ಪಶ್ಚಿಮ ಬಂಗಾಳದ ಸುಂದರಬನಗಳ ‘ವ್ಯಾಘ್ರ ವಿಧವೆ’ಯರ ನೆರಳು ಚುನಾವಣೆ ಮೇಲೆ ಚಾಚಿತೇ?

Date:

ಚುನಾವಣೆಯ ದಿನಾಂಕಗಳು ಘೋಷಣೆಯಾಗುತ್ತಿದ್ದಂತೆ, ಈ ಸುಂದರಬನದ ನದಿಪಾತ್ರದ ಹಳ್ಳಿಗಳಿಗೆ ರಾಜಕೀಯ ನಾಯಕರ ದಂಡು ಹರಿದುಬರುತ್ತದೆ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಈ ಮಹಿಳೆಯರ ಮೇಲೆ ಮರುಕ ಹುಟ್ಟುತ್ತದೆ. 'ವ್ಯಾಘ್ರ ವಿಧವೆ'ಯರಿಗೆ ವಿಶೇಷ ಪಿಂಚಣಿ, ಅವರ ಮಕ್ಕಳಿಗೆ ಉಚಿತ ಶಿಕ್ಷಣ, ಅಧಿಕೃತವಾಗಿ ಮರಣ ಪ್ರಮಾಣಪತ್ರ ವಿತರಣೆ- ಹೀಗೆ ಭರವಸೆಗಳು ಪ್ರತಿ ಚುನಾವಣೆಯಲ್ಲೂ ಪುನರಾವರ್ತನೆಯಾಗುತ್ತವೆ. 

ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮೊದಲ ಹಂತದ ಮತದಾನ ಏಪ್ರಿಲ್ 23ರಂದು ನಡೆದಿದೆ. ಇನ್ನೆರಡು ದಿನದಲ್ಲೇ ಕೊನೆಯ ಹಂತದ ಮತದಾನ ನಡೆಯಲಿದೆ. ಸಾಮಾನ್ಯವೆಂಬಂತೆ ಚುನಾವಣೆಗೂ ಮುನ್ನ ಮಹಿಳೆಯರು, ಯುವಕರು, ಅಲ್ಪಸಂಖ್ಯಾತರು, ರೈತರಿಗಾಗಿಯೇ ಭರವಸೆಗಳನ್ನು ಒಳಗೊಂಡ ವಿಶೇಷ ಪ್ರಣಾಳಿಕೆಗಳನ್ನು ಆಡಾಳಿತರೂಢ ಟಿಎಂಸಿ, ವಿಪಕ್ಷ ಕಾಂಗ್ರೆಸ್, ಬಿಜೆಪಿ ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಎಂದಿನಂತೆ ಈ ಪಟ್ಟಿಯಲ್ಲಿ ‘ವ್ಯಾಘ್ರ ವಿಧವೆಯರು’ ಕೂಡಾ ಸೇರಿಕೊಂಡಿದ್ದಾರೆ. ಆದರೆ ಈ ಭರವಸೆಗಳು ಮಾತ್ರ ‘ವ್ಯಾಘ್ರ ವಿಧವೆ’ಯರ ನೆರಳು ತಾಕುವ ಭಯದಿಂದ ಅವರಿಂದ ದೂರ ಉಳಿದು, ಈಡೇರಿಕೆ ಎಂಬ ದಡ ತಲುಪುವುದೇ ಇಲ್ಲ!

- Advertisement -

ಬಂಗಾಳದ “ಸುಂದರಬನಗಳ ವ್ಯಾಘ್ರ ವಿಧವೆಯರು” ಎಂಬುದು ಕೇವಲ ಒಂದು ಸಾಮಾಜಿಕ ವರ್ಗವಾಗಿ ಉಳಿದಿಲ್ಲ. ಬದಲಾಗಿ ರಾಜಕೀಯ ವ್ಯವಸ್ಥೆಯ ಇಬ್ಬಂದಿ ನೀತಿ ಮತ್ತು ನಿರ್ಲಕ್ಷ್ಯದ ಸಂಕೇತ. ಚುನಾವಣಾ ಕಾಲದಲ್ಲಿ ಮಾತ್ರ ವ್ಯಾಘ್ರ ವಿಧವೆಯರ ಬದುಕು ಬಣ್ಣದ ಪ್ರಣಾಳಿಕೆಗಳನ್ನು ಕಾಣುತ್ತದೆ. ಮೂಢನಂಬಿಕೆಗೆ ಸಿಲುಕಿ ಸಾಮಾಜಿಕವಾಗಿ ದೂರವಾಗಿರುವ ಈ ವ್ಯಾಘ್ರ ವಿಧವೆಯರು ಈಗ ಸಂಘಟಿತರಾಗುತ್ತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇವೆಲ್ಲವೂ ಈ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ ಚುನಾವಣೆ : ಅಗ್ನಿಪರೀಕ್ಷೆಯಲ್ಲಿ ಪಾಸ್‌ ಆಗುತ್ತಾರಾ ದೀದಿ?

ಅಷ್ಟಕ್ಕೂ ಈ ವ್ಯಾಘ್ರ ವಿಧವೆಯರು ಯಾರು?

ಪಶ್ಚಿಮ ಬಂಗಾಳದ ದಕ್ಷಿಣದಲ್ಲಿ ಹರಡಿರುವ ಸುಂದರಬನಗಳು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವುದು ಮಾತ್ರವಲ್ಲ, ಅಲ್ಲಿ ನಿರಂತರ ಜೀವಭಯದ ನಡುವೆ ಬದುಕುವ ಸಾವಿರಾರು ಜನರೂ ಇದ್ದಾರೆ. ಸುಂದರಬನಗಳ ಜನರು ಜೀವನೋಪಾಯಕ್ಕಾಗಿ ಕಾಡನ್ನೇ ನಂಬಿಕೊಂಡಿದ್ದಾರೆ. ಇಲ್ಲಿನ ಪುರುಷರು ಹೊಟ್ಟೆಪಾಡಿಗಾಗಿ, ಏಡಿ ಹಿಡಿಯಲು ಅಥವಾ ಮೀನುಗಾರಿಕೆ ನಡೆಸಲು ಅನಿವಾರ್ಯವಾಗಿ ದಟ್ಟ ಅರಣ್ಯಕ್ಕೆ ಹೋದಾಗ ಹುಲಿಗಳ ಪಾಲಾಗುತ್ತಿದ್ದಾರೆ.

ಬಂಗಾಳದ ಸುಂದರಬನಗಳ ಹುಲಿಗಳ ದಾಳಿಗೆ ತಮ್ಮ ಪತಿಯರನ್ನು ಕಳೆದುಕೊಂಡ ಈ ಮಹಿಳೆಯರನ್ನು ಸ್ಥಳೀಯವಾಗಿ ‘ಬಾಘ್ ಬಿಧೋಬಾ’ (Tiger Widows) ಅಂದರೆ ‘ವ್ಯಾಘ್ರ ವಿಧವೆಯರು’ ಎಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಪುರುಷನನ್ನು ತಿಂದಿದ್ದು ಹುಲಿಯಾದರೂ ಸಮಾಜ ಬೆರಳು ಮಾಡುವುದು ಮಹಿಳೆಯತ್ತ ಅಂದರೆ ಆತನ ಪತ್ನಿಯತ್ತ! “ಸ್ವಾಮಿ-ಖೇಕೋ” (ಪತಿಯನ್ನು ತಿಂದವಳು ಅಥವಾ ಭಕ್ಷಕಿ) ಎಂದು ಹೀಯಾಳಿಸಿ ಸಾಮಾಜಿಕವಾಗಿ ಬಹಿಷ್ಕಾರ ಹಾಕಲಾಗುತ್ತದೆ. ಆಕೆಯ ಪತಿಯ ಸಾವಿಗೆ ಆಕೆಯ ಅಪಶಕುನವೇ ಕಾರಣ ಎಂಬ ಅಂಧವಿಶ್ವಾಸದ ಕಾರಣಕ್ಕೆ ಈ ಮಹಿಳೆಯರನ್ನು ದೂರವಿಡಲಾಗುತ್ತದೆ. ಅವರ ನೆರಳು, ದೃಷ್ಟಿ ಇತರರಿಗೆ ತಾಗಿದರೆ ಕೆಡುಕಾಗುತ್ತದೆ ಎಂಬ ಅಪನಂಬಿಕೆಯಿದೆ.

ಈ ರೀತಿ ಪತಿಯನ್ನು ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರವಿದ್ಧರೂ ಅದು ಕೈಗೆಟುಕದ ಹೊಳೆಯುವ ನಕ್ಷತ್ರ. ಒಂದು ವೇಳೆ ಈ ಮಹಿಳೆಯರ ಪತಿಯಂದಿರು “ಬಫರ್ ಝೋನ್” ಅಥವಾ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದ್ದರೆ, ಸರ್ಕಾರದಿಂದ ಯಾವುದೇ ಪರಿಹಾರ ಸಿಗಲ್ಲ. ಈ ಸಂದರ್ಭದಲ್ಲಿ ಮಹಿಳೆ ಸಾಮಾಜಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ರಾಜಕೀಯ ಪಕ್ಷಗಳು ಈ ಮಹಿಳೆಯರನ್ನು ಮತಬ್ಯಾಂಕ್ ಆಗಿ ನೋಡಿದರೆ, ಇತ್ತ ಸಮಾಜವು ತನ್ನ ‘ಪತಿಯನ್ನೇ ತಿಂದವಳು’ ಎಂಬ ಕ್ರೂರ ಹಣೆಪಟ್ಟಿಯೊಂದಿಗೆ ನೋಡುತ್ತದೆ. ರಾಜಕೀಯ ಪಕ್ಷಗಳು ಈ ಸಾಮಾಜಿಕ ಪಿಡುಗಿನ ವಿರುದ್ಧ ಧ್ವನಿ ಎತ್ತದೆ, ಮತ ಸೆಳೆಯಲು ಕೇವಲ ಆರ್ಥಿಕ ಭರವಸೆಗಳನ್ನಷ್ಟೇ ನೀಡುತ್ತಾ ಬಂದಿದೆ.

ಚುನಾವಣೆ ವೇಳೆ ನೆನಪಾಗುವ ವ್ಯಾಘ್ರ ವಿಧವೆಯರು

ಪಶ್ಚಿಮ ಬಂಗಾಳದ ವಿಶೇಷವಾಗಿ ದಕ್ಷಿಣ 24 ಪರಗಣ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಘ್ರ ವಿಧವೆಯರ ಸಂಖ್ಯೆ ಗಣನೀಯವಾಗಿದೆ. ಚುನಾವಣೆಯ ದಿನಾಂಕಗಳು ಘೋಷಣೆಯಾಗುತ್ತಿದ್ದಂತೆ, ಈ ಸುಂದರಬನದ ನದಿಪಾತ್ರದ ಹಳ್ಳಿಗಳಿಗೆ ರಾಜಕೀಯ ನಾಯಕರ ದಂಡು ಹರಿದುಬರುತ್ತದೆ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಈ ಮಹಿಳೆಯರ ಮೇಲೆ ಮರುಕ ಹುಟ್ಟುತ್ತದೆ. ವ್ಯಾಘ್ರ ವಿಧವೆಯರಿಗೆ ವಿಶೇಷ ಪಿಂಚಣಿ, ಅವರ ಮಕ್ಕಳಿಗೆ ಉಚಿತ ಶಿಕ್ಷಣ, ಅಧಿಕೃತವಾಗಿ ಮರಣ ಪ್ರಮಾಣಪತ್ರ ವಿತರಣೆ- ಹೀಗೆ ಭರವಸೆಗಳು ಪ್ರತಿ ಚುನಾವಣೆಯಲ್ಲೂ ಪುನರಾವರ್ತನೆಯಾಗುತ್ತವೆ. ಆದರೆ ಚುನಾವಣೆಯ ನಂತರ ಈ ಮಹಿಳೆಯರ ಬದುಕು ಮತ್ತೆ ಹಳೆಯ ಸ್ಥಿತಿಗೆ ಮರಳುತ್ತದೆ.

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ SIR | ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಶಿಕ್ಷಕನ ಹೆಸರೇ ಮಾಯ

ಕಾಡುಪ್ರಾಣಿಗಳ ದಾಳಿಯಿಂದ ಸತ್ತವರಿಗೆ ನೀಡುವ ₹5 ಲಕ್ಷ ಪರಿಹಾರ ಪಡೆಯಲು ಇಂದಿಗೂ ಹರಸಾಹಸ ಪಡಬೇಕಿದೆ. ಸರ್ಕಾರಿ ದಾಖಲೆಗಳಲ್ಲಿ ಇಂದಿಗೂ ಸಾವಿರಾರು ಮಹಿಳೆಯರು ವಿಧವೆಯರೆಂದು ಗುರುತಿಸಲ್ಪಟ್ಟಿಲ್ಲ. ಪತಿ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಮೃತಪಟ್ಟರೆ, ಆಕೆಗೆ ಯಾವುದೇ ಪರಿಹಾರ ನೀಡದೆ ಕೈ ತೊಳೆದುಕೊಳ್ಳುವ ವ್ಯವಸ್ಥೆ ಚುನಾವಣಾ ಸಮಯದಲ್ಲಿ ಮಾತ್ರ “ಪರಿಹಾರದ ಭರವಸೆ”ಯನ್ನು ನೀಡುತ್ತಾ ಮನೆ ಬಾಗಿಲಿಗೆ ಬಂದು ತಲುಪುತ್ತಿವೆ. ಆದರೆ ಪರಿಹಾರ ಮಾತ್ರ ಈ ಮಹಿಳೆಯರ ಕೈ ಸೇರಿಸುವುದು ದುಷ್ಕರ.

ಆದರೂ ಸುಂದರಬನಗಳ ಗೋಸಾಬಾ, ಬಾಸಂತಿ ಮತ್ತು ಕುಲ್ತಲಿಯಂತಹ ಭಾಗಗಳಲ್ಲಿ ವ್ಯಾಘ್ರ ವಿಧವೆಯರ ಮತಗಳು ನಿರ್ಣಾಯಕ. ಸುಂದರಬನದಲ್ಲಿ ಸುಮಾರು 3,000ಕ್ಕೂ ಹೆಚ್ಚು ಮಹಿಳೆಯರು ತಮ್ಮ ಪತಿಯನ್ನು ಹುಲಿ ದಾಳಿಯಲ್ಲಿ ಕಳೆದುಕೊಂಡಿದ್ದಾರೆ. ಈ ಕುಟುಂಬಗಳ ಸದಸ್ಯರು ಈಗ ದೊಡ್ಡ ಮತಬ್ಯಾಂಕ್ ಆಗಿ ರೂಪಗೊಂಡಿದ್ದಾರೆ. ಈ ಮಹಿಳೆಯರು ಈಗ ‘ಸುಂದರಬನ್ ಬ್ಯಾಗ್ರ ಬಿಧೋಬಾ ಸಮಿತಿ‘ ಅಡಿಯಲ್ಲಿ ಸಂಘಟಿತರಾಗುತ್ತಿದ್ದು, ತಮ್ಮ ಹಕ್ಕುಗಳಿಗಾಗಿ ಅಭ್ಯರ್ಥಿಗಳ ಮುಂದೆ ಬೇಡಿಕೆಗಳನ್ನು ಇಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ.

ಹೀಗೆ ಚುನಾವಣೆ ಎಂಬುದು ಒಂದು ಜಾತ್ರೆಯಂತೆ ಐದು ವರ್ಷಕ್ಕೊಮ್ಮೆ ಬಂದು ಹೋಗುತ್ತದೆ. ನಾಯಕರು ಬಂದು ಹೋಗುತ್ತಾರೆ. ಮಾಧ್ಯಮಗಳ ಕ್ಯಾಮೆರಾಗಳೂ ನಾಯಕರುಗಳನ್ನು ಹಿಂಬಾಳಿಸುತ್ತದೆ. ಇವೆಲ್ಲ ಮುಗಿದ ಮೇಲೆ ಈ ವ್ಯಾಘ್ರ ವಿಧವೆಯರು ಮತ್ತೆ ಅದೇ ದಟ್ಟ ಕಾಡಿನ ಅಂಚಿನಲ್ಲಿ, ಅದೇ ಜೀವನ ಸಂಕಷ್ಟಗಳೊಂದಿಗೆ ಜೀವನ ದೂಡಬೇಕಾಗುತ್ತದೆ. ಸರ್ಕಾರವು ವ್ಯಾಘ್ರ ವಿಧವೆಯರಿಗೆ ಬರೀ ಚುನಾವಣೆಯಲ್ಲಿ ‘ಅರಳುವ ಹೂವು’ಗಳಾಗಿ ಕಾಣದೆ, ಬದುಕಿನ ಉದ್ದಕ್ಕೂ ಆಸರೆಯಾಗುವ ಗಟ್ಟಿಯಾದ ಬೇರುಗಳಾಗಬೇಕಿದೆ. ಸರ್ಕಾರ ಸಮಾಜದ ಅಂಧವಿಶ್ವಾಸದ ವಿರುದ್ಧ ಧ್ವನಿ ಎತ್ತುವ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಹೆಚ್ಚಿಸಬೇಕಿದೆ. ಜತೆಗೆ ಈ ಮಹಿಳೆಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವತ್ತ ಗಮನಹರಿಸುವವರೆಗೂ ಈ ಮಹಿಳೆಯರ ಬದುಕು ಹಸಿವು ಮತ್ತು ಹುಲಿಗಳ ನಡುವಿನ ನಿರಂತರ ಜೂಜಾಟವಾಗಿಯೇ ಉಳಿಯುವುದು ಖಚಿತ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೆಜಿಲ್ ಗಡಿ ದಾಟಿದ ಗೆಲುವು: ಜನತಂತ್ರಕ್ಕೆ ಆಶಾಕಿರಣವಾದ ಲುಲಾ, ಆದರೆ ಅಳಿಸಿಲ್ಲ ಬಲಪಂಥದ ಹೆಜ್ಜೆಗುರುತು

ಲ್ಯಾಟಿನ್ ಅಮೆರಿಕದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...