ಪಂಚಮಸಾಲಿ ಪೀಠಗಳ ಗೊಂದಲ-ಭಾಗ 14 | ಪ್ರಥಮ ಮಠಾಧೀಶೆ ಮಾತೆ ಮಹಾದೇವಿ

Date:

ಲಿಂಗಾನಂದ ಸ್ವಾಮಿಗಳು ಬರುವ ಮೊದಲು ಯಾವ ವಿರಕ್ತ ಮಠಗಳಿಗೂ ಮಹಿಳಾ ಮಠಾಧೀಶರಾಗಿರಲಿಲ್ಲ. ಮಾತೆ ಮಹಾದೇವಿಯವರನ್ನು ಪ್ರಥಮ ಮಹಿಳಾ ಜಗದ್ಗುರು ಮಾಡಿ ಲಿಂಗಾನಂದ ಸ್ವಾಮಿಗಳು ಪರಂಪರಾಗತ ಜಾತಿ, ಹಾಗು ಲಿಂಗ ಕೇಂದ್ರಿತ ವ್ಯವಸ್ಥೆಯ ಸ್ಥಾಪಿತ ಕಟ್ಟುಪಾಡನ್ನು ಮುರಿದರು. ಲಿಂಗಾಯತರು ಅನ್ಯ ಧರ್ಮೀಯರಂತೆ ಧಾರ್ಮಿಕ ಆಚರಣೆಗಳು ರೂಪಿಸಿಕೊಳ್ಳಲು ನಾಡಿನ ಮೂಲೆ ಮೂಲೆಗಳಲ್ಲಿ ಬಸವ ಮಂಟಪಗಳು ತಲೆ ಎತ್ತಿ ವಾರದ ಪ್ರಾರ್ಥನೆಗಳ ಹೊಸ ಪದ್ದತಿ ಆರಂಭಗೊಂಡಿತು.

- Advertisement -

ಲಿಂಗಾನಂದ ಸ್ವಾಮಿಗಳ ವರ್ಚಸ್ಸು, ಹಾಗು ಬಸವ ತತ್ವದ ಮೇಲೆ ಅವರು ಮಾಡುವ ಪ್ರವಚನದ ವಿಶಿಷ್ಟ ವೈಖರಿ ನಾಡಿನಾದ್ಯಂತ ಹಾಗು ಹೊರ ರಾಜ್ಯಗಳ ಜನರ ಮೇಲೆ ಗಾಢ ಪ್ರಭಾವ ಬೀರಿತು. ಇದು ಪಂಚಪೀಠಗಳ ವೀರಶೈವ ಜಾತಿ ಜಂಗಮರನ್ನು ಕಂಗಾಲಾಗಿಸಿತು‌. ಲಿಂಗಾನಂದ ಸ್ವಾಮಿಗಳಿಗೆ ಅಪಾರ ಸಂಖ್ಯೆಯ ಭಕ್ತ ಬಳಗ ಬೆಳೆಯಲಾರಂಭಿಸಿತು. ಸ್ವಾಮಿಗಳಿಗೆ ಸರಿಸಮನಾಗಿ ಬಸವ ತತ್ವ ಪ್ರಚಾರ ಮಾಡುತ್ತಿದ್ದ ಪ್ರತಿಭೆಯುಳ್ಳ ಮಾತೆ ಮಹಾದೇವಿ ಶಿಷ್ಯೆಯಾಗಿ ಸಿಕ್ಕರು. ಇಬ್ಬರು ಜಂಟಿಯಾಗಿ ಬಸವ ರಥ ಎಳೆಯಲಾರಂಭಿಸಿದರು. ಮಾತೆ ಕೂಡ ಜಂಗಮೇತರ ವರ್ಗದ ಲಿಂಗಾಯತ ಗಾಣಿಗ ಉಪವರ್ಗಕ್ಕೆ ಸೇರಿದವರಾಗಿದ್ದರು. ಲಿಂಗಾನಂದ ಸ್ವಾಮಿಗಳು ಬರುವ ಮೊದಲು ಯಾವ ವಿರಕ್ತ ಮಠಗಳಿಗೂ ಮಹಿಳಾ ಮಠಾಧೀಶರಾಗಿರಲಿಲ್ಲ. ಮಾತೆ ಮಹಾದೇವಿಯವರನ್ನು ಪ್ರಥಮ ಮಹಿಳಾ ಜಗದ್ಗುರು ಮಾಡಿ ಲಿಂಗಾನಂದ ಸ್ವಾಮಿಗಳು ಪರಂಪರಾಗತ ಜಾತಿ, ಹಾಗು ಲಿಂಗ ಕೇಂದ್ರಿತ ವ್ಯವಸ್ಥೆಯ ಸ್ಥಾಪಿತ ಕಟ್ಟುಪಾಡನ್ನು ಮುರಿದರು. ಲಿಂಗಾಯತರು ಅನ್ಯ ಧರ್ಮೀಯರಂತೆ ಧಾರ್ಮಿಕ ಆಚರಣೆಗಳು ರೂಪಿಸಿಕೊಳ್ಳಲು ನಾಡಿನ ಮೂಲೆ ಮೂಲೆಗಳಲ್ಲಿ ಬಸವ ಮಂಟಪಗಳು ತಲೆ ಎತ್ತಿ ವಾರದ ಪ್ರಾರ್ಥನೆಗಳ ಹೊಸ ಪದ್ದತಿ ಆರಂಭಗೊಂಡಿತು. ಲಿಂಗಾಯತರೆಲ್ಲರನ್ನು ಒಂದೆಡೆಗೆ ಸೇರಿಸಲು ೧೯೮೮ ರಲ್ಲಿ ಶರಣ ಮೇಳ ಎನ್ನುವ ಒಂದು ವಿನೂತನ ಕಾರ್ಯಕ್ರಮ ಆರಂಭಿಸಲಾಯಿತು. ಲಿಂಗಾಯತರು ಮರೆತು ಹೋಗಿದ್ದ ಕೂಡಲಸಂಗಮ ಕ್ಷೇತ್ರವು ಮುನ್ನೆಲೆಗೆ ಬಂತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಶರಣ ಮೇಳ ಆರಂಭ ಆಗುವಾಗ ಜಾತಿವಾದಿ ವೀರಶೈವ ಪಂಚಪೀಠಿಗಳು ಗಲಾಟೆ ಮಾಡಿಸಿದರು, ಕಲ್ಲೆಸೆಯಲು ಹಚ್ಚಿದರು, ಶರಣ ಮೇಳ ಆಗಲು ಬಿಡುವುದಿಲ್ಲ ಎಂದು ಹತಾಶರಾಗಿ ಅರಚಿದರು, ಆದರೆ ಶರಣ ಮೇಳ ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಯಿತು. ಇಂದಿಗೂ ಶರಣ ಮೇಳ ಅನುಚ್ಛಾನವಾಗಿ ನಡೆಯುತ್ತ ಬರುತ್ತಿದೆ. ಲಿಂಗಾನಂದ ಸ್ವಾಮಿಗಳು ಬಸವ ತತ್ವ ಪ್ರಚಾರ ಮಾಡದಂತೆ ತಡೆಯಲಾಯಿತು, ಅಡ್ಡಿಪಡಿಸಲಾಯಿತ. ಅದಾವುದನ್ನು ಜನರು ಗಂಭೀರವಾಗಿ ತೆಗೆದುಕೊಳ್ಳದೆ ಬಸವ ತತ್ವ ಹೆಚ್ಚಿನ ಪ್ರಮಾಣದಲ್ಲಿ ಮನೆ ಮನೆಗೆ ತಲುಪಿತು. ಲಿಂಗಾನಂದ ಸ್ವಾಮಿಗಳ ಆಗಮನದ ನಂತರ ಲಿಂಗಾಯತರ ಮನೆಯಲ್ಲಿ ಮ್ಯೂಸಿಯಂ ಆಗಿದ್ದ ಪೂಜಾ ಕೋಣೆಗಳು ಖಾಲಿಯಾದವು, ಜಗುಲಿ ಝಳಝಳವಾಗಿ ಇಷ್ಟಲಿಂಗ ನಿಷ್ಠೆಯ ಮುಖೇನ ಏಕದೇವೋಪಾಸನೆ ವ್ಯಾಪಕವಾಗಿ ಮೊದಲ್ಗೊಂಡಿತು. ಪಂಚಪೀಠಗಳ ಜಾತಿ ಜಂಗಮರು ಇದ್ಯಾವುದನ್ನು ತಡೆಯಲಾಗದಿದ್ದಾಗ ಲಿಂಗಾನಂದ ಸ್ವಾಮಿಗಳು ಹಾಗು ಮಾತೆಯ ಕುರಿತು ಸುಳ್ಳು ಸುದ್ದಿ ಹರಡುವ ಮತ್ತು ಅಪಪ್ರಚಾರದ ಕ್ಷುಲ್ಲಕ ಕೃತ್ಯಗಳು ಆರಂಭಿಸಿದರು. ಅಷ್ಟೆ ಅಲ್ಲದೆ ಅನೇಕ ಸ್ವಾಭಿಮಾನಿ, ಸಂವೇದನಾಶೀಲ ಶರಣ ಜಂಗಮರು ಲಿಂಗಾನಂದ ಸ್ವಾಮಿ ಹಾಗು ಮಾತೆಯ ಭಕ್ತರಾಗಿ ಬಸವ ತತ್ವ ಅನುಸರಿಸಿದರು. ಇದು ಬಸವ ತತ್ವದಲ್ಲಿರುವ ವಿರಾಟ ಶಕ್ತಿಯ ಉಗಮಕ್ಕೆ ಕಾರಣವಾಯಿತು.

ಲಿಂಗಾನಂದ ಸ್ವಾಮಿಗಳ ಕಾರ್ಯದಿಂದ ಭಯಭೀತರಾದ ಕೆಲವು ವಿರಕ್ತ ಜಂಗಮರು ಅವರು ಕಟ್ಟಿದ ರಾಷ್ಟ್ರೀಯ ಬಸವ ದಳಕ್ಕೆ ಪರ್ಯಾಯವಾಗಿ ಅಂತಹುದೆ ಸಂಸ್ಥೆಗಳನ್ನು ಕಟ್ಟಿದರು. ಒಟ್ಟಾರೆ, ಬಸವ ತತ್ವ ಪ್ರಚಾರ, ಪ್ರಸಾರವನ್ನೇ ಮರೆತಿದ್ದ ವಿರಕ್ತ ಮಠಾಧೀಶರಿಗೆ ಕಾಟಾಚಾರಕ್ಕೆ ಬಸವ ತತ್ವ ಪ್ರಚಾರ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಇಲ್ಲದಿದ್ದರೆ ಲಿಂಗಾನಂದ ಸ್ವಾಮಿಗಳ ಜನಪ್ರಿಯತೆಯ ರಭಸಕ್ಕೆ ಅವರು ಕೊಚ್ಚಿಕೊಂಡು ಹೋಗುವ ಭಯ ಅವರನ್ನು ಆವರಿಸಿತ್ತು. ಲಿಂಗಾನಂದ ಸ್ವಾಮಿಗಳ ಪ್ರಭಾವದಿಂದ ಜಂಗಮೇತರ ಹಾಗು ಲಿಂಗಾಯತೇತರ ವಿರಕ್ತ ಸಾಧಕರು ಲಿಂಗಾಯತದೊಳಗೆ ಪ್ರವೇಶಿಸಿದರು. ಲಿಂಗಾನಂದ ಸ್ವಾಮಿಗಳ ಈ ಏಟಿಗೆ ಎದುರೇಟು ಕೊಡಲು ಮಧ್ಯ ಕರ್ನಾಟಕದಲ್ಲಿ ಅಸ್ಪ್ರಶ್ಯ ಹಾಗು ಹಿಂದುಳಿದ ಲಿಂಗಾಯತ ಉಪ ವರ್ಗಗಳ ಪೀಠಗಳು ತಲೆ ಎತ್ತಿದವು. ಆ ದಮನಿತ ವರ್ಗಗಳಿಗೆ ತಮ್ಮ ಪ್ರತಿಷ್ಠಿತ ಮಠಗಳ ಶಾಖಾ ಮಠಗಳಿಗೆ ಪೀಠಾಧಿಪತಿಗಳಾಗಿ ನೇಮಿಸದೆ ಪ್ರತ್ಯೇಕ ಜಾತಿ ಪೀಠಗಳು ಮಾಡಿದ್ದರ ಹಿಂದಿನ ಉದ್ದೇಶ ಸರಿಯಾಗಿರಲಿಲ್ಲ. ಆ ಪೀಠಗಳ ವಿರಕ್ತರಿಗೆ ಸರಿಯಾಗಿ ನಡೆಸಿಕೊಳ್ಳುವಲಿಲ್ಲ, ಆ ಕಾರಣದಿಂದ ಅವರೆಲ್ಲಾ ಬೇಸತ್ತು ಬ್ರಾಹ್ಮಣವಾದಿ ಹಿಂದುತ್ವ ಸಂಘ-ಟನೆಗಳ ಕಡೆ ಮುಖ ಮಾಡಿದರು. “ತಾನೂ ಹಡ್ಸಿ, ನೆರೆ ಮನೆ ಕೆಡಿಸಿ” ಎನ್ನುವ ಉತ್ತರ ಕರ್ನಾಟಕದ ಜನಪ್ರಿಯ ನಾಣ್ನುಡಿಯಂತೆ ಬ್ರಾಹ್ಮಣವಾದಿ ಹಿಂದುತ್ವದ ಸಂಘ-ಟನೆಗಳು ಈ ಜಾತಿ ಪೀಠಸ್ಥರಿಗೆ ಗಾಳ ಹಾಕುವಲ್ಲಿ ಯಶ ಕಂಡವು. ಬ್ರಾಹ್ಮಣವಾದಿ ಸಂಘ-ಟನೆಯ ಸಂಗ ಮಾಡಿದವರು “ಸಿಂಬಳದಲ್ಲಿ ಸಿಲುಕಿದ” ನೊಣದಂತಾದರು.

ಲಿಂಗಾನಂದ ಸ್ವಾಮಿಗಳು ಜಂಗಮೇತರರು ಹಾಗು ಮಹಿಳೆಯರು ಮಠಾಧೀಶರಾಗಬಹುದು ಎನ್ನುವುದು ತೋರಿಸುವ ಮೂಲಕ ಎಲ್ಲಾ ಜಾತಿಯ ಸಾಧಕರನ್ನು ಜಂಗಮೂರ್ತಿಗಳಾಗಿಸಿ ಬಸವ ಪಥ ಗಟ್ಟಿಗೊಳಿಸಿದರೆ, ಲಿಂಗಾನಂದ ಸ್ವಾಮಿಗಳಿಗೆ ಕೌಂಟರ್ ಮಾಡಲು ಹೋದವರು ದಮನಿತ ವರ್ಗದ ಸಾಧಕರಿಗೆ ಪ್ರತ್ಯೇಕ ಜಾತಿ ಪೀಠಗಳು ಮಾಡುವ ಮೂಲಕ ಶೋಷಿಸಿ ಅವರನ್ನು ಬಸವ ಪಥದಿಂದ ವಿಮುಖಗೊಳಿಸಿದರು. ಆ ಮೂಲಕ ಲಿಂಗಾನಂದ ಸ್ವಾಮಿಗಳು ಕಟ್ಟಿದ ನೈಜ ಲಿಂಗಾಯತ ಮಹಾಮಾರ್ಗವನ್ನು ವಿಘಟಿಸಿ ಲಿಂಗಾಯತ ಧರ್ಮದ ಅಸಲಿ ಶತೃಗಳಾದ ಬ್ರಾಹ್ಮಣವಾದಿ ಸಂಘ-ಟನೆಗಳ ಕೈ ಪರೋಕ್ಷವಾಗಿ ಬಲಪಡಿಸಿದರು. ಇನ್ನು ವೀರಶೈವ ಪಂಚಪೀಗಳ ಜಾತಿ ಜಂಗಮ ಮಠಾಧೀಶರು ಶ್ರೀಮಂತ ಲಿಂಗಾಯತರಿಗೆ ಗಾಳ ಹಾಕುವುದು, ದೊಡ್ಡ ಮೊತ್ತದ ದೇಣಿಗೆ ಪಡೆಯುವುದು, ತಮ್ಮ ಶಾಖಾ ಮಠಗಳ ಮಠಾಧೀಶರಿಂದ ಕಾಣಿಕೆ ವಸೂಲಿ ಮಾಡುವುದು, ಪೂಜಾ, ಪ್ರಸಾದ, ಪಲ್ಲಕ್ಕಿ, ಪಲ್ಲಂಗಗಳ ವ್ಯಾಪ್ತಿಯ ಆಚೆಗೆ ಬಾರದೆ, ಇಡೀ ಸಮುದಾಯದ ಹಿತಾಸಕ್ತಿಯ ಕಾರ್ಯವನ್ನೆ ಮರೆತರು, ಅವರು ಈಗಲೂ ಹಾಗೆಯೇ ಇದ್ದಾರೆ. ಲಿಂಗಾನಂದ ಸ್ವಾಮಿಗಳು ಜಾತಿ ಜಂಗಮರ ಯಾವ ಕಿರುಕುಳವನ್ನೂ ಲೆಕ್ಕಿಸದೆ ಬಸವ ತತ್ವ ಬಿತ್ತುವಲ್ಲಿ ಯಶಸ್ಸು ಕಂಡರು. ಆದರೆ ಸಿದ್ಧಾರೂಢ ಮುಂತಾದವರಂತೆ ಜಾತಿ ಜಂಗಮರ ಕಿರುಕುಳಕ್ಕೆ ಹೆದರಿ ಬಸವ ತತ್ವ ಬಿಟ್ಟು ಪಲಾಯನ ಮಾಡಿ ಬೇರೊಂದು ಮಾರ್ಗ ಹಿಡಿಯುವಷ್ಟು ಅವರು ದುರ್ಬಲವಾಗಿರಲಿಲ್ಲ ಎನ್ನುವುದು ಹೆಮ್ಮೆಯ ವಿಷಯ.

WhatsApp Image 2026 06 08 at 11.40.07 AM
ಲಿಂಗಾನಂದ ಸ್ವಾಮಿ

ಒಬ್ಬ ಲಿಂಗಾಯತ ವಿರಕ್ತನಿಗೆ ಬಸವ ತತ್ವ ಪ್ರಚಾರ, ಪ್ರಸಾರ, ಹಾಗು ಬಸವ ಮಾರ್ಗವೆ ಅಂತಿಮ ಸತ್ಯ ಎನ್ನುವ ಸಂಗತಿ ಅಕ್ಷರಶಃ ಪಾಲಿಸಿದ ಏಕೈಕ ವ್ಯಕ್ತಿ ಈ ಲಿಂಗಾನಂದ ಸ್ವಾಮಿಗಳು. ಲಿಂಗಾಯತ ಧರ್ಮ ವಿರೋಧಿಗಳು, ಬಸವದ್ವೇಷಿ ವೀರಶೈವ ಜಾತಿ ಜಂಗಮರ ಮಡಿವಂತಿಕೆಯ ನೆಪ ಮಾಡಿಕೊಂಡು ಲಿಂಗಾಯತರಾಗಿ ಹುಟ್ಟಿಯೂ ಲಿಂಗಾಯತ ಮಹಾ ಮಾರ್ಗದಿಂದ ಪಲಾಯನ ಮಾಡಿ, ಗೀತೆ, ವೇದಾಂತ, ಆರೂಢ ಪರಂಪರೆಗೆ ವಲಸೆಹೋದ ಅನೇಕ ಹೇಡಿಗಳು ತುಳಿದ ಮಾರ್ಗವನ್ನು ಲಿಂಗಾನಂದ ಸ್ವಾಮಿಗಳು ತುಳಿಯಲಿಲ್ಲ. ಒಬ್ಬ ಕೃಷಿ ಮೂಲದ ಲಿಂಗಾಯತ ಪಂಚಮಸಾಲಿಯಾಗಿ ಅವರು ಬಸವ ಮಾರ್ಗವನ್ನು ಆರಿಸಿಕೊಂಡು ಬಸವದ್ವೇಷಿ ಜಾತಿ ಜಂಗಮರಿಗೆ ಸವಾಲು ಹಾಕಿ ಬಹು ಎತ್ತರವನ್ನು ತಲುಪಿದರು. ಚಾತುರ್ವರ್ಣ ಪ್ರಣೀತ ಹಿಂದೂ ಬ್ರಾಹ್ಮಣ ಧರ್ಮದ ಗುಲಾಮರಾಗದೆ ವರ್ಣಾತೀತ, ಜಾತ್ಯತೀತ ಮೇರು ಸಂತರಾದರು, ಬಸವಣ್ಣನವರು ಹುಟ್ಟಿದ ವಿಜಯಪುರ ಮಣ್ಣಿಗೆ ಕಿರೀಟಪ್ರಾಯರಾಗಿ ಲಿಂಗೈಕ್ಯರಾದರು. ಲಿಂಗಾನಂದ ಸ್ವಾಮಿಗಳು ಕಟ್ಟಿದ ಪೀಠ ಹಾಗು ಸಂಘಟನೆಯನ್ನು ನಾಶ ಮಾಡಲು ಇವತ್ತಿನ ವರೆಗೆ ಜಾತಿ ಜಂಗಮರ ಪ್ರಯತ್ನ ಮುಂದುವರೆದಿದೆ. ಒಂದು ಕಡೆ ಲಿಂಗಾನಂದ ಸ್ವಾಮಿಗಳು ಕಟ್ಟಿದ ಸಂಘಟನೆಯನ್ನು ನಾಶಮಾಡುವ ವೀರಶೈವ ಜಾತಿ ಜಂಗಮರ ಪ್ರಯತ್ನದ ಮುಂದುವರೆದ ಭಾಗವೇ ಪಂಚಮಸಾಲಿ ಸಂಘಟನೆ ಹಾಗು ಪೀಠಗಳ ವಿಘಟನೆಗೆ ನಡೆಸುತ್ತಿರುವ ಪ್ರಯತ್ನ ಎನ್ನುವುದನ್ನು ನಾವು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು.

ಲಿಂಗಾಯತರಲ್ಲಿ ಬಹುಸಂಖ್ಯಾತರಾಗಿರುವ ಪಂಚಮಸಾಲಿಗಳು ರಾಜಕೀಯವಾಗಿ ಸಂಘಟಿತರಾಗಿಬಾರದು, ಅವರ ಧಾರ್ಮಿಕ ಪೀಠಗಳು ಶಾಸ್ವತವಾಗಿ ನೆಲೆ ಕಂಡುಕೊಳ್ಳಬಾರದು ಎನ್ನುವ ದೂರಾಲೋಚನೆ ಅಥವಾ ದುರಾಲೋಚನೆಯ ಭಾಗವಾಗಿ ಒಂದು ಪೀಠದ ಸ್ವಾಮಿಯ ಹಿಂದೆ ಒಬ್ಬ ಹಿಂದುತ್ವವಾದಿ ರಾಜಕೀಯ ಪುಢಾರಿಯನ್ನು ಹಾಗು ಇನ್ನೊಂದು ಪೀಠದ ಸ್ವಾಮಿಯ ಹಿಂದೆ ಒಬ್ಬ ಹಿಂದುತ್ವವಾದಿ ದುಷ್ಟ ಮತ್ತು ಉಡಾಳ ಕಾವಿ ಪುಡಾರಿಯನ್ನು ಬಿಡಲಾಯಿತು. ಈ ಹುನ್ನಾರವು ಆರಂಭದಲ್ಲಿ ತುಂಬಾ ರಹಸ್ಯವಾಗಿ ನಡೆಯುತ್ತಿತ್ತು. ಈಗ ಅದು ಬಹಿರಂಗವಾಗಿಯೆ ತನ್ನ ಕಾರ್ಯವನ್ನು ಮಾಡುತ್ತಿದೆ. ಅದರ ಪರಿಣಾಮವಾಗಿಯೇ, ಬಸವ ಧರ್ಮವನ್ನು ನಾಶಗೊಳಿಸಲು ನಡೆಯುತ್ತಿರುವ ಬ್ರಾಹ್ಮಣರ ಸಂಘ ಪರಿವಾರ ಹಾಗು ಬಿಜೆಪಿ ಪ್ರಾಯೋಜಿತ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಪಂಚಮಸಾಲಿ ಪೀಠದ ಸ್ವಾಮಿ ರಾಜಾರೋಷದಿಂದ ಭಾಗವಹಿಸುತ್ತಿರುವುದು. ಬೆಳಗಾವಿಯಲ್ಲಿ ಈ ವರ್ಷ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬಸವ ಜಯಂತಿ ಕಾರ್ಯಕ್ರಮಕ್ಕೆ ಕೈವಲ್ಯಾನಂದ (ಸದಾಶಿವಾನಂದ)ನಂತಹ ಕೋಮುವಾದಿ ಹಾಗು ಬಸವದ್ವೇಷಿಯನ್ನು ಅವ್ಹಾನಿಸಲಾಗಿತ್ತು. ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠವೊಂದಕ್ಕೆ ಸಂಘ ಪರಿವಾರ ಹಿನ್ನೆಲೆಯ, ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಕನೇರಿಯ ಕಾಡಸಿದ್ಧನ ನೇರ ಸಂಪರ್ಕದಲ್ಲಿರುವ ಪಂಚಮಸಾಲಿ ವಟುವೊಬ್ಬನನ್ನು ತಂದು ಇಕ್ಕರಿಸಿದ್ದು ಯಾರು ಮತ್ತು ಏತಕ್ಕೆ ಎನ್ನುವ ಕುರಿತು ಗಂಭೀರ ಚಿಂತನೆಗಳು ಆರಂಭವಾಗಬೇಕಿದೆ.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ-ಭಾಗ 13 | ಮಠ ಪರಂಪರೆಯ ಹಿನ್ನೆಲೆ ಇಲ್ಲದ ಬಸವ ತತ್ವ ಪ್ರಚಾರಕ ಲಿಂಗಾನಂದ ಸ್ವಾಮಿ

ಲಿಂಗಾಯತರ ಹಣದಲ್ಲಿ ಕಟ್ಟಲಾಗಿರುವ ಶಿವಯೋಗ ಮಂದಿರ ಇಂದು ಬಸವದ್ವೇಷಿ ವೀರಶೈವ ಜಾತಿ ಜಂಗಮರ ಹಿಡಿತದಲ್ಲಿದೆ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ ವಿರಕ್ತ ಮಠಾಧೀಶರನ್ನು ಶಿವಯೋಗ ಮಂದಿರದ ಶಾಸ್ವತ ಸದಸ್ಯತ್ವಕ್ಕೆ ರಾಜಿನಾಮೆ ಕೇಳುವವರೆಗೆ ಈ ವೀರಶೈವ ಜಾತಿ ಜಂಗಮರು ಧೈರ್ಯ ತೋರಿದ್ದಾರೆ ಎನ್ನುವ ಗುಸು ಗುಸು ಸುದ್ದಿ ಹರಿದಾಡಿವೆ. ಅನೇಕ ವಿರಕ್ತ ಪರಂಪರೆಯ ಮಠಗಳು ಬಸವಣ್ಣನವರ ಹೆಸರನ್ನು ಹೇಳುವುದಿಲ್ಲ, ಇನ್ನು ಕೆಲವು ಮಠಗಳು ಕೋಮುವಾದಿ ಸಂಘಿಗಳ ಹಿಡಿತಕ್ಕೆ ಸೇರಿವೆ. ಬಸವ ತತ್ವ ಪ್ರಚಾರ ಮಾಡುವ ಮಠಗಳನ್ನು ಗುರಿಯಾಗಿಸಿಕೊಂಡು ವೀರಶೈವ ಜಾತಿ ಜಂಗಮ ಹಾಗು ವೈದಿಕ ಶಕ್ತಿಗಳು ಅಪಪ್ರಚಾರ ಮಾಡುತ್ತಿವೆ. ಬಸವ ತತ್ವದ ಮಠಾಧೀಶರ, ಪ್ರಚಾರಕರ, ಮಾಧ್ಯಮಗಳಿಗೆ ಪತ್ರ ಬರೆದು ಬೆದರಿಸುವ ಕುಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ಲಿಂಗಾಯತರಲ್ಲದೆಯೂ ಲಿಂಗಾಯತ ಸಮಾಜದ ಮೇಲೆ ಯಜಮಾನಿಕೆ ಬಯಸುವ ವೀರಶೈವ ಪಂಚಪೀಠಗಳ ಜಾತಿ ಜಂಗಮರು ಲಿಂಗಾಯತ ಸಂಶೋಧಕ ಡಾ. ಕಲ್ಬುರ್ಗಿ ಹಾಗು ಗೌರಿ ಲಂಕೇಶರ ಹತ್ಯೆಯ ವಿರುದ್ಧ ಧ್ವನಿ ಎತ್ತಲಿಲ್ಲ. ಬಿಜೆಪಿ ಬ್ರಾಹ್ಮಣರು ಯಡಿಯೂರಪ್ಪ, ಯತ್ನಾಳ್ ಮುಂತಾದವರನ್ನು ಪರಸ್ಪರ ಕಿತ್ತಾಡಲು ಹಚ್ಚಿ ಈರ್ವರನ್ನು ರಾಜಕೀಯವಾಗಿ ನಾಶಪಡಿಸುತ್ತಿದ್ದರೂ ಈ ಜಾತಿ ಜಂಗಮರು ಅವರ ವಿರುದ್ಧ ಬಾಯಿ ತೆಗೆಯುತ್ತಿಲ್ಲ. ಬದಲಾಗಿ, ಲಿಂಗಾಯತ ಧರ್ಮ ಪ್ರಚಾರಕರು, ಮಠಾಧೀಶರು, ರಾಜಕಾರಣಿಗಳನ್ನು ನಾಶ ಮಾಡುತ್ತಿರುವ ಬ್ರಾಹ್ಮಣವಾದಿಗಳೊಂದಿಗೆ ಇವರು ಕೈಜೋಡಿಸುತ್ತಿದ್ದಾರೆ. ಮುಸ್ಲಿಮ್ ಯುವಕನನ್ನು ಪ್ರೀತಿಸಿ ಆತನ ಕೈಯಲ್ಲಿ ಹತಳಾದ ಜಂಗಮ ಹುಡುಗಿಯ ಕುಟುಂಬಕ್ಕೆ, ಹಾಗೂ ಅಶ್ಲೀಲ ಸಂದೇಶ ಕಳಿಸಿ ನಟ ದರ್ಶನ್ ಕೈಯಲ್ಲಿ ಹತನಾದ ಜಂಗಮ ವ್ಯಕ್ತಿಯ ಕುಟುಂಬಕ್ಕೆ ವೀರಶೈವ ಪಂಚಪೀಠಗಳ ಜಾತಿ ಜಂಗಮರು ಸಾಂತ್ವನ ಹೇಳಿದ್ದಾರೆಯೆ ಹೊರತು ಇತ್ತೀಚಿಗೆ ಹುಬ್ಬಳ್ಳಿ ಹತ್ತಿರದ ಹಳ್ಳಿಯೊಂದರಲ್ಲಿ ಗರ್ಭಿಣಿ ಮಗಳ ಮರ್ಯಾದೆ ಹತ್ಯೆ ಮಾಡಿದ ಪಾಲಕರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಅನೇಕ ಲಿಂಗಾಯತ ಕುಟುಂಬಗಳು ಅನ್ಯಾಯಕ್ಕೀಡಾದಾಗ ಇವರು ಕನಿಷ್ಠ ಸಾಂತ್ವನ ಕೂಡ ಹೇಳುವುದಿಲ್ಲ.

ಮುಂದುವರೆಯುವುದು…

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ತೋಟಗಾರಿಕೆ ಇಲಾಖೆ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯೋತ್ಸವ...

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ: ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಹಸ್ತಾಂತರ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಮಿಷನರ್ ಸೀಮಂತ್ ಸಿಂಗ್

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ...

ಮತಕಳವು ಸಾಮಾನ್ಯ ಕಳ್ಳತನವಲ್ಲ, ಇದು ದೇಶದ್ರೋಹ: ಗ್ಯಾನೇಶ್, ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

​"ಮತಕಳವು ಯಾವುದೇ ಅಂಗಡಿಯೊಂದರಲ್ಲಿ ನಡೆಯುವಂತಹ ಸಾಮಾನ್ಯ ಕಳ್ಳತನವಲ್ಲ. ಬದಲಾಗಿ, ಇದು ದೇಶದ...

ಬೀದರ್‌ | ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯ : ಪಿ.ಪಿ.ಅಪ್ಪಣ್ಣ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆದು, ಕಾರ್ಮಿಕರಿಗೆ ನ್ಯಾಯಯುತವಾಗಿ...