ಏಕದಿನ ವಿಶ್ವಕಪ್ 2023 | 1983ರ ಕಪಿಲ್ ದೇವ್ – ಸಯ್ಯದ್ ಕಿರ್ಮಾನಿ ದಾಖಲೆ ಮುರಿದ ನೆದರ್ಲೆಂಡ್ಸ್ ಆಟಗಾರರು

Date:

ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್‌ ನಡುವೆ ನಡೆಯುತ್ತಿರುವ 19ನೇ ಪಂದ್ಯದಲ್ಲಿ(ಅಕ್ಟೋಬರ್ 21) ನೆದರ್ಲೆಂಡ್ಸ್‌ನ ಆಟಗಾರರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

- Advertisement -

ಮೊಟ್ಟ ಮೊದಲ ಬಾರಿಗೆ ಕಪಿಲ್‌ ದೇವ್‌ ಸಾರಥ್ಯದ ಭಾರತ ತಂಡ ಜಯಿಸಿದ್ದ 1983ರ ಪ್ರುಡೆನ್ಶಿಯಲ್ ವಿಶ್ವಕಪ್‌ನ ಪ್ರಮುಖ ದಾಖಲೆಯನ್ನು ನೆದರ್ಲೆಂಡ್ಸ್‌ನ ಇಬ್ಬರು ಆಟಗಾರರಾದ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಹಾಗೂ ಲೋಗನ್ ವ್ಯಾನ್ ಬೀಕ್ ಸರಿಗಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಶ್ರೀಲಂಕಾ ವಿರುದ್ಧ ಲಖನೌದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಆರು ಮತ್ತು ಏಳನೇ ಕ್ರಮಾಂಕದ ಆಟಗಾರರಾದ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಹಾಗೂ ಲೋಗನ್ ವ್ಯಾನ್ ಬೀಕ್ 7 ವಿಕೆಟ್ ಜೊತೆಯಾಟದಲ್ಲಿ 130 ರನ್‌ಗಳನ್ನು ಪೇರಿಸಿ ದಾಖಲೆ ನಿರ್ಮಿಸಿದರು. ಇದರೊಂದಿಗೆ 1983ರಲ್ಲಿ ನಿರ್ಮಿಸಿದ್ದ 40 ವರ್ಷಗಳ ಕಪಿಲ್ ದೇವ್ ಹಾಗೂ ಕರ್ನಾಟಕದವರಾದ ಸಯ್ಯದ್ ಕಿರ್ಮಾನಿ ದಾಖಲೆಯನ್ನು ಅಳಿಸಿಹಾಕಿದರು.

ಇಂದಿನ ಪಂದ್ಯದಲ್ಲಿ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 82 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 70 ರನ್‌ ಗಳಿಸಿದರೆ, ಲೋಗನ್ ವ್ಯಾನ್ ಬೀಕ್ 75 ಚೆಂಡುಗಳಲ್ಲಿ 1 ಬೌಂಡರಿ 1 ಸಿಕ್ಸರ್‌ನೊಂದಿಗೆ 59 ರನ್ ಪೇರಿಸಿದರು.

ಇವರಿಬ್ಬರ ಜೊತೆಯಾಟವು ಏಕದಿನ ವಿಶ್ವಕಪ್‌ನಲ್ಲಿ 7 ಅಥವಾ ಏಳರ ನಂತರದ ವಿಕೆಟ್‌ಗಳಲ್ಲಿ ಗಳಿಸಿದ ಅತ್ಯಧಿಕ ರನ್‌ಗಳ ಜೊತೆಯಾಟವಾಗಿದೆ.

1983ರ ಜೂನ್‌ 18ರಂದು ಇಂಗ್ಲೆಂಡ್‌ನ ಟನ್‌ಬ್ರಿಡ್ಜ್ ವೆಲ್ಸ್ ನಡೆದ ಮೂರನೇ ಏಕದಿನ ಪ್ರುಡೆನ್ಶಿಯಲ್ ವಿಶ್ವಕಪ್‌ನಲ್ಲಿ ಕಪಿಲ್ ದೇವ್ ಹಾಗೂ ಸಯ್ಯದ್ ಕಿರ್ಮಾನಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮುರಿಯದ 9ನೇ ವಿಕೆಟ್‌ ಜೊತೆಯಾಟದಲ್ಲಿ 126 ರನ್‌ ಬಾರಿಸಿದ್ದರು. ಆಗ ಭಾರತ ತಂಡವು 140 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಂದಿನ ಪಂದ್ಯದಲ್ಲಿ ನಾಯಕ ಕಪಿಲ್‌ ದೇವ್ 138 ಚೆಂಡುಗಳಲ್ಲಿ 16 ಬೌಂಡರಿ 6 ಸಿಕ್ಸರ್‌ಗಳೊಂದಿಗೆ 175 ರನ್‌ ಸಿಡಿಸಿದರೆ, ಸಯ್ಯದ್ ಕಿರ್ಮಾನಿ 56 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 26 ರನ್‌ ಗಳಿಸಿದ್ದರು.

ಈ ಸುದ್ದಿ ಓದಿದ್ದೀರಾ? ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್

ಆ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 235 ರನ್‌ಗಳಿಗೆ ಆಲೌಟ್‌ ಮಾಡಿ 31 ರನ್‌ಗಳ ವಿಜಯ ಸಾಧಿಸಿತ್ತು. ಅಲ್ಲದೆ ಭಾರತ ತಂಡವು ಟೂರ್ನಿಯಲ್ಲಿ ಹೊಸ ಐತಿಹಾಸಿಕ ಸಾಧನೆ ಮಾಡಿ ಮೊದಲ ವಿಶ್ವಕಪ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...

ಏಷ್ಯನ್ ಗೇಮ್ಸ್: ಸ್ಕೀಟ್ ಶೂಟಿಂಗ್, ಸಾಫ್ಟ್ ಟೆನಿಸ್‌ನಲ್ಲಿ ಭಾರತಕ್ಕೆ ಕಂಚು; ಪದಕದತ್ತ ಮೀರಾಬಾಯಿ ದಾಪುಗಾಲು

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ನಾಲ್ಕನೇ ದಿನವಾದ ಬುಧವಾರ...

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಸೋತರೂ ಎಲ್ಲರ ಹೃದಯ ಗೆದ್ದ ಸುಚಿಕಾ: 700 ಗ್ರಾಂ ಹಿನ್ನಡೆಯಿಂದ ತಪ್ಪಿದ ಚಿನ್ನ

ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)...