ಕೆಪಿಎಸ್‌ ಶಾಲೆ ತೆರೆದು ಆರ್‌ಎಸ್‌ಎಸ್‌ಗೆ ಬಲ ಕೊಡಲು ಕಾಂಗ್ರೆಸ್‌ ಹೊರಟಿದೆ : ನಿರಂಜನಾರಾಧ್ಯ ಆಕ್ರೋಶ

Date:

“ಬಾಯಿಬಿಟ್ಟರೆ ಸಂವಿಧಾನವನ್ನು ಕಾಪಾಡುತ್ತೇವೆ ಅಂತ ಹೇಳುವ ಕಾಂಗ್ರೆಸ್‌ ಸರ್ಕಾರ, ಸಂವಿಧಾನ ವಿರೋಧಿಯಾಗಿ ಕೆಪಿಎಸ್‌ ಶಾಲೆಗಳನ್ನು ತೆರೆಯಲು ಹೊರಟಿದೆ. ಕೆಪಿಎಸ್‌ ಶಾಲೆ ತೆರೆದು ಆರ್‌ಎಸ್‌ಎಸ್‌ ಸಂಘಟನೆಗೆ ಬಲ ಕೊಡಲು ಹೊರಟಂತೆ ಕಾಣುತ್ತದೆ” ಎಂದು ಶಿಕ್ಷಣ ತಜ್ಞರಾದ ವಿ.ಪಿ. ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.

- Advertisement -

ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಇಂದು(ಫೆ.10) ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದನ್ನು ವಿರೋಧಿಸಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

“ಕಾಂಗ್ರೆಸ್‌ನಲ್ಲಿ ಅನೇಕರು ʼಆರ್‌ಎಸ್‌ಎಸ್‌ʼನವರಿದ್ದಾರೆ. ಅದಕ್ಕಾಗಿಯೇ ಎನ್‌ಸಿಇಆರ್‌ಟಿ ಪುಸ್ತಕವನ್ನು ಕರ್ನಾಕಟದ ಮಕ್ಕಳಿಗೆ ಕೊಡಲು ಹೊರಟಿದ್ದಾರೆ. ಈಗಾಗಲೇ ಮ್ಯಾಗ್ನೇಟ್‌ ಶಾಲೆ ಯೋಜನೆ ತಯಾರಿಸಲು 18 ಕೋಟಿ ಹಣವನ್ನು ಕೊಡಲಾಗಿದೆ. ಜವಾಬ್ದಾರಿಯಿಂದ ವರ್ತಿಸಬೇಕಾದ ಸಚಿವರು ಬೇಕಾಬಿಟ್ಟು ಮಾತನಾಡುತ್ತಾರೆ. ಸಚಿವ ಮಧುಬಂಗಾರಪ್ಪ ಯಾವುದೇ ಕಾರ್ಯಕ್ರಮಕ್ಕೆ ಬಂದರೆ, ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿರೋಧ ತೋರಬೇಕು. ನೀವು ಸಚಿವ ಸ್ಥಾನದಲ್ಲಿ ಕೂರಲು ಯೋಗ್ಯರಲ್ಲ ಎನ್ನಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಸಂಘಟನೆಯ ಪ್ರಮುಖರಾದ ಸುನಂದಾ ಮಾತನಾಡಿ “6 ಸಾವಿರ ಶಾಲೆಗಳನ್ನು ತೆರೆಯುವ ಆಸೆ ತೋರಿಸಿ, 40ಸಾವಿರ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಇದರ ಜೊತೆಗೆ 69 ಸಾವಿರ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಆತಂಕ ಕಾಡುತ್ತಿದೆ” ಎಂದರು.

“ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ರೀತಿ ಕೆಲಸ ಮಾಡುತ್ತಿವೆ. ಒಂದೆಡೆ ರೈತ ಮತ್ತು ಕಾರ್ಮಿಕ ವಿರೋಧಿ ಕರಾಳ ನೀತಿಗಳ ಮೂಲಕ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ.  ಇನ್ನೊಂದೆಡೆ ಬಡವರ ಮಕ್ಕಳ ಶಿಕ್ಷಣವನ್ನು ನುಂಗಲು ಹುನ್ನಾರ ನಡೆಸುತ್ತಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Shikshana

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘಟನೆ (CITU) ಯ ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತ ಅವರು ಮಾತನಾಡಿ “ಕರ್ನಾಟಕದಲ್ಲಿ ಈಗಾಗಲೇ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಶೇಕಡಾ 22ಕ್ಕೆ ಏರಿದೆ. ಒಂದೇ ಒಂದು ಮಗುವಿದ್ದರೂ ಶಾಲೆ ಮುಚ್ಚುವುದಿಲ್ಲ ಎಂದು ಹೇಳುತ್ತಿರುವ ಶಿಕ್ಷಣ ಮಂತ್ರಿಗಳು ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ 25,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೊಳಿಯುತ್ತಾರೆ. ಅಷ್ಟೇ ಅಲ್ಲದೆ 40,000ಕ್ಕೂ ಅಧಿಕ ಬಿಸಿಯೂಟದ ಕಾರ್ಯಕರ್ತರು ಕೆಲಸ ಹೋಗಿ ಅವರ ಬದುಕು ಬೀದಿಗೆ ಬೀಳುತ್ತದೆ. ಇದರ ವಿರುದ್ಧ ಐಕ್ಯ ಹೋರಾಟವೇ ಸರ್ಕಾರವನ್ನು ಹಿಮ್ಮಟಿಸುವ ದಾರಿ” ಎಂದು ಅಭಿಮತ ವ್ಯಕ್ತಪಡಿಸಿದರು.

ಅಂಗನವಾಡಿ-ಬಿಸಿಯೂಟ ಸಂಘಟನೆಯ ರಾಜ್ಯ ಸಂಚಾಲಕರಾದ ಅಮ್ಜದ್ ಮಾತನಾಡಿ, “ಒಂದೆಡೆ ಬಿಜೆಪಿ ಸರ್ಕಾರದ ಎನ್ಇಪಿ-2020 ವಿರೋಧಿಸುತ್ತಿರುವ ಕಾಂಗ್ರೆಸ್ ಸರ್ಕಾರವು ಥೋರಟ್ ಸಮಿತಿ ನೀಡಿರುವ ಎಸ್‌ಇಪಿ ವರದಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಎನ್ಇಪಿ ಮಾದರಿಯಲ್ಲೇ ಶಾಲೆಗಳನ್ನು ಮುಚ್ಚಿ ಇಡೀ ಶೈಕ್ಷಣಿಕ ವಲಯವನ್ನೇ ಮುಗಿಸುವ ಹುನ್ನಾರ ನಡೆಸುತ್ತಿದೆ” ಎಂದು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.

ಸಮಾವೇಶದ ನಂತರ ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ಸಭೆಯು ನಿರ್ಣಯವನ್ನು ಕೈಗೊಂಡಿತು.

-ಶಿಕ್ಷಣ ತಜ್ಞರು, ಪೋಷಕರ ಸಂಘದ ಅಧ್ಯಕ್ಷರು, ವಿದ್ಯಾರ್ಥಿ ಸಂಘಟನೆಯ ಮುಖಂಡರೊಂದಿಗೆ ಮುಖ್ಯಮಂತ್ರಿಗಳಿಗೆ ನಿಯೋಗ ಭೇಟಿ ಮಾಡುವುದು.

-ರಾಜ್ಯಾದ್ಯಂತ ಎಲ್ಲ ತಾಲೂಕು, ಹಳ್ಳಿಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಶಾಲೆ ಉಳಿಸಿ ಹೋರಾಟವನ್ನು ಕೈಗೊಳ್ಳುವುದು.

-ಮಾರ್ಚ್ ಬಜೆಟ್ ಅಧಿವೇಶನದ ಪೂರ್ವದಲ್ಲಿ ಎಲ್ಲಾ ಎಡ ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯ ಮಟ್ಟದ ಜಂಟಿ ಬೃಹತ್ ಪ್ರತಿಭಟನೆ ನಡೆಸುವುದು

-ರಾಜ್ಯ ಸರ್ಕಾರವು ಎಡಿಬಿಯಿಂದ ಪಡೆದಿರುವ ಸಾಲ ಮತ್ತು ಷರತ್ತುಗಳನ್ನು ಸಾರ್ಜನಿಕವಾಗಿ ಬಹಿರಂಗಪಡಿಸಬೇಕು.

-ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯುವುದಾಗಿ ಬಜೆಟ್ ಭಾಷಣದಲ್ಲಿ ಪೋಷಿಸಬೇಕು.

ಸಭೆಯಲ್ಲಿ ಎಐಟಿಯುಸಿಯ ಶಾಂತರಾಜ್‌ ಜೈನ್‌, ಎಐಎಂಎಸ್‌ಎಸ್‌ ರಾಜ್ಯ ಕಾರ್ಯದರ್ಶಿ ಶೋಭಾ ಎಸ್‌, ಎಐವೈಎಫ್‌ ರಾಜ್ಯಾಧ್ಯಕ್ಷರಾದ ಸಂತೋಷ್‌, ಎಐಎಸ್‌ಎಫ್‌ ರಾಜ್ಯ ಕಾರ್ಯದರ್ಶಿ ದೊಡ್ಡ ಬಸವರಾಜ್‌, AISF, SFI, AIDSO ಮತ್ತು AISA ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಅರ್ಹರ ಹೆಸರು ಡಿಲೀಟ್‌ ಮಾಡಲು ಬಿಜೆಪಿಗೆ ‘ಫಾರ್ಮ್‌-7’ ಟೂಲ್‌ಕಿಟ್; ಷಡ್ಯಂತ್ರ ಬಹಿರಂಗ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಿಜೆಪಿಗರು ‘ಫಾರ್ಮ್‌-7’ಅನ್ನು ದುರ್ಬಳಕೆ ಮಾಡಿಕೊಳ್ಳುತತಿದ್ದಾರೆ. ಈ...

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...