ಆ್ಯಷಸ್‌ ಸರಣಿ | 325 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್; ಆಸ್ಟ್ರೇಲಿಯ 91 ರನ್‌ ಮುನ್ನಡೆ  

Date:

ಪ್ರತಿಷ್ಠಿತ ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ನ ಮೂರನೇ ದಿನದಲ್ಲಿ ಆಸಿಸ್‌ ಪಾರಮ್ಯ ಮೆರೆದಿದೆ. ಮೊದಲ ಇನ್ನಿಂಗ್ಸ್‌ ಆಡಿದ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯ ಬೌಲರ್‌ಗಳ ದಾಳಿಗೆ ಸಿಲುಕಿ 325 ರನ್‌ಗಳಿಗೆ ಆಲೌಟ್‌ ಆಗಿ 91 ರನ್‌ಗಳ ಹಿನ್ನಡೆ ಅನುಭವಿಸಿದೆ.

- Advertisement -

ಆಸಿಸ್‌ ಪಡೆ ನೀಡಿದ್ದ 416 ರನ್‌ಗಳಿಗೆ ಉತ್ತರವಾಗಿ ದಿಟ್ಟ ಪ್ರತಿಕ್ರಿಯೆ ನೀಡಲು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆರಂಭಿಕ ಆಟಗಾರ ಬೆನ್‌ ಡಕೆಡ್ 98, ಹ್ಯಾರಿ ಬ್ರೂಕ್ 50, ಝಾಕ್‌ ಕ್ರಾಲಿ 48 ಹಾಗೂ ಅಲಿ ಪೋಪ್‌ 42 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ್ಯಾರು ಪ್ರತಿರೋಧ ತೋರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಆಸ್ಟ್ರೇಲಿಯ ಪರ ಮಿಚೆಲ್ ಸ್ಟಾರ್ಕ್ 88/3, ಟ್ರಾವಿಸ್‌ ಹೆಡ್‌ 17/2, ಜೋಶ್ ಹ್ಯಾಜಲ್ವುಡ್ 71/2 ವಿಕೆಟ್ ಪಡೆದು ತಂಡದ ಮುನ್ನಡೆಗೆ ಸಹಕಾರ ನೀಡಿದರು.

ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ ಆಡಿದ್ದ ಆಸ್ಟ್ರೇಲಿಯಾ 416 ರನ್‌ ಪೇರಿಸಿತ್ತು. ತಂಡದ ಪರ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ 184 ಎಸೆತಗಳನ್ನು ಎದುರಿಸಿ 15 ಬೌಂಡರಿ ಸಹಿತ 110 ರನ್‌ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಇವರೊಂದಿಗೆ ಟ್ರಾವಿಸ್ ಹೆಡ್ 73 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 77, ಡೇವಿಡ್‌ ವಾರ್ನರ್‌ 66, ಮಾರ್ನಸ್ ಲ್ಯಾಬುಸ್ಚಾಗ್ನೆ ಗಳಿಸಿದ 47 ರನ್‌ ಕೂಡ ಆಸಿಸ್‌ 400ರ ಗಡಿ ದಾಟಲು ಸಹಾಯಕವಾಯಿತು.

ಈ ಸುದ್ದಿ ಓದಿದ್ದೀರಾ? ಸರ್ಫ್ರಾಜ್ ಖಾನ್ ಮುಸ್ಲಿಂ ಆಗಿದ್ದೇ ಭಾರತ ತಂಡಕ್ಕೆ ಆಯ್ಕೆ ಆಗದಿರಲು ಕಾರಣವೇ?

ಇಂಗ್ಲೆಂಡ್‌ ಪರ ಜೋಶ್‌ ಟಾಂಗ್‌ 98/3, ಒಲಿ ರಾಬಿನ್ಸನ್‌ 100/3 ಹಾಗೂ ಜೋ ರೂಟ್ 19/2 ವಿಕೆಟ್ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.

ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯ ತಂಡ ಇತ್ತೀಚಿನ ವರದಿಗಳೊಂದಿಗೆ 22 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಗಳಿಸಿದೆ. ಉಸ್ಮಾನ್‌ ಖವಾಜಾ 35 ಹಾಗೂ ಡೇವಿಡ್‌ ವಾರ್ನರ್‌ 20 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಟೆಸ್ಟ್‌ನಲ್ಲಿ ಸ್ಟೀವ್‌ ಸ್ಮಿತ್‌ 32ನೇ ಶತಕ

ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಸ್ಟೀವ್‌ ಸ್ಮಿತ್‌ ಟೆಸ್ಟ್‌ ಕ್ರಿಕೆಟ್‌ ವೃತ್ತಿಯಲ್ಲಿ 32ನೇ ಶತಕ ಪೂರೈಸಿದರು. ಇದರೊಂದಿಗೆ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ 8ನೇ ಸ್ಥಾನಕ್ಕೇರಿದ್ದಾರೆ. ಸ್ಟೀವ್‌ ವಾ ಅವರ 32 ಶತಕಗಳ ದಾಖಲೆಯನ್ನು ಸ್ಮಿತ್‌ ಸರಿಗಟ್ಟಿದ್ದು, ಇನ್ನೊಂದು ಶತಕ ಬಾರಿಸಿದರೆ ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್‌ ಕುಕ್‌ ಜೊತೆ ಸಮಬಲ ಸಾಧಿಸಲಿದ್ದಾರೆ. ಆಸಿಸ್‌ ಆಟಗಾರರ ಪೈಕಿ ಸದ್ಯ 2ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್‌(41 ಶತಕ) ಅವರನ್ನು ಹಿಂದಿಕ್ಕಲು ಇನ್ನೂ 10 ಶತಕ ಬಾರಿಸಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಜು ಬದಲು ವೈಭವ್‌ಗೆ ಅವಕಾಶ ನೀಡಿದ್ದೇಕೆ: ಕಠಿಣ ನಿರ್ಧಾರದ ಹಿಂದಿನ ಅನಿವಾರ್ಯತೆ ವಿವರಿಸಿದ ಗಂಭೀರ್

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್...

ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್ 

ಹಾಸನ ಜಿಲ್ಲೆಯ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ‘ಆಸ್ತಿಕತೆ ಮತ್ತು ನಾಸ್ತಿಕತೆ ವೈಯಕ್ತಿಕ ವಿಚಾರವೇ...

ಏಷ್ಯನ್ ಗೇಮ್ಸ್: ಜಪಾನ್ ಅಂಗಳದಲ್ಲಿ ಭಾರತದ ಭರ್ಜರಿ ಪ್ರದರ್ಶನ; ಶೂಟರ್‌ಗಳ ಕಮಾಲ್, ಕ್ರಿಕೆಟ್‌ನಲ್ಲಿ ಮಿನುಗಿದ ಚಿನ್ನ

ಜಪಾನ್‌ನ ಐಚಿ–ನಾಗೋಯಾದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿರುವ 20ನೇ ಆವೃತ್ತಿಯ ಏಷ್ಯನ್ ಗೇಮ್ಸ್...

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...