ಐಪಿಎಲ್‌ 2023 | ಈ ಬಾರಿ ಪಂದ್ಯದ ದಿಕ್ಕು ಬದಲಿಸಿದ 9 ಆಟಗಾರರು

Date:

2023ರ 16ನೇ ಐಪಿಎಲ್‌ ಆವೃತ್ತಿಗೆ ವರ್ಣರಂಜಿತ ತೆರೆಬಿದ್ದಿದೆ. ಈ ಬಾರಿಯ ಟೂರ್ನಿಯಲ್ಲಿ ಹಲವು ವಿಶೇಷತೆಗಳು ದಾಖಲಾದವು. ನಿರೀಕ್ಷೆ ಹುಟ್ಟಿಸಿದ ಆಟಗಾರರು ಕಳಪೆ ಪ್ರದರ್ಶನ ತೋರಿದರೆ, ಕೆಲವು ಆಟಗಾರರು ಭರವಸೆ ಮೂಡಿಸಿದರು. ಪಂದ್ಯದ ದಿಕ್ಕು ಬದಲಿಸಿದ ಆಟಗಾರರಲ್ಲಿ ಕೆಲವರು ಇವರು.

ಶುಭಮನ್‌ ಗಿಲ್ – ಗುಜರಾತ್‌ ಟೈಟಾನ್ಸ್

ಗುಜರಾತ್‌ ಟೈಟಾನ್ಸ್  ಫೈನಲ್‌ ತಲುಪಲು ಕಾರಣರಾದ ಪ್ರಮುಖ ಆಟಗಾರರಲ್ಲಿ ಶುಭಮನ್‌ ಗಿಲ್ ಪ್ರಮುಖ ಬ್ಯಾಟ್ಸ್‌ಮೆನ್. ಒಟ್ಟು 17 ಪಂದ್ಯಗಳಲ್ಲಿ 53.33 ಬ್ಯಾಟಿಂಗ್‌ ಸರಾಸರಿಯಲ್ಲಿ 890 ರನ್‌ ಬಾರಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಇವರ ಆಟದಲ್ಲಿ ಮೂರು ಶತಕಗಳು ಹಾಗೂ ನಾಲ್ಕು ಅರ್ಧ ಶತಕಗಳು ಒಳಗೊಂಡಿವೆ. ಒಟ್ಟಾರೆಯಾಗಿ 33 ಸಿಕ್ಸರ್ ಹಾಗೂ 85 ಬೌಂಡರಿ ಬಾರಿಸಿದ್ದಾರೆ. ತಂಡ ಒತ್ತಡಕ್ಕೆ ಸಿಲುಕಿದಾಗ ಸ್ಫೋಟಕ ಶೈಲಿಯಲ್ಲಿ ಬ್ಯಾಟ್‌ ಬೀಸುವ ಚಾಕಚಕ್ಯತೆ ಹೊಂದಿರುವ ಆಟಗಾರ. ಸ್ಟ್ರೈಕ್ ರೇಟ್: 156.43.   

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಫಾಫ್ ಡು ಪ್ಲೆಸಿಸ್ – ಆರ್‌ಸಿಬಿ ತಂಡದ ನಾಯಕ

ದಕ್ಷಿಣ ಆಫ್ರಿಕಾದ ಆಟಗಾರ. ವಯಸ್ಸು 38 ದಾಟಿದರೂ ಮೈದಾನದಲ್ಲಿ ಧೋನಿಯಷ್ಟೆ ಚುರುಕು. ಆರ್‌ಸಿಬಿ ಪ್ಲೇಆಫ್ ಹಂತ ತಲುಪಲು ಇವರ ಕೊಡುಗೆ ಅಪಾರ. ಬ್ಯಾಟಿಂಗ್‌ ಮಾತ್ರವಲ್ಲ ಕ್ಷೇತ್ರ ರಕ್ಷಣೆಯಲ್ಲೂ ಅಮೋಘ ಕೈಚಳಕ ತೋರಿಸುತ್ತಾರೆ. ಟೂರ್ನಿಯಲ್ಲಿ ಪಟ್ಟು 14 ಪಂದ್ಯಗಳೊಂದಿಗೆ 56.15ರ ಸರಾಸರಿಯೊಂದಿಗೆ 730 ರನ್‌ ಕಲೆಹಾಕಿದ್ದಾರೆ. ಇವರ ಆಟದಲ್ಲಿ 8 ಅರ್ಧ ಶತಕಗಳು ಮೂಡಿಬಂದಿವೆ. 36 ಸಿಕ್ಸರ್‌ ಹಾಗೂ 60 ಬೌಂಡರಿಗಳು ಇವರ ಅಬ್ಬರದ ಬ್ಯಾಟಿಂಗ್‌ನಲ್ಲಿ ಮೂಡಿಬಂದಿದೆ. ಸ್ಟ್ರೈಕ್ ರೇಟ್: 153.68

ರಿಂಕು ಸಿಂಗ್ – ಕೋಲ್ಕತ್ತಾ ನೈಟ್‌ ರೈಡರ್ಸ್

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಐದು ಚೆಂಡುಗಳಲ್ಲಿ 5 ಸಿಕ್ಸರ್ ಬಾರಿಸಿ  ಅಮೋಘ ಗೆಲುವು ತಂದುಕೊಟ್ಟ ಎಡಗೈ ಬ್ಯಾಟ್ಸಮೆನ್ ರಿಂಕುಸಿಂಗ್. 25 ವರ್ಷದ ರಿಂಕು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ಟಿ20 ತಂಡಕ್ಕೆ ಆಯ್ಕೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. 14 ಪಂದ್ಯಗಳೊಂದಿಗೆ 59.25ರ ಸರಾಸರಿಯೊಂದಿಗೆ 474 ರನ್‌ ಸಂಗ್ರಹಿಸಿದ್ದಾರೆ. 54 ಬೌಂಡರಿ ಹಾಗೂ 18 ಸಿಕ್ಸರ್‌ನೊಂದಿಗೆ 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್: 149.53

ರಶೀದ್ ಖಾನ್ – ಗುಜರಾತ್‌ ಟೈಟಾನ್ಸ್

ಅಫ್ಘಾನಿಸ್ತಾನದ ಲೆಗ್‌ಸ್ಪಿನ್ನರ್ ರಶೀದ್‌ ಖಾನ್‌ ಟಿ20 ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್‌ ಪಂದ್ಯಗಳಲ್ಲಿ ಅತ್ಯುತ್ತಮ ಬೌಲರ್‌ಆಗಿ ಹೊರಹೊಮ್ಮುತ್ತಿದ್ದಾರೆ. ಬೌಲಿಂಗ್‌ ಮಾತ್ರವಲ್ಲದೆ ತಂಡ ಒತ್ತಡಕ್ಕೆ ಸಿಲುಕಿದಾಗ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. 17 ಪಂದ್ಯಗಳಲ್ಲಿ ಮಹತ್ವದ 27 ವಿಕೆಟ್‌ಗಳನ್ನು ಕಬಳಿಸಿ ಹಲವು ಪಂದ್ಯಗಳ ಗೆಲುವಿಗೆ ಕಾರಣರಾಗಿದ್ದಾರೆ. ರಶೀದ್‌ ಅವರ ಬೌಲಿಂಗ್‌ ಎಕಾನಮಿ; 20.44

ಯಶಸ್ವಿ ಜೈಸ್ವಾಲ್ – ರಾಜಸ್ಥಾನ್ ರಾಯಲ್ಸ್

ಮುಂಬೈ ರಣಜಿ ತಂಡದ ಪರ ಆಡುತ್ತಿದ್ದ 20 ವರ್ಷದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ನ ಆಟವೇ ಒಂದು ಸೊಗಸು. 17 ವರ್ಷವಿರುವಾಗಲೇ ಐಪಿಎಲ್‌ ಪದಾರ್ಪಣೆ ಮಾಡಿದ ಎಡಗೈ ಬ್ಯಾಟ್ಸ್‌ಮೆನ್ ಬಿರುಸಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯ 14 ಪಂದ್ಯಗಳಲ್ಲಿ ಒಂದು ಶತಕ ಹಾಗೂ ಐದು ಅರ್ಧ ಶತಕಗಳೊಂದಿಗೆ 625 ರನ್‌ ಪೇರಿಸಿದ್ದಾರೆ. ಸ್ಟ್ರೈಕ್ ರೇಟ್: 163.61

ಈ ಸುದ್ದಿ ಓದಿದ್ದೀರಾ? ಅಪರೂಪದ ಅದ್ಭುತ ಕ್ರಿಕೆಟಿಗ ಧೋನಿ ನಿವೃತ್ತಿ ಘೋಷಿಸಲಿದ್ದಾರೆಯೇ?

ಸೂರ್ಯಕುಮಾರ್ ಯಾದವ್ – ಮುಂಬೈ ಇಂಡಿಯನ್ಸ್

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ತಲುಪಲು ಪ್ರಮುಖ ಆಟಗಾರರಲ್ಲಿ ಸೂರ್ಯಕುಮಾರ್‌ ಯಾದವ್‌ ಕೂಡ ಒಬ್ಬರು. ಆರಂಭದ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದರೂ ನಂತರದ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಬ್ಯಾಟಿಂಗ್‌ ಲಯ ಕಂಡುಕೊಂಡರು. ಒಟ್ಟು 16 ಪಂದ್ಯಗಳಲ್ಲಿ 5 ಅರ್ಧ ಶತಕಗಳೊಂದಿಗೆ 605 ರನ್‌ ಸ್ಫೋಟಿಸಿದ್ದಾರೆ. ಸೂರ್ಯ ಅವರ ಆಟದಲ್ಲಿ 28 ಸಿಕ್ಸರ್ ಹಾಗೂ 65 ಬೌಂಡರಿಗಳು ಮೂಡಿಬಂದಿವೆ. ಸ್ಟ್ರೈಕ್ ರೇಟ್: 181.13

ಮೊಹಮ್ಮದ್ ಶಮಿ – ಗುಜರಾತ್‌ ಸೂಪರ್‌ ಜೈಂಟ್ಸ್

32 ವಯಸ್ಸಿನ ಮೊಹಮ್ಮದ್‌ ಶಮಿ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ಪರ್ಪಲ್‌ ಕ್ಯಾಪ್‌ಗೆ ಭಾಜನರಾಗಿದ್ದಾರೆ. ಪವರ್‌ಪ್ಲೇನಲ್ಲಿ ಹಾಗೂ ಡೆತ್ ಓವರ್‌ಗಳಲ್ಲಿ ಎದುರಾಳಿ ತಂಡದ ವಿಕೆಟ್‌ ಪತನಗೊಳಿಸುವ ಬೌಲರ್. 17 ಪಂದ್ಯಗಳಿಂದ 28 ವಿಕೆಟ್ ಕಬಳಿಸಿದ್ದಾರೆ. ಎರಡು ಬಾರಿ 4 ವಿಕೆಟ್ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಬೌಲಿಂಗ್‌ ಎಕಾನಮಿ; 18.61

ಯಜ್ವೇಂದ್ರ ಚಹಾಲ್ – ರಾಜಸ್ಥಾನ್‌ ರಾಯಲ್ಸ್

2023ರ ಐಪಿಎಲ್‌ ಟೂರ್ನಿಯ ಅತ್ಯುತ್ತಮ ಭಾರತೀಯ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ರಶೀದ್ ಹೊರತುಪಡಿಸಿದರೆ ಡೆತ್‌ ಓವರ್‌ನಲ್ಲಿ ವಿಕೆಟ್‌ ಪಡೆಯುವ ಏಕೈಕ ಸ್ಪಿನ್ನರ್. 14 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. ಮೂರು ಬಾರಿ ನಾಲ್ಕು ವಿಕೆಟ್ ಕಬಳಿಸಿರುವುದು ವಿಶೇಷ. ಬೌಲಿಂಗ್‌ ಎಕಾನಮಿ:20.57

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಮ್ಯಾಚ್ ವಿನ್ನರ್’ ಆದ ದಿನೇಶ್ ಕಾರ್ತಿಕ್: ಆರ್‌ಸಿಬಿಗೆ ರೋಚಕ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದಿನೇಶ್...

ಐಪಿಎಲ್ | ಅಲ್‌ಝಾರಿ ಜೋಸೆಫ್ ದುಬಾರಿ ಬೌಲಿಂಗ್; ಆರ್‌ಸಿಬಿಗೆ ಗೆಲ್ಲಲು 177 ರನ್‌ಗಳ ಗುರಿ ನೀಡಿದ ಪಂಜಾಬ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 6ನೇ ಪಂದ್ಯವು ರಾಯಲ್ ಚಾಲೆಂಜರ್ಸ್‌...

ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯ ದಕ್ಷಿಣ ಭಾರತದಲ್ಲಿ ಆಯೋಜನೆ

ಬಿಸಿಸಿಐ ಇಂದು ಐಪಿಎಲ್‌ 2024ರ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ....

ಐಪಿಎಲ್ | ಉಮೇಶ್ ಯಾದವ್ ಸಾಹಸ: ಮುಂಬೈ ವಿರುದ್ಧ ಗುಜರಾತ್‌ಗೆ 6 ರನ್‌ಗಳ ರೋಚಕ ಜಯ

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 5ನೇ...