ಕಳೆದ 10ರಿಂದ 12 ವರ್ಷಗಳಿಂದ ಮಾಧವ ಗಾಡ್ಗೀಳ್ ವರದಿ ಬಂದಾಗ ಪ್ರಥಮವಾಗಿ ಪರಿಸರವಾದಿಯಾದ ನಾನು ಮಾಧವ ಗಾಡ್ಗಿಲ್ ವರದಿಯನ್ನು ತಿರಸ್ಕರಿಸಿದೆ. ಪಶ್ಚಿಮ ಘಟ್ಟದ ಪ್ರದೇಶದಲ್ಲಿ ನಾನು ಇಲ್ಲೇ ಹುಟ್ಟಿರಲೇ ಬೆಳೆದಿದ್ದರಿಂದ ಇಲ್ಲಿನ ಪರಿಸ್ಥಿತಿ ಗೊತ್ತಿದೆ. ಭಾರತ ದೇಶದಲ್ಲಿ ಪ್ರಮುಖವಾದ ಭಾಗಗಳಲ್ಲಿ ಭೂ ಜೀವ ವೈವಿದ್ಯಾಗಳು ನೆಲೆಸಿವೆ, ಪೂರ್ವಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವಿದೆ. ಆದರೆ ಆ ಭಾಗಕ್ಕೆ ಎಲ್ಲೂ ವರದಿ ಕೊಡದೆ ಮಲೆನಾಡಿನ ಭಾಗಕ್ಕೆ ಮಾತ್ರ ವರದಿ ಕೊಟ್ಟಿದ್ದು ಯಾಕೆ? ಇಲ್ಲಿ ವಾಸ ಮಾಡುತ್ತಿರುವಂತಹ ಜನರಿಗೆ ಹಾಗೂ ಪರಿಸರದ ಮೇಲೆ ಯಾಕೆ ಒತ್ತಡ ಹಾಕಬೇಕು ಎಂದು ಪರಿಸರವಾದಿ ಡಾ. ಕಲ್ಕುಳಿ ವಿಠಲ್ ಹೆಗಡೆ ಸಮಾವೇಶದಲ್ಲಿ ತಿಳಿಸಿದರು.

ಜಾಗತಿಕ ತಾಪಮಾನ,ಪರಿಸರ ವೈಪರಿತ್ಯ, ಜೀವ ವೈವಿಧ್ಯತೆಗಳು ಹಾಗೂ ಅನೇಕ ಜೀವಿಗಳು ಕೊನೆಯ ಹಂಚಿನಲ್ಲಿ ತಲುಪುವ ಸ್ಥಿತಿ ಕೂಡ ಎದುರಾಗಿದೆ. ಜಾಗತಿಕ ತಾಪಮಾನಕ್ಕೆ ಕಾರಣವಾದ ಹಸಿರುಮನೆ ಅನಿಲಗಳು, ಇದನ್ನೂ ಸೃಷ್ಟಿ ಮಾಡಿದವರು ಈ ಮಲೆನಾಡಿನವರ ಎಂಬ ಪ್ರಶ್ನೆ? ಹಳ್ಳಿಯಲ್ಲಿ ವಾಸ ಮಾಡುವಂತಹ ಜನರು ನಿಜವಾಗಿಯೂ ಹಸಿರುಮನೆ ಅನಿಲಗಳಿಗೆ ಕಾರಣನ, ಪ್ರಮುಖವಾಗಿ ಉತ್ಪಾದನೆಯಾಗುವುದು ಪೆಟ್ರೋಲ್, ಡೀಸೆಲ್, ಪೆಟ್ರೋಲ್, ಕಲ್ಲಿದ್ದಲು, ಸಿಮೆಂಟು ಇವು ಅತೀ ಹೆಚ್ಚು ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಇದನ್ನ ಹೆಚ್ಚಾಗಿ ಬಳಸುವಂತವರು ಯಾರು? ನಗರಗಳಲ್ಲಿ ಸ್ವಿಚ್ ಹಾಕಿದ್ರೆ ವಿದ್ಯುತ್ ಬರಬೇಕು, ಎಸಿ ಆಗಬೇಕು ಇಂತದ್ರಲ್ಲಿ ಅವರು ನಮ್ಮ ಕಡೆ ಕೈ ತೋರಿಸುತ್ತಿದ್ದಾರೆ. ಇದಕ್ಕೆ ಕಾರಣರಾದವರಿಗೆ ವರದಿ ಕೊಡಬೇಕು ಅದನ್ನು ಬಿಟ್ಟು ಮಲೆನಾಡಿನ ಭಾಗಕ್ಕೆ ಅಲ್ಲ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಕಸ್ತೂರಿರಂಗನ್ ವರದಿ: ಕೇಂದ್ರ ಸರ್ಕಾರ ವಜಾ ಗೊಳಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ; ಮಲೆನಾಡಿನ ಜನತೆ
ಪರಿಸರ ಸೂಕ್ಷ್ಮ ವಲಯ ಎಂದು ಹೇಳಿದ್ದಾರಲ್ಲ ಇಲ್ಲಿರುವ ಜನರನ್ನು ಖಾಲಿ ಮಾಡಿಸುವುದಕ್ಕೆ ಆಗುತ್ತಾ? ಪರಿಸರದಲ್ಲಿ ಉದ್ಭವಿಸಿರುವ ಜಾಗತಿಕ ತಾಪಮಾನವನ್ನು ಯಾವುದೇ ಕಾರಣಕ್ಕೂ ಯಾವತ್ತಾದರೂ ಪರಿಹಾರ ಮಾಡುವುದಕ್ಕೆ ಸಾಧ್ಯವಾಗುತ್ತ ಎಂಬ ಪ್ರಶ್ನೆ ಮೂಡುತ್ತದೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡಿನಲ್ಲಿ ವಾಸಿಸುವ ಜನರ ಬದುಕು ಅತಂತ್ರವಾಗುವ ಪರಿಸ್ಥಿತಿ ಎದುರಾಗಿದೆ.





