ಬಿಬಿಎಂಪಿ | 3 ವರ್ಷಗಳ ಬಳಿಕ ಎಲ್‌ಇಡಿ ದೀಪ ಅಳವಡಿಕೆ ಯೋಜನೆಗೆ ಮರುಜೀವ

Date:

ಬೆಂಗಳೂರಿನಲ್ಲಿ 5 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಸುವ ಯೋಜನೆಯನ್ನು ಮೂರು ವರ್ಷಗಳ ಬಳಿಕ ಪುನರಾರಂಭಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಎಲ್‌ಇಡಿ ಲೈಟ್‌ ಅಳವಡಿಕೆಗೆ 2018ರಿಂದ ಬಿಬಿಎಂಪಿ ಪ್ರಯತ್ನ ನಡೆಸುತ್ತಿದೆ. ಆದರೆ, ನಾನಾ ಕಾರಣದಿಂದ ಯೋಜನೆಯ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಇದೀಗ, ಬಿಬಿಎಂಪಿಯ ಎಲ್ಲ ವಾರ್ಡ್‌ಗಳ 85,656 ರಸ್ತೆಗಳಲ್ಲಿ ಇರುವ ಬೀದಿ ದೀಪಗಳ ಸಂಖ್ಯೆ ಲೆಕ್ಕ ಹಾಕುವ ಮೂಲಕ ಎಲ್‌ಇಡಿ ದೀಪಗಳ ಅಳವಡಿಕೆ ಯೋಜನೆಗೆ ಮರುಜೀವ ನೀಡುವುದಕ್ಕೆ ಮುಂದಾಗಿದೆ.

ಈ ಯೋಜನೆಯೂ ಈಗಿರುವ ‘ಸೋಡಿಯಂ ಆವಿ ಬಲ್ಬ್‌’ಗಳನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಿಂದಾಗಿ ಬೆಸ್ಕಾಂಗೆ ಬಿಬಿಎಂಪಿ ಪಾವತಿಸುವ ವಾರ್ಷಿಕ ವಿದ್ಯುತ್ ಬಿಲ್‌ನಲ್ಲಿ ₹86.31 ಕೋಟಿ ಹಣವನ್ನು ಕಡಿತಗೊಳಿಸುತ್ತದೆ. ಸೋಡಿಯಂ ಆವಿ ಬಲ್ಬ್‌ಗಳನ್ನು ತೆರವುಗೊಳಿಸಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಿದರೆ, ವಿದ್ಯುತ್ ಶುಲ್ಕದಲ್ಲಿ 1/3 ಪಟ್ಟು ಕಡಿಮೆಯಾಗುತ್ತದೆ. ನಿರ್ವಹಣಾ ವೆಚ್ಚವೂ ಕಡಿತವಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಎಲ್‌ಇಡಿ ಯೋಜನೆಗೆ ಮರುಜೀವ ನೀಡಲು ಬಿಬಿಎಂಪಿಯ ಎರಡನೇ ಪ್ರಯತ್ನ ಇದಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಬಿಎಂಪಿಯ ಸಮೀಕ್ಷೆಯ ಪ್ರಕಾರ, ಏಳು ವಲಯಗಳಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಿದ ಬಳಿಕ, ವಿದ್ಯುತ್ ಬಳಕೆಯಲ್ಲಿ ಗಣನೀಯ ಇಳಿಕೆ ಕಾಣಬಹುದು. ಉದಾಹರಣೆಗೆ, ಆರ್‌ಆರ್‌ನಗರ ಮತ್ತು ದಾಸರಹಳ್ಳಿಯಲ್ಲಿ ಪ್ರಸ್ತುತ ಬಳಕೆ 909 ಲಕ್ಷ ಯೂನಿಟ್‌ಗಳಾಗಿದ್ದು, ಎಲ್‌ಇಡಿ ಬಲ್ಬ್‌ಗಳೊಂದಿಗೆ 302 ಲಕ್ಷ ಯೂನಿಟ್‌ಗೆ ಇಳಿಯುವ ನಿರೀಕ್ಷೆಯಿದೆ.

ಪೂರ್ವ ಮತ್ತು ಬೊಮ್ಮನಹಳ್ಳಿಯಂತಹ ಇತರ ವಲಯಗಳಲ್ಲಿ ಇದೇ ರೀತಿಯ ವಿದ್ಯುತ್ ಬಳಕೆಯ ಕಡಿತವನ್ನು ನಿರೀಕ್ಷಿಸಲಾಗಿದೆ. ಅಲ್ಲಿ ವಿದ್ಯುತ್ ಶಕ್ತಿಯ ಬಳಕೆ 877 ಲಕ್ಷದಿಂದ 346 ಲಕ್ಷ ಯೂನಿಟ್‌ಗಳಿಗೆ ಇಳಿಯುತ್ತದೆ ಎಂದು ಹೇಳಲಾಗಿದೆ.

ಎಂಟು ಬಿಬಿಎಂಪಿ ವಲಯಗಳಲ್ಲಿ ಮಹದೇವಪುರ ವಲಯವು ಸಮೀಕ್ಷೆಯ ಭಾಗವಾಗಿರಲಿಲ್ಲ. ಈ ವಲಯವು ಈಗಾಗಲೇ ಹೆಚ್ಚಿನ ಸಂಖ್ಯೆಯ ಎಲ್ಇಡಿ ಬೀದಿದೀಪಗಳನ್ನು ಹೊಂದಿದೆ.

ಬಿಬಿಎಂಪಿಯು ಬೆಸ್ಕಾಂಗೆ ವಾರ್ಷಿಕ ಸುಮಾರು ₹256 ಕೋಟಿ ಹಣವನ್ನು ವಿದ್ಯುತ್ ಶುಲ್ಕವಾಗಿ ಪಾವತಿಸುತ್ತದೆ. ಎಲ್ಲ ಬೀದಿದೀಪಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಇನ್ನೂ ₹53.15 ಕೋಟಿ ಪಾವತಿಸುತ್ತದೆ.

ಬಿಬಿಎಂಪಿ ಸೋಡಿಯಂ ಆವಿ ಬಲ್ಬ್‌ಗಳ ಬದಲಾಗಿ ಎಲ್‌ಇಡಿ ಬಲ್ಬ್‌ಗಳಿಗೆ ಬದಲಾವಣೆ ಮಾಡಿಕೊಂಡ ನಂತರ, ವಿದ್ಯುತ್ ಬಿಲ್ ₹86.31 ಕೋಟಿಗೆ ಇಳಿಯುವ ನಿರೀಕ್ಷೆಯಿದೆ. ಆದರೆ, ನಿರ್ವಹಣೆ ಬಿಲ್ ₹95.59 ಕೋಟಿಗೆ ಏರುತ್ತದೆ. ಇದು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಈ ಹೊಸ ಯೋಜನೆಯು ವಾರ್ಷಿಕವಾಗಿ ಬಿಬಿಎಂಪಿಗೆ ₹181 ಕೋಟಿ ವೆಚ್ಚವಾಗಲಿದೆ.

ಫೆಬ್ರವರಿ 2019ರಲ್ಲಿ, ಬಿಬಿಎಂಪಿಯು ಯೋಜನೆಯನ್ನು ಕಾರ್ಯಗತಗೊಳಿಸಲು ಶಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್ ಇನ್‌ಫ್ರಾಸ್ಟ್ರಕ್ಚರ್ಸ್ ಮತ್ತು ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳನ್ನು ಒಳಗೊಂಡ ಮೂರು-ಸದಸ್ಯ ಒಕ್ಕೂಟವನ್ನು ರಚನೆ ಮಾಡಿತ್ತು. ಒಕ್ಕೂಟವು ಸರಿಸುಮಾರು 85% ಶಕ್ತಿಯನ್ನು ಉಳಿಸಲು ವಾಗ್ದಾನ ಮಾಡಿತು. ಆದಾರೂ, ಪೂರ್ವ ಸ್ಥಾಪಿತ ಮಾನದಂಡಗಳನ್ನು ಪೂರೈಸಲು ಒಕ್ಕೂಟದ ವಿಫಲತೆಯಿಂದಾಗಿ ಬಿಬಿಎಂಪಿ ಡಿಸೆಂಬರ್ 2021ರಲ್ಲಿ ಒಪ್ಪಂದವನ್ನು ಕೊನೆಗೊಳಿಸಿತು.

ಈ ವರ್ಷದ ಆರಂಭದಲ್ಲಿ, ಬಿಬಿಎಂಪಿಯ ಉನ್ನತ ಅಧಿಕಾರಿಗಳು ಯೋಜನೆಯನ್ನು ಪುನರಾರಂಭಿಸಲು ನಿರ್ಧಾರ ಮಾಡಿದ್ದಾರೆ.

ಬೆಸ್ಕಾಂನ ದರ ಪರಿಷ್ಕರಣೆಯಿಂದ ವಿದ್ಯುತ್ ಬಿಲ್ ಹೆಚ್ಚಳವಾಗುತ್ತದೆ. 2024-25ರ ಬಜೆಟ್‌ನಲ್ಲಿ, ಪಾಲಿಕೆಯ ವಿದ್ಯುತ್ ಬಿಲ್ ₹283 ಕೋಟಿಗೆ ತಲುಪುತ್ತದೆ ಎಂದು ಅಂದಾಜಿಸಿದೆ. ಬೀದಿದೀಪಗಳ ನಿರ್ವಹಣೆಯು ₹17 ಕೋಟಿಯಿಂದ ₹72 ಕೋಟಿಗೆ ತಲುಪಲಿದೆ.

ಪಾಲಿಕೆಯು ಮೈಸೂರಿನ ಎಲ್‌ಇಡಿ ಯೋಜನೆಯನ್ನು ಅನುಸರಿಸಲು ಬಯಸುತ್ತದೆ. ಎಲ್‌ಇಡಿ ದೀಪಗಳನ್ನು ಸ್ಥಾಪಿಸಲು ಮತ್ತು ನಿರ್ವಹಣೆ ಮಾಡಲು ಒಂದೇ ಏಜೆನ್ಸಿ ನಿಯೋಜನೆ ಮಾಡುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಯೋಜಿಸುವುದಿಲ್ಲ.

“ನ್ಯಾಯಯುತ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ ಅನ್ನು ಪ್ರೋತ್ಸಾಹಿಸಲು ಒಪ್ಪಂದವನ್ನು ಅನೇಕ ಭಾಗಗಳಾಗಿ ವಿಭಜಿಸಬೇಕು. ಪಾಲಿಕೆ ಈಗಾಗಲೇ ತನ್ನದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಅನೇಕ ಸೋಡಿಯಂ ಆವಿ ಬಲ್ಬ್‌ಗಳನ್ನು ಬದಲಾಯಿಸಿದೆ” ಎಂದು ಅಧಿಕಾರಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ನಡೆಸಿದ ನಾಲ್ವರ ಬಂಧನ

ಎಲ್‌ಇಡಿ ಬೀದಿ ದೀಪ ಅಳವಡಿಸುವ ಕಾರ್ಯಕ್ಕೆ ಬಿಬಿಎಂಪಿ 2018ರಲ್ಲಿ ಕೈ ಹಾಕಿತ್ತು. ಜಾಗತಿಕ ಮಟ್ಟದ ಟೆಂಡರ್‌ ಸಹ ಆಹ್ವಾನಿಸಿ ಗುತ್ತಿಗೆದಾರರನ್ನು ನಿಯೋಜನೆ ಸಹ ಮಾಡಿತ್ತು. ಆದರೆ, ಗುತ್ತಿಗೆದಾರ ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಯೋಜನೆ ವಿಫಲವಾಗಿತ್ತು. ಈ ನಾಲ್ಕೈದು ವರ್ಷದ ಅವಧಿಯಲ್ಲಿ ಬಿಬಿಎಂಪಿಯು ನಗರದ 2 ರಿಂದ 2.5 ಲಕ್ಷ ಸೋಡಿಯಂ ವಿದ್ಯುತ್‌ ದೀಪಗಳನ್ನು ವಿವಿಧ ಯೋಜನೆ, ನಿರ್ವಹಣೆ ಹೆಸರಿನಲ್ಲಿ ಎಲ್‌ಇಡಿ ದೀಪಗಳಿಗೆ ಬದಲಾಯಿಸಿದೆ. ಶೇ.30 ರಿಂದ 40 ಸೋಡಿಯಂ ದೀಪಗಳು ಈಗಾಗಲೇ ಎಲ್‌ಇಡಿ ದೀಪಗಳಿಗೆ ಬದಲಾಗಿದೆ. ಉಳಿದ ಶೇ.60 ರಿಂದ 70 ರಷ್ಟುದೀಪಗಳನ್ನು ಮಾತ್ರ ಎಲ್‌ಇಡಿಗೆ ಬದಲಾವಣೆ ಮಾಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮೌಢ್ಯತೆ ಆಚರಿಸುವ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ: ಡಾ. ಜಯದೇವಿ ಗಾಯಕವಾಡ

ಯಾವ ದೇಶದಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆ ಇರುತ್ತವೆಯೋ, ಅಂತಹ ದೇಶಗಳ ಅಭಿವೃದ್ಧಿ...

ಗದಗ | ₹5 ಕೋಟಿ ವೆಚ್ಚದಲ್ಲಿ 13 ಸ್ಮಾರಕಗಳ ರಕ್ಷಣೆ; ಕಾಮಗಾರಿಗೆ ಶಿಲಾನ್ಯಾಸ

13 ಅಸುರಕ್ಷಿತ ಸ್ಮಾರಕಗಳ ಸಂರಕ್ಷಣೆ ಮಾಡಲು ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳ...

ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!

ಡೊಳ್ಳು ಹೊಟ್ಟೆ ಗಣಪನಿಗೆ ಮೂಷಿಕ(ಇಲಿ)ವು ವಾಹನ ಎಂಬುದು ಹಿಂದೂಗಳ ನಂಬಿಕೆ. ಗಣೇಶ...

ಮಂಡ್ಯ | ವಚನ ದರ್ಶನ ಪುಸ್ತಕದ ಮೂಲಕ ಬಸವಣ್ಣನ ಆಲೋಚನೆಗಳಿಗೆ ಧಕ್ಕೆ: ಮುಕುಂದರಾಜ್

ಕನ್ನಡ ಸಾರಸ್ವತ ಲೋಕದಲ್ಲಿ ವಚನ ದರ್ಶನ ಪುಸ್ತಕ ಹೊರತರುವ ಮೂಲಕ ಇತಿಹಾಸವನ್ನು...