‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

Date:

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಇಂದು ನಮ್ಮ ಮುಂದಿದೆ.

ಪ್ರಜಾಪ್ರಭುತ್ವ ಎಂದರೆ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು.  ಭಿನ್ನತೆಗಳೊಂದಿಗೆ ಸಹಬಾಳ್ವೆ ನಡೆಸುವಂತಿರಬೇಕು . ಭಯವಿಲ್ಲದೆ ಧ್ವನಿ ಎತ್ತುವಂತಿರಬೇಕು.  ಅಲ್ಲದೆ ಪಾರದರ್ಶಕ ವಾಗಿ ಚುನಾವಣೆಗಳ ಮೂಲಕ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಂತಿರಬೇಕು. ಮುಖ್ಯವಾಗಿ ಜಾತಿ, ಧರ್ಮ, ಅಂತಸ್ತು, ಲಿಂಗ, ವರ್ಣವನ್ನು ನೋಡದೆ ಸಮಾನವಾಗಿ ಬದುಕಲು ಅವಕಾಶ ಇರಬೇಕು.

- Advertisement -

ಇದೇ ಬಗೆಯಲ್ಲಿ ಆಡಳಿತದಲ್ಲೂ ಸಮಾನ ಪಾಲ್ಗೊಳ್ಳುವಿಕೆ, ಪಾಲುದಾರಿಕೆ, ಪ್ರಾತಿನಿಧ್ಯವೂ ಇರಬೇಕು. ಇದೇನೇ ಇರಲಿ, ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸಿಕೊಳ್ಳುವ ಹಕ್ಕು ಹೊಂದಿರುವುದರಿಂದಲೇ ನಮ್ಮಲ್ಲಿನ್ನೂ ಪ್ರಜಾಪ್ರಭುತ್ವ ಇದೆ ಎಂಬ ಭಾವವಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಆದರೆ, ದೇಗುಲಗಳ ಹೊಣೆ ಹೊತ್ತಿರುವ ಸಚಿವ ಬಸಂತಪ್ಪ ಅವರು ಇತ್ತೀಚೆಗೆ ಆಡಿದ ಮಾತುಗಳು ಮೈ ಕಂಪನಗೊಳಿಸಿತು. ನಮ್ಮ ವ್ಯವಸ್ಥೆಯ ಬಗ್ಗೆ ಹೇವರಿಕೆ ಉಂಟಾಯಿತು. 80 ವರ್ಷಗಳ ಸ್ವತಂತ್ರ ಭಾರತದ ದಾರುಣತೆಯ ಬಗ್ಗೆ ಅಸಹ್ಯ ಉಂಟಾಯಿತು. ಅದೇ ಹೊತ್ತಲ್ಲಿ ರಾಸೀಪುರಂ ಮೀಸಲು ಕ್ಷೇತ್ರದ ಶಾಸಕ ಪಿ. ಧನಪಾಲ್ ನೆನಪಾದರು. ಇವರು 2001 ಮತ್ತು 2011ರಲ್ಲಿ ಶಾಸಕರಾಗಿ ಆರಿಸಿ ಬಂದಿದ್ದರು.  ಶಾಸಕನಾದರೂ ಸ್ಥಳೀಯ ಮೇಲ್ಜಾತಿ ನಾಯಕರೆದರು ಖುರ್ಚಿಯಲ್ಲಿ ಕೂರುವಂತಿರಲಿಲ್ಲ. ಇವರೇ ಎತ್ತಾಡಿಸಿ, ಬೆಳೆಸಿದ ಮಗುವಿನ ಎದುರು ಸಹ ಕೈಕಟ್ಟಿ ನಿಲ್ಲುವ ಕ್ರೂರ ಸ್ಥಿತಿಇತ್ತು.

ಶಾಸಕ ಧನಪಾಲ್ ಮಗ ಇಂತಹ ಅವಮಾನವನ್ನು ಸೆಟೆದು ನಿಂತಾಗಲಷ್ಟೇ ಪ್ರಕರಣ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಕಿವಿ ತಲುಪಿತು.

ಒಂದು ಊರು, ಕ್ಷೇತ್ರವಲ್ಲ, ಸಮಸ್ತ ತಮಿಳುನಾಡಿನ ಜನ ಶಾಸಕ ಧನಪಾಲ್ ಅವರನ್ನು ಗೌರವದಿಂದ ಕಾಣಬೇಕೆಂದು ವಿಧಾನಸಭೆಯ ಅಧ್ಯಕ್ಷರನ್ನಾಗಿಸಿಬಿಟ್ಟಿದ್ದರು . ಇದು “ಮಾಮನನ್” ಹೆಸರಿನಲ್ಲಿ ಸಿನಿಮಾ ಕೂಡ ಆಯಿತು.

ಹೀಗೆ ಜಾತಿ ಎಂಬುದು ನಮ್ಮ ಮುಂದೆ ಪಡಂ ಭೂತದಂತೆ ಅಟ್ಟಹಾಸ ಎಸುಗುತ್ತಿದೆ. ಹೀಗಿರುವಾಗ ಅದ್ಹೇಗೆ ನಾವು ಜಾತಿಯನ್ನು ಹೂತು ಹಾಕಲು ಸಾಧ್ಯ. ನಮ್ಮನ್ನು ಅದು ಸಮಾಧಿಗೆ ಒಯ್ಯುವ ಮೊದಲು ನಾವದನ್ನು ಕೊಂದು ಹೂಳುವ ಪ್ರತಿಜ್ಞೆ ಮಾಡುವ ಅಗತ್ಯ ಇಂದು ಹೆಚ್ಚಾಗಿದೆ. ಇದನ್ನೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಗವತ್ ಅವರು ಕೂಡ ಜಾತೀಯತೆಯನ್ನು ಹುಗಿದು ಹಾಕಬೇಕೆಂದು ಹಿಂದೊಮ್ಮೆ ಕರೆ ಕೊಟ್ಟಿದ್ದರು. ಹಾಗಾದರೆ, ಅಂದಿನಿಂದ ದೇಶದ ಉದ್ದಗಲ ಜಾತಿ ಎಂಬುದನ್ನು ಹೂತು ಹಾಕಲಾಗುತ್ತಿದೆಯೇ? ಸ್ವಜನ ಪಕ್ಷಪಾತ, ಜಾತಿ ಸಂಘರ್ಷ, ಮರ್ಯಾದೆ ಹತ್ಯೆಗಳೆಲ್ಲವೂ ನಿಂತು ಹೋಗಿದೆಯೇ? ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳುವ ಅಗತ್ಯ ಕೂಡ ಇದೆ.

8ನೇ ಶತಮಾನದಲ್ಲಿ ಶಂಕರ ಭಗವತ್ಪಾದರು ‘ಅಹಂ ಬ್ರಹ್ಮಾಸ್ಮಿ’ ಎಂದಾಗಲೇ ಜಾತಿ ಅಸುನೀಗಬೇಕಿತ್ತು. ಆದರೂ ನಮ್ಮವರು ವಾಸ್ತವ ಅರಿಯಲಿಲ್ಲ. ಎಲ್ಲ ಬಗೆಯ ಅನಿಷ್ಟಗಳನ್ನು ಅನುಚಾನವಾಗಿ ನಡೆಸಿಕೊಂಡು ಬಂದುಬಿಟ್ಟರು.  ಇದರಿಂದಾಗಿಯೇ ಒಬ್ಬರು ಮತ್ತೊಬ್ಬರನ್ನು ದ್ವೇಷಿಸುವಂತಾಗಿದೆ. ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟುವಂತಾಗಿದೆ.  ಬಲಿಷ್ಠನ ಮುಂದೆ ಅಸಹಾಯಕ ಕೈಕಟ್ಟಿ ಗೋಗರೆಯುವ ಸ್ಥಿತಿಯೂ ನಿರ್ಮಾಣವಾಗಿದೆ.

12 ಹಾಗೂ 20ನೇ ಶತಮಾನದ ದಲ್ಲಿ ನಡೆದ ಭಕ್ತಿ ಚಳುವಳಿ, ವಚನ ಚಳುವಳಿ ಹೊತ್ತಲ್ಲಿ ವಚನಕಾರರು, ಸಂತರು ತಮ್ಮತತ್ವ ಪದ, ವಚನ ಗಳ ಮೂಲಕ ಮಾನವರೆಲ್ಲರೂ ಒಂದೇ ಎಂದು ಸಾರಿದಾಗಲೇ ಜಾತಿ ನಿರ್ಗಮಿಸಬೇಕಾಗಿತ್ತು.

 ಇದಾಗಲಿಲ್ಲ, ಆದರೂ 19 ರಿಂದ 20ನೇ ಶತಮಾನದವರೆಗೆ ಮಹಾನ್ ಸಮಾಜ ಸುಧಾರಕರು ಸಾಲು ಸಾಲಾಗಿ ಬಂದರೂ ಅಂಬೇಡ್ಕರ್ ಅವರಂತೆ ದಕ್ಷಿಣ ಭಾರತದಲ್ಲಿ ರಾಮಸ್ವಾಮಿ ನಾಯ್ಕರ್ ಅವರಂತಹವರು ಜಾತಿ ವಿನಾಶದ ಭರವಸೆಯನ್ನು ಮೂಡಿಸಿದ್ದರು. ಆಗ ಜಾತಿ ವಿನಾಶ ಆಗುತ್ತದೆ ಎಂಬ ದೊಡ್ಡ ನಿರೀಕ್ಷೆ ಹೊರಲಾಗಿತ್ತು.

ಇಷ್ಟಲ್ಲದೆ ನಮ್ಮ ಸಂವಿಧಾನ ಸಮಾನತೆಯನ್ನು ಪ್ರಧಾನ ತತ್ವವನ್ನಾಗಿ ಘೋಷಿಸಿದೆ. ಇದಕ್ಕಾಗಿ ಜಾತಿ, ಧರ್ಮ ಆಧರಿಸಿ ತಾರತಮ್ಯ ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ಎಂದಿತು. ಆದರೂ ಜಾತಿಯತೆ ನಶಿಸಿಹೋಗಿಲ್ಲ. ಹೀಗೆ ಯಾವ ಪೆಟ್ಟಿಗೂ ಸಿಗದೆ ನುಣುಚಿಕೊಂಡು ನಮ್ಮೊಂದಿಗೆ ಜಾತಿ ಎಂಬ ಭೂತ ಸಾಗಿ ಬರುತ್ತಲೇ ಇದೆ .

ಇದೆಷ್ಟರ ಮಟ್ಟಿಗೆ ಎಂದರೆ, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಮೇಲೆ ಮೂತ್ರ ವಿಸರ್ಜಿಸುತ್ತಾರೆಂದರೆ, ಅದನ್ನು ಊಹಿಸಲು ಸಾಧ್ಯವೇ ಇಲ್ಲ. ಅದೇ ಬಗೆಯಲ್ಲಿ 2018-22ರ ನಡುವೆ ದಲಿತ ಪಂಚಾಯತ್ ಅಧ್ಯಕ್ಷರಾಗಿದ್ದವರು “ನಮಗೆ ಖುರ್ಚಿಯಲ್ಲಿ ಕೂರಲು ಬಿಡುವುದಿಲ್ಲ. ನೆಲದ ಮೇಲೆ ಕೂರಿಸುತ್ತಾರೆ. ಬಾವುಟ ಆರಿಸಲು ಬಿಡುವುದಿಲ್ಲ. ಖಾಲಿ ಚೆಕ್ ಗಳಿಗೆ ಸಹಿ ಹಾಕಿಸಿಕೊಳ್ಳುತ್ತಾರೆ” ಎಂದು ನೋವು ತೋಡಿಕೊಂಡಿದ್ದರು.  2017ರಲ್ಲಿ ದೇಗುಲದೊಳಗಡೆ ಪ್ರವೇಶಿಸುವುದನ್ನು ತಡೆದರೆಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರೇ ಹೇಳಿಕೊಂಡಿದ್ದರು. 1995ರಲ್ಲಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ಲಕ್ನೋ ಗೆಸ್ಟ್ ಹೌಸ್‌ಗೆ ಹೋಗಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರ ಮಧ್ಯೆ, ನಮ್ಮಂತಹ ಸಮಾನತೆಯನ್ನು ತನ್ನ ಮೂಲತತ್ವವನ್ನಾಗಿಸಿಕೊಂಡಿರುವ ಪ್ರಜಾಸತ್ತಾತ್ಮಕ  ದೇಶದಲ್ಲಿ ಇವು ಸಾಧ್ಯವೇ ಎಂದರೆ ಖಂಡಿತವಾಗಿಯೂ ಸಾಧ್ಯ.

image 212

 ಇವು ಮೂರು ಘಟನೆಗಳಲ್ಲಿ ಒಂದು ನಮ್ಮ ರಾಜ್ಯದ್ದು. ಮತ್ತೊಂದು ಸಿಂಧಿ ಜಿಲ್ಲೆಯಲ್ಲಿ ಸಂಭವಿಸಿದೆ. ಅಲ್ಲಿನ ಬುಡಕಟ್ಟು ಯುವಕನ ಮೇಲೆ ಪ್ರವೇಶ್ ಶುಕ್ಲ ಎಂಬ ಧೂರ್ತನೊಬ್ಬ ಮೂತ್ರ ವಿಸರ್ಜನೆ ಎಸಗುತ್ತಿರುವುದು ಕ್ಯಾಮೆರಾ ಒಂದರಲ್ಲಿ ಸೆರೆಯಾಗಿತ್ತು. ಅದರಲ್ಲವನು ಸಂತ್ರಸ್ತನ ಕಣ್ಣು, ಮುಖದ ಮೇಲೆಲ್ಲ ಮೂತ್ರ ವಿಸರ್ಜಿಸಿದ್ದಾನೆ. ಇದ್ಯಾವಾಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತೋ ಆಗ ಇಂತಹದ್ದೊಂದು ದುರ್ಘಟನೆ ನಡೆದೇ ಇಲ್ಲ ಎಂಬ ಹೇಳಿಕೆ ಕೊಡಿಸುವ ಪ್ರಯತ್ನ ನಡೆಯಿತು.  ರಾಜಕೀಯ ಪಕ್ಷಗಳು ಪ್ರಕರಣದ ಒಳಗಡೆ ಧುಮುಕುತ್ತಿದ್ದಂತೆ ಅಂದಿನ ಮುಖ್ಯಮಂತ್ರಿ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಎಂದಿನ ಶೈಲಿಯಲ್ಲಿ ಅಖಾಡಕ್ಕೆ ಧುಮಕಿದ್ದರು.  ಮೂತ್ರವಿಸರ್ಜಿಸಿದವನು ನಮ್ಮ ಪಕ್ಷದ ಬೆಂಬಲಿಗನಲ್ಲ ಎಂದು ಭಾಜಪ ಮೊದಲಿಗೆ ಬಿಂಬಿಸಿಕೊಳ್ಳಲು ಸಾಹಸ ಪಟ್ಟಿತಾದರೂ, ಧೂರ್ತ ಅಲ್ಲಿನ ಶಾಸಕ ಕೇದರನಾಥನ ಹಿಂಬಾಲಕ ಎಂಬುದು ಜಗಜ್ಜಾಹೀರಾಗಿಬಿಟ್ಟಿತ್ತು.

ಬುಡಕಟ್ಟು ಸಮುದಾಯಕ್ಕೆ ರಾಷ್ಟ್ರಪತಿ ಪದವಿ ಕೊಟ್ಟು ಮೆಚ್ಚುಗೆ ಒಳಗಾಗಿದ್ದ ಭಾಜಪವನ್ನು ಮೂತ್ರ ವಿಸರ್ಜನೆ ಪ್ರಕರಣ ಬೆಂಬಿಡದೆ ಕಾಡಿತು. ಇದೇ ಹೊತ್ತಿಗೆಹೊತ್ತಿ ಹುರಿದ ಮಣಿಪುರದ ಘಟನೆಯೂ ಸೇರಿಕೊಂಡಿತು. ಹೀಗಾಗಿಯೇ ಧೂರ್ತನನ್ನು ಬಂಧಿಸುವಂತೆ ಚೌಹಾಣ್ ತಾಕೀತು ಮಾಡಿದ್ದರು. ಸಿದ್ದಿಯ ಪೊಲೀಸರು ಐಪಿಸಿ ಸೆಕ್ಷನ್ 294 ಮತ್ತು 504ರನ್ವಯ ಪ್ರಕರಣ ದಾಖಲಿಸಿಕೊಂಡರು. ಇದು ಅಶ್ಲೀಲತೆ ಹಾಗೂ ಉದ್ದೇಶಪೂರ್ವಕ ಅಪಮಾನ ಜೊತೆಗೆ ದೌರ್ಜನ್ಯ ನಿರ್ಬಂಧ ತಡೆಕಾಯ್ದೆಯಡಿ ಪ್ರಕರಣ ದಾಖಲಾಯಿತು .

ಬುಡಕಟ್ಟು ಜನರ ಅಸಹನೆ, ಕೋಪ, ತಾಪ ತಗ್ಗಿಸಲು ಚೌಹಾಣ್ ಅವರೇ ಪಾದ ಬೆಳೆಸಿದರು . ಇಲ್ಲಿಗೆ ನಿಲ್ಲಿಸದೆ, ಸಂತ್ರಸ್ತ ಯುವಕರ ಕ್ಷಮೆ ಕೇಳಲು ಅವನ ಪಾದವನ್ನು ಸಾರ್ವಜನಿಕವಾಗಿ ತೊಳೆದು ಉಡುಗರೆಯನ್ನು ಸಹ ಕೊಟ್ಟರು.  ಹೀಗೆ ಮಾಡುವ ಮೂಲಕ ಪ್ರತಿಯೊಬ್ಬ ಮಾನವ ಜೀವಿಯಲ್ಲಿ ದೇವರು ಇರುತ್ತಾನೆ. ಸರ್ಕಾರ ಬುಡಕಟ್ಟು ಹಾಗೂ ಬುಡಕಟ್ಟೇತರರ ನಡುವೆ ಯಾವುದೇ ಭೇದ ಮಾಡುವುದಿಲ್ಲ ಎಂಬುದನ್ನು ಸಾರಿದ್ದು ಸರಿಯಾಗಿತ್ತು. ಆದರೆ ಪೊಲೀಸರು ಶುಕ್ಲ ವಾಸಿಸುತಿದ್ದ ಮನೆಯ ಮುಂದಿನ ಭಾಗವನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಿದ್ದಲ್ಲದೆ, ಮನೆಯನ್ನೇ ಉರುಳಿಸಿ ಹಾಕಿದ್ದು ದಾರುಣವಾಗಿತ್ತು.

ಹಿಂದೊಮ್ಮೆ ಸಿಬಿಐ ನ್ಯಾಯಾಲಯ ಹರಿಯಾಣದ ಫರೀದಾಬಾದ್ ಜಿಲ್ಲೆಯಲ್ಲಿನ ಸನ್ ಪೇಟ್ ಗ್ರಾಮದಲ್ಲಿ ಮೃತರಾದ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ನೀಡಿದ ತೀರ್ಪು ಮಾಧ್ಯಮಗಳ ತಲೆಬರಹಕ್ಕೆ ತುತ್ತಾಗಿತ್ತು.

ನಮ್ಮದು ನಿಜಕ್ಕೂ ಜಾಣಮರೆವೋ ಅಥವಾ ನಮಗೆ ಸಂಬಂಧಿಸಿ ದ್ದಲ್ಲ ಎಂದು ಮರೆಯುತ್ತೇವೆಯೋ ಗೊತ್ತಿಲ್ಲ. ಐದು ವರ್ಷದ ಹಿಂದೆ ಎರಡುವರೆ ವರ್ಷದ ವೈಭವ್ ಹಾಗೂ 10 ತಿಂಗಳ ಹಸುಗೂಸು ದಿವ್ಯಾರನ್ನು ಜೀವಂತವಾಗಿ ಸುಡಲಾಗಿತ್ತು. ಇದಕ್ಕೆ ಅಲ್ಲಿ ಹೊತ್ತಿ ಉರಿಯುತ್ತಿದ್ದ ಜಾತಿ ‘ದಂಗಲ್’ಗೆ ಕಾರಣವಾಗಿತ್ತು.

ಅಂದು ಘಟನೆಯನ್ನು ಖಂಡಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಪ್ರತಿಭಟನಾ ರ್ಯಾಲಿಗಳು ನಡೆದಿದ್ದವು.  ದೇಶದ ಹಲವೆಡೆ ವಿರೋಧ ಕೂಡ ವ್ಯಕ್ತವಾಗಿತ್ತು. ದುರಂತ ಎಂದರೆ ಕೇಂದ್ರ ಕ್ಯಾಬಿನೆಟ್ ದರ್ಜೆಯ ಸಚಿವರಿಂದ ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ ಒಂದು ಹೊರ ಬಿದ್ದಿತ್ತು.  ಅದು ಬೀದಿಯಲ್ಲಿ ಯಾರಾದರೂ ನಾಯಿಗೆ ಕಲ್ಲು ಹೊಡೆದರೆ ಕಾರಣ ಯಾರು ಎಂದು ಉದ್ಗರಿಸಿದ್ದರು.

 ಇದು ಬೆಂಕಿಗೆ ಪೆಟ್ರೋಲ್ ಸುರಿದಂತಾಗಿತ್ತು. ಆಗ ಜನರ ಆಕ್ರೋಶ ತಗ್ಗಿಸಲು ಅಂದಿನ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಕಟ್ಟರ್ ನೇತೃತ್ವದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತೆಕ್ಕೆಗೆ ಒಪ್ಪಿಸಿತು. ಸಂತ್ರಸ್ತರು ನೀಡಿದ ದೂರಿನನ್ವಯ 11 ಜನ ಆಪಾದಿತರನ್ನು ಸಿಬಿಐ ವಶಕ್ಕೆ ಪಡೆದಿತ್ತು.

ಮುಂದೆ ಪ್ರಕರಣದೊಳಗಿದ್ದ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಇದಕ್ಕೆ ಕೇವಲ ಅನುಮಾನಾಸ್ಪದ ಹಾಗೂ ಗಂಭೀರ ಅನುಮಾನದ ನಡುವಿನ ವ್ಯತ್ಯಾಸವನ್ನು ಮುಂದೆ ಒಡ್ಡಿತು. ಅಲ್ಲದೆ ಲಭ್ಯವಿರುವ ಸಾಕ್ಷಿ ಆಧಾರಗಳ ಕೊರತೆಯಿಂದಾಗಿ ಆಪಾದಿತರ ಮೇಲೆ ಗಂಭೀರ ಅನುಮಾನ ಉಂಟಾಗುತ್ತಿಲ್ಲ.  ಹೀಗೆಂದು ಖುಲಾಸೆಗೆ ಕಾರಣ ಕೊಡಲಾಯಿತು.

 ಇಲ್ಲಿ ಏಕ ಸದಸ್ಯ ಪೀಠದ ನ್ಯಾಯಾಧೀಶರಾದ ಸುನಿಲ್ ಕುಮಾರ್ ಗರ್ಗ್ ಅವರ ಹೇಳಿಕೆ ಗಮನಿಸಬೇಕಿದೆ. “ಮೇಲೆ ಹೇಳಿದ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಸಾಮಾನ್ಯ ಅನುಮಾನ ಸಾಲದು. ಏಕೆಂದರೆ ಇದು ಗಂಭೀರವಾದ ಅನುಮಾನಕ್ಕಿಂತ ವಿಭಿನ್ನವಾದದ್ದೆಂಬುದು ಅವರ ಅಭಿಪ್ರಾಯವಾಗಿತ್ತು.

image 213

2019ರಲ್ಲಿ ಸಿಬಿಐ ಸಂತ್ರಸ್ತರ ಗೊಂದಲದಿಂದ ಪ್ರಕರಣ ಮುಕ್ತಾಯಗೊಳಿಸುವುದಾಗಿ ಘೋಷಿಸಿತು. ಅಪರಾಧಿಗೂ ಘಟನೆಗೂ ಸಂಬಂಧ ಇಲ್ಲವೆಂಬಂತೆ ಭಾವಿಸಿ ಬಿಟ್ಟಿತು. ಇನ್ನು, ಪ್ರಕರಣ ಕುರಿತಂತೆ ಸಂಗ್ರಹದಲ್ಲಾಗಲಿ ಹಾಗೂ ಸಾಕ್ಷಿಗಳ ಹೇಳಿಕೆಗಳನ್ನಾಗಲಿ ಸರಿಯಾಗಿ ದಾಖಲಿಸಿಲ್ಲ. ಒಂದು ಇಡೀ ಪ್ರಕರಣ ಕಂಡಾಗ ತನಿಖಾ ಸಂಸ್ಥೆ ಸಕ್ರಿಯವಾಗಿ ಹಾಗೂ ಜಾಗರೂಕವಾಗಿ ನಿಭಾಯಿಸಿಲ್ಲ ಎಂದು ಸಹ ನ್ಯಾಯಾಲಯ ಒಂದು ಹಂತದಲ್ಲಿ ಅಭಿಪ್ರಾಯಿಸಿತು. ಹೀಗೆ ಪ್ರಕರಣವನ್ನು ಕಂಡಿದ್ದರ ವಿರುದ್ಧ ದೂರು ದಾಖಲಾಯಿತು.

ಇದಲ್ಲದೆ ತನಿಖಾ ಸಂಸ್ಥೆ ಕೂಡ ತನ್ನ ವರದಿ ಸಲ್ಲಿಸಲು ಬಹಳಷ್ಟು ವಿಳಂಬ ಮಾಡಿದೆ ಎಂಬುದನ್ನು ಮುಚ್ಚಿಡಲು ಸಾಧ್ಯವಿಲ್ಲ.

ಇಷ್ಟಕ್ಕೂ ದುರಂತ ನಡೆದ ಅಂದಿನ ರಾತ್ರಿಯ ಘಟನೆ ಕುರಿತಂತೆ ಸಿಬಿಐ ವಿಚಾರಣೆ ನಡೆಸಿದಾಗ ಹಲವು ಅಚ್ಚರಿ ಬೆಳಕಿಗೆ ಬಂದಿದೆ.

ಅಂದು ಪ್ರತೀಕಾರಕ್ಕೊಳಗಾಗಿದ್ದ ಕುಟುಂಬವನ್ನು ಕಾಯುತ್ತಿದ್ದ ಆರು ಜನ ಪೊಲೀಸರಲ್ಲಿ ನಾಲ್ವರು ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿದ್ದರು. ಇನ್ನೂ ವಿಶೇಷ ಎಂದರೆ, ಘಟನೆ ನಡೆದಾಗ ಇದ್ದ ಇಬ್ಬರೂ ಪೊಲೀಸರು ಸಹ ಅಲ್ಲಿ ಬಂದಿರಲಿಲ್ಲ. ಇದನ್ನು ಅಚ್ಚರಿ ಎಂಬಂತೆ ನಂಬಬೇಕೋ ಅಥವಾ ಕಾಕಾತಾಳೀಯ ಎಂದು ಕಾಣಬೇಕೋ?

 ಅಲ್ಲದೆ, ಇದೊಂದು ವಿನ್ಯಾಸಗೊಳಿಸಿದ ಹಂಚಿಕೆಯೇ ಅಥವಾ ಅಲ್ಲವೇ?

ಇದೇನೇ ಇರಲಿ ನಿಗದಿತ ಹೊತ್ತಲ್ಲಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ವಿಫಲರಾಗಿದ್ದರು. ಇದರಿಂದಲೇ ಮೂರು ತಿಂಗಳ ಒಳಗೆ ಜಾಮಿನ ಪಡೆಯಲು ಅನುಕೂಲ ಆಗಿದೆ.

ಇನ್ನೂ ಉತ್ತರ ಭಾರತದಲ್ಲಿ ದೌರ್ಜನ್ಯ ಎಸಗುವವರು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರೆಂದು ಬೊಟ್ಟು ಮಾಡಿ ಹೇಳುವುದು ನನ್ನ ಉದ್ದೇಶವಲ್ಲ. ಕಾರಣ ಅವರು ಸಹ ಕೆಲವೊಂದು ಪ್ರಕರಣಗಳಲ್ಲಿ ದೌರ್ಜನ್ಯ ಕೊಳಗಾಗಿದ್ದಾರೆ. ಅಂತಹವುಗಳಲ್ಲಿ ಬಣ್ಣ ಎರಚಿಕೊಂಡು ಸಂಭ್ರಮಿಸುವ ಹೋಳಿ ಹಬ್ಬದ ಹೊತ್ತಲ್ಲಿ ಬಿಹಾರದಲ್ಲಿ ಬರೋಬ್ಬರಿ 40 ಜನ ಜೀವ ಬಿಟ್ಟಿದ್ದರು.

ಇದರ ಬಗ್ಗೆ ಸರ್ಕಾರ, ಸಮಾಜ ನಿಸ್ತೇಜವಾಗಿತ್ತು. ಇರಲಿ ಹೋಳಿಯನ್ನು ನಾವು ವರ್ಣ ರಂಜಿತವಾಗಿ ಕಾಣುತ್ತೇವೆ. ಆದರೆ, ಅದು ಪ್ರತಿ ವರ್ಷ ಬಹಳಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.  ಹಲವೆಡೆ ಪ್ರತೀಕಾರ ತೆಗೆದುಕೊಳ್ಳಲು ಹೋಳಿಯನ್ನು ಬಳಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಅಂತಹವುಗಳಲ್ಲಿ ಮಧುಬನಿ ಜಿಲ್ಲೆಯ ಮೆಹಮ್ಮದ್ ಪುರ ಪ್ರಕರಣ ಅತ್ಯಂತ ದಾರಣ ಘಟನೆಯಾಗಿದೆ.

 ಇಷ್ಟಲ್ಲದೆ, 2026 ವಿಶ್ವ ಪತ್ರಿಕಾ ಸೂಚ್ಯಂಕದಲ್ಲಿ ನಮ್ಮ ದೇಶ 180 ದೇಶಗಳಲ್ಲಿ 157ನೇ ಸ್ಥಾನದಲ್ಲಿದೆ. ಅಂದರೆ ನಾವಿನ್ನೂ ಹಿಂದೆ ಬಿದ್ದಿದ್ದೇವೆ.

ಇತ್ತೀಚೆಗೆ ನೆರೆಯ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆ ಫಲಿತಾಂಶ ಹಳೆಯ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಮತದಾನ ಪಟ್ಟಿಯಿಂದಲೇ ಸುಮಾರು 1.5 ಕೋಟಿಗೂ  ಹೆಚ್ಚು ಹೆಸರುಗಳನ್ನು ತೆಗೆದು ಹಾಕಲಾಗಿದೆ . ದೊಡ್ಡ ಪ್ರಮಾಣದಲ್ಲಿ ನಾಗರಿಕರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಯಾವುದೇ ಪ್ರಕ್ರಿಯೆ ಆರ್ಟಿಕಲ್ 14 ಮತ್ತು ಆರ್ಟಿಕಲ್ 326 ಪ್ರಶ್ನೆಯನ್ನು ಎಬ್ಬಿಸಬಹುದೆಂಬ ಎಚ್ಚರಿಕೆಯನ್ನು ನ್ಯಾಯಾಧೀಶ ಉಜ್ವಲ್ ಭುಯಾನ್ ನೀಡಿದ್ದಾರೆ.  

 ಇವುಗಳ ನಡುವೆಯೂ ನಾನಿಲ್ಲಿ ಅಹಿಂದ ವರ್ಗಗಳು ಕಾನೂನು ಪ್ರಕರಣಗಳಲ್ಲಿ ಗೆದ್ದೇ ಇಲ್ಲ ಎಂದು ಹೇಳುತ್ತಿಲ್ಲ. ಮಿರ್ಚಿಪುರ ಹತ್ಯಾಕಾಂಡದಲ್ಲಿ ದಲಿತರ ಹತ್ಯೆಗೈದ 33 ಜನರಿಗೆ ದೆಹಲಿ ಹೈಕೋರ್ಟ್ ಶಿಕ್ಷೆ ವಿಧಿಸಿದ್ದ ಉದಾಹರಣೆಯೂ ಇದೆ.

ಹಾಗೆಯೇ ಹರಸೌಲಾದ ದಲಿತರು ಹೇಳಿದ್ದನ್ನಿಂದು ನೆನಪಿಸಿಕೊಳ್ಳುವ ಅಗತ್ಯವಿದೆ. ಗೋಹಾನದಲ್ಲಿ ನಡೆದ ದಾಳಿ ಮತ್ತು ಬೆಂಕಿ ಹಚ್ಚಿದ ಪ್ರಕರಣ ಕುರಿತಂತೆ ಸಿಬಿಐ ವಿಚಾರಣೆ ನಡೆಸಿತು.

ಅದೊಂದು ಪೂರ್ವಾಗ್ರಹದಿಂದ ಕೂಡಿದ ತನಿಖೆಯಾಗಿದೆ. ಅಲ್ಲದೆ ಒಂದಿಡಿ ಪ್ರಕರಣವನ್ನು ತಂಟೆಕೋರ ಆಪಾದನೆ ಎಂದು ಪ್ರಕರಣವನ್ನು ದುರ್ಬಲಗೊಳಿಸಲಾಗಿದೆ. ಪರಿಹಾರದ ಆಸೆಗಾಗಿ ವಾಲ್ಮೀಕಿ ಜನಾಂಗದವರು ತಮ್ಮ ಕೇರಿಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬ ಷರಾ ಬರೆದಿದ್ದರಿಂದ ಪ್ರಕರಣದ ಎಲ್ಲಾ ಆಪಾದಿತರು ಖುಲಸೆಗೊಂಡಿದ್ದರು.

ಹೀಗೆ, ಜಾತಿ ಎಂಬುದು ಪೆಡಂಭೂತವಾಗಿ ನಮ್ಮ ಮುಂದೆ ನಿಂತು ಗಹಗಹಿಸಿ ನಗುತ್ತಿರುವಾಗ ಅದನ್ನು ಜೀವಂತ ಸಮಾಧಿ ಮಾಡುವ ಮುನ್ನ ಅದರ ಜೀವ ತೆಗೆದು ಕೊಲ್ಲಬೇಕಿದೆ. ಆದರೆ, ಸಮಕಾಲಿನ ಸಂದರ್ಭದಲ್ಲಿ ಯಾವುದೇ ನಾಯಕರು ಅಥವಾ ಸಂಘಟನೆ ಜಾತಿಯ ವಿಷ ಬೀಜಕ್ಕೆ ಗೊಬ್ಬರ ನೀರು ಸುರಿಯುತ್ತಲೆ ಬಂದಿದ್ದಾರೆ.

 ಇನ್ನೂ ನಮ್ಮಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಹಿಂದು ಸಾಮಾಜಿಕ ಅಂತಸ್ತಿದೆ. ಇದು ವಿಭಜನೆ ಒಂದು ಆದರ್ಶ ಸಾಮಾಜಿಕ ಕ್ರಮವೆಂದೇ ವಿಭಾಗ ಆಗಿದೆ.  ಇದೇನೇ ಇರಲಿ ಗಾಂಧೀಜಿ ಎಲ್ಲಾ ಜಾತಿಯನ್ನು ಸಮಾನವಾಗಿ ಗೌರವದರದಿಂದ ಕಾಣಲು ಬಯಸಿದ್ದರು. ಜೊತೆಗೆ ವೃತ್ತಿಯ ವಂಶಪರಂಪರೆಯನ್ನು ಸಮರ್ಥಿಸುತ್ತಲೇ ಅದರೊಳಗಿನ ಶ್ರೇಣಿಯನ್ನು ಧಿಕ್ಕರಿಸಿದ್ದರು.

ಜಾತಿಆಧಾರಿತ ಅಸಮಾನತೆ ಹಾಗೂ ಅಸ್ಪೃಶ್ಯತೆ ಇವರ ದೃಷ್ಟಿಯಲ್ಲಿ ವರ್ಣಾಶ್ರಮದ ತಿರುಚಿದ ರೂಪವಾಗಿತ್ತು.  ಇದನ್ನು ನಿರ್ಮೂಲನೆ ಮಾಡಿ ಆದರ್ಶದ ಸಮಾಜ ಸ್ಥಾಪಿಸುವುದು ಇವರ ಉದ್ದೇಶವಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ಗಾಂಧೀಜಿಗೆ ವರ್ಣಾಶ್ರಮದ ವರ್ಣಾಶ್ರಮ ಧರ್ಮದ ನಿರ್ಮೂಲನೆ ಬೇಕೆರಲಿಲ್ಲ. ಆದರೆ, ಅದರಲ್ಲಿ ಸುಧಾರಣೆ ತರುವ ತುಡಿತ ಬಲವಾಗಿ ಇತ್ತು.

ಇನ್ನೂ ಸೈದ್ದಾಂತಿಕವಾಗಿ ನೆಹರು ಅವರಿಗೆ ಜಾತಿ ಹೋಗಬೇಕಿತ್ತು. ಆದರೆ, ಅಂದು ಬುದ್ಧಿಜೀವಿಗಳು ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನೀಡುವಂತೆ ಸಲಹೆ ಕೊಟ್ಟಿದ್ದರು. ಆದರೆ, ನೆಹರು ಅವರು ಸಂದಿಗ್ಧತೆಗೆ ಒಳಗಾಗಿದ್ದರು. ಆದ್ದರಿಂದಲೇ, ಮೇಲ್ವರ್ಗದ ಜಾತಿಗಳು ಟ್ರೇಡ್ ಯೂನಿಯನ್‌ನಂತೆ ಹೋರಾಟ ನಡೆಸಲು ಮುಂದಾಗಿವೆ. ಹೀಗಾಗಿ ಜಾತಿ ನಿರ್ಮೂಲನೆ ಕಷ್ಟಸಾಧ್ಯ.

 ಇಲ್ಲಿ ಕೆಲವರಿಗೆ ಜಾತಿ ನಿರ್ಮೂಲನೆಗೆ ಕರೆ ಕೊಡುವಾಗ ಅವರದನ್ನು ಕೆಳಜಾತಿಗಳಲ್ಲಿ ಮಾತ್ರ ಆಗಬೇಕೆಂದು ಬಯಸುತ್ತಾರೆಯೇ ಹೊರತು, ಮೇಲ್ಜಾತಿಗಳಲ್ಲಿ ಅಲ್ಲ.

ಕೆಳ ಜಾತಿಗಳು ಒಗ್ಗಟ್ಟಾಗಿ ಮೇಲ್ವರ್ಗ ವಿರೋಧಿ ರಂಗ ರಚಿಸುವುದನ್ನು ಸಹ ಸಹಿಸುವುದಿಲ್ಲ.  ಇದನ್ನಿವರು ಹಿಂದು ಕುಟುಂಬದ ವಿಘಟನೆ ಎಂದೇ ಭಾವಿಸಿದ್ದಾರೆ.

ಇಷ್ಟಕ್ಕೂ ಜಾತಿಯನ್ನು ಹೂತು ಹಾಕಬೇಕೆಂದು ಹೇಳಿದ ಭಾಗವತರ ಮಾತಿನ ಅರ್ಥ ಮತಾಂತರಗೊಂಡಿರುವ ದಲಿತರು ಮತ್ತು ಹಿಂದುಳಿದ ವರ್ಗಗಳು ಹಿಂದೂ ಕುಟುಂಬಕ್ಕೆ ಮರಳಬೇಕೆನ್ನುವುದಾಗಿದೆ.

‘ಹಿಂದು ಆಗಿ ಹುಟ್ಟಿರುವೆ. ಹಿಂದು ಆಗಿ ಸಾಯಲಾರೆ’ ಎಂದು ಅಂಬೇಡ್ಕರ್ ಬೌದ್ಧ ಧರ್ಮವನ್ನು ಅಪ್ಪಿಕೊಂಡರು. ಆಗಿನಿಂದಲೇ ಅವರ ಅಸಂಖ್ಯಾತ ಅನುಯಾಯಿಗಳು ಹಿಂದು ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರ ಆದರು.  ಅಲ್ಲದೆ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಧರ್ಮಗಳತ್ತಲೂ ಸಾಗಿದರು.

image 214

ದಲಿತ, ಹಿಂದುಳಿದ ವರ್ಗಗಳು ಹಿಂದೂ ಕುಟುಂಬದಿಂದ ದೂರವಾಗಲು ಕಾರಣ ಏನೆಂಬುದನ್ನು ತನ್ನ ವರ್ಣಮಯ ಕನ್ನಡಕವನ್ನು ತೆಗೆದು ಕಾಣುವ ಅಗತ್ಯವಿದೆ. ದಬ್ಬಾಳಿಕೆ, ಕ್ರೌರ್ಯ ಭೇದಭಾವ, ಹಿಂಸಾಚಾರ, ಅತ್ಯಾಚಾರಗಳನ್ನು ಸತತವಾಗಿ ಮೇಲ್ವರ್ಗಗಳು ಇವರ ಮೇಲೆ ನಡೆಸುತ್ತಾ ಬಂದಿವೆ.

ಇವೆಲ್ಲಕ್ಕಿಂತಲೂ ಮುಖ್ಯವಾಗಿ ದಾವಣಗೆರೆಯಲ್ಲಿ ದೇಗುಲಗಳ ಕಲ್ಯಾಣದ ಹೊಣೆ ಹೊತ್ತಿರುವ ಸಚಿವ ಬಸಂತಪ್ಪ ಅವರಾಡಿದ ಮಾತುಗಳು ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳನ್ನೇ ಅದುರಿಸಿವೆ. ಅವರಂದು ಅಣ್ಣ ನಿಮ್ಮ ಕಾಲಿಗೆ ಬೀಳ್ತೀನಿ, ಕೈಮುಗಿತೀನಿ. ನಮ್ಮ ಕೆಲಸವು ಸ್ವಲ್ಪ ನಡೆಯುವಂತೆ ನೋಡಿಕೊಳ್ಳಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು. ಅಲ್ಲದೆ ಹಿಂದೆ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಮತ್ತೆಂದೂ ಆಗುವುದಿಲ್ಲ. ಗಾಂಧಿನಗರದಲ್ಲಿ ಮುನ್ನಡೆ ದೊರೆಯದಿದ್ದಲ್ಲಿ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವುದಾಗಿ ಯಾತನೆಯಿಂದ ಆಲಾಪಿಸಿದ್ದರು.  ಇಂತಹ ಘಟನೆಗಳನ್ನು ಕಂಡಾಗ ನಮ್ಮ ಜನ, ತಮ್ಮ ಸರ್ಕಾರವನ್ನು ಎಷ್ಟು ಸ್ವತಂತ್ರವಾಗಿ ಮತ್ತು ಸರಿಯಾದ ರೀತಿಯಲ್ಲಿ ಆರಿಸಿಕೊಳ್ಳುತ್ತಿದ್ದಾರೆ ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ.

ಒಟ್ಟಾರೆ, ಬಲಿಷ್ಠ ಸಮುದಾಯಗಳ ಭಾರತ ನಿರ್ಮಾಣದ ನರೇಟಿವ್ ಗಳಿಗೆ ಬಲಿಯಾಗುವುದಾದರೆ ಬಡವರು, ಅಶಕ್ತರು ಹೋಗುವುದಾದರೂ ಎಲ್ಲಿಗೆ?

ಇಲ್ಲಿ ಧನಪಾಲ್ ನಂತಹ ಬಸಂತಪ್ಪನ ಬಗ್ಗೆ ಮಾಧ್ಯಮಗಳು ಮಾತನಾಡಬೇಕು. ಮಂತ್ರಿಯಾಗಿರುವ ಬಸಂತಪ್ಪನನ್ನು ಶೋಷಿಸುತ್ತಿರುವವರು ಯಾರು? ಇದನ್ನೇಕೆ ಮಾಧ್ಯಮಗಳು ವಿಶ್ಲೇಷಿಸುತ್ತಿಲ್ಲ. ಹಣದಾಸೆಗೆ ಬಿದ್ದು ಕರ್ನಾಟಕವನ್ನು ಬಿಹಾರ ಮಾಡಲು ಹೊರಡಲಾಗಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

 ಒಂದೊಮ್ಮೆ ಮೇಲ್ವರ್ಗಗಳು ಇವರುಗಳನ್ನು ತಮ್ಮ ಸಹೋದರನಂತೆ ಇರಲಿ ಮನುಷ್ಯರಂತೆ ಕಂಡಿದ್ದರೂ ಜಾತಿಯ ಪ್ರಶ್ನೆಯೇ ಉದ್ಭವವಾಗುತ್ತಿರಲಿಲ್ಲ. ಎಲ್ಲಿಯವರೆಗೆ ಹಿಂದೂ ಸಮಾಜ ತನ್ನೆಲ್ಲ ಸಂಘಟನಾ ಬಲವನ್ನು ಬಳಸಿಕೊಂಡು ಭೇದಭಾವ ಮಾಡುವ ಮೇಲ್ವರ್ಗಗಳ ಮೇಲೆ ಯುದ್ಧ ಮಾಡುವುದಿಲ್ಲವೋ? ಅಲ್ಲಿಯವರೆಗೂ ಹಿಂದೂ ನಾವೆಲ್ಲ ಒಂದು, ಇವನಾರವ, ಇವ ನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ, ನಮ್ಮವ ಎಂದೆಣಿಸಯ್ಯ ಎಂಬ ಪದಗಳು ಕಾಗದದ ಮೇಲಿನ ಅಕ್ಷರವಾಗಷ್ಟೇ ಉಳಿದುಬಿಡುತ್ತದೆ.

ನಮ್ಮಲ್ಲಿ ಜಾತಿ ವಿರೋಧಿ ಚಳುವಳಿಯನ್ನು ನಮ್ಮಲ್ಲಿ ಬಸವಣ್ಣ, ಅಲ್ಲಮ ಪ್ರಭು, ಕನಕದಾಸರು ಸೇರಿದಂತೆ ಸಾಕಷ್ಟು ಜನ ಮುನ್ನೆಡೆಸಿದ್ದಾರೆ. ಆದರೂ ಜಾತಿ ದೌರ್ಜನ್ಯ ನಿಂತಿಲ್ಲ.  ಅಸಮಾನತೆ ತೊಲಗಿಲ್ಲ.

ಮಿರ್ಜಾಪುರದಲ್ಲಿ ನಡೆದ ದಲಿತ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಹುಶಃ ದೆಹಲಿ ಹೈಕೋರ್ಟಿನ ಅವಲೋಕನ ಇಂದಿಗೂ ರಾಷ್ಟ್ರಮಟ್ಟದಲ್ಲಿ ರಿಂಗಣಿಸುತ್ತಿದೆ.  ಪ್ರಬಲ ಜಾತಿಗಳಿಂದ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ನಿದರ್ಶನ ಕಡಿಮೆಯಾಗುವ ಯಾವ ಲಕ್ಷಣಗಳು ಗೋಚರವಾಗುತ್ತಿಲ್ಲ  ಎಂಬುದನ್ನು ಎತ್ತಿ ತೋರಿಸಿದೆ. ಇಲ್ಲಿ ಸಚಿವ ಬಸಂತಪ್ಪ ಕತ್ತಲನ್ನು ಸೀಳಿದ ತ್ರಿಶೂಶಲದ ಕಥೆಯ ದುರಂತ ನಾಯಕನಂತೆ ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಕಲಕಿದ್ದಾರೆ.

 ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಅಂತಿಮ ಕರಡನ್ನು ಡಾ. ಬಿ.ಆರ್  ಅಂಬೇಡ್ಕರ್ ಅವರು ಮಂಡಿಸಿದಾಗ ಅವರ ಅವಲೋಕನದಂತೆ ಎರಡು ವಿಷಯಗಳು ಸಂಪೂರ್ಣ ಅನುಪಸ್ಥಿತಿಯ ಬಗ್ಗೆ ಹೇಳಿದ್ದರು.  ಅದರಲ್ಲಿ ಒಂದು ‘ಸಮಾನತೆ’. ಮತ್ತೊಂದು ‘ಭಾತೃತ್ವ’…

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಸಿಗಾಗಿ ಹುದ್ದೆ ಮಾರಾಟ: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ ಇಡಿ ವಶಕ್ಕೆ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಸಿಸಿ) ನಡೆದಿದೆ ಎನ್ನಲಾದ ಬೃಹತ್ ನೇಮಕಾತಿ ಅಕ್ರಮ...

ಹಾಸನ | ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ

ಹಾಸನ ಜಿಲ್ಲೆ ಆಲೂರು ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ರೈತರಿಗೆ...

ಗದಗ | ಕಳಸಾಪೂರ ಬಸವ ಕೇಂದ್ರದಲ್ಲಿ 1633ನೇ ವಾರದ ಶಿವಾನುಭವ ಕಾರ್ಯಕ್ರಮ

ಗದಗ ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ 1633ನೇ ವಾರದ ಶಿವಾನುಭವದಲ್ಲಿ...

ವಿಜಯಪುರ | ಸದೃಢ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ: ಅರವಿಂದ ಹಾಗರಗಿ

ವಯಸ್ಸು ಬದುಕಿನ ಅಂತ್ಯವಲ್ಲ; ಅದು ಅನುಭವ, ಜ್ಞಾನ ಮತ್ತು ಬದುಕಿನ ಪಾಠಗಳ...