ಖಾಯಂಗೊಳಿಸಿ, ವೇತನ ಹೆಚ್ಚಿಸಿ; ಎನ್‌ಎಚ್‌ಎಂ ನೌಕರರಿಂದ ಪ್ರತಿಭಟನೆ

Date:

ಎನ್‌ಎಚ್‌ಎಂ ನೌಕರರನ್ನು ಖಾಯಂ ಮಾಡಬೇಕು, ವಾರ್ಷಿಕವಾಗಿ 5% ವೇತನವನ್ನು ಹೆಚ್ಚಳ ಮಾಡಬೇಕು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನೀಡುವ 15% ವೇತನವನ್ನು ನಮ್ಮ ಎನ್‌ಎಚ್‌ಎಂ ನೌಕರರಿಗೂ ಅನ್ವಯಿಸಬೇಕು ಎಂಬ ಆಗ್ರಹಗಳೊಂದಿಗೆ ರಾಜ್ಯದ ಸಾವಿರಾರು ಎನ್‌ಎಚ್‌ಎಂ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, “ವಿನಾಕಾರಣ ವಜಾಗೊಳಿಸಿರುವ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು” ಎಂದೂ ಒತ್ತಾಯಿಸಲಾಗಿದೆ.

ಸಂಘದ ರಾಜ್ಯಾಧ್ಯಕ್ಷರಾದ ಮಮಿತ್ ಗಾಯಕವಾಡ್‌ ಅವರು ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿ, “ನಾವು ಸಮುದಾಯ ಆರೋಗ್ಯ ಅಧಿಕಾರಿಗಳೆಂದೇ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರತಿಯೊಂದು ಹಳ್ಳಿಯಲ್ಲಿಯೂ ಕೆಲಸ ಮಾಡುತ್ತೇವೆ. ಖಾಯಮಾತಿಗಾಗಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ. ಒಂದೂವರೆ ವರ್ಷದಿಂದ ಈ ಕುರಿತು ಕೇಳುತ್ತಲೇ ಬರುತ್ತಿದ್ದೇವೆ. ಸರ್ಕಾರವಾಗಲೀ ಇಲಾಖೆಯಾಗಲಿ ನಮಗೆ ಪ್ರತಿಕ್ರಿಯೆ ನೀಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಮಮಿತ್ ಗಾಯಕವಾಡ್

“ಆರು ವರ್ಷ ಪೂರೈಕೆ ಮಾಡಿದ ಸಮುದಾಯ ಆರೋಗ್ಯಾಧಿಕಾರಿಗಳನ್ನು ಖಾಯಂಗೊಳಿಸಬೇಕು. ಹೀಗೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳೇ ಹೇಳುತ್ತವೆ. 15,000 ರೂ. ಪ್ರೋತ್ಸಾಹಧನ ಕೊಡಬೇಕು. ನಮ್ಮ ರಾಜ್ಯದಲ್ಲಿ 8,000 ರೂ. ಪ್ರೋತ್ಸಾಹಧನ ನೀಡುತ್ತಾರೆ. ಬೇರೆ ರಾಜ್ಯಗಳಲ್ಲಿಯೂ 15,000 ರೂ. ಪ್ರೋತ್ಸಾಹಧನವನ್ನೇ ನೀಡಲಾಗುತ್ತಿದೆ” ಎಂದು ವಿವರಿಸಿದರು.

ಪ್ರತಿ ವರ್ಷ ಶೇ.5ರಷ್ಟು ಇನ್‌ಕ್ರಿಮೆಂಟ್ ಕೊಡಬೇಕಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಈ ಕೆಲಸವೂ ಆಗಿಲ್ಲ. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಲೂ ಅವಕಾಶ ಇಲ್ಲವಾಗಿದೆ. ನೌಕರರಿಗೆ ವಿಮೆ ಕೊಡಿಸಬೇಕಿದೆ ಎಂದರು.

ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಜ್ಯೋತಿ ಅವರು ’ಈದಿನ’ಕ್ಕೆ ಪ್ರತಿಕ್ರಿಯಿಸಿ, “ನಮ್ಮ ಜಿಲ್ಲೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಮುನ್ನೂರು ಮಂದಿ ಇದ್ದೇವೆ. ರಾಜ್ಯಾದ್ಯಂತ 6,192 ಜನರಿದ್ದೇವೆ. ಆದರೆ ನಾವು ಮೂಲಭೂತ ಸೌಕರ್ಯಗಳ ಕೊರತೆಯನ್ನು ಕೆಲಸದ ಸ್ಥಳದಲ್ಲಿ ಎದುರಿಸುತ್ತಿದ್ದೇವೆ. ಖಾಸಗಿ ಕಟ್ಟಡಗಳಲ್ಲಿ ಹಲವೆಡೆ ಆರೋಗ್ಯ ಕೇಂದ್ರಗಳು ನಡೆಯುತ್ತಿವೆ. ಮಹಿಳಾ ಸಿಬ್ಬಂದಿಗೆ ಶೌಚಾಲಯಗಳೂ ಇಂತಹ ಕಟ್ಟಡಗಳಲ್ಲಿ ಇಲ್ಲವಾಗಿವೆ. ಇದರಿಂದ ರೋಗಿಗಳಿಗೂ ತೊಂದರೆಯಾಗುತ್ತಿದೆ. ಮೂತ್ರ ಪರೀಕ್ಷೆ ಮಾಡಲು ಟಾಯ್ಲೆಟ್ ರೂಮ್‌ ಇಲ್ಲವಾದರೆ ಎಲ್ಲಿಗೆ ಕಳುಹಿಸುವುದು?” ಎಂದು ಪ್ರಶ್ನಿಸಿದರು.

ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಜ್ಯೋತಿ

ಮುಂದುವರಿದು, “ಪ್ರೋತ್ಸಾಹಧನವೆಂದು ರಾಜ್ಯ ಸರ್ಕಾರ ನೀಡುವ 8,000 ರೂಪಾಯಿಯೂ ಪೂರ್ತಿಯಾಗಿ ಸಿಗುತ್ತಿಲ್ಲ. ಕೆಲವು ಟಾರ್ಗೆಟ್‌ಗಳನ್ನು ಇಟ್ಟಿದ್ದಾರೆ. ಅದನ್ನು ಪೂರೈಸಿದರೆ ಮಾತ್ರ ನಾವು 8,000 ರೂಪಾಯಿಯನ್ನು ತೆಗೆದುಕೊಳ್ಳಬಹುದು. ಇಷ್ಟೆಲ್ಲ ಮೂಲಭೂತ ಸಮಸ್ಯೆಗಳನ್ನು ಇಟ್ಟುಕೊಂಡು ಟಾರ್ಗೆಟ್ ರೀಚ್ ಮಾಡಲು ಕೂಡ ಸಾಧ್ಯವಿಲ್ಲ. 3 ಅಥವಾ 4 ಸಾವಿರ ರೂ. ಪ್ರೋತ್ಸಾಹಧನವನ್ನಷ್ಟೇ ಪಡೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ವಾಹನ ವ್ಯವಸ್ಥೆ ಇಲ್ಲದಿದ್ದಾಗ ನಮ್ಮ ದುಡ್ಡಿನಲ್ಲೇ ಬಾಡಿಗೆ ಮಾಡಿಕೊಂಡು ಹೋಗಬೇಕು. ಇದಕ್ಕಾಗಿ ಕನಿಷ್ಠ 500 ರೂಪಾಯಿ ಖರ್ಚಾಗುತ್ತದೆ. ಬಂದ ದುಡ್ಡನ್ನೆಲ್ಲ ವಾಹನದ ಖರ್ಚಿಗೆ ಬಳಸುವುದಾದರೆ ನಮಗೆ ಉಳಿತಾಯವಾದದ್ದು ಏನು?” ಎಂದು ಕೇಳಿದರು.

“ನಾವು ವೈಟ್ ಕೋಟ್ ಹಾಕಿಕೊಂಡು ನಗುಮುಖದಿಂದ ಡ್ಯೂಟಿ ಮಾಡುತ್ತೇವೆ ಎಂದ ತಕ್ಷಣ ನಮಗೆ ಲಕ್ಷಗಟ್ಟಲೆ ಸಂಬಳವೇನೂ ಇಲ್ಲ. ಒಳ್ಳೆಯ ಸೇವೆಯನ್ನು ಸಲ್ಲಿಸಬೇಕೆಂದು ನಗುಮುಖದಲ್ಲಿ ಇರುತ್ತೇವೆ. ನೀವೇ 15,000 ನೀಡುವುದಾಗಿ ಹೇಳಿದ್ದೀರಿ. ಕೊಟ್ಟುಬಿಡಿ” ಎಂದು ಮನವಿ ಮಾಡಿದರು.

ಯಾದಗಿರಿಯ ಸಮುದಾಯ ಆರೋಗ್ಯಾಧಿಕಾರಿ ಗೋವಿಂದ ರಾಠೋಡ್‌ ಮಾತನಾಡಿ, “ನಾವು ವಾಸ್ತವದಲ್ಲಿ ವೈದ್ಯಕೀಯ ಸಿಬ್ಬಂದಿಯಾಗಿ ಕೆಲಸ ಮಾಡಬೇಕು. ಆದರೆ ನಮ್ಮಿಂದ ಡೇಟಾ ಎಂಟ್ರಿ, ಆನ್‌ಲೈನ್‌ ಕೆಲಸ ಮಾಡಿಸುತ್ತಾರೆ” ಎಂದು ವ್ಯಂಗ್ಯವಾಡಿದರು.

ಯಾದಗಿರಿಯ ಸಮುದಾಯ ಆರೋಗ್ಯಾಧಿಕಾರಿ ಗೋವಿಂದ ರಾಠೋಡ್‌

“ವೇತನ ಹೆಚ್ಚಳವನ್ನು ಏಕೆ ತಡೆದಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಆರು ವರ್ಷ ಆದ ಮೇಲೆ ಖಾಯಂ ಮಾಡಿಕೊಳ್ಳುತ್ತಾರೆ ಎಂಬ ಆಸೆಯಿಂದ ಬಿಎಸ್‌ಸಿ ನರ್ಸಿಂಗ್ ಮಾಡಿಕೊಂಡವರು, ಎಂಎಸ್ಸಿ ಮಾಡಿದವರೂ ಈ ಕೆಲಸಕ್ಕೆ ಬರುತ್ತಾರೆ. ಆದರೆ ಖಾಯಂಗೊಳಿಸುತ್ತಿಲ್ಲ” ಎಂದು ತಿಳಿಸಿದರು.

ಸಾವಿರಾರು ಎನ್‌ಎಚ್‌ಎಂ ನೌಕರರು ಹೋರಾಟದಲ್ಲಿ ಭಾಗಿಯಾಗಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ| ತಿರುಪತಿಗೆ ತೆರಳುತ್ತಿದ್ದಾಗ ಅಪಘಾತ; ನಾಲ್ವರು ಸಾವು, 6 ಗಾಯ

ತಿರುಪತಿಗೆ ಹೋಗುತ್ತಿದ್ದವರ ಕಾರು ಸೇತುವೆಯಿಂದ ಕೆಳಕ್ಕೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟು...

ಖಾಸಗಿ ಶಾಲಾ ಶುಲ್ಕ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆ

ಖಾಸಗಿ ಶಾಲೆಗಳು ನಿಗದಿಪಡಿಸಿರುವ ಪ್ರವೇಶ ಹಾಗೂ ಇತರೆ ಶುಲ್ಕಗಳ ವಿವರಗಳನ್ನು ಸಾರ್ವಜನಕರಿಗೆ...

ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿರುವುದೇ ದೇವೇಗೌಡರು : ಸಿದ್ದರಾಮಯ್ಯ ಆರೋಪ

ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ ಹೆಚ್...