ಹಸ್ತಲಾಘವ ಮಾಡಿ ಕ್ರೀಡಾಸ್ಪೂರ್ತಿ ಮೆರೆದ ಭಾರತ–ಪಾಕ್‌ ಯುವ ಹಾಕಿ ಆಟಗಾರರು

Date:

ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿಯ ಭಾರತ–ಪಾಕಿಸ್ತಾನ ಪಂದ್ಯಗಳು ನಕಾರಾತ್ಮಕ ಕಾರಣಗಳಿಂದ ಸುದ್ದಿಯಾಗಿದ್ದವು. ಈ ಚಿತ್ರಣಕ್ಕೆ ಸಂಪೂರ್ಣ ಭಿನ್ನವೆಂಬಂತೆ ಈ ಎರಡು ದೇಶಗಳ ಜೂನಿಯರ್‌ ಹಾಕಿ ತಂಡಗಳ ಆಟಗಾರರು ಸುಲ್ತಾನ್ ಆಫ್ ಜೋಹರ್ ಕಪ್‌ ಟೂರ್ನಿಯಲ್ಲಿ ಪರಸ್ಪರರಿಗೆ ಹಸ್ತಲಾಘವದೊಂದಿಗೆ ಶುಭ ಹಾರೈಸಿ,ಕ್ರೀಡಾಸ್ಫೂರ್ತಿ ಮೆರೆದರು.

- Advertisement -

ಟಾಸ್‌ ವೇಳೆ ಉಭಯ ತಂಡಗಳ ನಾಯಕರು ‘ಸಾಂಪ್ರದಾಯಿಕ’ ಹಸ್ತಲಾಘವವನ್ನು ನಿರಾಕರಿಸಿದ್ದರು. ಪಂದ್ಯದ ವೇಳೆಯೂ ಆಟಗಾರರ ನಡುವೆ ವಾಗ್ವಾದಗಳು ನಡೆದಿದ್ದವು. ಪಂದ್ಯ ಮುಗಿದ ನಂತರವೂ ಕೈಕುಲುಕಿ ಶುಭಾಶಯ ಹೇಳಿರಲಿಲ್ಲ. ಅಲ್ಲದೆ, ಭಾರತ ಕ್ರಿಕೆಟ್‌ ತಂಡವು ಏಷ್ಯಾ ಕಪ್ ಗೆದ್ದ ನಂತರ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್ ಮುಖ್ಯಸ್ಥ, ಪಾಕಿಸ್ತಾನದ ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಭಾರತ ಮಹಿಳಾ ತಂಡವೂ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಪಾಕ್‌ ಆಟಗಾರ್ತಿಯರ ಕೈಕುಲುಕಿರಲಿಲ್ಲ.

ಇದನ್ನು ಓದಿದ್ದೀರಾ? ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಸಿದ್ದ; ಶುಭಮನ್ ಗಿಲ್‌ಗೆ ನಾಯಕತ್ವ – ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್

ಇದಕ್ಕೆ ಭಿನ್ನವಾಗಿ, ಈ ಎಲ್ಲವೂ ಹಸಿರಾಗಿರುವಾಗಲೇ ಹಾಕಿ ತಂಡದ ಯುವ ಆಟಗಾರರು ಪರಸ್ಪರ ಶುಭಕೋರಿ, ಹೈಫೈ ಮಾಡುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಂದ್ಯ 3–3 ಡ್ರಾ: ಭಾರತ ಜೂನಿಯರ್‌ ಪುರುಷರ ಹಾಕಿ ತಂಡವು ಮಂಗಳವಾರ ನಡೆದ ಟೂರ್ನಿಯ ಗುಂಪು ಹಂತದ ತನ್ನ ಮೂರನೇ ಪಂದ್ಯದಲ್ಲಿ 3–3 ರಿಂದ ಪಾಕಿಸ್ತಾನ ವಿರುದ್ಧ ಡ್ರಾ ಸಾಧಿಸಿತು.

ಒಂದು ಹಂತದಲ್ಲಿ ಎರಡು ಗೋಲುಗಳ ಹಿನ್ನಡೆಯಲ್ಲಿದ್ದ ಭಾರತ ತಂಡ ತೀವ್ರ ಒತ್ತಡದಲ್ಲಿತ್ತು. ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ಆಟಗಾರರು 10 ನಿಮಿಷಗಳ ಅಂತರದಲ್ಲಿ ಮೂರು ಗೋಲು ದಾಖಲಿಸಿ ಡ್ರಾ ಮಾಡಿಕೊಂಡರು. ಈ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಉಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಇಲ್ಲ: ಬಡತನ ಮೆಟ್ಟಿ ನಿಂತು ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ನೀರು ದಂಡಾ

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಸೇರಿದಂತೆ ಯಾವೊಂದು ಸೌಕರ್ಯವೂ ಇಲ್ಲ. ಕೈಯಲ್ಲಿ ಬಿಪಿಎಲ್...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

ವಿರಾಟ್ ‘ವಿಶ್ವ’ರೂಪ: 15 ಸಾವಿರ ರನ್ ಗಡಿ ದಾಟಿ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ಕೇರಳದ ತಿರುವನಂತಪುರದಲ್ಲಿರುವ ಗ್ರೀನ್‌ಫೀಲ್ಡ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್...