ಜಿಜ್ಞಾಸೆ | ರಿಷಬ್ ಪಂತ್‌ಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ, ಸರ್ಕಾರಗಳ ಆದ್ಯತೆಗಳೇನು?

Date:

ಕ್ರಿಕೆಟಿಗ ರಿಷಬ್ ಪಂತ್ ಅಪಘಾತಕ್ಕೀಡಾಗಿ, ಅಷ್ಟೇ ವೇಗವಾಗಿ ಚೇತರಿಸಿಕೊಂಡು, ಮತ್ತೆ ಆಟವಾಡುತ್ತಿದ್ದಾರೆ. ಈತನಿಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ? ಸ್ವಾತಂತ್ರ್ಯದ ಇಷ್ಟು ದಶಕಗಳ ನಂತರವೂ ಸುಸಜ್ಜಿತ ಆಸ್ಪತ್ರೆಯನ್ನು ತಾಲೂಕ್ ಮಟ್ಟದಲ್ಲೇಕೆ ನಾವು ಕಟ್ಟಲಾಗಿಲ್ಲ? ಉತ್ತಮ ಶಾಲೆ, ಅತ್ಯಾಧುನಿಕ ಆಸ್ಪತ್ರೆಗಳಿಲ್ಲದ ಜನ ಅವುಗಳಿಗಾಗಿ ಬೇಡಿಕೆಯಿಡದೆ ಮಂದಿರ ಮಸೀದಿ ಚರ್ಚ್ ಕಟ್ಟಲು ಮುಂದಾಗುತ್ತಾರೆ ಏಕೆ?

ಇತ್ತೀಚಿಗೆ ಪಾಕಿಸ್ತಾನದ ವಿರುದ್ಧ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಭಾರತ ಜಯಗಳಿಸಿತು. ಅತ್ಯಂತ ಕಡಿಮೆ ರನ್ನುಗಳನ್ನು ಹೊಡೆದರೂ ಭಾರತ ಗೆಲುವು ಸಾಧಿಸಿತು. ಪಂದ್ಯದಲ್ಲಿ ರಿಷಬ್ ಪಂಥ್ ಅದ್ಭುತವಾಗಿ ಕೀಪಿಂಗ್ ಮಾಡಿದರು. ಅದೃಷ್ಟ ಅವರ ಪರವಾಗಿದ್ದ ಕಾರಣ ಬ್ಯಾಟಿಂಗಿನಲ್ಲೂ ಅವರು ಮಿಂಚಿದರು.

ಪಂದ್ಯದ ನಂತರ ರವಿಶಾಸ್ತ್ರಿ ರಿಷಬ್ ಅವರಿಗೆ ಪದಕ ನೀಡಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಮಾರಣಾಂತಿಕ ಅಪಘಾತದ ನಂತರ ರಿಷಬ್ ಕ್ರೀಡಾ ಬದುಕು ಮುಗಿದೇ ಹೋಯಿತು ಎನ್ನುವಷ್ಟು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಸತತ ಶ್ರಮ, ದೃಢತೆಯಿಂದ ಅಚ್ಚರಿಯ ಚೇತರಿಕೆ ಕಂಡರು. ಕ್ರೀಡಾಂಗಣಕ್ಕೆ ಮರಳಿ, ಭಾರತ ತಂಡಕ್ಕೂ ಆಯ್ಕೆಯಾದರು. ಇಂದೊಂದು ಅದ್ಭುತ ಸಾಧನೆ ಎರಡು ಮಾತಿಲ್ಲ.

ಆದರೆ ಈ ಘಟನೆಯ ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳೋಣ. ರಸ್ತೆಯ ವಿಭಜಕಕ್ಕೆ ಪಂಥ್ ಕಾರು ಡಿಕ್ಕಿ ಹೊಡೆದಾಗ ಬೆಂಝ್ ಕಾರಿನಲ್ಲಿದ್ದರು. ಕಾರು ವಿಭಜಕಕ್ಕೆ ಗುದ್ದಿದ ರಭಸಕ್ಕೆ ರಿಷಬ್ ಬದುಕುಳಿದಿದ್ದೇ ಹೆಚ್ಚು. ಬಹುಶಃ ದುಬಾರಿ ಬೆಂಝ್ ಕಾರು ಅವರ ಜೀವ ಉಳಿಸಿತ್ತು ಎಂದರೆ ತಪ್ಪಾಗಲಾರದು. ಭಾರತದ ಜನಸಾಮಾನ್ಯರು ಓಡಿಸುವ ಕಾರು ಅದಾಗಿದ್ದಾರೆ ಪ್ರಾಣ ತಕ್ಷಣ ಹಾರಿ ಹೋಗಿರುತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತದಲ್ಲಿ ಅಪಘಾತವಾದವರಿಗೆ rehabilitation – ಪುನಸ್ಚೈತನ್ಯ ಕಾರ್ಯಕ್ರಮ ಅನ್ನೋದು ಒಂದು ಮರೀಚಿಕೆ. ಅಪಘಾತವಾದವರು ಆಘಾತಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಭಾರತದಲ್ಲಿ ಡಿಸಬಿಲಿಟಿ ಬಗ್ಗೆ ಇರುವ stigma ಬಗ್ಗೆ ಅರಿಯಬೇಕಾದರೆ ಪ್ರೀತಿ ಶ್ರೀನಿವಾಸನ್ ಅವರು ನೀಡಿರುವ – Desigmatising Disability ಎಂಬ ಟೆಡ್ ಟಾಕ್ ಒಮ್ಮೆ ಕೇಳಿ.

ಸರಿಯಾದ ಚಿಕಿತ್ಸೆ ಇಲ್ಲದೆ ಸಾಯುವವರ ಸಂಖ್ಯೆ ಒಂದುಕಡೆಯಾದರೆ, ಬದುಕುಳಿದವರು ವ್ಯಾಕುಲತೆಗೆ ಒಳಗಾಗಿ ಇದ್ದರೂ ಸತ್ತಂತೆ ಜೀವಿಸುವವರ ಸಂಖ್ಯೆ ಇನ್ನೊಂದೆಡೆ. ಇಂದಿಗೂ ಭಾರತದ ಹಳ್ಳಿಗಳಲ್ಲಿ, ಪುಟ್ಟ ಪಟ್ಟಣದಲ್ಲಿ ಅಪಘಾತಕ್ಕೆ ಸಾಮಾನ್ಯ ಜನರು ತುತ್ತಾದರೆ ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ. ಆಂಬುಲೆನ್ಸ್ ಸಿಗಲ್ಲ. ಸಿಕ್ಕರೂ ಮಹಾನಗರಗಳಿಗೆ ಬರುವ ಹೊತ್ತಿಗೆ ಗೋಲ್ಡನ್ hour ಕಳೆದು ಹೋಗಿರುತ್ತದೆ! ರಿಷಬ್ ಅದೃಷ್ಟ ಚೆನ್ನಾಗಿತ್ತು ಪ್ರಥಮ ಚಿಕಿತ್ಸೆಯ ನಂತರ ಡೆಹ್ರಾಡೂನಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾದರು. ಬಿಸಿಸಿಐ ಪ್ರತಿಕ್ಷಣ ಅವರನ್ನು ಮಾನಿಟರ್ ಮಾಡಿತು!

ಇದನ್ನು ಓದಿದ್ದೀರಾ?: ನೆನಪು । ರಾಜೀವ್ ತಾರಾನಾಥ್ ಕುರಿತು ರಹಮತ್ ತರೀಕೆರೆ ಬರೆಹ

ಇನ್ನು ರಿಷಬ್ ಅವರ ರಿಹಬಿಲಿಟೇಷನ್ ಹೇಗಿತ್ತು ಅಂತೀರಾ. ಜಗತ್ತಿನ ಶ್ರೇಷ್ಠ ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಅವರ ಚೇತರಿಕೆಯ ಹಾದಿ ಸುಗಮವಾಯಿತು. ಬಿಸಿಸಿಐ ನಾಸಾದಿಂದ (anti-gravity) ಗುರುತ್ವಾಕರ್ಷಣೆ ಇಲ್ಲದ ಟ್ರೆಡ್ ಮಿಲ್ ಅನ್ನು ತರಿಸಿಕೊಟ್ಟಿತು. ಅಂತರಿಕ್ಷಯಾನಿಗಳು ವ್ಯಾಯಾಮಕ್ಕೆಂದು ಬಳಸುವ ಯಂತ್ರವದು. ಬಿಸಿಸಿಐ ಯಂತ್ರವೊಂದಕ್ಕೆ 8 ಕೋಟಿ ಖರ್ಚು ಮಾಡಿತು. ಹಗಲು ಇರುಳೆನ್ನದೆ ತಂಡವೊಂದು ರಿಷಬ್ ಪುನಶ್ಚೇತನ ಕಾರ್ಯಕ್ರಮದಲ್ಲಿ ಶ್ರಮಿಸಿತು. ಅವರೆಲ್ಲರ ಶ್ರಮದಿಂದ, ಸರಿಯಾದ ಸಮಯಕ್ಕೆ ಸಿಕ್ಕ ಸಲಹೆ, ದೊರೆತ ಸೌಲಭ್ಯಗಳಿಂದ ರಿಷಬ್ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನಿಜವಾಗಿಯೂ ಆತನ ಸಾಧನೆ ಅಪೂರ್ವ. ಅದರಾಚೆಗೆ ಅಪಘಾತಕ್ಕೆ ಸಿಲುಕುವವರಿಗೆಲ್ಲಾ ಇಂತಹ ಅತ್ಯಾಧುನಿಕ ಸೌಲಭ್ಯ ಬಿಡಿ, ಕನಿಷ್ಠ ಪ್ರಾಣ ಉಳಿಸಿಕೊಳ್ಳುವ ಅವಕಾಶವನ್ನಾದರು ನಮ್ಮ ದೇಶದ ಆರೋಗ್ಯ ವ್ಯವಸ್ಥೆ ನೀಡುತ್ತದೆಯೇ? ಅಪಘಾತದಲ್ಲಿ ಬದುಕುಳಿದವರ, ಅಂಗವಿಕಲರಾದವರ ಮನಸ್ಥಿತಿ ಹೇಗಿರುತ್ತದೆ? ಭಾರತದಲ್ಲಿರುವ ಪುನಸ್ಚೈತನ್ಯ ಕಾರ್ಯಕ್ರಮಗಳು ಯಾವುವು? ಸ್ವಾತಂತ್ರ್ಯದ ಇಷ್ಟು ದಶಕಗಳ ನಂತರವೂ ಸುಸಜ್ಜಿತ ಆಸ್ಪತ್ರೆಯನ್ನು ತಾಲೂಕ್ ಮಟ್ಟದಲ್ಲೇಕೆ ನಾವು ಕಟ್ಟಲಾಗಿಲ್ಲ? ಉತ್ತಮ ಶಾಲೆ, ಅತ್ಯಾಧುನಿಕ ಆಸ್ಪತ್ರೆಗಳಿಲ್ಲದ ಜನ ಅವುಗಳಿಗಾಗಿ ಬೇಡಿಕೆಯಿಡದೆ ಮಂದಿರ ಮಸೀದಿ ಚರ್ಚ್ ಕಟ್ಟಲು ಮುಂದಾಗುತ್ತಾರೆ ಏಕೆ? Do we care about lives at all???

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

1 COMMENT

  1. ಹೌದು ಆ ಮಟ್ಟದ ವೈದ್ಯಕೀಯ ಸೌಲಭ್ಯ ದೇಶದ ಪ್ರತಿಯೊಬ್ಬ ನಾಗರೀಕನಿಗೂ ದೊರಕುವಂತಾಗಬೇಕು ಆಗ ನಿಜವಾಗಿಯೂ ದೇಶ ಉದ್ದಾರವಾಗೋದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರ ವಿಂಬಲ್ಡನ್ ಫೈನಲ್: ಜಾಸ್ಮಿನ್ ಪಾವೊಲಿನಿ ಸೋಲಿಸಿ ಬಾರ್ಬೊರಾ ಕ್ರೆಚಿಕೋವಾ ಚಾಂಪಿಯನ್

ಲಂಡನ್‌ನಲ್ಲಿ ನಡೆದ 2024ರ ವಿಂಬಲ್ಡನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಜಾಸ್ಮಿನ್...

ಇಂಗ್ಲೆಂಡ್ v/s ವೆಸ್ಟ್‌ ಇಂಡೀಸ್‌ | ಇಂಗ್ಲೆಂಡ್‌ಗೆ ಇನ್ನಿಂಗ್ಸ್‌ ಗೆಲುವು; ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಆ್ಯಂಡರ್ಸನ್‌

ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ...

ಯೂರೋ ಕಪ್ | ನೆದರ್‌ಲೆಂಡ್ಸ್ ಮಣಿಸಿ ಇಂಗ್ಲೆಂಡ್ ಫೈನಲ್‌ಗೆ; ಸ್ಪೇನ್ ವಿರುದ್ಧ ಪೈಪೋಟಿ

ನೆದರ್​ಲೆಂಡ್ಸ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಹೆಚ್ಚುವರಿ 91ನೇ ನಿಮಿಷದಲ್ಲಿ ಬದಲಿ ಆಟಗಾರ...