ವಸ್ತುವನ್ನು ಸುಡುವುದರಿಂದಷ್ಟೇ ‘ಚರಸ್’ ಎಂದು ಸಾಬೀತುಪಡಿಸಲಾಗದು: 22 ವರ್ಷಗಳ ಬಳಿಕ ಇಬ್ಬರು ಖುಲಾಸೆ

Date:

ವಶಪಡಿಸಿಕೊಂಡ ವಸ್ತುವಿನ ಒಂದು ಸಣ್ಣ ಭಾಗವನ್ನು ಸುಟ್ಟು ನೋಡುವುದರಿಂದ ಮಾತ್ರವೇ ಅದು ಮಾದಕ ವಸ್ತುವಾದ ‘ಚರಸ್’ ಎಂದು ನಿರ್ಧರಿಸಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ 2004ರಲ್ಲಿ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ದಾಖಲಾಗಿದ್ದ ಸುದೀರ್ಘ 22 ವರ್ಷಗಳ ಹಳೆಯ ಮಾದಕ ದ್ರವ್ಯ ಪ್ರಕರಣದಲ್ಲಿ ಅಪರಾಧಿಗಳೆಂದು ಶಿಕ್ಷೆಗೊಳಗಾಗಿದ್ದ ಇಬ್ಬರು ವ್ಯಕ್ತಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ.

- Advertisement -

ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ನ್ಯಾಯಮೂರ್ತಿ ಮನ್ಮೋಹನ್ ಅವರನ್ನೊಳಗೊಂಡ ದ್ವಿಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು...

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

2004ರ ನವೆಂಬರ್ 29ರಂದು ಜಬಲ್‌ಪುರದ ಬಂದರಿಯಾ ತಿರಾಹಾ ಬಳಿ ಅಬ್ದುಲ್ ರಜಿಕ್ ಹಾಗೂ ಗೋವಿಂದ್ ಎಂಬ ಇಬ್ಬರು ವ್ಯಕ್ತಿಗಳು ಬ್ಯಾಗ್‌ಗಳಲ್ಲಿ ಚರಸ್ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

ಇದನ್ನೂ ಓದಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತರುಣ್ ತೇಜ್‌ಪಾಲ್

ಪರಿಶೀಲನೆ ವೇಳೆ ಅವರಿಂದ ಕಪ್ಪು ಬಣ್ಣದ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಸ್ಥಳದಲ್ಲಿದ್ದ ತನಿಖಾಧಿಕಾರಿಯು ಆ ವಸ್ತುವಿನ ಸಣ್ಣ ತುಂಡನ್ನು ಸುಟ್ಟು ನೋಡಿ, ಅದು ‘ಚರಸ್’ ಇರಬಹುದು ಎಂದು ಶಂಕಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದವು.

ತನಿಖಾಧಿಕಾರಿಯು ವಸ್ತುವನ್ನು ಸುಟ್ಟು ನೋಡಿ ಚರಸ್ ಎಂದು ಗುರುತಿಸಿರುವುದನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. “ಕೇವಲ ವಸ್ತುವನ್ನು ಸುಡುವುದರಿಂದಷ್ಟೇ ಅದು ಚರಸ್ ಹೌದೋ ಅಲ್ಲವೋ ಎಂದು ನಿರ್ಧರಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಕೇವಲ ತನಿಖಾಧಿಕಾರಿಯ ಶಂಕೆಯು ಕಾನೂನುಬದ್ಧ ಸಾಕ್ಷ್ಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

ವಶಪಡಿಸಿಕೊಂಡ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸುವ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಲೋಪಗಳಾಗಿವೆ. ಕಳುಹಿಸಲಾದ ಮಾದರಿ ಪ್ಯಾಕೆಟ್‌ಗಳ ಮೇಲೆ ಆರೋಪಿಗಳ ಅಥವಾ ಪಂಚರ ಸಹಿ ಇಲ್ಲದಿರುವುದು, ಸಾಕ್ಷ್ಯಗಳ ಭದ್ರತೆಯಲ್ಲಿ ಲೋಪವಾಗಿರುವುದು ಕಂಡುಬಂದಿದೆ.

ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಡಿಸೆಂಬರ್ 1, 2004ರಂದು ರವಾನೆಯಾದ ಮಾದರಿಗಳು ಎಫ್‌ಎಸ್‌ಎಲ್‌ ತಲುಪಿದ್ದು ಡಿಸೆಂಬರ್ 6ರಂದು. ಈ ಮಧ್ಯದ 5 ದಿನಗಳ ಕಾಲ ಮಾದರಿಗಳು ಎಲ್ಲಿ ಮತ್ತು ಯಾರ ವಶದಲ್ಲಿದ್ದವು ಎಂಬುದಕ್ಕೆ ಸೂಕ್ತ ವಿವರಣೆ ನೀಡಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಮಾದಕ ದ್ರವ್ಯ ಕಾಯ್ದೆ (NDPS Act) ನಿಯಮಾವಳಿಗಳ ಪ್ರಕಾರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮಾದರಿಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಎಫ್‌ಎಸ್‌ಎಲ್ ವರದಿಯ ನಂಬಿಕಾರ್ಹತೆ ನಷ್ಟವಾಗಿರುವುದರಿಂದ ಮತ್ತು ವಶಪಡಿಸಿಕೊಂಡ ವಸ್ತು ಚರಸ್ ಎಂದು ನಿರೂಪಿಸಲು ಬೇರೆ ಯಾವುದೇ ವೈಜ್ಞಾನಿಕ ಅಥವಾ ಕಾನೂನುಬದ್ಧ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಅನುಮಾನದ ಲಾಭ ನೀಡಿದ್ದು, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ ನೀಡಿದ್ದ ಶಿಕ್ಷೆಯ ಆದೇಶಗಳನ್ನು ರದ್ದುಗೊಳಿಸಿ ಇಬ್ಬರನ್ನೂ ಮುಕ್ತಗೊಳಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ಅಹಂಕಾರಕ್ಕೆ ಪೆಟ್ಟು: ಯುದ್ಧದ ನಡುವೆಯೂ ಇರಾನ್ ನಾಯಕರಿಗೆ ವೀಸಾ ನೀಡಿಕೆ

ಅಮೆರಿಕ ಮತ್ತು ಇರಾನ್ ನಡುವೆ ಭೀಕರ ಯುದ್ಧ ಆರಂಭವಾಗಿ ಸುಮಾರು ಏಳು...

ಮುದ್ದೇಬಿಹಾಳ | ಸೆ.21ರಂದು ಕ್ರಾಂತಿ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಸಮಾರಂಭ

ಜಮಾಅತೆ ಇಸ್ಲಾಮಿ ಹಿಂದ್ ಮುದ್ದೇಬಿಹಾಳ ಘಟಕದ ವತಿಯಿಂದ ‘ಕ್ರಾಂತಿಯ ಜ್ಯೋತಿ ಪ್ರವಾದಿ...

ಸೂರಜ್ ರೇವಣ್ಣಗೆ ಬಿಗ್ ರಿಲೀಫ್! 2 ಪ್ರಕರಣಗಳ ಬಿ-ರಿಪೋರ್ಟ್ ಸಲ್ಲಿಸಿದ ಸಿಐಡಿ

ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ...