ಈ ದಿನ ಕವಿತೆ | ಅಲೆಗಳು ಸಮುದ್ರವನ್ನು ಜೀವಂತವಾಗಿಡುತ್ತವೆ- ಹಮೀದ್‌ ಸಬ್ಜುವಾರಿ

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಇರಾನಿನ ಆಧುನಿಕ ಕವಿ ಹಮೀದ್ ಸಬ್ಜುವಾರಿ ಅವರ ‘ಅಲೆಗಳು ಸಮುದ್ರವನ್ನು ಜೀವಂತವಾಗಿಡುತ್ತವ‘ ಕವಿತೆಯನ್ನು ನಿಮ್ಮ ಮುಂದಿಟ್ಟಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ

- Advertisement -

ಅಲೆಗಳು ಸಮುದ್ರವನ್ನು ಜೀವಂತವಾಗಿಡುತ್ತವೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ದಡದ ಮೇಲೆ ನಿರುಮ್ಮಳವಾಗಿ ಕುಳಿತಿರುವವರಿಗೆ ತಿಳಿದಿರಬೇಕು
ಈ ಸಮುದ್ರವನ್ನು ಪಳಗಿಸುವುದು ಶಾಂತಗೊಳಿಸುವುದು ಅಸಾಧ್ಯ ಎಂದು
ಅವರು ಇದನ್ನು ಶಾಂತಗೊಳಿಸಲು ಯತ್ನಿಸದಿರಲಿ
ಏಕೆಂದರೆ,
ಸಮುದ್ರವು ಶಾಂತಿ, ಧ್ಯಾನಕ್ಕೆಂದೂ ತವಕಿಸದು
ಸಮುದ್ರ ಸಮುದ್ರವೇ ಆಗಿರುವವರೆಗೆ ಪ್ರಕ್ಷುಬ್ಧ ಅಶಾಂತ
ಭೋರ್ಗರೆವ ಅಲೆಗಳು ಸುಂಟರಗಾಳಿ
ಇದರ ತುಂಬಾ ತುಂಬಿದೆ
ಈ ಬೇಗುದಿಯ ಸಮುದ್ರವು
ಹಳ್ಳಕೊಳ್ಳದ ಭಾಷೆಯಲ್ಲಿ ಮಾತಾಡಬೇಕೆಂದು ಬಯಸಬೇಡ.

ನಾವು ಕಡಲ ಮೀನುಗಳು
ಕಡಲ ಮೀನುಗಳಿಗೆ ತಳಮಳಿಸುವ ಅಲೆಗಳೇ ಹಾಸಿಗೆ
ಇದೇ ಅವುಗಳ ಹಾಡ
ಅಲೆಗಳು ಸಮುದ್ರವನ್ನು ಜೀವಂತವಾಗಿಡುತ್ತವೆ
ನಾವಾದರೋ ಕಡಲ ಮೀನುಗಳ
ಕಡಲ ಮೀನುಗಳು ಸಮುದ್ರದಾಳದ ಮಬ್ಬಿನಲ್ಲಿ ಬೇಟೆಯಾಡುತ್ತವೆ.
ಸಮುದ್ರವನ್ನೆದುರಿಸುವ ಧೀರನಿಗೆ
ಶಾಂತಿ ಸಮಾಧಾನಕ್ಕೆ ಹಾತೊರೆಯುವುದಕ್ಕಿಂತ
ಸಾವು ರುಚಿ

ಈ ಖುಷಿ ರೋಮಾಂಚನವು
ಸಮುದ್ರ ಇರುವವರೆಗೂ ಇದ್ದೇ ಇರುವುದು
ದಡದಮೇಲೆ ಶಾಂತವಾಗಿ ಕುಳಿತಿರುವವರಿದನ್ನು ತಿಳಿಯಬೇಕು
ಅವರು ಸಮುದ್ರದ ಜೊತೆ ಒಪ್ಪಂದ, ರಾಜಿಯನು ನಿರೀಕ್ಷಿಸಲೂ ಬಾರದು
ಅಲೆಗಳಿಗೂ ದಡಕ್ಕೂ ಒಪ್ಪಂದ
ಆಗದ ಮಾತು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...