ಇದು ಯುವಜನ ಚಳವಳಿಗಳ ಪರ್ವಕಾಲ; ಬಿಜೆಪಿಗೆ ಸಂಕಷ್ಟ ಕಾಲ

Date:

ನೀಟ್ ಅಕ್ರಮದ ವಿರುದ್ಧ ಭುಗಿಲೆದ್ದ ವಿದ್ಯಾರ್ಥಿ ಚಳವಳಿ, ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಯಿತು. ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಮುಂದಾಳತ್ವದಲ್ಲಿ ಕೂಡಿದ ಜೆನ್‌ ಝೀ ಯುವ ಸಮುದಾಯ ಸರ್ಕಾರವನ್ನು ಮಣಿಸಿತು. ಯಾರೊಬ್ಬರ ಹಿಡಿತಕ್ಕೂ ಸಿಗದೆ ಮಾಸ್ ಮೂವ್‌ಮೆಂಟ್ ಆಗಿ ರೂಪುಗೊಂಡ ಈ ಚಳವಳಿಯಿಂದಾಗಿ ಕೇಂದ್ರ ಸರ್ಕಾರ ಅಕ್ಷರಶಃ ನಡುಗಿತು.

- Advertisement -

ವಿದ್ಯಾರ್ಥಿಗಳ ವಿಶ್ವಾಸ ಪಡೆಯದಿದ್ದರೆ ರಾಜಕೀಯ ಭವಿಷ್ಯವಿಲ್ಲ ಎಂದು ಆಡಳಿತರೂಢ ಬಿಜೆಪಿಗೆ ಮನವರಿಕೆಯಾಯಿತು. ಪ್ರಧಾನಿ ನರೇಂದ್ರ ಮೋದಿಯವರೇ ನೇರವಾಗಿ ಅಖಾಡಕ್ಕೆ ಇಳಿಯಬೇಕಾಗಿ ಬಂದಿತು. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಕೇವಲ ಜಂತರ್ ಮಂತರ್‌ನಲ್ಲಷ್ಟೇ ಪ್ರತಿರೋಧ ದಾಖಲಾಗಲಿಲ್ಲ. ದೇಶದ ಮೂಲೆಮೂಲೆಯಲ್ಲೂ ಪ್ರತಿಭಟನೆಗಳು ಜರುಗಿದವು. ವಿನೂತನ ಘೋಷಣೆಗಳು ಹೊಮ್ಮಿದವು. ಸರ್ಕಾರವನ್ನು ಮೀಮ್‌ ಗಳ ಮೂಲಕವೇ ಅಣಕಿಸಲಾಯಿತು. ‘ಜೆನ್‌ ಝೀ’- ತಲೆಮಾರು ಚರ್ಚೆಯ ಕೇಂದ್ರಬಿಂದುವಾದರು. ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿ, ಟಿಯರ್ ಗ್ಯಾಸ್, ಪೆಲೆಟ್ ಗನ್‌ ಬಳಸಿದ ಕೇಂದ್ರ ಸರ್ಕಾರ ಅಕ್ಷರಶಃ ಹೊಸತಲೆಮಾರನ್ನು ಎದುರು ಹಾಕಿಕೊಂಡಿತು. ಪೊಲೀಸ್‌ ಕ್ರೌರ್ಯ ನಡೆದ ಸಂದರ್ಭದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೀದಿಗಿಳಿದರು. ಪ್ರಧಾನಿ ನಿವಾಸದ ಎದುರು ಪ್ರತಿಭಟನೆ ನಡೆಸಲು ಮುಂದಾದಾಗ ಅವರನ್ನು ವಶಕ್ಕೆ ಪಡೆಯಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಜೆನ್‌ ಝೀಗಳ ವಿಶ್ವಾಸ ಪಡೆಯಬೇಕೆಂಬ ಸಾಹಸಕ್ಕೆ ಇಳಿದ ಪ್ರಧಾನಿ ಮೋದಿಯವರು ಮಧ್ಯರಾತ್ರಿ ರೀಲ್ಸ್‌- ಪ್ರಹಸನಗಳನ್ನೂ ನಡೆಸಿಬಿಟ್ಟರು. ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಅಂತಿಮವಾಗಿ ಪ್ರಧಾನ್ ರಾಜೀನಾಮೆ ಕೊಟ್ಟರು. ನೀಟ್‌ ಅಕ್ರಮ ವಿರೋಧಿ ಆಂದೋಲನದಿಂದ ಹಿಡಿದು- ಪ್ರಧಾನ್‌ ನಿರ್ಗಮನದವರೆಗಿನ ವಿದ್ಯಮಾನ ಒಂದು ಬಗೆಯದ್ದಾದರೆ, ಆನಂತರ ಬಿರುಸಾಗಿರುವ ಯುವಜನ ಚಳವಳಿಗಳು ಮತ್ತು ಅದಕ್ಕೆ ರಾಜಕೀಯ ಪಕ್ಷಗಳು ತೋರುತ್ತಿರುವ ಪ್ರತಿಕ್ರಿಯೆಗಳು ಭಾರತದ ಭವಿಷ್ಯವನ್ನು ಹೇಳುತ್ತಿವೆ.

image 183
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ

ನೀಟ್‌ ಸುತ್ತಲಿನ ವಿದ್ಯಮಾನ ಪಡೆದುಕೊಂಡಿದ್ದು ಪ್ರಧಾನ್ ರಾಜೀನಾಮೆಯನಷ್ಟೇ ಅಲ್ಲ; ಯುವಜನ ಚಳವಳಿಗಳು ಭಾರತದ ಮುಂದಿನ ಚುನಾವಣೆಗಳನ್ನು ನಿರ್ಧರಿಸಲಿವೆ ಎಂಬ ಸತ್ಯ ಮುನ್ನಲೆಗೆ ಬಂದಂತೆ ಕಾಣುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’- ಈ ಎರಡು ಕೂಡ ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರಲ್ಲೂ ‘ಜೆನ್‌ ಝೀ’ ತಲೆಮಾರನ್ನೇ ಉದ್ದೇಶಿಸಿ ತಮ್ಮ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ‘ಛಾತ್ರೋಂಕಿ ಗೂಂಜ್’ (ವಾಯ್ಸ್ ಆಫ್ ಸ್ಟುಡೆಂಟ್ಸ್) ಅಭಿಯಾನವನ್ನು ಕೈಗೊಂಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿರುವ ಉತ್ತರಪ್ರದೇಶ ರಾಜ್ಯದಲ್ಲಿ ಅವರು ನಡೆಸಿದ ಕಾರ್ಯಕ್ರಮ ರಾಜಕೀಯವಾಗಿ ದೊಡ್ಡ ಸದ್ದು ಮಾಡಿದೆ. ಸಮಾರಂಭವನ್ನು ತಡೆಯಲು ಯೂಪಿ ಸರ್ಕಾರ ಇನ್ನಿಲ್ಲದ ಸರ್ಕಸ್ ನಡೆಸಿತು. ಆದರೆ ಅದ್ಯಾವುದೂ ಫಲ ನೀಡಲಿಲ್ಲ. ದೊಡ್ಡ ಸಂಖ್ಯೆಯಲ್ಲಿ ಯುವ ಸಮುದಾಯ ಕಾರ್ಯಕ್ರಮಕ್ಕೆ ಹರಿದು ಬಂದಿದ್ದು, ಬಿಜೆಪಿ ಮತ್ತು ಸಂಘಪರಿವಾರವನ್ನು ನಿದ್ದೆಗೆಡಿಸಿದೆ.

ಇದನ್ನೂ ಓದಿರಿ: ಸಿಎಂ ರೇವಂತ್‌ ರೆಡ್ಡಿಗೆ ತಡೆ, ಆರ್‌ಎಸ್‌ಎಸ್‌ ಮುಖ್ಯಸ್ಥರಿಗೆ ಮುಕ್ತ ದಾರಿ: ಇದೇನಾ ಮೋಶಾ ವಿದೇಶಾಂಗ…

ಹೆಣ್ಣುಮಕ್ಕಳಿಗೆ ಶಾಲೆಗಳನ್ನು ತೆರೆದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ ಅವರ ನೆನಪುಗಳನ್ನು ಗಾಢವಾಗಿ ಹೊಂದಿರುವ ಮಹಾರಾಷ್ಟ್ರದ ಪುಣೆಯಲ್ಲಿ ರಾಹುಲ್ ನಡೆಸಿದ ‘ಛಾತ್ರೋಂಕಿ ಗೂಂಜ್’ ವಿನೂತನವಾಗಿತ್ತು. ಹೆಣ್ಣನ್ನು ಸಂಪ್ರದಾಯದ ಸೆರಗಿನಲ್ಲಿ ಬಂಧಿಸುವ ಮನುಸ್ಮೃತಿ ಮತ್ತು ಅದರ ಸಮರ್ಥಕರ ವಿರುದ್ಧ ರಾಹುಲ್ ಗುಡುಗಿದ್ದಾರೆ. ಈ ಕಾರ್ಯಕ್ರಮವು ಜೆನ್‌ ಝೀ ಯುವತಿಯರನ್ನೇ ಕೇಂದ್ರೀಕರಿಸಿತ್ತು. ಸಾವಿರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ರಾಹುಲ್ ಅವರು ವೇದಿಕೆ ಮೂಲಕ ಸ್ಟ್ರಾಟಜಿಕ್ ಆಗಿ ಸಂಘಪರಿವಾರದ ಸ್ತ್ರೀವಿರೋಧಿ ಧೋರಣೆಗಳನ್ನು ಅನಾವರಣ ಮಾಡಿದರು.  ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ ಮತ್ತು ಯೂಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿರುವ ಸ್ತ್ರೀವಿರೋಧಿ ಹೇಳಿಕೆಗಳನ್ನು ತೋರಿಸಿ, ಅದರ ವಿರುದ್ಧ ಮಾತನಾಡಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕಿರುಕುಳಗಳ ಕುರಿತು ಪ್ರಶ್ನಿಸಿದರು. “ನೀವು ಯಾರ ಅಧೀನದಲ್ಲೂ ಇರಬೇಕಿಲ್ಲ. ನಿಮಗೊಂದು ಸ್ವತಂತ್ರ ಅಸ್ತಿತ್ವವಿದೆ” ಎಂದು ಗಟ್ಟಿಯಾಗಿ ಹೇಳಿದರು.

ಸಾಮಾನ್ಯವಾಗಿ ರಾಹುಲ್ ಗಾಂಧಿಯವರು ಯಾವುದೇ ಅಭಿಯಾನವನ್ನು ಕೈಗೆತ್ತಿಕೊಂಡರೂ ಅದನ್ನು ಒಂದು ದೀರ್ಘಕಾಲವಧಿಯವರೆಗೆ ಮುನ್ನಡೆಸುವುದನ್ನು ಕಾಣುತ್ತೇವೆ. ಅವರ ‘ಭಾರತ ಜೋಡೋ ಯಾತ್ರೆ’ಯ ಎರಡು ಕಂತುಗಳಿರಬಹುದು, ಈಗ ನಡೆಸುತ್ತಿರುವ ‘ಛಾತ್ರೋಂಕಿ ಗೂಂಜ್’ ಇರಬಹುದು- ರಾಹುಲ್ ನಡೆಸುವ ಚಳವಳಿ ಪ್ಯಾಟ್ರನ್ ಸ್ಪಷ್ಟವಾಗಿ ಕಾಣುತ್ತದೆ. ಜೆನ್‌ ಝೀಗಳ ಕೂಗನ್ನು ತಣ್ಣಗಾಗಿಸಲು ಬಿಡಬಾರದೆಂದು ಅವರಿಗೆ ಮನವರಿಕೆಯಾಗಿದೆ. “ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಪ್ರಯೋಗಿಸಲು ಯಾರು ಆದೇಶಿಸಿದರು? ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವರ ಅಧೀನಕ್ಕೆ ಬರುತ್ತಾರೆ. ಗೃಹಸಚಿವರು ಸದನಕ್ಕೆ ಬಂದು ಉತ್ತರ ನೀಡಬೇಕು. ಪೆಲೆಟ್ ಗನ್ ಬಳಸಲು ಆದೇಶ ನೀಡಿದ್ದರೆ, ಅಮಿತ್ ಶಾ ಅಪರಾಧಿಯಾಗುತ್ತಾರೆ, ಹೀಗಾಗಿ ಅವರು ರಾಜೀನಾಮೆ ನೀಡಬೇಕು. ಪೆಲೆಟ್ ಗನ್‌ ಬಳಕೆ ಅಮಿತ್ ಶಾ ಅವರ ಗಮನಕ್ಕೆ ಬಾರದೆ ಆಗಿದ್ದರೆ- ಗೃಹಸಚಿವರಾಗಿರಲು ಅಸಮರ್ಥರಾಗಿರುತ್ತಾರೆ- ಆಗಲೂ ಅವರು ರಾಜೀನಾಮೆ ನೀಡಬೇಕು” ಎಂದು ಪಟ್ಟು ಹಿಡಿದರು. ಕೊನೆಯ ದಿನದವರೆಗೂ ಅಮಿತ್ ಶಾ ಸದನಕ್ಕೆ ಕಾಲಿಡದೆ ತಲೆಮರೆಸಿಕೊಂಡರು. ಶಾ ಅವರು ಏನೇ ಹೇಳಿಕೆ ಕೊಟ್ಟರೂ ತಿರುಗುಬಾಣವಾಗುತ್ತಿತ್ತು.

ಪೆಲೆಟ್‌ ಗನ್ ಬಳಕೆ ವಿಚಾರವನ್ನು ರಾಹುಲ್ ಇಲ್ಲಿಗೆ ಬಿಡಲಿಲ್ಲ. ಗಾಯಗೊಂಡ ಯುವಜನರನ್ನು ಕರೆದುಕೊಂಡು ಬಂದು ಪ್ರೆಸ್ ಮೀಟ್ ಮಾಡಿದರು. 19 ವರ್ಷದ ಸಂತ್ರಸ್ತ ಸಾಹಿಲ್ ಲೋಚಬ್ ಅವರಿಂದ ದೂರು ಕೊಡಿಸಿದರು. ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದಾಗ, ಸಂಸತ್ ಬೀದಿ ಠಾಣೆಯ ಎದುರು ಸಾಹಿಲ್ ಜೊತೆಯಲ್ಲಿ ಧರಣಿ ಕುಳಿತರು. ಅಂತಿಮವಾಗಿ ಎಫ್‌ಐಆರ್ ದಾಖಲಿಸಲೇಬೇಕಾಯಿತು. ಜೆನ್‌ ಝೀಗಳೊಂದಿಗೆ ರಾಹುಲ್ ಗಾಂಧಿ ನಿರಂತರ ಗುರುತಿಸಿಕೊಳ್ಳುವಲ್ಲಿ ಮೇಲುಗೈ ಸಾಧಿಸಿರುವುದಂತೂ ದಿಟ.

image 184
ವಿದ್ಯಾರ್ಥಿ ಮುಖಂಡ ದೇವೇಂದ್ರ ನಾಥ್ ಮಹತೋ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು

ಇದೇ ಹೊತ್ತಿನಲ್ಲಿ ಝಾರ್ಖಂಡ್‌ನಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರದಲ್ಲಿರುವ ಝಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸರ್ಕಾರ, ವಿದ್ಯಾರ್ಥಿಗಳ ಮೇಲೆ ಲಾಠೀ ಚಾರ್ಜ್ ಮಾಡಿತ್ತು. ಜಾರ್ಖಂಡ್ ಲೋಕಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (JSSC) ನಡೆಸುವ ವಿವಿಧ ಸ್ಪರ್ಧಾತ್ಮಕ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ದೊಡ್ಡ ಮಟ್ಟದ ಅಕ್ರಮಗಳು ನಡೆದಿವೆ, ಪ್ರಶ್ನೆಪತ್ರಿಕೆ ಸೋರಿಕೆ ಆಗಿವೆ ಎಂಬುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪರೀಕ್ಷಾ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು, ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಚಳವಳಿ ಆಗ್ರಹಿಸಿತು. ವಿದ್ಯಾರ್ಥಿ ಮುಖಂಡ ದೇವೇಂದ್ರ ನಾಥ್ ಮಹತೋ ಅವರು ಹದಿನಾರು ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ವಿವಾದಕ್ಕೀಡಾಗಿದ್ದ ಸುಮಾರು 22 ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸಿದ ಸರ್ಕಾರ ಇತರ ಪರೀಕ್ಷೆಗಳ ತನಿಖೆಗೆ ಆದೇಶಿಸಿತು. ರಾಜ್ಯದ ಪರೀಕ್ಷಾ ವ್ಯವಸ್ಥೆ ಹಾಗೂ ನೇಮಕಾತಿ ಪ್ರಕ್ರಿಯೆಗಳಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತರಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಆದರೆ ವಿಧಾನಸಭೆ ಚಲೋ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಸರ್ಕಾರ ಲಾಠೀ ಪ್ರಯೋಗಿಸಿದ್ದು ಟೀಕೆಗಳಿಗೆ ಗುರಿಯಾಯಿತು. “ಯಾವುದೇ ಸರ್ಕಾರ ಇರಲಿ, ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಯೋಗಿಸುವುದನ್ನು ಖಂಡಿಸುತ್ತೇನೆ. ನಾನು ಇದನ್ನು ಬೆಂಬಲಿಸುವುದಿಲ್ಲ” ಎಂದು ರಾಹುಲ್ ನಿಲುವು ತೆಗೆದುಕೊಂಡರು. ಇದರ ನಡುವೆ ಕಾಂಗ್ರೆಸ್‌ನದ್ದು, ಇಬ್ಬಂದಿ ನೀತಿ ಎಂದು ಬಿಜೆಪಿ ಸಂಸದರು ಪ್ಲೆಕಾರ್ಡ್ ಹಿಡಿದು ಸಂಸತ್ತಿನ ಎದುರು ಪ್ರತಿಭಟನೆ ಮಾಡಿದರು.  

ಇದನ್ನೂ ಓದಿರಿ: ಜಂತರ್‌ ಮಂತರ್‌ ಜೆನ್‌ ಝಿ ಆಂದೋಲನ | ಪ್ರತಿಭಟನೆಯ ಸಂಭ್ರಮ; ಮರೆಯಲಾರದ ಅನುಭವ

ಪ್ರತಿಪಕ್ಷಗಳ ನಾಯಕ ರಾಹುಲ್ ಅವರ ಹೊಸ ಯಾತ್ರೆಯನ್ನು ನೋಡಿ ಬಿಜೆಪಿ ಸುಮ್ಮನೆ ಕೂತಿಲ್ಲ. ನೀಟ್ ಅಕ್ರಮ ವಿರೋಧಿ ಆಂದೋಲನದಲ್ಲಿ ದೇಶದ್ಯಾಂತ ಬಿಜೆಪಿ ವಿರುದ್ಧ ತಿರುಗಿರುವ ಯುವಜನರನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಕೂಡ ಇನ್ನಿಲ್ಲದಂತೆ ಕಸರತ್ತು ಮಾಡುತ್ತಿದೆ.  ಸರ್ಕಾರ ಪ್ರತಿಯೊಬ್ಬ ಸಚಿವರನ್ನು ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲು ತೀರ್ಮಾನಿಸಿದೆ. ‘ಒನ್ ಡೇ ಒನ್ ಯೂನಿವರ್ಸಿಟಿ’ ಹೆಸರಿನ ಕಾರ್ಯಕ್ರಮದ ಅಡಿಯಲ್ಲಿ  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಲು ಸರ್ಕಾರ ತೀರ್ಮಾನಿಸಿದೆ. ವಿದ್ಯಾರ್ಥಿಗಳ ಸಂಕಷ್ಟ ಆಲಿಸದೆ ಇದ್ದರೆ ಉಳಿಗಾಲವಿಲ್ಲ ಎಂಬುದು ಮೋದಿಯವರಿಗೆ ಮನವರಿಕೆಯಾಗಿರುವುದು ಸ್ಪಷ್ಟ.

ನೈಜ ಸಮಸ್ಯೆಗಳನ್ನು ಪ್ರಶ್ನಿಸಿ ನಡೆಯುತ್ತಿರುವ ಚಳವಳಿಗಳಿಗೆ ಬಹುಸಂಖ್ಯಾತ ದಲಿತ, ಹಿಂದುಳಿದ ವಿದ್ಯಾರ್ಥಿಗಳು ಬಲ ತುಂಬುತ್ತಿರುವ ಹೊತ್ತಿನಲ್ಲಿಯೇ, ಹೇಗಾದರೂ ಚಳವಳಿಗಳ ದಿಕ್ಕುತಪ್ಪಿಸುವ ಉದ್ದೇಶದಿಂದ ಸಂಘಪರಿವಾರ ವಿಚಾರ ಪ್ರಣೀತ ಮೀಸಲಾತಿ ವಿರೋಧಿ ಹೋರಾಟವನ್ನು ಉದ್ದೀಪಿಸಲು ಯತ್ನಿಸಲಾಗಿದೆ. ‘ರಿಸರ್ವೇಷನ್ ಹಠಾವೋ ಆಂದೋಲನ’ ಎಂಬ ಇನ್‌ಸ್ಟಾಗ್ರಾಂ ಖಾತೆಯು, ಬ್ರಾಹ್ಮಣೀಯ ಮೇಲರಿಮೆಯನ್ನು ಪೋಷಿಸುವವರಿಂದ ಸೃಷ್ಟಿಸಲ್ಪಟ್ಟಿತು. ದಲಿತ ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ಅಸಹನೀಯವಾಗಿ ಮಾತನಾಡುವ ಅಜಿತ್ ಬಾರ್ತಿ ಎಂಬ ಯೂಟ್ಯೂಬರ್‌, ‘ಬ್ರಾಹ್ಮೀಣ್ಸ್‌ ಜೀನ್ಸ್’ ಎಂದು ಅಹಂಕಾರದಿಂದ ಜಾತಿ ಮೇಲರಿಮೆಯನ್ನು ತೋರಿಸಿಕೊಳ್ಳುವ ಅನುರಾಧ ತಿವಾರಿಯಂಥವರು ಈ ಖಾತೆಯ ಹಿಂದೆ ಇದ್ದರು.  ‘ರಿಸರ್ವೇಷನ್ ಹೋಗಲಾಡಿಸಿ’ ಎಂದು ಉಯಿಲೆಬ್ಬಿಸಿ, ಬಿಜೆಪಿ ವಿರೋಧಿ ಗಾಳಿಯನ್ನು ಬೇರೆಡೆ ಸೆಳೆಯುವ ಉದ್ದೇಶವನ್ನು ಇಟ್ಟುಕೊಂಡಂತೆ ಕಾಣುತ್ತಿದ್ದ ಈ ಹೋರಾಟವು ಪರೋಕ್ಷವಾಗಿ ಎಸ್‌ಸಿ, ಎಸ್‌ಟಿ, ಒಬಿಸಿ ಯುವಜನರನ್ನು ಗುರಿಯಾಗಿಸಿಕೊಂಡಿತ್ತು. ಯುವಜನರನ್ನು ಜಾತಿ ಆಧಾರದಲ್ಲಿ ಒಡೆಯುವ ವಿಕೃತಿಯನ್ನು ಬಿಜೆಪಿ ಮತ್ತು ಸಂಘಪರಿವಾರ ಹಿಂಬಾಲಿನಿಂದ ಮಾಡುತ್ತಿವೆ ಎಂಬ ಟೀಕೆಗಳು ವ್ಯಕ್ತವಾದವು.  ಜಂತರ್ ಮಂತರ್‌ಗೂ ಇಳಿದ ಮೀಸಲಾತಿ ವಿರೋಧಿಗಳಿಗೆ ದೊಡ್ಡ ಬೆಂಬಲವೇನೂ ಸಿಗಲಿಲ್ಲ.  ಎಲ್ಲ ಜಾತಿಗಳಿಗೂ ಮೀಸಲಾತಿ ಇರುವ ಈ ಹೊತ್ತಿನಲ್ಲಿ ಬಲಪಂಥೀಯ ತೀವ್ರವಾದಿಗಳು ನಡೆಸುತ್ತಿದ್ದ ಹೋರಾಟವು ಅರ್ಥಕಳೆದುಕೊಂಡಿತ್ತು. ಇಲ್ಲಿಯೂ ಯುವಜನರೇ ಮುಖ್ಯ ಸಂಗತಿಯಾಗಿರುವುದನ್ನು ಗಮನಿಸಬೇಕಾಗುತ್ತದೆ.

ನೀಟ್ ವಿರೋಧಿ ಹೋರಾಟದ ಮೂಲಕ ಬಲ ಪಡೆದುಕೊಂಡಿರುವ ಕಾಕ್ರೋಚ್ ಜನತಾ ಪಾರ್ಟಿಯು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಬಹುದೊಡ್ಡ ಅಭಿಯಾನವನ್ನು ನಡೆಸುತ್ತಿದೆ. ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು “ಅನುಮತಿ ಇಲ್ಲದೆ ಯಾರೂ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಂತಿಲ್ಲ” ಎಂಬ ಆದೇಶಗಳನ್ನು ಹೊರಡಿಸಿವೆ. ಅಲ್ಲದೇ ಬಿಜೆಪಿ ಬೆಂಬಲಿಗರನ್ನು ಪ್ರೋಚೋದಿಸಿ, ಸಿಜೆಪಿ ಮುಂದಾಳುಗಳ ಮೇಲೆ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.

ಶಾಲೆಗಳಲ್ಲಿ ಊಟ ಸರಿ ಇಲ್ಲದೆ ಇರುವುದು, ಮೂಲಸೌಕರ್ಯಗಳು ಇಲ್ಲದೆ ಇರುವುದು, ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟಿರುವುದು, ಶಿಕ್ಷಕರು ಇಲ್ಲದೆ ಇರುವುದು- ಹೀಗೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಕೇಂದ್ರೀಕರಿಸಿ, ಸಿಜೆಪಿ ಕೈಗೊಂಡಿರುವ ಚಳವಳಿಯನ್ನು ಹತ್ತಿಕ್ಕುವ ಯತ್ನಗಳೂ ನಡೆದಿವೆ. ಪಶ್ಚಿಮ ಬಂಗಾಳದಲ್ಲಿ ಸಿಜೆಪಿ ಸದಸ್ಯ ಶೇಖ್ ಅಬ್ದುಲ್ ಹಫೀಜ್  ಎಂಬುವರು ತಮ್ಮ ಊರಿನ ಶಾಲೆಯ ಸ್ಥಿತಿಯನ್ನು ಅನಾವರಣ ಮಾಡಿದ್ದಕ್ಕೆ, ಬಿಜೆಪಿ ಗೂಂಡಾಗಳು ಅಬ್ದುಲ್ ಮತ್ತು ಅವರ ತಂದೆ ಶೇಖ್ ಮೊಹಮ್ಮದ್ ಮಾಫಿಕ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಮಾಫಿಕ್ ಮೃತಪಟ್ಟಿದ್ದರು. ಯುವಜನರ ಚಳವಳಿಯನ್ನು ಹಿಂಸಾತ್ಮಕವಾಗಿ ಬಿಜೆಪಿ ಹತ್ತಿಕ್ಕುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

ಸಿಜೆಪಿ ಚಳವಳಿಗೆ ರಚನಾತ್ಮಕ ರೂಪುಕೊಡುವ ಯತ್ನದಲ್ಲಿದ್ದರೆ, ಮತ್ತೊಂದೆಡೆ ದೇಶದ ಬಲಿಷ್ಠ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ‘AISA’ (ಐಸಾ) ಕೂಡ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಐಸಾದ ನಾಯಕಿ ನೇಹಾ ಬೋರಾ ಅವರು ಜಂತರ್ ಮಂತರ್‌ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದವರಲ್ಲಿ ಒಬ್ಬರು. ಅವರೀಗ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿಯ ಕೋಮುವಾದಿ, ಯುವಜನ ವಿರೋಧಿ ನಡೆಗಳ ವಿರುದ್ಧ ಬಿರುಸಿನ ಪ್ರಚಾರವನ್ನೂ ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: ಸಂವಿಧಾನ ಸಭೆ ನಿರ್ಧಾರದಿಂದ ‘ಬಿಜೋಯ್ ಇಮ್ಯಾನ್ಯುವೆಲ್’ ತೀರ್ಪಿನವರೆಗೆ: ವಂದೇ ಮಾತರಂ ಹಾಡುವುದು ಕಡ್ಡಾಯವೇ?

ದೆಹಲಿ, ಝಾರ್ಖಂಡ್ ಬಳಿಕ ಹೋರಾಟದ ಕಿಚ್ಚು ಬಿಹಾರಕ್ಕೆ ವ್ಯಾಪಿಸಿದೆ. ಧರ್ಮೇಂದ್ರ ಪ್ರಧಾನ್ ವಿರುದ್ಧದ ಹೋರಾಟದಲ್ಲೇ ವಿನೂತನ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದ ಬಿಹಾರದ ಯುವಜನರು, ಮತ್ತೆ ಬೀದಿಗಿಳಿದಿದ್ದಾರೆ. ಆಗಸ್ಟ್ 18ರಿಂದ ಶುರುವಾಗಿರುವ ಹೋರಾಟದ ಪ್ರಮುಖ ಆಗ್ರಹವೇ- “ಶಿಕ್ಷಕರ ನೇಮಕಾತಿ ಪರೀಕ್ಷೆಯ ಮಾದರಿಯನ್ನು ಬಲಿಸಬೇಕು” ಎಂಬುದಾಗಿದೆ. ಈ ಪರೀಕ್ಷೆಯು ‘ಪ್ರಿಲಿಮಿನರಿ ಮತ್ತು ಮೇನ್ಸ್‌’- ಎರಡು ಸುತ್ತಿನಲ್ಲಿ ನಡೆಯುತ್ತಿದ್ದು, ನೆಗಟಿವ್ ಅಂಕಗಳನ್ನೂ ಅಳವಡಿಸಲಾಗಿದೆ. ಯಾವುದೇ ನೆಗಟಿವ್ ಮಾರ್ಕ್ ಇಲ್ಲದೇ ಒಂದೇ ಹಂತದಲ್ಲಿ ಪರೀಕ್ಷೆಗಳನ್ನು ಮುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ನಿವಾಸದತ್ತ ಹೊರಟಿದ್ದ ಚಳವಳಿಯನ್ನು ತಡೆಯಲು ಪೊಲೀಸರು ಜಲಪಿರಂಗಿ ಬಳಸಿದ್ದಾರೆ. ಈ ತಿಕ್ಕಾಟದಲ್ಲಿ ಹಲವರು ಗಾಯಗೊಂಡಿದ್ದಾರೆ.

ಹೀಗೆ ವಿದ್ಯಾರ್ಥಿ ಚಳವಳಿಗಳು ದಿನದಿಂದ ದಿನಕ್ಕೆ ಬಿರುಸು ಪಡೆಯುತ್ತಿವೆ. ನಿರುದ್ಯೋಗ ಸಮಸ್ಯೆಯು ವಿದ್ಯಾರ್ಥಿಗಳನ್ನು ಬಾಧಿಸುತ್ತಿರುವ ಸೂಚನೆಗಳನ್ನು ಈ ಹೋರಾಟಗಳು ಸ್ಪಷ್ಟವಾಗಿ ಹೇಳುತ್ತಿವೆ. ಇವುಗಳನ್ನು ಆಡಳಿತರೂಢ ಪಕ್ಷಗಳು ಎದುರಿಸುವುದು ಅನಿವಾರ್ಯವಾಗಿದೆ. ಈ ವಿದ್ಯಾರ್ಥಿಗಳೇ ಮುಂದಿನ ಚುನಾವಣೆಗಳನ್ನು ನಿರ್ಧರಿಸಬಹುದೆಂಬ ಆತಂಕವೂ ಅಧಿಕಾರದಲ್ಲಿದ್ದವರಿಗೆ ಕಾಡಲಾರಂಭಿಸಿದೆ. ಜೆನ್‌ ಝೀಗಳನ್ನು ಒಲಿಸಿಕೊಳ್ಳುವಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರಿಗೆ ಅಧಿಕಾರ ದೊರಕೀತು!

51b357c4b2eb5ea348958f05f0063c7eae6f76468e16497b5d93e6a37750116e?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ ಪಿಳ್ಳೈ ಮುಡಿಗೇರಿದ ನೊಬೆಲ್ ಶಾಂತಿ ಪುರಸ್ಕಾರ!

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ ಕೆಫೆ’: 44 ಲಕ್ಷ ರೂ. ವಹಿವಾಟು!

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ; ಮೋದಿ ಸರ್ಕಾರಕ್ಕೆ ಕೇರಳದ ಪೆಟ್ಟು

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ...