ಲೋಹಿಯಾರ ದೃಷ್ಟಿಯಲ್ಲಿ ಶಿವ

Date:

ಶಿವನ ಜೀವಿತದ ಮಹತ್ ಘಟನೆಗಳಲ್ಲಿ ಒಂದು, ಸತಿಯ ಮರಣಾನಂತರ ಆತನ ದೈತ್ಯಶೋಕ. ಸತಿಯ ಕಳೇವರವನ್ನು ಬೆನ್ನಿಗೂ, ಹೆಗಲಿಗೂ ಚೆಲ್ಲಿಕೊಂಡು ಆತ ಇಡೀ ದೇಶದ ಒಳಗೂ, ಸುತ್ತಲೂ ಧಾವಂತ ಸುತ್ತಿದ. ಈ ಧಾವಂತದಲ್ಲಿ ಸತಿಯ ದೇಹದ ಅಂಗಾಂಗಳು ಒಂದೊಂದೇ ಕಳಚಿ ಬೀಳುತ್ತಿದ್ದವು. ಕೊನೆಯ ಚೂರು ಉದುರುವ ತನಕವೂ ಶಿವ ನಿಲ್ಲಲಿಲ್ಲ. ತೀಕ್ಷ್ಣವೂ, ನಿಸ್ಸಂಕೋಚವೂ ಆದ ಮೈತ್ರಿಯ ಇಂಥ ಅವಧೂತ ಕಥೆಯನ್ನು ಯಾವ ಪ್ರೇಮಿಯೂ ಉಳಿಸಿಹೋಗಿಲ್ಲ- ದೇವಾನುದೇವತೆಗಳಲ್ಲಾಗಲಿ, ದೈತ್ಯರಲ್ಲಾಗಲಿ, ಮನುಷ್ಯರಾಗಲಿ. ಅದಷ್ಟೇ ಅಲ್ಲ, ಈ ಕಥೆ ಇಂಡಿಯಾದ ಕ್ಷಯವಿಲ್ಲದಂಥ ಅಂತಃಸ್ಫೂರ್ತವಾದ ಏಕತೆಯ ಕಥೆಯನ್ನು ಹೇಳುತ್ತದೆ.

- Advertisement -

ಸತಿಯ ಒಂದೊಂದು ಅಂಗ ಕೆಳಗೆ ಬಿದ್ದಲ್ಲೂ ಒಂದೊಂದು ಯಾತ್ರಾಸ್ಥಳ ಕಲ್ಪಿತವಾಗಿದೆ. ಮಾಣಿಕ್ಯ ಮುಡಿದ ಆಕೆಯ ಕಿವಿ ವಾರಣಾಸಿಯಲ್ಲಿ ಬಿತ್ತು. ಅದು ಮಣಿಕರ್ಣಿಕಾ ಎನ್ನಿಸಿಕೊಂಡಿತು. ಇವೊತ್ತಿಗೂ, ಸತ್ತವರನ್ನು ಅಲ್ಲಿ ಸುಟ್ಟರೆ, ಅವರಿಗೆ ನಿಸ್ಸಂಶಯ ಮುಕ್ತಿ ದೊರೆಯುತ್ತದೆ ಎಂದು ತಿಳಿಯಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಭಾರತದ ಉತ್ತರದ ತುದಿಯಲ್ಲಿ ದೂರಕ್ಕಿರುವ ಕಾಮರೂಪದಲ್ಲಿ ಆಕೆಯ ಭಿನ್ನಮುಂಡ ಬಿದ್ದಿತಂತೆ. ನೂರಾರು ಪೀಳಿಗೆಗಳು ಬಂದು ಹೋಗಿದ್ದರೂ ಈಗಲೂ ಅದರ ಮಾಂತ್ರಿಕತೆ ಅಳಿದಿಲ್ಲ. ಈಗ ಕೂಡ ಮನೆಯೊಳಗಿನ ಅಜ್ಜಿಯರು ಕಾಮರೂಪದ ಸ್ತ್ರೀಯರ ಬಗೆಗೆ ಮಕ್ಕಳಿಗೆ ಎಚ್ಚರ ಹೇಳುತ್ತಾರೆ, ಅವರು ತಮ್ಮ ಗಂಡಸರನ್ನು ಪಳಗಿದ ಕೋಣವಾಗಿಸಿಬಿಡುತ್ತಾರೆ ಎಂದು….

ಶಿವ- ತಾತ್ಕ್ಷಣಿಕ ಸಿದ್ಧಾಂತಕ್ಕೆ ಸಾಕಾರನಾಗಿದ್ದಾನೆ. ಅವನ ಪ್ರತಿಯೊಂದು ಕೃತಿಯೂ ತತ್ಕ್ಷಣದಲ್ಲೆ ತನ್ನನ್ನು ಸಮರ್ಥಿಸಿಕೊಳ್ಳುವಂಥದು; ಅದಕ್ಕಾಗಿ ಹಿಂದಿನ ಅಥವಾ ಮುಂದಿನ ಕಾರ್ಯಕಾರಣಗಳನ್ನು ಕೆದಕಬೇಕಾಗಿಲ್ಲ. ಗಾತ್ರಾತೀತವಾದ ಈ ವ್ಯಕ್ತಿತ್ವ, ತಾತ್ಕ್ಷಣಿಕತೆಯ ಈ ಮಹತ್ ಪುರಾಣ ತತ್ವಜಗತ್ತಿಗೆ ಮತ್ತೂ ಎರಡು ದರ್ಶನವೈಭವಗಳನ್ನು ಕೊಟ್ಟಿದೆ.

ಈ ಲೇಖನ ಓದಿದ್ದೀರಾ?: ‘ಮೊಹಮ್ಮದ್ ದೀಪಕ್’ ವಿರುದ್ಧ ಕೆರಳಿದ ಹಿಂದುತ್ವ ಮತಾಂಧರು; ಜಿಮ್‌ ಸದಸ್ಯತ್ವ ಪಡೆದು ಬೆಂಬಲಿಸಿದ ಸಹೃದಯಿಗಳು

ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಥನ ಮಾಡಿದಾಗ, ಅಮೃತ ಬರುವ ಮೊದಲೇ ವಿಷ ಹೊರಟಿತು. ಈ ವಿಷವನ್ನು ಯಾರಾದರೂ ಕುಡಿದು ಮುಗಿಸಬೇಕಾಗಿತ್ತು. ಈ ಹಿಂದೆ ನಡೆದ ದೇವ-ರಾಕ್ಷಸ ಯುದ್ಧಗಳಲ್ಲಾಗಲಿ, ಸಮುದ್ರಮಂಥನದ ಸಾಹಸಲ್ಲಾಗಲಿ ಶಿವ ಪಾಲುಗೊಂಡವನಲ್ಲ. ಹಾಗಿದ್ದೂ, ಅವನು ಹುಟ್ಟಿದ ವಿಷವನ್ನು ಹೀರಿ ಕಥೆ ಮುಂದುವರಿಯುವಂತೆ ಮಾಡಿದ. ಕುಡಿದ ವಿಷವನ್ನು ಗಂಟಲಲ್ಲೆ ನಿಲ್ಲಿಸಿಕೊಂಡು ಅಲ್ಲಿಂದ ಮುಂದೆ ನೀಲಕಂಠ ಎಂದು ಹೆಸರಾದ.

ಶಿವತತ್ವದ ಇನ್ನೊಂದು ದರ್ಶನ- ಎಲ್ಲ ಕಾಲಕ್ಕೂ, ಎಲ್ಲ ಹೊತ್ತಿನಲ್ಲೂ ಪೂಜಾರ್ಹವಾದದ್ದು. ಒಮ್ಮೆ ಯಾವನೋ ಭಕ್ತ ಶಿವನ ಜೊತೆಯಲ್ಲಿ ಪಾರ್ವತಿಗೂ ಪೂಜೆ ಸಲ್ಲಿಸಲು ನಿರಾಕರಿಸಿದಾಗ ಶಿವ ಅರ್ಧನಾರೀಶ್ವರನಾಗಿ ನಿಂತ; ದೇಹಾರ್ಧ ತಾನಾಗಿ, ಮತ್ತೊಂದರ್ಧ ಪಾರ್ವತಿಯಾಗಿ ಪೂಜೆಗೊಂಡ. ಈ ಚಿತ್ರವನ್ನು ಅಡಿತನಕ ವಿವರವಿವರವಾಗಿ ಇಡೀ ಕಲ್ಪಿಸಿಕೊಳ್ಳಲು ಯತ್ನಿಸಿ ತುಂಬ ಕಷ್ಟವಾಗಿದೆ ನನಗೆ, ಅನೇಕ ಸಲ. ಆದರೆ ಈ ದರ್ಶನ ಮಾತ್ರ ತುಂಬ ಸುಂದರವಾದದ್ದು.”

-ರಾಮಮನೋಹರ ಲೋಹಿಯಾ
ಉಲ್ಲೇಖ: -‘ರಾಮ, ಕೃಷ್ಣ, ಶಿವ’ (ಲೇಖನದಲ್ಲಿ, ಜುಲೈ, 1956, ‘ಇಂಟರ್ವಲ್ ಡ್ಯೂರಿಂಗ್ ಪಾಲಿಟಿಕ್ಸ್’ ಪುಸ್ತಕ)
ಕನ್ನಡಕ್ಕೆ: -ಕೆ.ವಿ. ಸುಬ್ಬಣ್ಣ
ಕೃಪೆ: -‘ರಾಜಕೀಯದ ಮಧ್ಯೆ ಬಿಡುವು’ (ರಾಮಮನೋಹರ ಲೋಹಿಯಾ ಪುಸ್ತಕ ಮಾಲಿಕೆ-2, ಪುಟ: 59 & 62-63, 2022)
ಸಂಪಾದಕರು: -ನಟರಾಜ್ ಹುಳಿಯಾರ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ ಮಾದರಿ

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ,...