ಐಪಿಎಲ್ 2023 | ಗುಜರಾತ್‌ಗೆ ಸೆಡ್ಡು ಹೊಡೆಯಲು ಸಜ್ಜಾದ ಪಂಜಾಬ್

Date:

  • ಪಂಜಾಬ್ ಮತ್ತು ಗುಜರಾತ್ ಎರಡು ಪಂದ್ಯಗಳು ಗೆದ್ದು ಒಂದು ಪಂದ್ಯ ಸೋತಿವೆ
  • ಟಾಸ್‌ ಗೆದ್ದರೆ ಬ್ಯಾಟಿಂಗ್‌ಗಿಂತ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು

ಮೊದಲ ಎರಡು ಪಂದ್ಯಗಳನ್ನು ಗೆದ್ದು, ಒಂದೊಂದು ಪಂದ್ಯ ಸೋತಿರುವ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 2023ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಣಸುತ್ತಿವೆ. ಅಂಕಪಟ್ಟಿಯಲ್ಲಿ ಉಭಯ ತಂಡ​ಗಳೂ ತಲಾ 4 ಅಂಕ ಗಳಿಸಿವೆ.

- Advertisement -

ರಿಂಕು ಸಿಂಗ್‌ ಸ್ಫೋಟಕ ಆಟದಿಂದಾಗಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಮುಗ್ಗ​ರಿ​ಸಿದ್ದ ಗುಜ​ರಾತ್‌ ಟೈಟಾನ್ಸ್ ಪುನಃ ಗೆಲುವಿನ ಲಯಕ್ಕೆ ಮರಳಲು ಸಜ್ಜಾಗಿದೆ. ಇಂದು (ಏಪ್ರಿಲ್‌ 13) ನಡೆಯುವ ಪಂಜಾಬ್‌ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಜಯ​ಗ​ಳಿ​ಸುವ ನಿರೀ​ಕ್ಷೆಯ​ಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಶಿಖರ್ ಧವನ್‌ ನಾಯ​ಕ​ತ್ವದ ಪಂಜಾಬ್‌ ಕಿಂಗ್ಸ್ ತಂಡ ಕೂಡಾ ಮೂರನೇ ಪಂದ್ಯ​ದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 8 ವಿಕೆಟ್‌ಗಳಿಂದ ಸೋತಿದ್ದು, ಮತ್ತೆ ಗೆಲು​ವನ್ನು ದಾಖಲಿಸಲು ತವಕಿಸತ್ತಿದೆ.

ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿರುವ ಶಿಖರ್ ಧವ​ನ್‌ ಪಂಜಾಬ್‌ನ ಪ್ರಮುಖ ಶಕ್ತಿ. ಈಗಾಗಲೇ ಮೂರು ಪಂದ್ಯಗಳಿಂದ 225 ರನ್‌ ಬಾರಿಸಿದ್ದಾರೆ. ಐಪಿ​ಎಲ್‌ ಹರಾ​ಜಿನ ದುಬಾರಿ ಆಟ​ಗಾರ ಸ್ಯಾಮ್‌ ಕರ್ರನ್‌ ನಾಲ್ಕನೇ ಪಂದ್ಯದಲ್ಲಿ ಮಿಂಚುವ ಉತ್ಸಾಹದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಮತ್ತೊಬ್ಬ ಪ್ರಭಾವಿ ಆಟಗಾರ ಲಿವಿಂಗ್‌​ಸ್ಟೋನ್‌ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.

ಪಂಜಾಬ್ ಪರವಾಗಿ ಪ್ರಭ್‌​ಸಿ​ಮ್ರಾನ್‌, ಜಿತೇಶ್‌ ಶರ್ಮಾ ಅವರೊಂದಿಗೆ ಶಾರೂಖ್‌ ಖಾನ್‌ ತಮ್ಮ ಶಕ್ತಿ ತೋರಿಸಲು ಸಿದ್ಧರಾಗಿದ್ದಾರೆ. ಬೌಲಿಂಗ್‌ ಪ್ರತಿಭೆಗಳಾದ ಕಗಿಸೋ ರಬಾಡ ಸೇರ್ಪ​ಡೆ​ ಬೌಲಿಂಗ್‌ ವಿಭಾ​ಗಕ್ಕೆ ಬಲ ಒದ​ಗಿ​ಸಿದ್ದು, ಅರ್ಶ​ದೀಪ್‌ ಸಿಂಗ್‌ ಹಾಗೂ ನೇಥನ್‌ ಎಲ್ಲಿಸ್‌ ಎದು​ರಾ​ಳಿ​ಗಳಿಗೆ ಟಾಂಗ್‌ ನೀಡಲು ಸಜ್ಜಾ​ಗಿ​ದ್ದಾರೆ.

ಇತ್ತ, ಹಾಲಿ ಚಾಂಪಿ​ಯನ್‌ ಗುಜ​ರಾತ್‌ ತಂಡದಲ್ಲಿ ಶುಭ್‌ಮನ್ ಗಿಲ್‌, ಸಾಯಿ ಸುದ​ರ್ಶನ್‌, ವಿಜಯ್‌ ಶಂಕರ್‌, ಡೇವಿಡ್ ಮಿಲ್ಲರ್‌, ರಾಹುಲ್ ತೆವಾ​ಟಿಯಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರಶೀದ್‌ ಖಾನ್‌, ಹಾರ್ದಿಕ್‌ ಕೂಡಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವುದರ ಜೊತೆಗೆ ಬೌಲಿಂಗ್‌ನಲ್ಲೂ ಎದುರಾಳಿ ತಂಡದ ಆಟಗಾರರ ನಿದ್ದೆಗೆಡಿಸುತ್ತಿದ್ದಾರೆ.

ವೇಗದ ಬೌಲರ್‌ಗಳಾದ ಮೊಹ​ಮದ್‌ ಶಮಿ ಮತ್ತು ಅಲ್ಜಾರಿ ಜೋಸೆಫ್‌ ವಿಕೆಟ್ ಪಡೆಯುವುದರೊಂದಿಗೆ ರನ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದಾರೆ. ಪಾಂಡ್ಯ ನೇತೃತ್ವದ ಪಡೆಯಲ್ಲಿ ಟೀಮ್‌ ವರ್ಕ್‌ ಸದ್ಬಳಕೆಯಾಗುತ್ತಿದೆ.   

ಒಟ್ಟು ಮುಖಾಮುಖಿ: 02

ಗುಜ​ರಾ​ತ್‌: 01

ಪಂಜಾಬ್ : 01

ಸಂಭವನೀಯ ಆಟಗಾರರು

ಗುಜರಾತ್‌ ಟೈಟಾನ್ಸ್‌:

ವೃದ್ದಿಮಾನ್ ಸಾಹ , ಶುಭ್‌ಮನ್ ಗಿಲ್‌, ಸಾಯಿ ಸುದರ್ಶನ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಜೋಶ್ವಾ ಲಿಟ್ಲ್‌, ಅಲ್ಜಾರಿ ಜೋಸೆಫ್‌, ಯಶ್ ದಯಾಳ್‌, ಮೊಹಮ್ಮದ್ ಶಮಿ.

ಪಂಜಾಬ್‌ ಕಿಂಗ್ಸ್:

ಶಿಖರ್ ಧವನ್‌ (ನಾಯಕ), ಪ್ರಭ್‌ಸಿಮ್ರನ್‌ ಸಿಂಗ್, ಮ್ಯಾಥ್ಯೂ ಶಾರ್ಟ್‌, ಲಿಯಮ್ ಲಿವಿಂಗ್‌​ಸ್ಟೋನ್‌, ಜಿತೇಶ್‌ ಶರ್ಮಾ, ಸ್ಯಾಮ್ ಕರ್ರನ್‌, ಶಾರೂಖ್‌ ಖಾನ್, ಹಪ್ರೀರ್ತ್‌ ಬ್ರಾರ್, ರಾಹುಲ್‌ ಚಹರ್, ಅರ್ಶ್‌ದೀಪ್‌ ಸಿಂಗ್, ಕಗಿಸೋ ರಬಾ​ಡ

ಪಂದ್ಯ: ಸಂಜೆ 7.30ರಿಂದ

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ ಆ್ಯಪ್

ಪಿಚ್‌ ರಿಪೋರ್ಚ್‌

ಮೊಹಾಲಿ ಕ್ರೀಡಾಂಗ​ಣದ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಿದ ಉದಾ​ಹ​ರಣೆ ಹಿಂದಿನ ಪಂದ್ಯಗಳಿಂದ ಗೊತ್ತಾಗಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡರೆ ಮತ್ತೊಮ್ಮೆ ರನ್‌ ಮಳೆ ಹರಿ​ಯುವ ನಿರೀಕ್ಷೆ ಇದೆ.

ಅಲ್ಲದೆ ವೇಗಿ​ಗ​ಳಿಗೂ ಈ ಪಿಚ್‌ ಅನುಕೂ​ಲ​ವಾ​ಗುವ ಸಾಧ್ಯತೆಯಿದೆ. ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ಗಿಂತ ಹೆಚ್ಚು ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊ​ಳ್ಳ​ಬ​ಹುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಇಲ್ಲ: ಬಡತನ ಮೆಟ್ಟಿ ನಿಂತು ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ನೀರು ದಂಡಾ

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಸೇರಿದಂತೆ ಯಾವೊಂದು ಸೌಕರ್ಯವೂ ಇಲ್ಲ. ಕೈಯಲ್ಲಿ ಬಿಪಿಎಲ್...