‘ಎನ್‌ಡಿಟಿವಿ’ ಈಗ ಮೊದಲಿನಂತಿಲ್ಲ: ರಾಜೀನಾಮೆಯ ಬಳಿಕ ಮುಂಬೈ ಬ್ಯೂರೋ ಮುಖ್ಯಸ್ಥ ಸೋಹಿತ್ ಮಿಶ್ರಾ

Date:

  • ತನ್ನದೇ ಹೆಸರಿನಲ್ಲಿ ಯೂಟ್ಯೂಬ್‌ ಚಾನೆಲ್ ಆರಂಭಿಸಿದ ಪತ್ರಕರ್ತ ಸೋಹಿತ್ ಮಿಶ್ರಾ
  • ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಅಡ್ಡಿಪಡಿಸಲು ಸೂಚಿಸಿದ್ದ ಎನ್‌ಡಿಟಿವಿ ಮುಖ್ಯಸ್ಥ ಸಂಜಯ್ ಪುಗಾಲಿಯಾ

‘ಎನ್‌ಡಿಟಿವಿ ಈಗ ಮೊದಲಿನಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅದು ಸಾಕಷ್ಟು ಬದಲಾಗಿ ಬಿಟ್ಟಿದೆ’ ಎಂದು ಎನ್ ಡಿಟಿವಿ ಮುಂಬೈ ಬ್ಯೂರೋ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸೋಹಿತ್ ಮಿಶ್ರಾ ತಿಳಿಸಿದ್ದಾರೆ.

ಎನ್‌ಡಿಟಿವಿಯ ಹುದ್ದೆಯ ರಾಜೀನಾಮೆ ನೀಡಿದ ಬಳಿಕ Sohit Mishra Official ಎಂಬ ತನ್ನದೇ ಹೆಸರಿನಲ್ಲಿ ಯೂಟ್ಯೂಬ್‌ ಚಾನೆಲ್ ಆರಂಭಿಸಿರುವ ಅವರು, “ಎನ್‌ಡಿಟಿವಿಯಲ್ಲಿ ಈಗಲೂ ಹಲವು ಮಂದಿ ಪ್ರಾಮಾಣಿಕವಾಗಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈಗ ಬಹಳಷ್ಟು ಬದಲಾವಣೆಗಲಾಗಿದೆ ಎಂಬುದು ಕೂಡ ವಾಸ್ತವ. ಅದು ಹಿಂದಿನಂತಿಲ್ಲ. ವರ್ಷಗಳ ಹಿಂದೆ ಕೆಲವು ಮಂದಿ ಇದನ್ನು ತಮ್ಮ ಕೈವಶ ಮಾಡಿಕೊಂಡಾಗ ಪತ್ರಿಕೋದ್ಯಮದ ಬಗ್ಗೆ ಭಾಷಣವನ್ನಷ್ಟೇ ಮಾಡಿದರು. ಆದರೆ ಅದು ಮಾತಿಗಷ್ಟೇ ಸೀಮಿತವಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಒಂದು ಸಂದರ್ಭದಲ್ಲಿ ನಮ್ಮ ಕೈಯಲ್ಲಿ ಎನ್‌ಡಿಟಿವಿಯ ಕೆಂಪು ಮೈಕ್ ಹಿಡಿದುಕೊಳ್ಳುವುದು ಬಹಳ ಹೆಮ್ಮೆಯ ವಿಷಯವಾಗಿತ್ತು. ಆದರೆ, ಈಗ ಆ ಕೆಂಪು ಮೈಕ್‌ ಅನ್ನು ಯಾರೋ ನಿಯಂತ್ರಣ ಮಾಡುತ್ತಿದ್ದಾರೆ. ಮೊದಲು ಕೆಲವೊಂದು ರಾಜಕಾರಣಿಗಳು ಎನ್‌ಡಿಟಿವಿಯ ಹೆಸರು ಕೇಳುವಾಗಲೇ ಭಯಭೀತರಾಗುತ್ತಿದ್ದರು. ಆದರೆ, ಬದಲಾದ ಈಗಿನ ಸಮಯದಲ್ಲಿ ಅದೇ ರಾಜಕಾರಣಿಗಳು ಎನ್‌ಡಿಟಿವಿಯಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಎನ್‌ಡಿಟಿವಿ ಈ ದೇಶದ ಜನಪರ ಪತ್ರಿಕೋದ್ಯಮದಲ್ಲಿ ಹೆಮ್ಮೆಯಾಗಿದ್ದ ಸಂದರ್ಭದಲ್ಲಿ ಸರಿಯಾದ ದಾರಿಯಲ್ಲಿತ್ತು” ಎಂದು ತಮ್ಮ ಅನುಭವವನ್ನು ಸೋಹಿತ್ ಮಿಶ್ರಾ ಹಂಚಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಮಾರು 10 ನಿಮಿಷಗಳ ವಿಡಿಯೋದಲ್ಲಿ ತಾನು 2017ರಲ್ಲಿ ಎನ್‌ಡಿಟಿವಿ ಸೇರಿದ್ದ ಸಂದರ್ಭ, ಜನರ ಪ್ರೀತಿ ಗಳಿಸಿದ್ದು, ಡಾ. ಪ್ರಣಯ್ ರಾಯ್ ಕಾರ್ಯ ನಿರ್ವಹಿಸಲು ನೀಡಿದ್ದ ಸ್ವಾತಂತ್ರ್ಯ, ತನ್ನ ಪತ್ರಿಕೋದ್ಯಮದ ಸೇವೆಯಿಂದ ಜನರಿಗಾದ ಅನುಭವ, ತನ್ನ ಹಲವು ಪ್ರಶ್ನೆಗಳಿಗೆ 27 ಬಾರಿ ‘ನಾನು ನಿಮಗೆ ಉತ್ತರವನ್ನು ಕೊಟ್ಟಿದ್ದೇನೆ’ ಎಂದಿದ್ದ ಬಿಜೆಪಿಯ ನಾಯಕ ಕಿರಿಟ್ ಸೋಮಯ್ಯ ಘಟನೆ, ಕೊರೋನಾ ಕಾಲದ ವರದಿಗಳು ಹಾಗೂ ‘ಕಡಿಮೆ ಸಂಬಳವಿದ್ದರೂ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದ ಎನ್‌ಡಿಟಿವಿ’ಯ ಬಗ್ಗೆ ಸೋಹಿತ್ ಮಿಶ್ರಾ ತನ್ನ ಅನುಭವಗಳನ್ನು ಹಂಚಿಕೊಂಡಿದ್ದು, ಮುಂದೆಯೂ ಜನರ ಪರವಾಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿದ್ದೇನೆ. ಹಾಗಾಗಿಯೇ, ಹಲವರ ಸಲಹೆ ಸ್ವೀಕರಿಸಿ, ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದೇನೆ. ಎಲ್ಲರ ಪ್ರೀತಿಗೆ ಆಭಾರಿ’ ಎಂದು ತಿಳಿಸಿದ್ದಾರೆ.

ಸೋಹಿತ್ ಮಿಶ್ರಾ ಅವರು ಕೇಳಿದ್ದ ತನ್ನ ಹಲವು ಪ್ರಶ್ನೆಗಳಿಗೆ 27 ಬಾರಿ ‘ನಾನು ನಿಮಗೆ ಉತ್ತರವನ್ನು ಕೊಟ್ಟಿದ್ದೇನೆ’ ಎಂದಿದ್ದ ಬಿಜೆಪಿಯ ನಾಯಕ ಕಿರಿಟ್ ಸೋಮಯ್ಯ ಅವರ ‘ಬೈಟ್ ವಿಡಿಯೋ’ 2020ರಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಸದ್ಯ ಎನ್‌ಡಿಟಿವಿ ತೊರೆದ ಬಳಿಕ ಸೋಹಿತ್ ಮಿಶ್ರಾ ಚಾನೆಲ್ ಆರಂಭಿಸಿ ಎರಡು ದಿನಗಳಾಗಿದ್ದು, ಈ ಸುದ್ದಿ ಬರೆಯುವ ವೇಳೆಗೆ ಸುಮಾರು 1.13 ಲಕ್ಷ ಜನರು ‘Subscribers’ ಆಗಿ, ಸೇರಿಕೊಂಡಿದ್ದಾರೆ.

ರಾಜೀನಾಮೆಗೆ ಕಾರಣ?
ಅದಾನಿ ಸಂಸ್ಥೆಗಳ ಅವ್ಯವಹಾರಗಳ ಕುರಿತು ರಾಹುಲ್ ಗಾಂಧಿ ಮುಂಬೈನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗದ್ದಲ ಸೃಷ್ಟಿಸುವಂತೆ ಮತ್ತು ವಿಷಯವನ್ನು ಬದಲಾಯಿಸಲು ಮಧ್ಯಪ್ರವೇಶಿಸುವಂತೆ ಸೋಹಿತ್ ಅವರನ್ನು ಎನ್ ಡಿಟಿವಿ ವಾಹಿನಿಯ ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯಾ ಸೂಚನೆ ನೀಡಿದ್ದರು. ಇದನ್ನು ಪ್ರತಿಭಟಿಸಿ ಎನ್‌ಡಿಟಿವಿ ಮುಂಬೈ ಬ್ಯೂರೋ ಮುಖ್ಯಸ್ಥ ಸೋಹಿತ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ.

ವಿದೇಶಿ ಶೆಲ್ ಕಂಪನಿ ವಿಷಯದಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸಂಘ ಪರಿವಾರವೇ ಮುಂದೆ ಬಂದಿತ್ತು. ಎನ್‌ಡಿಟಿವಿ ಇದನ್ನು ಅನುಸರಿಸಿ ಅದಾನಿ ಪರವಾಗಿ ಸುದ್ದಿಯನ್ನು ಹರಡಿತು.

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿವಾದಾತ್ಮಕ ಹಿಂಡೆನ್‌ಬರ್ಗ್‌ ವರದಿಯು 2013 ಮತ್ತು 2017 ರ ನಡುವೆ ನಾಲ್ಕು ಅದಾನಿ ಕಂಪನಿಗಳ ಷೇರು ತಿರುಚುವಿಕೆಯನ್ನು ಸೂಚಿಸುವ ಆರೋಪವನ್ನು ದೃಢಪಡಿಸಿದೆ. ಇದಾದ ಬಳಿಕ ಪ್ರತಿಪಕ್ಷಗಳು ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರವೂ ತೀವ್ರಗೊಂಡಿತ್ತು.

ಏತನ್ಮಧ್ಯೆ, ರಾಹುಲ್ ಗಾಂಧಿ ತಮ್ಮ ನಿಲುವನ್ನು ಪ್ರಕಟಿಸಲು ಪತ್ರಿಕಾಗೋಷ್ಠಿ ಕರೆದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನ ಗ್ರ್ಯಾಂಡ್ ಹಯಾತ್ ಹೋಟೆಲ್ ನಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ, ಇಂಡಿಯಾ ನಾಯಕರ ನಿರ್ಧಾರದ ಪ್ರಕಾರ ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಂಸತ್ತಿನ ಜಂಟಿ ಸಮಿತಿಯ ಬೇಡಿಕೆಯನ್ನು ಘೋಷಿಸುವುದಾಗಿತ್ತು.

ಸೋಹಿತ್ ಮಿಶ್ರಾ ಸೇರಿದಂತೆ ಎಲ್ಲ ಪತ್ರಕರ್ತರು ಸಭಾಂಗಣವನ್ನು ತಲುಪಿದ್ದರು. ಅದಕ್ಕೂ ಮೊದಲು, ಸಂಜಯ್ ಪುಗಾಲಿಯಾ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸುವಂತೆ ಸೋಹಿತ್ ಅವರನ್ನು ಕೇಳಿದ್ದರು ಎಂದು ತಿಳಿದುಬಂದಿದೆ.

ಅದಾನಿ ಅವರ ಎಎಂಜಿ ಮೀಡಿಯಾ ನೆಟ್ವರ್ಕ್, ಎನ್‌ಡಿಟಿವಿ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ನಂತರ ಸಂಜಯ್ ಪುಗಾಲಿಯಾ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಡನ್ ಅವರನ್ನು ಬೇಕಾದರೆ ಭೇಟಿ ಮಾಡಬಹುದು, ಆದರೆ ತೇಜಸ್ವಿಸೂರ್ಯ ಭೇಟಿಗೆ ಸಿಗ್ತಾ ಇಲ್ಲ!

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ವಂಚನೆಗೊಳಗಾದ ಸಾವಿರಾರು ಜನರು ಸಂಸದ...

ಶಿವಮೊಗ್ಗ | ಹಣ, ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು ಬಿಜೆಪಿ ಹೊರಟಿದೆ: ಸಚಿವ ಮಧುಬಂಗಾರಪ್ಪ

ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಹಣ ಹಾಗೂ ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು...

ತುಮಕೂರು | ಸಮೀಕ್ಷೆ ನಡೆಸಿ ಪುನರ್ವಸತಿ ಕಲ್ಪಿಸುವಂತೆ ಸ್ಲಂ ಸಮಿತಿ ಒತ್ತಾಯ

ಹೊಸದಾಗಿ ಸಮೀಕ್ಷೆ ನಡೆಸಿ ನೖಜ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು...

‘ಇಂದ್ರಾಣಿ ಮುಖರ್ಜಿ’ ವೆಬ್‌ ಸೀರೀಸ್ ವೀಕ್ಷಿಸಿದ ಬಾಂಬೆ ಹೈಕೋರ್ಟ್: ಸಿಬಿಐ ಅರ್ಜಿ ತಿರಸ್ಕೃತ

ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ...