈಗೊಳ್ಳುವುದು ಸಾರ್ವಭೌಮತ್ವದ ಉಲ್ಲಂಘನೆ’ ಎಂದು ಭಾರತ ಪ್ರತಿಭಟಿಸಿದೆ.

ಇನ್ನು, ಪಿಒಕೆ ಪ್ರದೇಶದಲ್ಲಿ ಪಾಕ್ ಪಡೆಗಳಿಂದ ನಿರಂತರವಾಗಿ ‘ಮಾನವ ಹಕ್ಕು ಉಲ್ಲಂಘನೆ’ಯಾಗುತ್ತಿದೆ. ಆದ್ದರಿಂದಲೇ, ಅಲ್ಲಿನ ಜನರು ರಾಜಕೀಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸ್ವ-ಆಡಳಿತದಿಂದ ವಂಚಿತರಾಗಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈಪಿಒಕೆ ಸಮಸ್ಯೆಯ ಕಾರಣಕ್ಕಾಗಿಯೇ ಭಾರತ ಮತ್ತು ಪಾಕಿಸ್ತಾನ ನಡುವೆ 1947, 1965 ಹಾಗೂ 1971ರಲ್ಲಿ ಯುದ್ಧಗಳು ನಡೆದಿವೆ. ಪಿಒಕೆಯಲ್ಲಿರುವ ನಿಯಂತ್ರಣ ರೇಖೆಯನ್ನು ಪಾಕ್ ಸೇನೆ ದಾಟಿದ್ದರಿಂದಲೇ 1999ರ ಕಾರ್ಗಿಲ್ ಯುದ್ಧಯೂ ನಡೆದಿದೆ.

ಪಿಒಕೆ ಪ್ರದೇಶವು ಭಾರತದ ಅಧಿಕೃತ ಭೂಭಾಗವೆಂದು ಭಾರತ ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ, ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಆದ್ದರಿಂದಲೇ, 2019ರ ಆಗಸ್ಟ್‌ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತು. ಇದು, ಆ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...