ಹಾವೇರಿ | ಶಾಸನಗಳ ಕುರಿತು ಡಾ. ಭೋಜರಾಜ ಪಾಟೀಲರಿಗಿದ್ದ ಆಸಕ್ತಿ ಅಪಾರ: ಡಾ. ರಾಜಶೇಖರಪ್ಪ

Date:

ಡಾ. ಭೋಜರಾಜ ಪಾಟೀಲ ಅವರು ಶಾಸನಗಳ ಮೇಲೆ‌ ಸಾಕಷ್ಟು ಆಸಕ್ತಿ ಹೊಂದಿದ್ದರು. ʼನಾಗರ ಕಂಡ ಎಪ್ಪತ್ತುʼ ಸಂಶೋಧನಾ ಕೃತಿಯಲ್ಲಿ ಅನೇಕ‌ ಸತ್ಯಗಳನ್ನು ವಿವರಿಸಿದ್ದಾರೆ. ಇದು ಒಂದು ಪ್ರಾಂತ್ಯದ ಸಂಶೋಧನಾ ಮಾದರಿ‌ ಕೃತಿಯಾಗಿದೆ ಎಂದು ಸಂಶೋದಕ ಡಾ. ರಾಜಶೇಖರಪ್ಪ ಹೇಳಿದರು.

- Advertisement -

ಹಾವೇರಿ ಪಟ್ಟಣದ ಗೆಳೆಯರ ಬಳಗ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಖ್ಯಾತ ಸಂಶೋಧಕರಾದ ಲಿಂ. ಡಾ. ಭೋಜರಾಜ ಪಾಟೀಲ್ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಸಂಶೋಧಕರಾದ ಲಿಂ ಡಾ. ಭೋಜರಾಜ ಪಾಟೀಲ್ ಅವರು ಜೀವಿತಾವಧಿಯಲ್ಲಿ ಸಾಕಷ್ಟು ಸಾಧನೆಗೈದಿದ್ದಾರೆ. ಅನೇಕ ಸಂಶೋಧನ ಲೇಖನಗಳು, ಜೀವನಚರಿತ್ರೆ, ಸ್ಥಳ ಪರಿಚಯ, ಲೇಖನಗಳ ಸಂಕಲನಗಳನ್ನು ಹೊರತಂದಿದ್ದರು, ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ” ಎಂದು ಪ್ರಶಂಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

“ಡಾ. ಭೋಜರಾಜ ಪಾಟೀಲ್ ಅವರು ಹಿರೇಕೆರೂರು ತಾಲೂಕಿನ ಸ್ಥಳ ನಾಮಗಳ ಕುರಿತು ಸಂಶೋಧನ ಕೃತಿಯನ್ನು ರಚಿಸಿದರು. ವಿಶೇಷವಾಗಿ ಈ ಕೃತಿಯಲ್ಲಿ ಸಾಹಿತ್ಯಿಕ, ವ್ಯಾಕರಣ, ಭಾಷಾ ವಿಜ್ಞಾನ ದೃಷ್ಟಿಕೋಣದಲ್ಲಿ ಅವಲೋಕಿಸಿ ಸ್ಥಳಿಯರೂ ಏನನ್ನು ಹೇಳಿದ್ದಾರೆ ಎನ್ನುವುದನ್ನು ಉಲ್ಲೇಖಿಸಿ ಹಲವು ಮಗ್ಗಲುಗಳಲ್ಲಿ ಸ್ಥಳ ನಾಮಗಳ ಅಧ್ಯಯನ ಆಸಕ್ತಿಯಿಂದ ನಡೆಸಿದರು. ಸ್ಥಳನಾಮಗಳ ವೈಜ್ಞಾನಿಕವಾಗಿ ದೃಷ್ಟಿಕೋನದಲ್ಲಿ‌ ಅಧ್ಯಯನ ಮಾಡಿದವರು ಡಾ. ಭೋಜರಾಜ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಿರಿಯ ಕವಿ ಸತೀಶ್ ಕುಲಕರ್ಣಿ, ಕಸಾಪ ಗೌರಾವಾಧ್ಯಕ್ಷರು ಎಸ್.ಎನ್. ದೊಡ್ಡಗೌಡರರ್, ಹಿರಿಯ ಸಾಹಿತಿ ಲೀಲಾವತಿ ಭೋಜರಾಜ ಪಾಟೀಲ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಮತ್ತು ಅಜೀವ ಸದ್ಯರುಗಳು, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ದತ್ತಿ ದಾನಿಗಳು, ಕನಡಪರ ಎಲ್ಲ ಸಂಘಟನೆಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಲತವಾಡ | ಬರದ ನಾಡಿನಲ್ಲಿ ಅಂತರ್ಜಲದ ಸೆಲೆ: ವಾಣಿಜ್ಯ ಕಟ್ಟಡದ ಬುನಾದಿಯಲ್ಲಿ ಬತ್ತದ ಬುಗ್ಗೆ!

ಒಂದೆಡೆ ಮಳೆ ಕೊರತೆ ಮತ್ತು ಬರಗಾಲದ ಬವಣೆಯಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ,...

ಬೆಳಗಾವಿ | ಹೆದ್ದಾರಿಯಲ್ಲಿ ಸಂಚಾರ ಆರಂಭವಾದ ಬೆನ್ನಲ್ಲೇ ದುರಂತ ಬೈಕ್‌ಗೆ ಲಾರಿ ಡಿಕ್ಕಿ: ತಂದೆ-ಮಗಳು ಸ್ಥಳದಲ್ಲೇ ಸಾವು

ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ...

​ಪದವೀಧರರ-ಶಿಕ್ಷಕರ ನಿಜವಾದ ಧ್ವನಿಯಾಗಲು ಸ್ಪರ್ಧೆ;ಯಾವುದೇ ಒತ್ತಡಕ್ಕೂ ಹಿಂದೆ ಸರಿಯಲ್ಲ:ವಕೀಲ ಬರೀದ್

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಕೀಲ ಬರೀದ್...