ದೇಶವನ್ನು ಸಾಲದ ಕೂಪಕ್ಕೆ ತಳ್ಳಿದವರಾರು?

Date:

ಭಾರತದ ರಾಜಕೀಯದಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಸಿಪಿಎಂ ಸಂಸದ ವಿ. ಶಿವದಾಸನ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಹಣಕಾಸು ಸಚಿವಾಲಯವು, 2025-26ರ ಬಜೆಟ್‌ ಅಂದಾಜಿನ ಪ್ರಕಾರ ಕೇಂದ್ರದ ಒಟ್ಟು ಸಾಲ 200.16 ಲಕ್ಷ ಕೋಟಿ ರೂ ತಲುಪಲಿದೆ ಅಂತ ಹೇಳಿದೆ. ಸರ್ಕಾರ ತನ್ನ ಆದಾಯದ ಮೂಲವನ್ನ ಬಲಪಡಿಸುವ ಬಲದು ಸಾಲದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮನಮೋಹನ್ ಸಿಂಗ್‌ ಅವರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಾಲ ಸುಮಾರು ₹53.11 ಲಕ್ಷ ಕೋಟಿ ಆಗಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಲದ ಮೊತ್ತ ಸುಮಾರು 200 ಲಕ್ಷ ಕೋಟಿಯನ್ನೂ ಮೀರಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು 11 ವರ್ಷಗಳಲ್ಲಿ ಈ ಸಾಲದ ಮೊತ್ತವು ₹148 ಲಕ್ಷ ಕೋಟಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ 200 ಲಕ್ಷ ಕೋಟಿ ರೂ. ಸಾಲವನ್ನು ದೇಶದ ಜನಸಂಖ್ಯೆಗೆ (140 ಕೋಟಿ) ತಾಳೆ ಹಾಕಿ ನೋಡಿದರೆ, ಎಲ್ಲ ಭಾರತೀಯರ ಮೇಲೆ ತಲಾ ಸರಾಸರಿ 1,42,857 ರೂ. ಸಾಲ ಇದೆ. 

- Advertisement -

ಮೋದಿ ಅವರ ಅಚ್ಛೇ ದಿನ್, ಸಬ್‌ ಕಾ ಸಾತ್ – ಸಬ್‌ ಕಾ ವಿಕಾಸ್ ಘೋಷಣೆಯಲ್ಲಿ ದೇಶದ ಸಾಲ ಬರೋಬ್ಬರಿ ಸರಾಸರಿ ಮೂರು ಪಟ್ಟು ಹೆಚ್ಚಾಗಿದೆ. ಆದರೆ, ಯಾರ ಅಭಿವೃದ್ಧಿಯೂ ಆಗಿಲ್ಲ. ಪ್ರಸ್ತುತ ಭಾರತದಲ್ಲಿ 100 ಕೋಟಿಗೂ ಅಧಿಕ ಜನರು ಇಂದಿಗೂ ಕೊಳ್ಳುವ ಸಾಮರ್ಥ್ಯವಿಲ್ಲದೆ ಒದ್ದಾಡುತ್ತಿದ್ದಾರೆ. ಬದುಕು ದೂಡಲು ಹರಸಾಹಸ ಪಡುತ್ತಿದ್ದಾರೆ. ಆದರೂ, ಅವರ ತಲೆಯ ಮೇಲೆ ಬೃಹತ್ ಸಾಲದ ಹೊರೆಯನ್ನು ಸರ್ಕಾರಗಳು ಹೇರಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

ಅಭಿವೃದ್ಧಿಶೀಲ ರಾಷ್ಟ್ರದ ಆರ್ಥಿಕ ಸ್ಥಿತಿ ಸಮತೋಲಿತ, ಸುಸ್ಥಿರವಾಗಿರಬೇಕಿದ್ದರೆ ಆದಾಯ, ಖರ್ಚು ವೆಚ್ಚಗಳ ನಡುವೆ ಅಂತರ ಕಡಿಮೆಯಾಗಿರಬೇಕು. ಸಾಲ ಮಾಡಿ ತುಪ್ಪ ತಿನ್ನುವ, ಮದುವೆ ಮಾಡುವ ಪರಿಸ್ಥಿತಿ ಬರಬಾರದು. ಸಾಲ+ಬಡ್ಡಿ, ವೇತನ+ಪಿಂಚಣಿಗೆ ನಮ್ಮ ಆದಾಯದ ಬಹುಪಾಲು ವ್ಯಯವಾದರೆ ಅಭಿವೃದ್ಧಿಗೆ ಮತ್ತೆ ಸಾಲದ ಮೊರೆ ಹೋಗುವುದು ಅನಿವಾರ್ಯ. ಮಿತಿ ಮೀರಿದರೆ ಆರ್ಥಿಕ ಅಪಾಯ/ಬಿಕ್ಕಟ್ಟು ತಪ್ಪಿದ್ದಲ್ಲ. 

2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರೋದಕ್ಕಿಂತ ಮೊದಲು, “ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಯುವಕರು ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ, ಕಾರ್ಖಾನೆಗಳು ಬಾಗಿಲು ಹಾಕುತ್ತಿದೆ. ನಾವು ಅಧಿಕಾರಕ್ಕೆ ಬಂದ್ರೆ ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ” ಅಂತ ಒಂದು ದೊಡ್ಡ ಘೋಷಣೆಯನ್ನ ಮಾಡುತ್ತಾರೆ. ಈ ಘೋಷಣೆ ಜನರನ್ನ ನಂಬುವಂತೆ ಮಾಡಿತ್ತು. ಯಾರೂ ಊಹಿಸಲಿಲ್ಲ, ಈ ಭರವಸೆಯ ಹಿಂದೆ ದೊಡ್ಡ ಮೋಸದ ಜಾಲ ಇರಬಹುದು ಅಂತ. 

ಇಂದು 2025ರಲ್ಲಿ ನಾವಿದ್ದೇವೆ. ಆ 2 ಕೋಟಿ ಉದ್ಯೋಗಗಳು ಎಲ್ಲಿ ಹೋಗಿದೆ ಅನ್ನೋದೇ ಗೊತ್ತಿಲ್ಲ. ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಯುವಕರು ಡಿಗ್ರಿ ಪಡೆದುಕೊಂಡು, ಸ್ಕಿಲ್ ಕೋರ್ಸ್ ಮಾಡಿ, ಇನ್ನೂ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಇದನ್ನ ಸರ್ಕಾರದ ಅಧಿಕೃತ ಅಂಕಿಅಂಶಗಳೇ ಹೇಳುತ್ತೆ. ದೇಶದಲ್ಲಿ ಕಾರ್ಖಾನೆಗಳು ಮುಚ್ಚುತ್ತಿವೆ. ಐಟಿ ಕಂಪನಿಗಳು ಜನರನ್ನು ಕೆಲಸದಿಂದ ಹೇಳದೇ ಕೇಳದೇ ಮನೆಗೆ ಕಳಿಸುತ್ತಿದ್ದಾರೆ. ಮೋದಿ ಅವರ “ಮೇಕ್ ಇನ್ ಇಂಡಿಯಾ” ಯೋಜನೆಯು ಹೇಳಿಕೆಯಲ್ಲಿ ಮಾತ್ರ ಸೀಮಿತವಾಗಿದೆ. 

ಮೋದಿ ಅವರು ಇನ್ನೊಂದು ದೊಡ್ಡ ಭರವಸೆ ನೀಡಿದ್ದರು. “ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಭ್ರಷ್ಟರನ್ನು ಜೈಲಿಗಟ್ಟುತ್ತೇವೆ” ಅಂತ. ಇದು ಚುನಾವಣಾ ರ್ಯಾಲಿಯಲ್ಲಿ ಮೋದಿಗೆ ಹೆಚ್ಚಿನ ಚಪ್ಪಾಳೆಯನ್ನ ತಂದುಕೊಟ್ಟಿತ್ತು. ಕಪ್ಪು ಹಣದ ಹಿಂದೆ ಇರುವ ದೇಶದ ಶತ್ರುಗಳನ್ನು ಮಟ್ಟ ಹಾಕ್ತೇವೆ ಅಂತ ಅಬ್ಬರಿಸಿದ್ದರು. ಸ್ವಿಸ್‌ ಬ್ಯಾಂಕಿನಲ್ಲಿ ಭಾರತೀಯರ ಕಪ್ಪು ಹಣ ಎಷ್ಟಿದೆಯೆಂದರೆ, ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಹಾಕಬಹುದು ಎಂದಿದ್ದರು. ಡಿಮಾನಿಟೈಸೇಶನ್ ಮಾಡಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡೋ ಪ್ರಯತ್ನ ಮಾಡಿದ್ದರು. ಅಲ್ಲಿ ಕಷ್ಟ ಅನುಭವಿಸಿದ್ದು ಮಾತ್ರ ಬಡವರು ಹಾಗೂ ಮಿಡಲ್‌ ಕ್ಲಾಸ್‌ ಜನರು. ಯಾರಿಗೂ ಲಾಭವಾಗಲಿಲ್ಲ. ಬದಲಿಗೆ, ಸಣ್ಣ ವ್ಯಾಪಾರಸ್ಥರು, ರೈತರು, ಕಾರ್ಮಿಕರು ತೊಂದರೆಗೊಳಗಾದರು. 

photo 6208715293748562937 y

ಇಂದು ದೇಶದ ಸಾಲದ ಮೊತ್ತ ಎಷ್ಟಿದೆ ನೋಡಿ

ಮೋದಿ ಆಡಳಿತದಲ್ಲಿ ದೇಶದ ಸಾಲ 200 ಲಕ್ಷ ಕೋಟಿ ರೂ. ದಾಟಿದೆ. ಪ್ರತಿ ವರ್ಷ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸಾಲಕ್ಕೆ ಹಾಕಿ, ದೇಶವನ್ನು ಸಾಲಗಾರನನ್ನಾಗಿ ಮಾಡುತ್ತಿದ್ದಾರೆ. ರಸ್ತೆಗಳು, ಸೇತುವೆಗಳು, ರೈಲುಗಳು – ಇವೆಲ್ಲವೂ ಸಾಲದ ಮೇಲೆ ನಿಂತಿವೆ. ಆದರೆ ಈ ಸಾಲದ ಭಾರ ಯಾರ ಮೇಲೆ? ಜನರ ಮೇಲೆ ತೆರಿಗೆಯನ್ನು ಮನಬಂದಂತೆ ಹೇರಲಾಗುತ್ತಿದೆ. ಒಂದು ಹಣದುಬ್ಬರ ಹೆಚ್ಚಾಗಿದೆ, ವಸ್ತುಗಳ ಬೆಲೆ ಆಕಾಶವನ್ನ ನೋಡುತ್ತಿದೆ. 

ನಮ್ಮ ದೇಶದಲ್ಲಿ ಬಡವರೇ ಇಲ್ಲ ಅಂತ ಕೇಂದ್ರ ಸರ್ಕಾರ ಬಡವರನ್ನ ಮರೆಮಾಚೋ ಪ್ರಯತ್ನ ಮಾಡುತ್ತಿದೆ. ಯುಪಿಎ ಸರ್ಕಾರ ಅವಧಿಯಲ್ಲಿ ಜಾರಿಯಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‌ಆರ್‌ಇಜಿ)ಯನ್ನು, ವಿಬಿ-ಗ್ರಾಮ್ ಜಿ  ಎಂದು ಹೆಸರು ಬದಲಿಸಿದ್ದಾರೆ. ಇದರಿಂದ ಆಗುವ ಉಪಯೋಗ ಆದ್ರೂ ಏನು? ಗಾಂಧಿಯವರ ಹೆಸರನ್ನು ತೊಡೆದು, ತಮ್ಮ ಹೆಸರನ್ನು ಹಾಕಿ, ಯೋಜನೆಯನ್ನು ಉಳಿಸಿಕೊಂಡಿದ್ದಾರೆ.

ಬಿಜೆಪಿಯ ಚಿಂತನೆಯೇ ಇದು. ಮಹಾತ್ಮ ಗಾಂಧಿ ಮತ್ತು ಡಾ. ಅಂಬೇಡ್ಕರ್ ಅವರ ಆಲೋಚನೆಗಳನ್ನು ಇಷ್ಟಪಡದವರು. ಬಡವರನ್ನು ಕಂಡರೆ ಅವರಿಗೆ ಆಗೋದೇ ಇಲ್ಲ. ದೇಶದ ಬಡವರಿಗಾಗಿ ತಂದ ಯೋಜನೆಗಳಿಗೆ ಅವರ ಸಹಮತಿಯೂ ಇಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕಡೆಗಣಿಸುವುದೇ ಅವರ ಧೋರಣೆಯಾದಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತಂದಾಗ, ಬಿಜೆಪಿ ವಿರೋಧಿಸಿತು. “ಇದು ದೇಶಕ್ಕೆ ಹಾನಿ” ಎಂದು ಕೂಗಾಡಿತು. ಆದರೆ, ಇಂದು ದೇಶದೆಲ್ಲೆಡೆ ಬಿಜೆಪಿ ಅದೇ ರೀತಿಯ ಗ್ಯಾರಂಟಿ ಯೋಜನೆಗಳನ್ನು ಅನುಸರಿಸುತ್ತಿದೆ. ಇದು ರಾಜಕೀಯದ ದ್ವೇಷವಲ್ಲದೇ ಮತ್ತಿನ್ನೇನು? ತಮ್ಮದ್ದಾದರೆ ಸರಿ, ಬೇರೆಯವರದ್ದಾದರೆ ತಪ್ಪು.

ಇಂದು ದೇಶದಲ್ಲಿ ಭ್ರಷ್ಟಾಚಾರದ ತಾಂಡವ ನಡೆಯುತ್ತಿದೆ. ದೊಡ್ಡ ದೊಡ್ಡ ಯೋಜನೆಗಳ ಹೆಸರಿನಲ್ಲಿ ಹಣವನ್ನ ಲೂಟಿ ಮಾಡುತ್ತಿದ್ದಾರೆ. ಎಲ್‌ಐಸಿ, ಎಂಪ್ಲಾಯ್ಮೆಂಟ್ ಸ್ಕೀಮ್‌ಗಳಲ್ಲಿ ಭ್ರಷ್ಟಾಚಾರದ ಸುದ್ದಿಗಳು ಬರುತ್ತಿವೆ. ಜನರ ಮೇಲೆ ತೆರಿಗೆಗಳ ಭಾರ ಹೇರಿ, ತಮ್ಮ ಕಿಸೆಯನ್ನ ತುಂಬಿಸಿಕೊಳ್ಳುತ್ತಿದ್ದಾರೆ. ಮೋದಿ ನಿಜವಾಗಿಯೂ ದಿನಕ್ಕೆ 18 ಗಂಟೆ ಕೆಲಸ ಮಾಡಿದ್ರೆ ದೇಶದ ಪರಿಸ್ಥಿತಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹದಗೆಡುತ್ತಿರಲಿಲ್ಲ. 

ಆದರೆ ಟಿವಿ ಚಾನಲ್‌ಗಳಲ್ಲಿ, ಪ್ರೈಮ್ ಟೈಮ್ ಡಿಬೇಟ್‌ಗಳಲ್ಲಿ ಇದನ್ನು ತೋರಿಸುವುದಿಲ್ಲ. ಬದಲಿಗೆ, “ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕತೆ” ಎಂದು ಹೇಳುತ್ತಾರೆ. ಜಿಡಿಪಿ 8% ಬೆಳವಣಿಗೆ ಎಂದು ಹೇಳುತ್ತಾರೆ. 2025 ಕ್ಕೆ 5 ಟ್ರಿಲಿಯನ್ ಎಕಾನಮಿ ಎಂದು ಹೇಳಿದ್ದರು. ಏನಾಯಿತು ಆ ಹೇಳಿಕೆ? 

photo 6208715293748562935 y

ಈ ಎಲ್ಲಾ ದುರಂತದ ನಡುವೆ, ಕೆಲವರು ಮೋದಿ ಅವರನ್ನು ರಕ್ಷಿಸುತ್ತಾರೆ. “ಅವರು ದೇಶವನ್ನು ಬದಲಾಯಿಸಿದ್ದಾರೆ” ಎಂದು ಹೇಳುತ್ತಾರೆ. ಆದರೆ ನಿಜವಾದ ಚಿತ್ರ ಇದಲ್ಲ. ದೇಶದ ಬಡವರು, ದೀನದಲಿತರು, ರೈತರು, ಕಾರ್ಮಿಕರು  ಇವರ ಜೀವನದಲ್ಲಿ ಬದಲಾವಣೆ ಆಗಿದೆಯಾ? ಇಲ್ಲ ಆಗಿಲ್ಲ. ಬಿಜೆಪಿಯವರ ಆಡಳಿತದಲ್ಲಿ, ಧನಿಕರನ್ನು ರಕ್ಷಿಸುವುದು ಮುಖ್ಯ, ಕಾರ್ಪೊರೇಟ್‌ಗಳಿಗೆ ತೆರಿಗೆ ಕಡಿತ, ದೊಡ್ಡ ದೊಡ್ಡ ಯೋಜನೆಗಳ ಹೆಸರಿನಲ್ಲಿ ಸಬ್ಸಿಡಿ ಕೊಡಲಾಗತ್ತೆ. ಆದರೆ ಸಾಮಾನ್ಯ ಜನರಿಗೆ ಏನು? ಏನೂ ಇಲ್ಲ. 

ಇದೀಗ ಇನ್ನೊಂದು ಚಿಂತೆಯಲ್ಲಿ ಜನರನ್ನ ದೂಡಿದೆ. ಕೇಂದ್ರದಲ್ಲಿ ಸರ್ಕಾರ ಬದಲಾವಣೆ ಆದರೆ ಏನಾಗುತ್ತದೆ? ಇವರ ಬಂಡವಾಳ ಹೊರಗೆ ಬರುತ್ತದೆ. ಮುಂದಿನ ಸರ್ಕಾರಕ್ಕೆ ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ತುಂಬಾ ಕಷ್ಟ. 200 ಲಕ್ಷ ಕೋಟಿ ರೂ. ಸಾಲ, ಭ್ರಷ್ಟಾಚಾರ, ನಿರುದ್ಯೋಗ, ಬಡತನ ಇವೆಲ್ಲವನ್ನು ಸರಿಪಡಿಸಲು ವರ್ಷಗಳೇ ಬೇಕು. ಇದು ದೇಶದ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ. 

ಬಡವರನ್ನು ಮೇಲೆತ್ತಿ, ದೇಶವನ್ನು ಮುಂದುವರಿಸುವ ಸರ್ಕಾರ ಬೇಕಾಗಿದೆ. ಚುನಾವಣೆಯಲ್ಲಿ ಮಾತ್ರವಲ್ಲ, ದೈನಂದಿನ ಜೀವನದಲ್ಲೂ  ಸರ್ಕಾರವನ್ನು ಪ್ರಶ್ನಿಸಬೇಕು. ಆಗ ಮಾತ್ರ ದೇಶದ ಚಿತ್ರ ಬದಲಾಗೋಕೆ ಸಾಧ್ಯ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...