ಕರ್ನಾಟಕದ 62 ಸೇತುವೆಗಳಿಗೆ ಬಲವರ್ಧನೆ ಅಗತ್ಯ: ಪಿಆರ್‌ಎಎಂಸಿ ವರದಿ

Date:

ಕರ್ನಾಟಕದಲ್ಲಿ ಕನಿಷ್ಠ 62 ಸೇತುವೆಗಳ ಬಲವರ್ಧನೆಯ ಅಗತ್ಯವಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ (ಪಿಆರ್‌ಎಎಂಸಿ) ಈ ಸಮಸ್ಯೆಯ ಬಗ್ಗೆ ವರದಿ ನೀಡಿದ್ದರೂ ಸರ್ಕಾರವು ಪುನಶ್ಚೇತನ ಕಾಮಗಾರಿಗೆ ಅನುಮೋದನೆ ನೀಡಿಲ್ಲ.

- Advertisement -

2022 ರಲ್ಲಿ ಸುಮಾರು 56 ಸೇತುವೆಗಳನ್ನು ಮರು ಬಲಪಡಿಸುವ ಅಗತ್ಯವಿದೆ ಎಂದು ಪಿಆರ್‌ಎಎಂಸಿ ವರದಿ ನೀಡಲಾಗಿದೆ. ಇನ್ನು ಕೆಲವನ್ನು 2020ರ ಆರಂಭದಲ್ಲಿ ಗುರುತಿಸಲಾಗಿದೆ. ಪಿಆರ್‌ಎಎಂಸಿ ಸಂಸ್ಥೆ ಮಣ್ಣಿನ ಅಧ್ಯಯನವನ್ನು ನಡೆಸಿ ವಿವರವಾದ ಕಾರ್ಯಸಾಧ್ಯತೆಯ ವರದಿಯನ್ನು(ಡಿಎಫ್‌ಆರ್) ಕಳುಹಿಸಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

“ಪಿಆರ್‌ಎಎಂಸಿ ವರದಿಯ ಆಧಾರದ ಮೇಲೆ, ನಾವು ಮಣ್ಣಿನ ಪರೀಕ್ಷೆ ಮತ್ತು ಸಂಚಾರ ಸಾಂದ್ರತೆಯ ವಿಶ್ಲೇಷಣೆಯನ್ನು ನಡೆಸಿದ್ದೇವೆ. ಸೇತುವೆಯ ಸ್ಥಿತಿಯ ಆಧಾರದ ಮೇಲೆ, ನಾವು ವಿವಿಧ ಸೇತುವೆಗಳಿಗೆ ವಿಭಿನ್ನವಾದ ದುರಸ್ತಿಯ ಬಗ್ಗೆ ಸೂಚಿಸಿದ್ದೇವೆ. ನೂತನ ವಾಹನ ಮಾರ್ಗಗಳ ಸೇರ್ಪಡೆಯಿಂದ ಸಣ್ಣ ಬಲವರ್ಧನೆ ಕೆಲಸಗಳವರೆಗೆ, ಹಲವಾರು ತಾಂತ್ರಿಕ ದುರಸ್ತಿಗಳನ್ನು ಸೂಚಿಸಲಾಗಿದೆ” ಎಂದು ಕೆಆರ್‌ಡಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಳಿ ನದಿಯ ಮೇಲಿನ ಸೇತುವೆಯ ಒಂದು ಭಾಗವು ಕುಸಿದಿರುವ ಇತ್ತೀಚಿನ ಘಟನೆಯನ್ನು ಪರಿಗಣಿಸಿ, ಕಾಮಗಾರಿಗಳು ಎಷ್ಟು ನಿರ್ಣಾಯಕವಾಗಿವೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ “ಅವುಗಳಲ್ಲಿ ಕೆಲವು ನಿರ್ಣಾಯಕವಾಗಿವೆ ಮತ್ತು ತಕ್ಷಣ ಗಮನ ಹರಿಸಬೇಕಾಗಿದೆ ಎಂದು ಪಿಆರ್‌ಎಎಂಸಿ ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭರ್ಜಿಯ ಕೊನೆಗೆ ಪ್ರೀತಿಯ ಮುಳ್ಳು ಚುಚ್ಚಿದ ತಾಯಂದಿರು – ಆಲಿಸಲಿ ‘ಮಕ್ಕಳು’

“ಈ ಸೇತುವೆಗಳಲ್ಲಿ ಕೆಲವು ಸ್ವಲ್ಪ ಸಮಯದವರೆಗೆ ಸಂಚಾರ ದಟ್ಟಣೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರಬಹುದು. ಆದರೆ, ಅವುಗಳಲ್ಲಿ ಕೆಲವು ಖಂಡಿತವಾಗಿಯೂ ತಕ್ಷಣ ಗಮನಹರಿಸಬೇಕಾಗಿದೆ ಮತ್ತು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ಕನಿಷ್ಠ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗಳನ್ನು ಈ ಸೇತುವೆಗಳಿಗೆ ಮಾಡಬೇಕು. ಪುನರ್ವಸತಿ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳಲು ಸಾಧ್ಯವಾಗದಿದ್ದರೆ ಸಂಚಾರಕ್ಕೆ ಈ ಸೇತುವೆಗಳನ್ನು ಮುಚ್ಚಬೇಕಿದೆ” ಎಂದು ಪಿಆರ್‌ಎಎಂಸಿ ಮೂಲಗಳು ತಿಳಿಸಿವೆ.

“ಪಿಆರ್‌ಎಎಂಸಿ ರಾಜ್ಯಾದ್ಯಂತ ಸೇತುವೆಗಳ ಸಾಮರ್ಥ್ಯ ಮತ್ತು ಸ್ಥಿರತೆಯನ್ನು ವಿಶ್ಲೇಷಿಸಲು ನಿಯಮಿತ ತಪಾಸಣೆ ನಡೆಸುತ್ತದೆ. ಸೇತುವೆಯ ಬಲವನ್ನು ನಿರ್ಧರಿಸಲು ನಾವು ಸೇತುವೆ ತಪಾಸಣೆ ವಾಹನಗಳನ್ನು ಮೀಸಲಿಟ್ಟಿದ್ದೇವೆ. ನಾವು ಸೇತುವೆಗಳ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಶಕ್ತಿಯನ್ನು ನಿರ್ಧರಿಸಲು ವಿವಿಧ ಪರೀಕ್ಷೆಗಳನ್ನು ನಡೆಸಿದ್ದೇವೆ” ಎಂದು ಪಿಆರ್‌ಎಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಆರ್‌ಡಿಸಿಎಲ್‌ನ ಕರಡು ಅಂದಾಜಿನ ಪ್ರಕಾರ ಈ ಎಲ್ಲ ಸೇತುವೆಗಳನ್ನು ಬಲಪಡಿಸಲು 1,380 ಕೋಟಿ ರೂ. ಭಾರಿ ಪ್ರಮಾಣದ ಹಣದ ಅಗತ್ಯವಿರುವುದರಿಂದ ಯೋಜನೆ ವಿಳಂಬವಾಗಿರಬಹುದು. ಪುನರ್ವಸತಿ ಯೋಜನೆಯು ಈಗಾಗಲೇ ವಿಳಂಬವಾಗಿದ್ದರೂ, ಕೆಲಸವು ಪೂರ್ಣಗೊಳ್ಳಲು ಮೂರು ವರ್ಷಗಳಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಎಂಜಿನಿಯರ್‌ಗಳು ಬಹಿರಂಗಪಡಿಸಿದ್ದಾರೆ.

ಜಿಲ್ಲೆಗಳ ನಡುವಿನ ಸಂಪರ್ಕವನ್ನು ಖಾತ್ರಿಪಡಿಸುವಲ್ಲಿ ಈ ಸೇತುವೆಗಳು ನಿರ್ಣಾಯಕವಾಗಿರುವುದರಿಂದ ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡುವ ಹಲವು ಸೇತುವೆಗಳು ತೆರೆದಿರುತ್ತವೆ. ತುಂಗಾ ನದಿಗೆ ಅಡ್ಡಲಾಗಿ ಮತ್ತು ತೀರ್ಥಹಳ್ಳಿಯ ಶರಾವತಿ ಮತ್ತು ಹಿರೇಕೆರೂರಿನ ಕುಮುದಾವತಿ ನದಿಯ ಹಿನ್ನೀರಿನ ಮೇಲೆ ಸೇರಿದಂತೆ ಅನೇಕ ಸೇತುವೆಗಳು ರಾಜ್ಯದ ಕರಾವಳಿ ಮತ್ತು ಉತ್ತರ ಭಾಗದಲ್ಲಿ ಹರಡಿಕೊಂಡಿವೆ. ಹಲವು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಡಿಯಲ್ಲಿ ಬರುತ್ತವೆ.

ಆಗಸ್ಟ್ 7 ರಂದು ಕುಸಿದು ಬಿದ್ದ ಸೇತುವೆಯಿಂದ 10 ಕಿ.ಮೀ ದೂರದಲ್ಲಿರುವ ಸದಾಶಿವಗಡದಿಂದ ಔರಾದ್‌ಗೆ ಸಂಪರ್ಕ ಕಲ್ಪಿಸುವ ಕಾಳಿ ನದಿಗೆ ಅಡ್ಡಲಾಗಿರುವ ಸೇತುವೆಗಳ ಪೈಕಿ ಒಂದು ಸೇತುವೆಯನ್ನು ಬಲಪಡಿಸುವ ತುರ್ತು ಅಗತ್ಯವಿದೆ.

ಕೆಲವು ಸೇತುವೆಗಳು ಗಂಭೀರ ಸ್ಥಿತಿಯಲ್ಲಿವೆ ಮತ್ತು ತಕ್ಷಣದ ಗಮನದ ಅಗತ್ಯವಿದೆ. ಅವುಗಳಲ್ಲಿ ಕೆಲವು ಸ್ವಲ್ಪ ಸಮಯದವರೆಗೆ ಸಂಚಾರ ದಟ್ಟಣೆಯನ್ನು ತಡೆದುಕೊಳ್ಳಬಹುದು. ತಕ್ಷಣದ ದುರಸ್ತಿ ಸಾಧ್ಯವಾಗದಿದ್ದರೆ, ಸಂಚಾರವನ್ನು ಪರ್ಯಾಯ ರಸ್ತೆಗಳಿಗೆ ತಿರುಗಿಸಬೇಕು ಎಂದು ಪಿಆರ್‌ಎಎಂಸಿ ಮೂಲಗಳು ತಿಳಿಸಿವೆ.

ಮೂಲ: ಡಿಎಚ್‌ ವರದಿ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಸಿಎಂ ಡಿ ಕೆ ಶಿವಕುಮಾರ್

ಇದೇ ಅಕ್ಟೋಬರ್ 26 ರಂದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ...

ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಸಿನೆಮಾದ ಶಕ್ತಿ ಅದರ ಹಿಂದೆ ನಿಂತಿರುವ ತಂತ್ರಜ್ಞರ ಸಂಖ್ಯೆಯಲ್ಲಾಗಲಿ, ದುಬಾರಿ ಉಪಕರಣಗಳಲ್ಲಾಗಲಿ...

ರಾಜ್ಯದಲ್ಲಿ ಮಧ್ಯಾಹ್ನವೇ ಮಳೆ ಅಬ್ಬರ; 13 ಜಿಲ್ಲೆಗಳಲ್ಲಿ ಇನ್ನೂ 4 ದಿನ ಭರ್ಜರಿ ಮಳೆ: ಹವಾಮಾನ ಇಲಾಖೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಗಾರು ಮಳೆ...

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ...