ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

Date:

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಣತಿಯಂತೆ ಎಸ್‌ಐಆರ್‌ಅನ್ನು ಕಾನೂನುಬಾಹಿರವಾಗಿ ಜಾರಿಗೊಳಿಸಲಾಗಿದೆ ಎಂಬ ಸಂಗತಿ ಬಟಾಬಯಲಾಗಿದೆ. ಆದ್ದರಿಂದಲೇ, ಗ್ಯಾನೇಶ್‌ ಕುಮಾರ್ ರಾಜೀನಾಮೆ ನೀಡಬೇಕು, ಸ್ವತಂತ್ರ ಆಯೋಗದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳ ಕೇಂದ್ರಬಿಂದುಗಳು ಮತ್ತು ರೂವಾರಿಗಳು ‘ಜೆನ್‌-ಝೀ’ ಯುವಜನರು ಅನ್ನೋದು ವಿಶೇಷ. ಈ ಹಿಂದೆ, ನೀಟ್ ಅಕ್ರಮದ ವಿರುದ್ಧ ಬೀದಿಗಳಿದಿದ್ದ ಜೆನ್‌-ಝೀಗಳು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಮಾಡಿದ್ದರು. ಈಗ, ಚುನಾವಣಾ ಆಕ್ರಮಗಳ ವಿರುದ್ಧ ಬೀದಿಗಳಿದಿದ್ದಾರೆ. ಈ ಬಾರಿ, ಗ್ಯಾನೇಶ್‌ ಕುಮಾರ್ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರೆಯುತ್ತೆ ಅಂತ ಈ ‘ಜೆನ್‌-ಝೀ’ ಯುಜಜನರು ಹೇಳುತ್ತಿದ್ದಾರೆ. ಅಕ್ಷರಶಃ ಮೋದಿ ಸರ್ಕಾರಕ್ಕೆ ‘ಜೆನ್‌-ಝೀ’ಗಳು ಸವಾಲಾಗಿಯೂ, ತಲೆನೋವಾಗಿಯೂ ಪರಿಣಮಿಸಿದ್ದಾರೆ.

- Advertisement -

ಆದರೆ, ಈ ಜೆನ್‌-ಝೀ ಯುವಜನರು ಸುಮಾರು ಐದಾರು ವರ್ಷಗಳ ಹಿಂದೆ ಮೋದಿ ಸರ್ಕಾರದ ವಿರುದ್ಧ ಇರಲಿಲ್ಲ ಅನ್ನೋದು ಗಮನಿಸಬೇಕಾದ ಅಂಶ. 2014ರಲ್ಲಿ ಮೊದಲ ಬಾರಿಗೆ ಮತಚಲಾಯಿಸಿದ ಹಾಗೂ 2019ರಲ್ಲಿ ಮೊದಲ ಮತ್ತು ಎರಡನೇ ಬಾರಿಗೆ ಮತ ಚಲಾಯಿಸಿದ ಈ ಯುವಜನ ಮೋದಿ ಮೇಲೆ ಅತಿಯಾದ ವಿಶ್ವಾಸ ಇಟ್ಟಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ...

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ ಸಾಂಪ್ರದಾಯಿಕ ಟೋಪಿ) ಧರಿಸಿ ನಿಂತಿದ್ದ ಚಿತ್ರವು, ಅವರ ಇಸ್ರೇಲ್ ಪರ ಒಲವಿಗೆ ಅಳಿಸಲಾಗದ ಸಾಕ್ಷಿಯಾಗಿ ಉಳಿದುಕೊಂಡಿದೆ. ಶಾಂತಿ ಪ್ರವಾಸದ ಹೆಸರಿನಲ್ಲಿ...

ಆಪ್ಟೋಜೆನೆಟಿಕ್ಸ್ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ: ನರಕೋಶಗಳಿಗೆ ಸಂಜೀವಿನಿಯಾಗಲಿರುವ...

ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಾರ್ಲ್ ಡಿಸೆರೋತ್, ಜರ್ಮನಿಯ ಬರ್ಲಿನ್ನಿನ ಹಮ್‌ಬೋಲ್ಟ್ ವಿಶ್ವವಿದ್ಯಾಲಯದ ಪೀಟರ್ ಹೆಗೆಮನ್ ಮತ್ತು ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಜಾರ್ಜ್ ನಾಗೆಲ್ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 5ರಂದು ಭಾರತೀಯ ಕಾಲಮಾನ...

ಶಿಕಾರಿಪುರ | ಬೀಗರೂಟ ಹಾಕಿದ್ರೆ 1 ಲಕ್ಷ, ಉಂಡ್ರೆ...

ಮದುವೆ ಅಂದರೆ ಕೇವಲ ಎರಡು ಮನಸುಗಳ ಮಿಲನ ಮಾತ್ರವಲ್ಲ, ಬಂಧು-ಬಳಗದ ಸಂಭ್ರಮ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮತ್ತು ಆದಾದ ಬಳಿಕ ಅದ್ದೂರಿಯಾಗಿ ಹಮ್ಮಿಕೊಳ್ಳುವ 'ಬೀಗರ ಊಟ' (ಬಾಡೂಟ) ಕೇವಲ ಸಂಪ್ರದಾಯವಾಗಿ ಉಳಿಯದೆ,...

2014ರ ಲೋಕಸಭಾ ಚುನಾವಣೆ ನಡೆದಾಗ ಈ ಯುವಜನರಿಗೆ ನರೇಂದ್ರ ಮೋದಿ ಅವರು ‘ಹೊಸ ನಾಯಕತ್ವ’, ‘ಉದ್ಯೋಗಾವಕಾಶ’ ಮತ್ತು ‘ಅಭಿವೃದ್ಧಿ’ಯ ಸಂಕೇತವಾಗಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲ, ಹತ್ತು ವರ್ಷಗಳ ದೀರ್ಘಾವಧಿಯ ಯುಪಿಎ ಆಡಳಿತ, ಭ್ರಷ್ಟಾಚಾರದ ಆರೋಪಗಳು ಹಾಗೂ ಆರ್ಥಿಕ ಮಂದಗತಿಯಿಂದ ಬೇಸತ್ತಿದ್ದ ಈ ಯುವಜನ ಮೋದಿ ಅವರನ್ನ ‘ವ್ಯವಸ್ಥೆಯನ್ನ ಬದಲಾಯಿಸುವ, ಹೊಸ ಮಾದರಿಯ ಅಭಿವೃದ್ಧಿ ತರುವ ನಾಯಕ’ ಎಂದೇ ಭಾವಿಸಿದ್ದರು. ಬಿಜೆಪಿ-ಆರ್‌ಎಸ್‌ಎಸ್‌ನ ವಾಟ್ಸ್‌ಆ್ಯಪ್ ಯೂನಿವರ್ಸಿಟಿ ಕೂಡ ಅಂತಹದ್ದೊಂದು ಹುಸಿ ಭರವಸೆ ಮತ್ತು ಭ್ರಮೆಯನ್ನ ಈ ಯುವಜನರಲ್ಲಿ ತುಂಬಿಸಿತ್ತು. ಈ ಆಶಾಭಾವದಿಂದ ಜೆನ್‌-ಜೀ ಯುವಜನರು ಬಿಜೆಪಿಗೆ ಮತ ಚಲಾಯಿಸಿದ್ದರು. ಈ ಯುವಜನರ ಮತ ಪಡೆದ ಬಿಜೆಪಿ ಅಭೂತಪೂರ್ವ, ಐತಿಹಾಸಿಕ ಗೆಲುವು ಸಾಧಿಸಿತು. ಮೋದಿ ಪ್ರಧಾನಿಯೂ ಆದರು.

ಇನ್ನು, 2019ರ ಹೊತ್ತಿಗೆ, ಅದರಲ್ಲೂ, ಪುಲ್ವಾಮಾ ಮತ್ತು ಬಾಲಾಕೋಟ್ ಘಟನೆಗಳು ನಡೆದ ಬಳಿಕ, ಯುವ ಮತದಾರರಲ್ಲಿ ಮೋದಿ ಮೇಲಿನ ಆಕರ್ಷಣೆ ಕೇವಲ ಉದ್ಯೋಗ ಅಥವಾ ಅಭಿವೃದ್ಧಿಗೆ ಸೀಮಿತವಾಗದೆ, ‘ಬಲಿಷ್ಠ ನಾಯಕತ್ವ’ ಮತ್ತು ‘ರಾಷ್ಟ್ರೀಯ ಭದ್ರತೆ’ಯ ಕಲ್ಪನೆಗೆ ಜೊತೆಗೆ ಬೆಸೆದುಕೊಂಡಿತು. ಮೋದಿ ಇದ್ದರೆ ಮಾತ್ರವೇ ದೇಶಕ್ಕೆ ಭದ್ರತೆ ಎಂಬ ಭ್ರಮಾಲೋಕ ಸೃಷ್ಟಿಯಾಗಿತ್ತು. ಆದ್ದರಿಂದ, 2019ರ ಲೋಕಸಭಾ ಚುನಾವಣೆಯಲ್ಲಿ 2014ಕ್ಕಿಂತಲೂ ಹೆಚ್ಚಿನ ಯುವಜನರು ಅದೂ ಮೋದಿ ಮುಖನೋಡಿಯೇ ಬಿಜೆಪಿಗೆ ಮತ ಹಾಕಿದ್ರು. ಆಗ ಮೈಸೂರು-ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡ ಮೋದಿ ಮುಖ ನೋಡಿ ನಮಗೆ ಓಟ್‌ ಹಾಕಿ ಅಂತ ಹೇಳಿದ್ದೂ ಇದೆ.

2019ರ ಲೋಕಸಭಾ ಚುನಾವಣೆಯ ಮತದಾನದ ದತ್ತಾಂಶಗಳನ್ನ ಲೋಕನೀತಿ-ಸಿಎಸ್‌ಡಿಎಎಸ್ ವಿಶ್ಲೇಷಣೆ ಮಾಡಿವೆ. ಅವುಗಳ ವರದಿಯ ಪ್ರಕಾರ, 2019ರಲ್ಲಿ ಯುವಜನರ ಮೂರೂ ವಯೋಮಾನದ ಗುಂಪುಗಳಲ್ಲಿ ಬಿಜೆಪಿಗೆ ಮತ ಹಾಕಿದವರ ಪ್ರಮಾಣ40%ರ ಆಸುಪಾಸಿನಲ್ಲಿತ್ತು:

  • 18–22 ವರ್ಷ (ಮೊದಲ ಬಾರಿಯ ಮತದಾರರು): 41%
  • 23–27 ವರ್ಷ: 40%
  • 28–35 ವರ್ಷ: 39%

ಅಂದರೆ, ಮೊದಲ ಬಾರಿಗೆ ಮತದಾನ ಮಾಡಿದ 10 ಯುವಜನರಲ್ಲಿ 4 ಮಂದಿ ಬಿಜೆಪಿಗೆ ಮತ ಹಾಕಿದ್ದಾರೆ.

ಇದೇ ಲೋಕನೀತಿ-ಸಿಎಸ್‌ಡಿಎಎಸ್ 2024ರ ಆರಂಭದಲ್ಲಿ ನಡೆಸಿದ್ದ ‘ಯೂತ್ ಅಂಡ್ ಪಾಲಿಟಿಕ್ಸ್ ಸರ್ವೇ’ ಪ್ರಕಾರ,

  • 47.8% ಯುವಜನರು ಮೋದಿಯವರನ್ನು ‘ಬಹಳ ಇಷ್ಟಪಡುತ್ತೇವೆ’ ಎಂದೂ,
  • 32.7% ಯುವಜನರು ‘ಇಷ್ಟಪಡುತ್ತೇನೆ’ ಎಂದೂ ಹೇಳಿದ್ದರು.

ಅಂದರೆ, ಒಟ್ಟಾರೆಯಾಗಿ 80.5% ಯುವಜನರಿಗೆ ಮೋದಿಯವರ ಬಗ್ಗೆ ಧನಾತ್ಮಕ ಭಾವನೆ ಇತ್ತು.

ಆದರೆ, 2024ರಲ್ಲೇ ನಡೆದ ಲೋಕಸಭಾ ಚುನಾವಣೆ ಹೊತ್ತಿಗೆ ಈ ಪರಿಸ್ಥಿತಿ ಭಿನ್ನವಾಯಿತು. ಮಾತ್ರವಲ್ಲ, ಮತ್ತಷ್ಟು ಸೂಕ್ಷ್ಮವು ಆಗಿತ್ತು. ಈ ಚುನಾವಣೆ ವೇಳೆಗೆ, ಯುವಜನರಲ್ಲಿ ಮೋದಿ ಅವರ ಕೆಲಸ-ಕಾರ್ಯಗಳನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಯಲಾರಂಭಿಸಿತ್ತು.

ಜೆನ್‌-ಝೀ ಯುವಜನರು ಮೋದಿ ಸರ್ಕಾರದ ಮೇಲೆ ಅಸಮಾಧಾನ ಬೆಳೆಸಿಕೊಳ್ಳೋಕೆ ಆರಂಭಿಸಿತು. ಮೋದಿ ಸರ್ಕಾರವು ಅಭಿವೃದ್ಧಿ, ಉದ್ಯೋಗ, ಭದ್ರತೆ ವಿಚಾರದಲ್ಲಿ ಗಮನಾರ್ಹ ಕೆಲಸ ಏನೂ ಮಾಡುತ್ತಿಲ್ಲ. ಬದಲಾಗಿ, ಕೋಮುದ್ವೇಷ ಹರಡುತ್ತಾ ಕೋಮುರಾಜಕಾರಣ ಮಾಡುತ್ತಿದೆ. ಮೋದಿ ಕಾಲದಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಬೆಲೆ ಏರಿಕೆ-ನಿರುದ್ಯೋಗ ಜನರನ್ನು ಕಾಡುತ್ತಿದೆ ಅನ್ನೋದು ಯುವಜನರಿಗೆ ಅರಿವಾಗತೊಡಗಿತ್ತು.

2024ರ ಚುನಾವಣೆಗೂ ಮುನ್ನ ನಡೆದ ಸಮೀಕ್ಷೆಗಳಲ್ಲಿ,

  • 17.4% ಯುವಜನರು ಕೋಮು ವಿಭಜನೆ ಹೆಚ್ಚಾಗಿದೆ ಎಂದರೆ,
  • 14.7% ಯುವಜನರು ಬೆಲೆ ಏರಿಕೆ ಹೆಚ್ಚಳವಾಗಿದೆ ಎಂದೂ
  • 11.7% ಯುವಜನರು ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದ್ದರಿಂದಲೇ, 2024ರ ಚುನಾವಣೆಯಲ್ಲಿ ಮೋದಿ ಮತ್ತು ಅವರ ಪಟಾಲಂ ‘ಚಾರ್‌ ಸೌ ಪಾರ್‌’ – 400 ಸೀಟು ಗೆಲ್ಲುತ್ತೇವೆ ಎಂದು ಅಬ್ಬರದ ಪ್ರಚಾರ ಮಾಡಿದರೂ, ಚುನಾವಣೆಯಲ್ಲಿ ಯುವಜನರು ಮೋದಿ ಮುಖ ನೋಡಿ ಮಣೆ ಹಾಕಲಿಲ್ಲ. ಪರಿಣಾಮ, ಬಿಜೆಪಿ ಬಹುಮತಕ್ಕೆ ಅಗತ್ಯವಿದ್ದ 272 ಸ್ಥಾನಗಳನ್ನೂ ಗೆಲ್ಲಲಿಲ್ಲ. ಬಿಜೆಪಿ ಗೆದ್ದಿದ್ದು ಕೇವಲ 240 ಸ್ಥಾನಗಳು ಮಾತ್ರ. ಬಿಜೆಪಿಯೂ ಸೇರಿ ಎನ್‌ಡಿಎ ಮೈತ್ರಿಕೂಟ ಗೆದ್ದಿದ್ದು 293. ಅಂದ್ರೆ, ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸಲಾಗದೆ, ಮೈತ್ರಿ ಪಕ್ಷಗಳ ಕೃಪಾಕಟಾಕ್ಷದೊಂದಿಗೆ ಮೋದಿ 3ನೇ ಬಾರಿಗೆ ಪ್ರಧಾನಿಯಾದರು.

ಇನ್ನು, ಈ ವರ್ಷ, ಅಂದ್ರೆ, 2026ರ ಹೊತ್ತಿಗೆ ಸಿ-ವೋಟರ್ ಮತ್ತು ಇಂಡಿಯಾ ಟುಡೇ ನಡೆಸಿರುವ ಜೆನ್-ಝೀ ಸಮೀಕ್ಷೆಗಳು ಯುವ ರಾಜಕೀಯ ಮನಸ್ಥಿತಿಯಲ್ಲಿ ಮಹತ್ವದ ಬದಲಾವಣೆಗಳಾಗಿವೆ ಎಂಬುದನ್ನು ಸ್ಪಷ್ಟಪಡಿಸಿವೆ. ಈಗ ಯುವಜನರು ಅಬ್ಬರದ ಭಾಷಣಗಳು ಅಥವಾ ಮೋದಿ ಇಮೇಜ್‌ಗಿಂತ ತಮ್ಮ ವೈಯಕ್ತಿಕ ಭವಿಷ್ಯ, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸರ್ಕಾರವನ್ನು ಹೀನಾಯ-ಮಾನಾಯ ಟೀಕಿಸುತ್ತಾ, ತಮ್ಮದೇ ಶೈಲಿಯಲ್ಲಿ ಪ್ರಶ್ನಿಸುತ್ತಿದ್ದಾರೆ.

2019ರ ಚುನಾವಣಾ ಸಮಯಕ್ಕೆ ಹೋಲಿಸಿದರೆ 2026ರ ವೇಳೆಗೆ ಜೆನ್-ಝೀ ಯುವಜನರ ಗಮನ ಸಂಪೂರ್ಣವಾಗಿ ದೈನಂದಿನ ಜೀವನದ ಸಮಸ್ಯೆಗಳತ್ತ ಹರಿದಿದೆ.

ಸಿ-ವೋಟರ್ ನಡೆಸಿರುವ ‘ಜೆನ್-ಝೀ ಯುವಜನರ ಪ್ರಮುಖ ಚುನಾವಣಾ ವಿಷಯಗಳು-2026’ ಸಮೀಕ್ಷಾ ದತ್ತಾಂಶಗಳು ಹೇಳುವಂತೆ;

  • 53% ಯುವಜನರು ಉದ್ಯೋಗ, ಶಿಕ್ಷಣ, ಆರೋಗ್ಯ
  • 13% ಯುವಜನರು ಬೆಲೆ ಏರಿಕೆ
  • 11.9% ಯುಜನರು ಭ್ರಷ್ಟಾಚಾರ
  • 8.2% ಯುವಜನರು ವಿದ್ಯುತ್, ನೀರು ಮತ್ತು ರಸ್ತೆಗಳು
  • 4.8% ಯುವಜನರು ಕಾನೂನು ಸುವ್ಯವಸ್ಥೆ ಮತ್ತು ಮಹಿಳಾ ಸುರಕ್ಷತೆ
  • 2.7% ಯುವಜನರು ರಾಷ್ಟ್ರೀಯ ಭದ್ರತೆ ತಮ್ಮ ಚುನಾವಣಾ ಆದ್ಯತೆ ಎಂದಿದ್ದಾರೆ

2019ರಲ್ಲಿ ರಾಷ್ಟ್ರೀಯ ಭದ್ರತೆ ಪ್ರಮುಖ ಚರ್ಚಾವಿಷಯವಾಗಿದ್ದರೆ, 2026ರ ಸಮೀಕ್ಷೆಯಲ್ಲಿ ರಾಷ್ಟ್ರೀಯ ಭದ್ರತೆ ತಮ್ಮ ಚುನಾವಣಾ ಪ್ರಮುಖ ವಿಷಯ ಎಂದವರು ಕೇವಲ 2.7%. ಆದರೆ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸಮಸ್ಯೆಗಳು ಒಟ್ಟಾರೆಯಾಗಿ 53%ಯುವಜನರಿಗೆ ಅತ್ಯಂತ ಪ್ರಮುಖ ವಿಷಯಗಳು ಎನಿಸಿವೆ.

ಈ ಲೇಖನ ಓದಿದ್ದೀರಾ?: ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ ಪುನಃ ಭುಗಿಲೆಬ್ಬಿಸಿದ ವಿವಾದ

12 ವರ್ಷಗಳ ಸುದೀರ್ಘ ಮೋದಿ ಆಡಳಿತ ಮತ್ತು ರಾಜಕೀಯ ಪ್ರಕ್ರಿಯೆಯನ್ನು ಹತ್ತಿರದಿಂದ ಕಂಡಿರುವ ಜೆನ್-ಝೀ ಯುವಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಅರಿವು ಹೆಚ್ಚಾಗಿದೆ. ಅದನ್ನು ಮೂರು ಅಂಶಗಳಲ್ಲಿ ಅರ್ಥ ಮಾಡಿಕೊಳ್ಳಬಹುದು.

  1. ರಾಜಕೀಯ ಪಕ್ಷಗಳ ಮೇಲಿನ ಅಪನಂಬಿಕೆ: 2026ರ ಸಮೀಕ್ಷೆಯ ಪ್ರಕಾರ, 58.7% ಜೆನ್-ಝೀ ಯುವಜನರು ರಾಜಕೀಯ ಪಕ್ಷಗಳು ತಮ್ಮ ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇವಲ 20.7% ಯುವಜನರು ಮಾತ್ರ ರಾಜಕೀಯ ಪಕ್ಷಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತವೆ ಎಂದು ನಂಬಿದ್ದಾರೆ. ಇದು ಪ್ರಚಲಿತ ರಾಜಕೀಯ ವ್ಯವಸ್ಥೆ ಮತ್ತು ಯುವಜನರ ಅಪೇಕ್ಷೆಗಳ ನಡುವೆ ದೊಡ್ಡ ಕಂದಕ ಇರುವುದನ್ನು ತೋರುತ್ತದೆ.
  2. ನೇಮಕಾತಿ ಪರೀಕ್ಷೆಗಳು ಮತ್ತು ಉದ್ಯೋಗ ಸೃಷ್ಟಿಯ ಮೇಲಿನ ಸವಾಲುಗಳು: ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ನೀಟ್ ಅಕ್ರಮಗಳು, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಗಳು ಹಾಗೂ ಸರ್ಕಾರಿ ನೇಮಕಾತಿಗಳ ವಿಳಂಬ ಯುವಮನಸ್ಸುಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಸಮೀಕ್ಷೆಯ ಪ್ರಕಾರ, 67% ಯುವಜನರು ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಗಳ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಅಪನಂಬಿಕೆ ಹೊಂದಿದ್ದಾರೆ. ಅಲ್ಲದೆ, 48% ಯುವಜನರು ಮೋದಿ ಸರ್ಕಾರದ ಪ್ರಯತ್ನಗಳು ಯುವಜನರಿಗೆ ಸಾಕಾಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಯಶಸ್ವಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
  3. ನಾಯಕತ್ವಕ್ಕಿಂತ ಜವಾಬ್ದಾರಿ/ಹೊಣೆಗಾರಿಕೆ ಪ್ರಶ್ನೆ: 2014ರಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದ ಯುವಜನರಿಗೆ ಯುಪಿಎ ಸರ್ಕಾರದ ಆಡಳಿತದ ಮೇಲಿನ ಅಸಮಾಧಾನ ಇತ್ತು. ಆದರೆ, 2026ರಲ್ಲಿ ಮೊದಲ ಬಾರಿಯ ಮತಚಲಾಯಿಸುತ್ತಿರುವ ಯುವ ಮತದಾರರು (18-20 ವರ್ಷ) ನರೇಂದ್ರ ಮೋದಿ ಅವರ ಆಡಳಿತವನ್ನು ಮಾತ್ರವೇ ನೋಡಿದ್ದಾರೆ. ಹೀಗಾಗಿ, ಮೋದಿ ಮತ್ತು ಅವರ ಬಿಜೆಪಿ ಪಟಾಲಂ ಹಿಂದಿನ ಹಳೆಯ ಸರ್ಕಾರಗಳ ವೈಫಲ್ಯಗಳನ್ನು ತೋರಿಸಿ ಭರವಸೆ ನೀಡುವುದನ್ನು ಈ ಹೊಸ ತಲೆಮಾರು ಅಷ್ಟಾಗಿ ನಂಬುವುದಿಲ್ಲ. ಬದಲಾಗಿ, ‘12 ವರ್ಷಗಳಿಂದ ಅಧಿಕಾರದಲ್ಲಿದ್ದೀರಿ, ಈಗ ನಮ್ಮ ಭವಿಷ್ಯಕ್ಕೆ ನೀವು ನೀಡಿರುವ ಉತ್ತರವೇನು’ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ನೇರ ಹೊಣೆಗಾರಿಕೆಯನ್ನು ಕೇಳುತ್ತಿದ್ದಾರೆ.

ಇದೆಲ್ಲವನ್ನೂ ತಾಳೆ ಹಾಕಿ ನೋಡಿದರೆ ಯುವಕಜನರ ರಾಜಕೀಯ ಪಯಣದ ಪ್ರಮುಖ ಅಂಕಿ-ಅಂಶಗಳನ್ನು ಹೀಗೆ ನೋಡಬಹುದು:

ವರ್ಷರಾಜಕೀಯ ಮನಸ್ಥಿತಿಯ ಮುಖ್ಯ ಲಕ್ಷಣಬಿಜೆಪಿಗೆ ಸಿಕ್ಕ ಯುವ ಬೆಂಬಲ / ಮೋದಿಯವರ ಕುರಿತ ಭಾವನೆಪ್ರಮುಖ ರಾಜಕೀಯ ಪ್ರೇರಕ ಶಕ್ತಿ
2014ಆಶಾವಾದಯುವ ಮತದಾರರಲ್ಲಿ ಬಿಜೆಪಿಗೆ ಭಾರಿ ಮುನ್ನಡೆಬದಲಾವಣೆ, ಉದ್ಯೋಗ, ಭ್ರಷ್ಟಾಚಾರ ಮುಕ್ತಿ
2017–18ಎಚ್ಚರಿಕೆಯ ಕರೆ18–25 ವಯಸ್ಸಿನವರಲ್ಲಿ ಬೆಂಬಲ 43% ರಿಂದ 34%ಕ್ಕೆ ಕುಸಿತ (9% ಇಳಿಕೆ)ಆರ್ಥಿಕ ನಿರ್ಧಾರಗಳು, ಉದ್ಯೋಗಸೃಷ್ಠಿಯಲ್ಲಿ ವಿಫಲ
2019ನಾಯಕತ್ವ-ಕೇಂದ್ರಿತ18–22 ವಯಸ್ಸಿನವರಲ್ಲಿ 41%, 23–27ರಲ್ಲಿ 40% ಬೆಂಬಲಬಲಿಷ್ಠ ನಾಯಕತ್ವ, ರಾಷ್ಟ್ರೀಯ ಭದ್ರತೆ
2024ಜನಪ್ರಿಯತೆ + ಆಡಳಿತದ ಪ್ರಶ್ನೆಗಳು80.5% ಮೋದಿಯವರನ್ನು ಇಷ್ಟಪಟ್ಟರೂ, 17.4% ಕೋಮು ವಿಭಜನೆ & 14.7% ಬೆಲೆ ಏರಿಕೆ ಪ್ರಶ್ನಿಸಿದರುವೈಯಕ್ತಿಕ ಆಕರ್ಷಣೆ vs ಆಡಳಿತಾತ್ಮಕ ಸವಾಲುಗಳು
2026ಸಮಸ್ಯೆ ಕೇಂದ್ರಿತ58.7% ಯುವಕರು ಪಕ್ಷಗಳ ಮೇಲೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ53% ಉದ್ಯೋಗ/ಶಿಕ್ಷಣ/ಆರೋಗ್ಯ

ಈ ಸಮಗ್ರ ಅಂಕಿಅಂಶಗಳು ಮತ್ತು ಜನಾಭಿಪ್ರಾಯಗಳನ್ನು ಆಳವಾಗಿ ವಿಶ್ಲೇಷಿಸಿದಾಗ, ಭಾರತದ ಜೆನ್-ಝೀ ಯುವಜನರು ‘ಮೋದಿ ವಿರುದ್ಧ ಅಸಮಾಧಾನ’ಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

2014ರಲ್ಲಿ ಯುವಜನರು ಮೋದಿಯವರಿಂದ ಭರವಸೆಯ ಆಧಾರದ ಮೇಲೆ ‘ಬದಲಾವಣೆ’ ನಿರೀಕ್ಷಿಸಿದ್ದರು. ಆದರೆ 2026ರಲ್ಲಿ ಜೆನ್-ಝೀ ತಲೆಮಾರು, 12 ವರ್ಷಗಳ ಆಡಳಿತದ ನಂತರ, ಮೋದಿಯವರಿಂದ ತಮ್ಮ ಉದ್ಯೋಗ, ಪರೀಕ್ಷಾ ವ್ಯವಸ್ಥೆ, ಶಿಕ್ಷಣ ಹಾಗೂ ವೈಯಕ್ತಿಕ ಭವಿಷ್ಯದ ಪ್ರಶ್ನೆಗಳಿಗೆ ನೇರ, ನಂಬಿಕಾರ್ಹ ಮತ್ತು ನೈಜ ಪರಿಹಾರಗಳನ್ನು ಬಯಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದಲೇ ಬೀದಿಗಿಳಿದು ಹೋರಾಟ ನಡೆಸುತ್ತಿದೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗುವ ಉದ್ದೇಶದಿಂದ ರಿಶೈನ್‌ ಆರ್ಗನೈಸೇಷನ್‌...

ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ‘ಜನತಾ ನ್ಯಾಯಾಲಯ’ – ಎಸ್‌ಐಆರ್ ಅನ್ಯಾಯಗಳ ವಿರುದ್ಧ ಪ್ರತಿಭಟನೆಯ ಕಹಳೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಕ್ರಮಗಳು, ಮುಖ್ಯ ಚುನಾವಣಾ...

ಬಸವಕಲ್ಯಾಣ | ಬೌದ್ಧ ವಿಹಾರ, ಅಂಬೇಡ್ಕರ್ ಭವನಕ್ಕೆ 25 ಎಕರೆ ಜಮೀನು ನೀಡಲು ಆಗ್ರಹ

ಬಸವಕಲ್ಯಾಣ ನಗರದಲ್ಲಿ ಬೌದ್ಧ ವಿಹಾರ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ...

ಶಿಕಾರಿಪುರ | ಬೀಗರೂಟ ಹಾಕಿದ್ರೆ 1 ಲಕ್ಷ, ಉಂಡ್ರೆ 50 ಸಾವಿರ ದಂಡ!

ಮದುವೆ ಅಂದರೆ ಕೇವಲ ಎರಡು ಮನಸುಗಳ ಮಿಲನ ಮಾತ್ರವಲ್ಲ, ಬಂಧು-ಬಳಗದ ಸಂಭ್ರಮ....