ಆ್ಯಷಸ್ | ದಾಖಲೆ ಬರೆದ ಟ್ರಾವಿಸ್ ಹೆಡ್; ಸಿಡ್ನಿಯಲ್ಲಿ ಅಬ್ಬರದ ಶತಕ

Date:

ಆ್ಯಷಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (163) ಭರ್ಜರಿ ಶತಕ ಸಿಡಿಸುವ ಮೂಲಕ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.

- Advertisement -

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ ಹೆಡ್, ಈ ಮೈದಾನದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದಾಖಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ಈ ಇನಿಂಗ್ಸ್‌ನೊಂದಿಗೆ ಹೆಡ್, ಒಂದೇ ಆ್ಯಷಸ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ 2025–26ರ ಆ್ಯಷಸ್ ಸರಣಿಯಲ್ಲಿ ಇದು ಅವರ ಮೂರನೇ ಶತಕವಾಗಿದ್ದು, ಈ ಹಿಂದೆ ಪರ್ತ್ ಮತ್ತು ಅಡಿಲೇಡ್ ಟೆಸ್ಟ್‌ಗಳಲ್ಲೂ ಪಂದ್ಯ ವಿಜೇತ ಇನಿಂಗ್ಸ್ ಆಡಿದ್ದರು. ಈ ಸಾಧನೆಯ ಮೂಲಕ ಅವರು ಮ್ಯಾಥ್ಯೂ ಹೇಡನ್, ಅಲಿಸ್ಟರ್ ಕುಕ್, ಮೈಕಲ್ ಸ್ಲೇಟರ್ ಮತ್ತು ಜಾಕ್ ಹಾಬ್ಸ್ ಅವರಂತಹ ದಿಗ್ಗಜ ಆಟಗಾರರ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

600 ರನ್‌ಗಳ ಮೈಲಿಗಲ್ಲು

91 ರನ್‌ಗಳ ಸ್ಕೋರ್‌ನೊಂದಿಗೆ ಮೂರನೇ ದಿನದಾಟ ಆರಂಭಿಸಿದ ಹೆಡ್, ಕವರ್ಸ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿ ಶತಕ ಪೂರೈಸಿದರು. ಕೇವಲ 105 ಎಸೆತಗಳಲ್ಲಿ ತಮ್ಮ 12ನೇ ಟೆಸ್ಟ್ ಶತಕ ಪೂರೈಸಿದ ಅವರು, ನೈಟ್‌ವಾಚ್‌ಮನ್ ಮೈಕಲ್ ನೆಸರ್ ಅವರೊಂದಿಗೆ ಮೂರನೇ ವಿಕೆಟ್‌ಗೆ 72 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಈ ಇನಿಂಗ್ಸ್ ವೇಳೆ ಹೆಡ್ ಪ್ರಸಕ್ತ ಸರಣಿಯಲ್ಲಿ 600 ರನ್ ಪೂರೈಸಿದರು. 2010-11ರ ಆ್ಯಷಸ್ ಸರಣಿಯಲ್ಲಿ ಅಲಿಸ್ಟರ್ ಕುಕ್ (766 ರನ್) ನಂತರ ಒಂದೇ ಸರಣಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆರಂಭಿಕ ಆಟಗಾರ ಎಂಬ ಕೀರ್ತಿಗೆ ಹೆಡ್ ಭಾಜನರಾದರು.

ಇದನ್ನು ಓದಿದ್ದೀರಾ? ರೋಹಿತ್- ಕೊಹ್ಲಿ ನಿವೃತ್ತಿ ನಂತರ ಏಕದಿನ ಕ್ರಿಕೆಟ್ ಅಂತ್ಯ: ಆರ್ ಅಶ್ವಿನ್ ಕಳವಳ

ನೆಸರ್ ವಿಕೆಟ್ ಪತನದ ನಂತರವೂ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಹೆಡ್, ಕೇವಲ 152 ಎಸೆತಗಳಲ್ಲಿ 150 ರನ್‌ಗಳ ಗಡಿ ದಾಟಿದರು. ಅಂತಿಮವಾಗಿ ಭೋಜನ ವಿರಾಮದ ಬಳಿಕ ಜ್ಯಾಕೋಬ್ ಬೆಥೆಲ್ ಎಸೆತದಲ್ಲಿ ಸ್ವೀಪ್ ಮಾಡಲು ಯತ್ನಿಸಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಡಿಆರ್‌ಎಸ್ ಮೊರೆ ಹೋದರೂ ತೀರ್ಪು ಅವರ ಪರವಾಗಿ ಬರಲಿಲ್ಲ. 166 ಎಸೆತಗಳನ್ನು ಎದುರಿಸಿದ ಅವರು 24 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಂತೆ 163 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಟ್ರಾವಿಸ್ ಹೆಡ್ (163) ನಿರ್ಗಮನದ ಬಳಿಕ ಆಸ್ಟ್ರೇಲಿಯಾ ಅಲ್ಪ ಕುಸಿತ ಕಂಡಿತು. ಉಸ್ಮಾನ್ ಖವಾಜ (17) ಮತ್ತು ಅಲೆಕ್ಸ್ ಕ್ಯಾರಿ (16) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ, ಜವಾಬ್ದಾರಿಯುತ ಆಟವಾಡಿದ ಅನುಭವಿ ಸ್ಟೀವ್ ಸ್ಮಿತ್ (ಅಜೇಯ 84) ತಂಡವನ್ನು ಮುನ್ನಡೆಸಿದರು. ಮೂರನೇ ದಿನದ ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 413 ರನ್ ಗಳಿಸಿದ್ದು, 29 ರನ್‌ ಮುನ್ನಡೆ ಸಾಧಿಸಿದೆ. ಸ್ಮಿತ್ ಅವರಿಗೆ ಕ್ಯಾಮರಾನ್ ಗ್ರೀನ್(23) ಜೊತೆ ನೀಡುತ್ತಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

IND vs NZ | 3-1 ಅಂತರದಲ್ಲಿ ಏಕದಿನ ಸರಣಿ ಗೆದ್ದ ಭಾರತ; ಕೊನೆಯ ಪಂದ್ಯದಲ್ಲಿ 22 ರನ್‌ಗಳ ರೋಚಕ ಜಯ!

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ...

ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಮೋಹಿತ್ ಉಲ್ವಾ; ಪಾಕ್ ಮಣಿಸಿ 9ನೇ ಬಾರಿ ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ

ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ 'ಎಸಿಸಿ ಪುರುಷರ ಅಂಡರ್-19 ಏಷ್ಯಾ...

ನ್ಯೂಜಿಲೆಂಡ್ ಟೆಸ್ಟ್ ಸರಣಿ: ಕುಲದೀಪ್ ಯಾದವ್‌ಗೆ ಕೊಕ್, ಗುರ್ನೂರ್ ಬ್ರಾರ್‌ಗೆ ಮಣೆ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ...

ಐಒಎ ಚುನಾವಣೆ ವಿವಾದ: ಭಾರತದ ಒಲಿಂಪಿಕ್ ಪ್ರತಿಷ್ಠೆಗೆ ಧಕ್ಕೆ, ಐಒಸಿ ತೀವ್ರ ಕಳವಳ

ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತೆ ಭುಗಿಲೆದ್ದಿರುವ ಆಂತರಿಕ...