ವಾಟ್ಸ್​ಆ್ಯಪ್‌ ವಿಡಿಯೋ ಕರೆಯಲ್ಲಿ ಹೊಸ ಫೀಚರ್; ವಾವ್‌ ಎಂದ ಬಳಕೆದಾರರು

Date:

  • ಬಳಕೆದಾರರಿಗೆ ವಿಡಿಯೋ ಕರೆಯಲ್ಲಿ ಮತ್ತಷ್ಟು ಹೊಸ ರೀತಿಯ ಅನುಭವ ಸಿಗಲಿದೆ
  • ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಒಂದೇ ರೀತಿಯ ಫೀಚರ್ ಇರುವುದಿಲ್ಲ

ಮೆಟಾ ಒಡೆತನದ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಪ್ರತಿ ತಿಂಗಳು ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಒಂದಲ್ಲ ಒಂದು ಹೊಸ ಅಪ್ಡೇಟ್ ಪರಿಚಯಿಸುತ್ತಲೇ ಇರುತ್ತದೆ. ವಾಟ್ಸ್​ಆ್ಯಪ್ ಅನ್ನು 550 ಮಿಲಿಯನ್​ಗೂ ಅಧಿಕ ಮಂದಿ ಬಳಸುತ್ತಾರೆ.

ವಾಟ್ಸ್​ಆ್ಯಪ್ ಒಂದೇ ಸಮಯದಲ್ಲಿ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಒಂದೇ ರೀತಿಯ ಫೀಚರ್ ಪರಿಚಯಿಸುವುದಿಲ್ಲ. ಐಫೋನ್​ ವಾಟ್ಸ್​ಆ್ಯಪ್​ನಲ್ಲಿರುವ ಕೆಲ ಫೀಚರ್​ಗಳು ಈಗಲೂ ಆಂಡ್ರಾಯ್ಡ್​ನಲ್ಲಿ ಇಲ್ಲ. ಹಾಗೇಯೆ ಆಂಡ್ರಾಯ್ಡ್ ವಾಟ್ಸ್​ಆ್ಯಪ್​ನಲ್ಲಿ ಇರುವ ಅದೆಷ್ಟೊ ಆಯ್ಕೆಗಳು ಐಫೋನ್​ನಲ್ಲಿ ಇನ್ನಷ್ಟೆ ಬರಬೇಕದೆ. ಇದರಲ್ಲಿ ಪಿಕ್ಚರ್-ಇನ್-ಪಿಕ್ಚರ್ ಫೀಚರ್ ಕೂಡ ಒಂದಾಗಿದೆ. ಇದೀಗ ವಾಟ್ಸ್​ಆ್ಯಪ್ ಈ ಆಯ್ಕೆಯನ್ನು ಐಒಎಸ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿದೆ.

ಈ ನೂತನ ಆಯ್ಕೆಯ ಮೂಲಕ ವಿಡಿಯೋ ಕರೆಯಲ್ಲಿ ಮತ್ತಷ್ಟು ಹೊಸ ರೀತಿಯ ಅನುಭವ ಬಳಕೆದಾರರಿಗೆ ಸಿಗಲಿದೆ. ಕಳೆದ ಡಿಸೆಂಬರ್​ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಫೀಚರ್ ಆಂಡ್ರಾಯ್ಡ್​ನಲ್ಲಿ ಲಭ್ಯವಾಗಿತ್ತು. ಇದೀಗ ಐಒಎಸ್​ ಬಳಕೆದಾರರಿಗೂ ಸಿಗುತ್ತಿದೆ. ಈ ಹೊಸ ಫೀಚರ್ ಮೂಲಕ ವಾಟ್ಸ್​ಆ್ಯಪ್ ಬಳಕೆದಾರರು ಯಾವುದೇ ಅಡೆತಡೆ ಇಲ್ಲದೆ ವಿಡಿಯೋ ಕರೆಯಲ್ಲಿ ಮಾತನಾಡಬಹುದು. ಆ್ಯಪಲ್ ಬಳಕೆದಾರರಿಗಾಗಿ ವಾಟ್ಸ್​ಆ್ಯಪ್ ಕಳೆದ ವರ್ಷ ಮೊದಲ ಬಾರಿಗೆ ಈ ಫೀಚರ್‌ ಅನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. ಇದೀಗ ಲಭ್ಯವಾಗುವಂತೆ ಮಾಡಿದೆ.

ಫೇಸ್‌ಟೈಮ್‌ನ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಂತೆಯೇ ಇದು ಕೂಡ ಕೆಲಸ ಮಾಡಲಿದ್ದು, ಗ್ರೂಪ್‌ ಕರೆ ಅಥವಾ ವೈಯುಕ್ತಿಕ ಕರೆಯಲ್ಲಿದ್ದಾಗ ಇತರೆ ಆ್ಯಪ್‌ಗಳನ್ನು ಓಪನ್‌ ಮಾಡುವ ಮೂಲಕ ಒಂದೇ ಬಾರಿಗೆ ಕೆಲಸವನ್ನು ಮಾಡಬಹುದಾಗಿದೆ.

ಈ ಸಂದರ್ಭ ಕರೆ ಕಟ್ ಆಗುವುದು ಅಥವಾ ತೊಂದರೆಯಾಗುವಂತಹ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ನೀವು ವೆಬ್‌ ಬ್ರೌಸರ್‌ ಅಥವಾ ವೆಬ್‌ಸೈಟ್​ನಲ್ಲಿ ಆನ್‌ಲೈನ್‌ ಕರೆ ಮಾಡಿದರೆ ಈ ವಿಡಿಯೋಗೆ ಸಂಬಂಧಿಸಿದ ಚಿಕ್ಕ ವಿಂಡೋ ಕಾಣಿಸಿಕೊಳ್ಳುತ್ತದೆ.

ಈ ಸುದ್ದಿ ಓದಿದ್ದೀರಾ? ಇನ್ನು ಮುಂದೆ ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಬ್ಲೂ ಟಿಕ್ ಖಾತೆಗಳಿಗೆ ಮಾಸಿಕ ಶುಲ್ಕ

ಆ್ಯಪಲ್‌ ಡಿವೈಸ್ ಬಳಕೆದಾರರು 23.3.77 ಗೆ ಅಪ್‌ಡೇಟ್‌ ಮಾಡಿಕೊಂಡರೆ ಈ ಆಯ್ಕೆ ಸಿಗಲಿದೆ. ಮೊನ್ನೆಯಷ್ಟೆ ವಾಟ್ಸ್​ಆ್ಯಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ವಿಶೇಷ ಫೀಚರ್​ಒಂದನ್ನು ಬಿಡುಗಡೆ ಮಾಡಿತ್ತು. ಅದುವೇ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವ ಆಯ್ಕೆ. ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗಿತ್ತು. ಆದರೆ ಈ ಹೊಸ ಫೀಚರ್​ನ ಪ್ರಕಾರ ಇದರ ಮಿತಿಯನ್ನು ಹೆಚ್ಚಿಸಲಾಗಿದೆ. ಆಂಡ್ರಾಯ್ಡ್ ಆವೃತ್ತಿ 2.22.24.73 ಕ್ಕೆ ವಾಟ್ಸ್​ಆ್ಯಪ್‌ಅನ್ನು ಅಪ್ಡೇಟ್ ಮಾಡಿದರೆ ಒಂದೇ ಬಾರಿಗೆ 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು.

ವಾಟ್ಸ್​ಆ್ಯಪ್ ಕರೆಯನ್ನು ಶೆಡ್ಯುಲ್‌ ಮಾಡುವ ಆಯ್ಕೆ

ವಾಟ್ಸ್​ಆ್ಯಪ್ ಕರೆಯನ್ನು ಶೆಡ್ಯೂಲ್‌ ಮಾಡಿಕೊಳ್ಳಬಹುದಾದ ಉಪಯುಕ್ತ ಫೀಚರ್ ಇನ್ನು ಮುಂದೆ ಲಭ್ಯವಿರುತ್ತದೆ. ಯಾವುದೇ ಸ್ಮಾರ್ಟ್​ಫೋನ್​ನಲ್ಲೂ ಈ ರೀತಿಯ ಆಯ್ಕೆಗಳಿಲ್ಲ. ಆದರೆ, ವಾಟ್ಸ್​ಆ್ಯಪ್ ಇದೇ ಮೊದಲ ಬಾರಿಗೆ ತನ್ನ ಕರೆಗಳನ್ನು ಶೆಡ್ಯೂಲ್‌ ಮಾಡುವ ಆಯ್ಕೆ ನೀಡುತ್ತಿದೆ.

ವಾಟ್ಸ್​ಆ್ಯಪ್​ನಲ್ಲಿ ಬಳಕೆದಾರರು ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸಬಹುದು. ಈ ಮೂಲಕ ಪ್ರಮುಖ ಸಂಭಾಷಣೆಯನ್ನು ಯಾರೂ ತಪ್ಪಿಸಿಕೊಳ್ಳುವ ಸಂಭವ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ ಯಾರನ್ನಾದರೂ ಕೆಲಸಕ್ಕೆ ನೇಮಿಸಿಕೊಳ್ಳಲು ಸಂದರ್ಶನ ಮಾಡಬೇಕು ಎಂದಿದ್ದರೆ, ಈ ವೇಳೆ ಸಂದರ್ಶಕರು ಸಂದರ್ಶನಕ್ಕೆ ಹಾಜರಾಗುವ ವ್ಯಕ್ತಿ ಜೊತೆ ಯಾವ ಸಮಯದಲ್ಲಿ ಮಾತನಾಡಬೇಕು ಎಂಬುದನ್ನು ಶೆಡ್ಯೂಲ್‌ ಮಾಡಬಹುದು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಲೋ ಯುಪಿಐ | ಧ್ವನಿ ಮೂಲಕ ಹಣ ಪಾವತಿಸುವ ಫೀಚರ್ ಶೀಘ್ರ ಪ್ರಾರಂಭ

ಪಠ್ಯದ ಬದಲು ಧ್ವನಿ ಆಧಾರಿತ ಮೂಲಕ ಯುಪಿಐಯಲ್ಲಿ ಪಾವತಿ ಸೇವೆಗಳನ್ನು ಶೀಘ್ರದಲ್ಲಿಯೇ...

ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು

ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆ ಇನ್ನು ಮುಂದೆ ಎಟಿಎಂನಲ್ಲಿ ನಗದು ವಿತ್‌...

ಚಂದ್ರನ ಮೇಲೆ ಇಸ್ರೋ ಮತ್ತೊಂದು ಪ್ರಯೋಗ; ವಿಕ್ರಮ್ ಲ್ಯಾಂಡರ್ ಮತ್ತೆ ಸಾಫ್ಟ್ ಲ್ಯಾಂಡ್

ಚಂದ್ರಯಾನ-3ರ 'ವಿಕ್ರಮ್ ಲ್ಯಾಂಡರ್' ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಯಿತು...

ಸೈಬರ್‌ ದಾಳಿ | ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಸರ್ಕಾರದಿಂದ ತುರ್ತು ಎಚ್ಚರಿಕೆ

ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಸಂಸ್ಥೆ, ಆಂಡ್ರಾಯ್ಡ್...