ಪಂಚಮಸಾಲಿ ಪೀಠಗಳ ಗೊಂದಲ- ಭಾಗ 18 | ಪಂಚಮಸಾಲಿ ರಾಜಕಾರಣಿಗಳ ಸ್ವಾರ್ಥ

Date:

ಸನ್ನಿವೇಶಕ್ಕೆ ತಕ್ಕಂತೆ ಲಿಂಗಾಯತ-ಲಿಂಗಾಯತ ನಾಯಕರ ಮಧ್ಯೆ ಹಾಗು ಪಂಚಮಸಾಲಿ-ಪಂಚಮಸಾಲಿ ನಾಯಕರ ನಡುವೆ ವೈಷಮ್ಯ ಮೂಡಿಸಿ ಇಡೀ ಲಿಂಗಾಯತರ ರಾಜಕೀಯ ನಾಯಕತ್ವವನ್ನೆ ದುರ್ಬಲಗೊಳಿಸುವ ವೈದಿಕರ ನಿಯಂತ್ರಿತ ಹಿಂದುತ್ವ ರಾಜಕಾರಣದ ದಾಳವಾಗಿ ಈ ಜನರು ದುರ್ಬಳಕೆ ಆಗುತ್ತಿರುವುದು ವರ್ತಮಾನ ಕಾಲದ ಲಿಂಗಾಯತ ಶಕ್ತಿಯ ಅವನತಿಗೆ ಹಿಡಿದ ಕನ್ನಡಿಯಾಗಿದೆ.

- Advertisement -

ಅಂತು ಇಂತೂ ಪಂಚಮಸಾಲಿ ಸಂಘಟನೆ ಹುಟ್ಟುಹಾಕಲಾಯಿತು, ಹೇಗೆ? ಇಡೀ ರಾಜ್ಯದಲ್ಲಿ ಎರಡು ಸಂಘಟನೆಗಳು, ಒಂದು ವೀರಶೈವ ಪಂಚಮಸಾಲಿ, ಇನ್ನೊಂದು ಲಿಂಗಾಯತ ಪಂಚಮಸಾಲಿ, ಆರಂಭದಲ್ಲಿಯೆ ಒಡಕು. ಅಂದರೆ, ಇಂದಿಗೂ ಪಂಚಮಸಾಲಿಗಳಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಇದಕ್ಕೆ ಸುಮ್ಮನೆ ಒಂದು ಉದಾಹರಣೆಯನ್ನು ಕೊಡಬಹುದು. ಅವಿಭಿಜಿತ ವಿಜಯಪುರ ಜಿಲ್ಲೆಯಲ್ಲಿ ಈಗ ಬೇರೆ ಬೇರೆ ಪಕ್ಷಗಳಿಂದ ಸಧ್ಯ ಐದು ಜನ ಪಂಚಮಸಾಲಿ ಉಪವರ್ಗದ ಶಾಸಕರಿದ್ದಾರೆ. ಅವರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಿ ಬರುವುದಿಲ್ಲ. ಒಂದೇ ಪಕ್ಷದಲ್ಲಿದ್ದವರು ಹಾಗು ಬೇರೆ ಬೇರೆ ಪಕ್ಷದಲ್ಲಿದ್ದವರು ಪರಸ್ಪರ ಕೆಟ್ಟದಾಗಿ, ಅನಾಗರಿಕವಾಗಿ ಬೈದಾಡುತ್ತಾರೆ. ಅವರು ಬಳಸುವ ಸುಸಂಸ್ಕೃತ ಪದಪುಂಜಗಳು ನಿಮಗೆ ಬೇರೆ ಎಲ್ಲೂ ಸಿಗುವುದಿಲ್ಲ. ಇದು ಒಂದು ವ್ಯಕ್ತಿಗತ ವೈಷಮ್ಯ ಮತ್ತು ಸಮುದಾಯದ ಹಿತಕ್ಕೆ ಮಾರಕವಾದ ಮಾದರಿ. ಇವರೆಲ್ಲರು ಕೇವಲ ತಮ್ಮ ತಮ್ಮ ಪಕ್ಷಗಳ ಸಮರ್ಥನೆಯ ಕಾಜಕೀಯ ಕಾರಣದ ಟೀಕೆ ಟಿಪ್ಪಣಿಗಳಲ್ಲಿ ತೊಡಗಿಲ್ಲ, ಬದಲಾಗಿ ಬಲವಾದ ರಾಜಕೀಯ ಸ್ವಾರ್ಥ ಮತ್ತು ವೈಷಮ್ಯ ಇವರಲ್ಲಿ ಎದ್ದು ಕಾಣುತ್ತದೆ. ಈ ವ್ಯಕ್ತಿಗಳ ನಡವಳಿಕೆ, ಸ್ವಭಾವ, ಜಗಳ ಮುಂತಾದ ಸಂಗತಿಗಳು ಇಡೀ ಪಂಚಮಸಾಲಿ ಉಪವರ್ಗದ ಒಗ್ಗಟ್ಟಿಗೆ, ಸಂಘಟನೆಗೆ ಹಾಗು ಚಾರಿತ್ರ್ಯಕ್ಕೆ ಹಚ್ಚಿರುವ ಕಳಂಕ ಎಂದು ಸಂಬಂಧಪಟ್ಟವರಿಗೆ ಎಲ್ಲಿಯವರೆಗೆ ಅರಿವಾಗುವುದಿಲ್ಲವೊ ಅಲ್ಲಿಯವರೆಗೆ ಪಂಚಮಸಾಲಿ ಉಪವರ್ಗದ ಸಂಘಟನೆ ಮಾಡುವುದು ಕಷ್ಟದಾಯಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ವಿಜಯಪುರ-ಬಾಗಲಕೋಟೆಯ ಮತ್ತೊಂದಿಷ್ಟು ಪಂಚಮಸಾಲಿ ಉಪವರ್ಗದ ಶಾಸಕರು/ರಾಜಕಾರಣಿಗಳಿಗೆ ಸಮಾಜ ಎಲ್ಲಿದ್ದರೇನು, ಏನಾದರೇನು ತಲೆ ಕೆಡಿಸಿಕೊಳ್ಳುವುದಿಲ್ಲ. ತಾವಾಯಿತು, ತಮ್ಮ ರಾಜಕೀಯ ಮತ್ತು ದಂಧೆಗಳಾದವು. ಇವರೆಲ್ಲರೂ ರಾಜಕೀಯದಲ್ಲಿ ಶಾಸಕ ಸ್ಥಾನ, ಮಂತ್ರಿಗಿರಿ ಮುಂತಾದ ಪದವಿ, ಸೌಲಭ್ಯ ಪಡೆಯುತ್ತಿರುವುದು ಪಂಚಮಸಾಲಿ ಉಪವರ್ಗದ ಹೆಸರಿನಲ್ಲಿ ಅಥವಾ ಲಿಂಗಾಯತ ಕೋಟಾದಲ್ಲಿ. ಆದರೆ ಇವರಲ್ಲಿ ಯಾರೊಬ್ಬರೂ ಪಂಚಮಸಾಲಿಗಳ ಅಥವಾ ಲಿಂಗಾಯತ ಧರ್ಮದ ಹಿತಾಸಕ್ತಿಗೆ ಧ್ವನಿ ಎತ್ತಿದ ಒಂದು ಚಿಕ್ಕ ಉದಾಹರಣೆ ನಮಗೆ ಸಿಗುವುದಿಲ್ಲ. ನಾಡಿನ ಬೇರೆ ಬೇರೆ ಭಾಗದಲ್ಲಿ, ಬೇರೆ ಬೇರೆ ಪಕ್ಷಗಳಲ್ಲಿರುವ ಪಂಚಮಸಾಲಿ ರಾಜಕಾರಣಿಗಳು ಈ ಮೇಲೆ ಚರ್ಚಿಸಿದ ವಿಷಕ್ಕೆ ತುಂಬಾ ಹತ್ತಿರದಲ್ಲಿದ್ದಾರೆ. ಇವರು ವರ್ಷದಲ್ಲಿ ಒಂದು-ಎರಡು ಸಲವಾದರೂ ಸಾಮಾನ್ಯ ಪಂಚಮಸಾಲಿ ಜನರ ಅಥವಾ ಲಿಂಗಾಯತರ ಕಷ್ಟಗಳು, ಸಮಸ್ಯೆಗಳ ಕುರಿತು ಚರ್ಚಿಸುವ ನೆಪದಲ್ಲಾದರೂ ಒಂದು ಕಡೆ ಸೇರಿ ಮುಖಾಮುಖಿ ಆದ ದೃಷ್ಟಾಂತಗಳು ನಮಗೆ ಕಾಣಸಿಗುವುದಿಲ್ಲ. ಆದರೂ ಇವರು ಪಂಚಮಸಾಲಿ ಅಥವಾ ಲಿಂಗಾಯತದ ಹೆಸರು ಹೇಳಿ ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆ, ಮತ್ತು ತಮ್ಮ ಕುಟುಂಬವನ್ನು ಬೆಳೆಸಿದ್ದಾರೆ‌. ಇವರ ಬೆಳವಣಿಗೆಯಲ್ಲಿ ಉಳಿದ ಲಿಂಗಾಯತ ಉಪವರ್ಗದ ಮತ್ತು ಲಿಂಗಾಯತರಲ್ಲದ ಇತರರ ಸಹಯೋಗವೂ ಇದೆ. ಕೇವಲ ಒಂದೇ ವರ್ಗದ ಜನರನ್ನು ನಂಬಿಕೊಂಡು ರಾಜಕೀಯದಲ್ಲಿ ಯಶಸ್ಸು ಕಾಣಲಾಗದು.

ಇವರೆಂದಿಗೂ ಜನಪರವಾಗಿ ಚಿಂತಿಸಿದ, ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡ ಬಗ್ಗೆ ನಮಗೆ ಯಾವುದೆ ಉದಾಹರಣೆಗಳು ಕಾಣಸಿಗುವುದಿಲ್ಲ. ಪಂಚಮಸಾಲಿಗಳಲ್ಲಿ ಜನಪರವಾಗಿ ಚಿಂತಿಸುವ ರಾಜಕಾರಣಿಗಳೆಂದರೆ ಆಳಂದ ಶಾಸಕ ಬಿ. ಆರ್. ಪಾಟೀಲರು ಮತ್ತು ಮಾಜಿ ವಿಧಾನಪರಿಷತ್ ಸದಸ್ಯ ಎಂ. ಪಿ. ನಾಡಗೌಡರು. ಎರಡು ಸಂಘಟನೆ ಹಾಗು ಎರಡು ಪೀಠಗಳನ್ನು ಒಂದೊಂದು ರಾಜಕಾರಣಿಗಳ ಗುಂಪು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ ಮುಗ್ಧ ಪಂಚಮಸಾಲಿ ಜನರನ್ನು ವಂಚಿಸುತ್ತಿರುವುದು ಎಲ್ಲಿಯವರೆಗೆ ನಿಲ್ಲುವುದಿಲ್ಲವೊ ಅಲ್ಲಿಯೇ ವರೆಗೆ ಪಂಚಮಸಾಲಿ ಸಂಘಟನೆ ಯಶಸ್ಸು ಕಾಣಲಾರದು. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಜೆ. ಹೆಚ್. ಪಟೇಲ್, ಗುಡದಿನ್ನಿ, ಬಿ. ಎಸ್ ಪಾಟೀಲ್, ಮನಗೂಳಿ, ಇವರ ಕಾಲದಲ್ಲಿ ಈಗಿನಷ್ಟು ಸ್ವಾರ್ಥ, ಉಪಜಾತಿಯ ಭಾವನೆ, ಇರಲಿಲ್ಲ, ಅವರು ಇಡೀ ಲಿಂಗಾಯತ ಧರ್ಮಿಯರ ಸಮಸ್ಸೆಗಳಿಗೆ ಹಾಗು ಸಾಮಾನ್ಯ ಜನರ ಪರವಾಗಿ ಧ್ವನಿ ಎತ್ತುವ, ಚಿಂತಿಸುವ ಗುಣ ಹೊಂದಿದ್ದರು, ಹಾಗಾಗಿ ಅವರನ್ನು ಇಡೀ ಲಿಂಗಾಯತ ಸಮುದಾಯ ಮತ್ತು ಲಿಂಗಾಯತೇತರರೂ ಇಷ್ಟಪಡುತ್ತಿದ್ದರು. ಆ ರೀತಿಯ ಘನತೆಯ ವ್ಯಕ್ತಿತ್ವವನ್ನು ಅವರು ಹೊಂದಿದ್ದರು. ಎಂ. ಬಿ. ಪಾಟೀಲ, ಶರಣಪ್ರಕಾಶ್ ಪಾಟೀಲ್, ನಂದಿಹಳ್ಳಿ ಹಾಲಪ್ಪ ಮುಂತಾದ ಕೇವಲ ಬೆರಳೆಣಿಕೆಯ ಲಿಂಗಾಯತ ರಾಜಕಾರಣಿಗಳು ಲಿಂಗಾಯತ ಸಮಾಜದ ಕುರಿತು ಅಭಿಮಾನ ಹೊಂದಿದ್ದಾರೆ. ಈಗಿನ ಪಂಚಮಸಾಲಿ ರಾಜಕಾರಣಿಗಳೂ ಒಳಗೊಂಡಂತೆ ಸಮಗ್ರ ಲಿಂಗಾಯತ ರಾಜಕಾರಣಿಗಳಲ್ಲಿ ಈ ಗುಣ ಅಪರೂಪವಾಗಿ ನೋಡಬಹುದು.

ಇನ್ನು, ಸಿ. ಸಿ. ಪಾಟೀಲ, ಅರವಿಂದ್ ಬೆಲ್ಲದ, ಮುಂತಾದವರ ಬಗ್ಗೆ ಹೆಚ್ಚು ಬರೆಯುವ ಅಗತ್ಯವಿಲ್ಲ. ಇವರಾರಿಗೂ ಸ್ವಂತಿಕೆಯಿಲ್ಲ, ಸ್ವಾಭಿಮಾನವಿಲ್ಲ, ಚಂದ್ರಕಾಂತ ಬೆಲ್ಲದ ಅವರು ಒಂದು ಕಾಲದಲ್ಲಿ ಲಿಂಗಾಯತ ಅಸ್ಮಿತೆಯ ಪ್ರತೀಕದಂತಿದ್ದರು, ಏಕದೇವೋಪಾಸನೆ, ಬಸವನಿಷ್ಠೆ, ಬಸವ ತತ್ವದ ಆಚರಣೆ ಅವರ ಕುಟುಂಬದಲ್ಲಿ ಮನೆ‌ ಮಾಡಿತ್ತು. ಈಗ ಅವರ ಮಗ ಶಾಸಕ ಅರವಿಂದ್ ಬೆಲ್ಲದ ಅವರು ಯಾರ ಅಣತಿಯಂತೆ ಲಿಂಗಾಯತ ಹಾಗು ಪಂಚಮಸಾಲಿಗಳ ಹಿತಾಸಕ್ತಿ ಅಡವಿಟ್ಟು ಅಪಾಯಕಾರಿ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇವರಿಗೆ ತಮ್ಮ ರಾಜಕೀಯ ಭವಿಷ್ಯ ಮತ್ತು ಸ್ವಾರ್ಥಕ್ಕಿಂತ ಪಂಚಮಸಾಲಿಗಳ ಅಥವಾ ಇಡೀ ಲಿಂಗಾಯತ ಸಮಾಜದ ಕಾಳಜಿ ಕಿಂಚಿತ್ ಇಲ್ಲ. ಲಿಂಗಾಯತರ ರಾಜಕೀಯ ಪ್ರಾಬಲ್ಯವನ್ನು ಹಿಂದುತ್ವಕ್ಕೆ ಅಡವಿಟ್ಟು ಪ್ರಲ್ಹಾದ ಜೋಶಿಯ ಮತ್ತು ಬಿ. ಎಲ್‌. ಸಂತೋಷ ಇವರನ್ನು ತೃಪ್ತಿ ಪಡಿಸುವುದೇ ಇವರ ರಾಜಕೀಯ ಬದುಕಿನ ಪರಮೋಚ್ಚ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಇವರು ಸಂಸದ ತೇಜಶ್ವಿ ಸೂರ್ಯನ ಎದುರು ದೈನೇಸಿ ಸ್ಥಿತಿಯಲ್ಲಿ ನಿಲ್ಲಲು ಸಿದ್ಧವಾಗಿದ್ದಾರೆ. ಈ ಸಂಘ ಪರಿವಾರದ ವೈದಿಕರು ಒಮ್ಮೆ ಲಿಂಗಾಯತರ ಸಮಗ್ರ ಪ್ರಾಬಲ್ಯವನ್ನು ಹತ್ತಿಕ್ಕಲು, ಲಿಂಗಾಯತ ಮಠ ಹಾಗು ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸಲು, ಲಿಂಗಾಯತರ ಕೇಂದ್ರ ಸರ್ಕಾರದ ಮೀಸಲಾತಿ ಬೇಡಿಕೆ, ಅಲ್ಪಸಂಖ್ಯಾತರ ಸೌಲಭ್ಯ ಮುಂತಾದ ಬೇಡಿಕೆಗಳನ್ನು ಹತ್ತಿಕ್ಕಲು, ಮತ್ತೊಮ್ಮೆ ಪಂಚಮಸಾಲಿಗಳ ಮೀಸಲಾತಿ ಬೇಡಿಕೆಯನ್ನು ಹತ್ತಿಕ್ಕಲು ಕೆಲವು ಲಿಂಗಾಯತ ರಾಜಕಾರಣಿಗಳನ್ನು ಸುಲಭವಾಗಿ ತಮ್ಮ ದಾಳವಾಗಿ ಬಳಸುತ್ತಿದ್ದಾರೆ.

ಸನ್ನಿವೇಶಕ್ಕೆ ತಕ್ಕಂತೆ ಲಿಂಗಾಯತ-ಲಿಂಗಾಯತ ನಾಯಕರ ಮಧ್ಯೆ ಹಾಗು ಪಂಚಮಸಾಲಿ-ಪಂಚಮಸಾಲಿ ನಾಯಕರ ನಡುವೆ ವೈಷಮ್ಯ ಮೂಡಿಸಿ ಇಡೀ ಲಿಂಗಾಯತರ ರಾಜಕೀಯ ನಾಯಕತ್ವವನ್ನೆ ದುರ್ಬಲಗೊಳಿಸುವ ವೈದಿಕರ ನಿಯಂತ್ರಿತ ಹಿಂದುತ್ವ ರಾಜಕಾರಣದ ದಾಳವಾಗಿ ಈ ಜನರು ದುರ್ಬಳಕೆ ಆಗುತ್ತಿರುವುದು ವರ್ತಮಾನ ಕಾಲದ ಲಿಂಗಾಯತ ಶಕ್ತಿಯ ಅವನತಿಗೆ ಹಿಡಿದ ಕನ್ನಡಿಯಾಗಿದೆ. ಈ ದಿಶೆಯಲ್ಲಿ ಪಂಚಮಸಾಲಿ ಸಂಘಟನೆಯನ್ನು ಧಾರ್ಮಿಕ ದೃಷ್ಟಿಕೋನಗಳಿಂದ ದುರ್ಬಲಗೊಳಿಸುವಲ್ಲಿ ವೀರಶೈವ ಪಂಚಪೀಠಗಳ ಜಾತಿ ಜಂಗಮರ ಕೈವಾಡವಿದ್ದರೆ, ರಾಜಕೀಯವಾಗಿ ದುರ್ಬಲಗೊಳಿಸುವಲ್ಲಿ ಹಿಂದುತ್ವವಾದಿ ಸಂಘಟನೆಗೆ ಸೇರಿರುವ ವೈದಿಕರ ಕೈವಾಡವಿದೆ. ಇದನ್ನು ಗುರುತಿಸುವಲ್ಲಿ ಪಂಚಮಸಾಲಿಗಳು ಹಾಗು ಇಡೀ ಲಿಂಗಾಯತ ಸಮಾಜ ಸೋತಿದೆ. ಕರ್ನಾಟಕದಲ್ಲಿ ವೈದಿಕ ನಿಯಂತ್ರಿತ ಹಿಂದುತ್ವ ರಾಜಕಾರಣ ನೆಲೆಯೂರಬೇಕಾದರೆ ಲಿಂಗಾಯತ ಸಮಾಜವನ್ನು ದುರ್ಬಲಗೊಳಿಸಿಬೇಕು ಎನ್ನುವ ಸಂಘಿ ವೈದಿಕರ ದುರಾಲೋಚನೆ ಹಾಗು ದೂರಾಲೋಚನೆ ಆರಂಭಗೊಂಡಿದ್ದು ೧೯೯೦ ಕಾಲದಿಂದ. ಅದಕ್ಕಾಗಿ ಅವರು ಲಿಂಗಾಯತರ ಶಕ್ತಿಯ ಕೇಂದ್ರಗಳಾದ ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕಾರ್ಯ ಅಂದೇ ಆರಂಭಿಸಿದರು. ಬ್ರಾಹ್ಮಣರೊಂದಿಗೆ ಸ್ಪರ್ಧಾತ್ಮಕವಾಗಿ ಲಿಂಗಾಯತರು ಬೆಳೆಯಬೇಕು ಎನ್ನುವ thought process ಲಿಂಗಾಯತ ಸಮಾಜದ ಹಿರಿಯರಲ್ಲಿತ್ತು, ಆ ಕಾರಣದಿಂದಲೇ ಲಿಂಗಾಯತರು ಕರ್ನಾಟಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗಿಂತ ಮುಂದಿದ್ದರು.

೧೯೯೦ ರ ನಂತರ ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮಣರು ಅತ್ಯಂತ ವಿಧೇಯರಂತೆ ನಟಿಸುತ್ತಾ ಉಪಾಯವಾಗಿ ಪ್ರವೇಶಿಸಲು ಆರಂಭಿಸಿದರು. ಅದು ಈಗ ಯಶಸ್ಸಿನ ಹಂತ ತಲುಪಿದೆ. ಈಗ ಲಿಂಗಾಯತ ಶಿಕ್ಷಣ ಸಂಸ್ಥೆಗಳ ನಿರ್ಣಾಯಕ ಸ್ಥಾನಗಳು ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಬ್ರಾಹ್ಮಣರು ಪ್ರತಿಷ್ಠಾಪನೆಗೊಂಡಿದ್ದಾರೆ. ಈಗ ಅಲ್ಲಿ ಯಾವೊಬ್ಬ ಪ್ರತಿಭಾವಂತ ಲಿಂಗಾಯತನಿಗೆ ಪ್ರವೇಶವಿಲ್ಲದಂತಾಗಿದೆ. ಮತ್ತೊಂದು ಕಡೆ ಫ. ಗು. ಹಳಕಟ್ಟಿಯವರು ಕಟ್ಟಿದ ವಿಜಯಪುರದ ಸಿದ್ದೇಶ್ವರ ಸಂಸ್ಥೆ ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಲಿಂಗಾಯತ ಪಂಚಮಸಾಲಿ ಮಹಾಪುರುಷರ ಹೆಸರಿಡುವ ಬದಲಿಗೆ ವಾಜಪೇಯಿಯವರ ಹೆಸರು ಇಡಲಾಗಿದೆ. ವಿಜಯಪುರ ರಸ್ತೆ, ಮತ್ತು ವೃತ್ತಗಳಿಗೆ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರ ಹೆಸರು ಮತ್ತು ಪ್ರತಿಮೆಗಳು ಕೂಡಿಸಲಾಗಿದೆ. ಇನ್ನು ಲಿಂಗಾಯತ ಮಠಗಳನ್ನು ಹೇಗೆ ಹಿಂದುತ್ವದ ಕೇಂದ್ರಗಳಾಗಿಸಿದರು ಎನ್ನುವುದಕ್ಕೆ ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕದ ಕೆಲವು ಪ್ರತಿಷ್ಠಿತ ಮಠಗಳು ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನದ ಹೋರಾಟ ಕುರಿತ ತಟಸ್ಥ/ವಿರೋಧಿ ನಿಲುವುಗಳೆ ಸಾಕ್ಷಿ. ಅಲ್ಲದೆ ಲಿಂಗಾಯತ ಸಂಸ್ಕೃತಿ ನಾಶಕ್ಕೆ ಹಿಂದುತ್ವವಾದಿ ವೈದಿಕರು ಮಾಡುತ್ತಿರುವ ಯತ್ನಗಳನ್ನು ಈ ಮಠಾಧೀಶರು ನೋಡಿಯೂ ನೋಡದಂತೆ ಸುಮ್ಮನಿರುವುದು ಮತ್ತೊಂದು ಸಾಕ್ಷಿ.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 17 | ಸಂಘಟನೆಯಲ್ಲಿ ರಾಜಕಾರಣಿಗಳು ನೀತಿ ನಿರೂಪಕರಾಗಿರಬಾರದು

ಪಂಚಮಸಾಲಿ ಪೀಠಗಳ ಗೊಂದಲ- ಭಾಗ 16 | ಅನಾವರಣಗೊಂಡ ಸತ್ಯಗಳು, ಕಂಗಾಲಾದ ವೀರಶೈವ ಜಾತಿ ಜಂಗಮರು

ಇನ್ನು ಪಂಚಮಸಾಲಿ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ, ಒಬ್ಬರ ಕಾಲು ಹಿಡಿದು ಒಬ್ಬರು ಎಳೆಯುತ್ತಾರೆ. ಪಂಚಮಸಾಲಿ ರಾಜಕಾರಣಿಗಳನ್ನು ದಾಳವಾಗಿ ಬಳಸಿಕೊಂಡು ಸಂಘಿ ವೈದಿಕರು ಮತ್ತು ವೀರಶೈವ ಪಂಚಪೀಠಗಳ ಜಾತಿ ಜಂಗಮರು ಲಿಂಗಾಯತ ಸಮಾಜದಲ್ಲಿ ಒಡಕನ್ನು ಸೃಷ್ಟಿಸಿದ್ದಾರೆ. ಬಿಜೆಪಿಯ ಪಂಚಮಸಾಲಿ ರಾಜಕಾರಣಿಗಳು ಸಂಘಿ ವೈದಿಕರ ಆದೇಶ ಹಾಗು ನಿರ್ದೇಶನದಂತೆ ಲಿಂಗಾಯತ ಮಠಗಳು, ಮಠಾಧೀಶರು, ಧರ್ಮಗುರು ಬಸವಣ್ಣ ಹಾಗು ಲಿಂಗಾಯತ ಸಂಸ್ಕೃತಿಯ ವಿರುದ್ಧ ಮಾತನಾಡುತ್ತಾರೆ ಹಾಗು ಕಾರ್ಯ ಮಾಡುತ್ತಾರೆ. ಇದು ಈಗ ಗುಣಪಡಿಸಲಾಗದ ರೋಗದಂತೆ ಉಲ್ಬಣಗೊಂಡಿದೆ. ಇವರ ಈ ಗುಲಾಮಗಿರಿ ಮನಸ್ಥಿತಿಯನ್ನು ಸಂಘಿ ವೈದಿಕರು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ವೈದಿಕರ ಪಕ್ಷವಾಗಿರುವ ಬಿಜೆಪಿಯಲ್ಲಿ ಒಬ್ಬ ಬ್ರಾಹ್ಮಣೇತರ ಅತ್ಯಂತ ಉನ್ನತ ನಾಯಕತ್ವಕ್ಕೆ ಏರುವುದು ಅಸಾಧ್ಯ, ಅದಕ್ಕೆ ಹೇಗೆ ತಡೆಯೊಡ್ಡಬೇಕೆಂದು ಅವರು ಬಲ್ಲರು. ಅದೇ ಒಬ್ಬ ವೈದಿಕ ನಾಯಕನಿಗೆ ರಾಷ್ಟ್ರ ಮಟ್ಟದ ನಾಯಕನಾಗಲು ಕೇವಲ ಐದು ವರ್ಷ ಸಾಕು, ಉದಾಹರಣೆಗೆ ಅನಂತಕುಮಾರ್, ಪ್ರಲ್ಹಾದ ಜೋಶಿ, ತೇಜಸ್ವಿ ಸೂರ್ಯ. ಇದಕ್ಕೆ ಅಪವಾದ ಎನ್ನುವಂತೆ ಬ್ರಾಹ್ಮಣೇತರರು ಸಂಪೂರ್ಣ ಗುಲಾಯರಾಗಿದ್ದರೆ position ಕೊಟ್ಟು, power ತಮ್ಮ ಕೈಯಲ್ಲಿ ಇಟ್ಟುಕೊಳ್ಳುತ್ತಾರೆ. ಈ ಸಂಗತಿ ಗೊತ್ತಿದ್ದು, ಅನುಭವಿಸಿಯೂ ಇಂದು ಪಂಚಮಸಾಲಿ ಹಾಗು ಲಿಂಗಾಯತ ರಾಜಕಾರಣಿಗಳು ‘ಸರಂಡರ್’ ಆಗಿರುವುದು ಲಿಂಗಾಯತ ಸಮಾಜದ ದುರಂತವಾಗಿದೆ.

ಮುಂದುವರೆಯುವುದು…

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3,000 ಮದರಸಾಗಳ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್‌ ಸೂಚನೆ

ರಾಜಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 3,000 ಮದರಸಾಗಳ ಪರಿಣಾಮಕಾರಿ ನಿರ್ವಹಣೆ, ಮೇಲ್ವಿಚಾರಣೆ ಹಾಗೂ...

45 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಷಡ್ಯಂತ್ರ; ಮುಖ್ಯ ಚುನಾವಣಾಧಿಕಾರಿಗೆ ಸಿಎಂ ದೂರು

ರಾಜ್ಯದಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 45...

ದ್ವೇಷಭಾಷಣ ಆರೋಪ: TMC ಸಂಸದೆ ಮಹುವಾ ಮೊಯಿತ್ರಾಗೆ ಬಂಧನದಿಂದ ಮುಕ್ತಿ; ಕ್ಷೇತ್ರ ಭೇಟಿ ವೇಳೆ ಭದ್ರತೆ ನೀಡಲು ಹೈಕೋರ್ಟ್‌ ಸೂಚನೆ

ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಗಾಳದ ಟಿಎಂಸಿ...