ವೀರಶೈವ – ಲಿಂಗಾಯತ ಅಧಿವೇಶನ ನಿರ್ಣಯಕ್ಕೆ ಪಂಚಮಸಾಲಿ ಶ್ರೀ, ಯತ್ನಾಳ್‌ ವಿರೋಧ

Date:

  • ಇದು ಬಿ. ಎಸ್‌. ವೈ ಕುತಂತ್ರ ಎಂದು ಆರೋಪಿಸಿದ ಯತ್ನಾಳ್‌!
  • ನಮ್ಮ ವಿಚಾರದಲ್ಲಿ ಮೂಗು ತೂರಿಸಬೇಡಿ: ಮೃತ್ಯುಂಜಯ ಶ್ರೀ

ಉಪಜಾತಿ ಬರೆಸಬೇಡಿ ಎಂದು ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

- Advertisement -

ಈ ಮೂಲಕ ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ನಮೂದಿಸಬಾರದು ಎಂಬ ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ಪಂಚಮಸಾಲಿಗಳು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ನಮೂದಿಸಬಾರದು ಎಂದು ನಿರ್ಣಯ ಮಾಡಿರುವುದನ್ನು ನಾವು ಪಂಚಮಸಾಲಿಗಳು ಒಪ್ಪಲಿಕ್ಕೆ ಸಾಧ್ಯವಿಲ್ಲ. ವೀರಶೈವ ಮಹಾಸಭಾದವರು ಆಯಾ ಉಪಜಾತಿಗಳ ಸಾಮಾಜಿಕ ಸೌಲಭ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೂಗು ತೂರಿಸಬಾರದು” ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ವೀರಶೈವ ಮಹಾಸಭಾ ಅಧಿವೇಶನ ನಿರ್ಣಯ ಸರಿಯಿಲ್ಲ. ಈ ನಿರ್ಣಯವನ್ನು ಪುನರ್ ಪರಿಶೀಲಿಸಬೇಕೆಂಬ ಸಲಹೆಯ‌ನ್ನು ಮಹಾಸಭೆಗೆ ಕೊಡಲು ಇಚ್ಛಿಸುತ್ತೇನೆ” ಎಂದರು.

“ಜಾತಿಗಣತಿ ವೇಳೆ ಉಪಜಾತಿ ಬರೆಸಬೇಕೆಂದು ಈಗಾಗಲೇ ನಮ್ಮ ಸಮಾಜ ಬಾಂಧವರಿಗೆ ನಾವು ಕರೆ ಕೊಟ್ಟಿದ್ದೇವೆ. ಉಪಜಾತಿ ಕಾಲಂನಲ್ಲಿ ಪಂಚಮಸಾಲಿ ಅಂತಾನೆ ಬರೆಸಿ ಅಂತ ಹೇಳಿದ್ದೇವೆ. ಕಾರಣ ಅನೇಕ ಒಳಪಂಗಡದವರು ಈಗಾಗಲೇ ‌ಮೀಸಲಾತಿ ಪಡೆದುಕೊಂಡಿದ್ದಾರೆ” ಎಂದು ಹೇಳೀದರು.

“ಉಳಿದವರು ಏನು ಬರೆಸುತ್ತಾರೋ ಬಿಡ್ತಾರೊ ಅವರಿಗೆ ಬಿಟ್ಟಿದ್ದು. ಆದರೆ ನಾವು ಮಾತ್ರ (ಪಂಚಮಸಾಲಿಗಳು) ನಮ್ಮ ಸಮಾಜದವರಿಗೆ ಪಂಚಮಸಾಲಿ ಅಂತಾನೆ ಬರೆಸಲು ಸಂದೇಶ ಕೊಟ್ಟಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?

ಇದು ಬಿ. ಎಸ್‌. ವೈ ಕುತಂತ್ರ: ಯತ್ನಾಳ್‌!

ಉಪಜಾತಿ ಬರೆಸಬೇಡಿ ಎಂಬ ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ನನ್ನ ವಿರೋಧವಿದೆ. ಅಧಿವೇಶನದಲ್ಲಿ ಯಾರು ಇದ್ದರು? ಅದೇ ಬಿಎಸ್‌ವೈ! ಅಂದರೆ, ಬಿ-ಭಿಮಣ್ಣ ಖಂಡ್ರೆ, ಎಸ್-ಶಾಮನೂರು, ವೈ-ಯಡಿಯೂರಪ್ಪ. ಇವರೆಲ್ಲ ಎಲ್ಲಿ ಉಪಜಾತಿ ಬರೆಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ” ಎಂದು ಬಸನಗೌಡ ಪಾಟೀಲ ಆಗ್ರಹಿಸಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, “ವೀರಶೈವ ಮಹಾಸಭಾ ಅಧಿವೇಶನ ನಿರ್ಣಯ ಪಾಲಿಸಿದರೆ ನಮ್ಮ ಸಮುದಾಯಕ್ಕೆ ಯಾವುದೇ ಯೋಜನೆಗಳು ಸಿಗುವುದಿಲ್ಲ. ಕೆಲವೇ ದಿನಗಳಲ್ಲಿ ನಮ್ಮ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಕರೆದು ನಾವೂ ಕೂಡ ನಿರ್ಣಯ ಮಂಡಿಸುತ್ತೇವೆ. ಹಿಂದೂ ಗಾಣಿಗ, ಹಿಂದೂ ಪಂಚಮಸಾಲಿ, ಹಿಂದೂ ಬಣಜಿಗ… ಹೀಗೆ ಸೇರಿಸಿದರೆ ನಮಗೂ ಲಾಭ ಸಿಗುತ್ತದೆ. ಇವರ ಮಾತು ಕೇಳಿಕೊಂಡು ಸುಮ್ಮನೇ ಕೂರಲ್ಲ” ಎಂದು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

SIR ಅಕ್ರಮ: ಲೋಕಸಭೆ, ವಿಧಾನಸಭೆಗಳ ವಿಸರ್ಜನೆಗೆ ಖರ್ಗೆ ಒತ್ತಾಯ; ತಕ್ಷಣ ಹೊಸ ಚುನಾವಣೆಗೆ ಆಗ್ರಹ

ಪ್ರಸ್ತುತ ದೇಶಾದ್ಯಂತ ನಡೆದಿರುವ ಹಾಗೂ ಮುಗಿದಿರುವ ಚುನಾವಣೆಗಳ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾಂಗ್ರೆಸ್...

ರಾಜ್ಯಕ್ಕೆ ₹3,705.30 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಸಿಎಂ ಡಿಕೆಶಿ ಮನವಿ

ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ...