ಬಾಗೇಪಲ್ಲಿ:-ತಾಲ್ಲೂಕಿನ ಗೂಳೂರು ಹೋಬಳಿ ನಲ್ಲಪ್ಪರೆಡ್ಡಿ ಗ್ರಾಮದಲ್ಲಿ 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೈಮಾಸ್ಟ್ ದೀಪ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಲೋಕಾರ್ಪಣೆ ಮಾಡಿದರು.
ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪದ ಸೌಲಭ್ಯ ನೀಡಿ, ಸ್ವಚ್ಛತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಯತ್ನ ಮಾಡಬೇಕು. ನಮ್ಮದು ಕೃಷಿ ಪ್ರಧಾನ ದೇಶ ಮತ್ತು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳ ಮೇಲೆ ದೇಶದ ಆರ್ಥಿಕತೆ ಅವಲಂಬಿತವಾಗಿದೆ. ಸರ್ಕಾರವು ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ ಎಂದರು.
ಇದನ್ನು ಓದಿದ್ದೀರಾ..? ಉಚಿತ ಹೊಲಿಗೆ ಯಂತ್ರಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ಶಾರ್ಲೆನ್
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎ.ಶ್ರೀನಿವಾಸ, ನಲ್ಲಪರೆಡ್ಡಿಪಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಲಾವಣ್ಯ ಪಿ.ಎನ್.ಆನಂದರೆಡ್ಡಿ, ಜಿಲಾಜಿರ್ಲಾ ಆದಿನಾರಾಯಣ, ಮಾಜಿ ಉಪಾಧ್ಯಕ್ಷ ಚೆನ್ನರಾಯನಪಲ್ಲಿ ನಾಗರಾಜು, ಡೇರಿ ಅಧ್ಯಕ್ಷ ರಂಗಾರೆಡ್ಡಿ, ಪುರಸಭೆ ಮಾಜಿ ಸದಸ್ಯ ಎ.ನಂಜುಂಡಪ್ಪ, ಮುಖಂಡರಾದ ಜಯರಾಮರೆಡ್ಡಿ, ಚಂದ್ರಶೇಖರೆಡ್ಡಿ, ಪ್ರಭಾಕರೆಡ್ಡಿ, ರಂಗಸ್ವಾಮಿ, ತಿರುಪಾಲ, ಕೃಷ್ಣಪ್ಪ, ಬಂಡಕಿಂದ ನಂಜುಂಡಪ್ಪ, ಗಂಗುಲಪ್ಪ, ನರಸಿಂಹರೆಡ್ಡಿ, ಮೋಹನರೆಡ್ಡಿ, ಕರುಣಾಕರೆಡ್ಡಿ, ವೆಂಕಟರಾಮಪ್ಪ, ಶ್ರೀನಿವಾಸ, ಎ.ಕೆ.ಬಾಬು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.




