ಅಮೆರಿಕ ಪತ್ರಕರ್ತೆ ಶೆಲ್ಲಿ ಅಪಹರಣ: ಹಿಜ್ಬುಲ್ಲಾ ಕೈವಾಡದ ಶಂಕೆ

Date:

ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟೆಲ್‌ಸನ್‌ ಅವರನ್ನು ಇರಾಕ್‌ನಲ್ಲಿ ಮಂಗಳವಾರ ಅಪಹರಿಸಲಾಗಿದೆ ಎಂದು ವರದಿಯಾಗಿದೆ.

- Advertisement -

ಅಮೆರಿಕ ಸರ್ಕಾರವು ಪತ್ರಕರ್ತೆಯ ಅಪಹರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇರಾಕ್‌ನೊಂದಿಗೆ ಶೆಲ್ಲಿಯ ಸುರಕ್ಷತೆಯ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಆಮೆರಿಕದ ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಕೃತ್ಯದ ಭಾಗೀದಾರರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಬಲ್ಲ ಮಾಹಿತಿಗಳ ಪ್ರಕಾರ ಪತ್ರಕರ್ತೆಗೆ ಇರಾನ್‌ನ ಪ್ರಾಕ್ಸಿ ಸಂಘ‌ಟನೆಯಾದ ಕೈತಬ್‌ ಹೆಝಬುಲ್ಲ ಜೀವ ಬೆದರಿಕೆ ಹಾಕಿತ್ತು, ಅಪಹರಿಸುವುದಾಗಿ ಬೆದರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಯುಎಸ್‌ ಸಹಾಯಕ ಕಾರ್ಯದರ್ಶಿ ಡೇಯ್ಲನ್‌ ಜಾನ್ಸನ್‌ ತಮ್ಮ ಎಕ್ಸ್‌ ಖಾತೆಯಲ್ಲಿ, ಇರಾನ್‌ ಬೆಂಬಲಿತ ಕತೈಬ್‌ ಹಿಜ್ಬುಲ್ಲಾ ಸಂಘಟನೆ ಈ ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದು, ಇರಾಕ್‌ನ ಅಧಿಕಾರಿಗಳು ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ.

ಕತಾಬ್‌ ಹಿಜ್ಬುಲ್ಲಾ ಇರಾನ್‌ ಬೆಂಬಲಿತ ಸಂಘಟನೆಯಾಗಿದ್ದು, ಅಮೆರಿಕ ಈ ಗುಂಪಿನ ಕೆಂಗಣ್ಣಿಗೆ ಗುರಿಯಾಗಿತ್ತು. ಶೆಲ್ಲಿ ಕಿಟೆಲ್‌ಸನ್‌ ಮಧ್ಯಪ್ರಾಚ್ಯ ಹಾಗೂ ಅಫಘಾನಿಸ್ತಾನ ಭಾಗದ ವಿಶೇಷ ವರದಿಗಾರ್ತಿಯಾಗಿದ್ದು, ಅಂತರಾಷ್ಟ್ರೀಯ ಪತ್ರಿಕೋದ್ಯಮದಲ್ಲಿ ಗುರುತಿಸಲ್ಪಟ್ಟಿದ್ದರು. ಯುಎಸ್‌ ಹಾಗೂ ಇಟಾಲಿಯನ್‌ ಪತ್ರಿಕೆಗಳಲ್ಲೂ ಇವರ ಕೆಲ ವರದಿಗಳು ಪ್ರಕಟವಾಗಿದ್ದವು.

ಇನ್ನಿತರ ಮೂಲಗಳ ಪ್ರಕಾರ ಯುಎಸ್‌ ಹಾಗೂ ಇರಾಕಿ ಅಧಿಕಾರಿಗಳು ಇರಾನ್‌ ಪ್ರತಿಗಾಮಿ ಅಕ್ಷಗಳು ಕಿಟೆಲ್‌ಸನ್‌ಗೆ ಒಡ್ಡಿದ್ದವು ಎನ್ನಲಾದ ಬೆದರಿಕೆಯ ಜಾಲವನ್ನು ಭೇದಿಸುತ್ತಿದ್ದು, ಕಳೆದ ಒಂದು ವಾರದಿಂದ ಆಕೆಯ ಮೇಲೆ ಸತತವಾಗಿ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಬೆದರಿಕೆಯನ್ನು ಹಾಕಲಾಗುತ್ತಿತ್ತು. ಜೊತೆಗೆ ದೇಶದಿಂದ ಹೊರಹೋಗುವಂತೆ ಬೆದರಿಸಲಾಗಿತ್ತು ಎನ್ನಲಾಗಿದೆ.

ಇರಾಕಿ ಭದ್ರತ ಪಡೆ ಸಂಶಯಿತ ವ್ಯಕ್ತಿಯನ್ನು ಬಂಧಿಸಿದ್ದು , ಅಪಹರಣಕ್ಕೆ ಬಳಸಳಾಗಿದೆ ಎಂಬ ಗುಮಾನಿಯಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಭದ್ರತಾ ಪಡೆಗಳು ಕಾರಣೀಕರ್ತರನ್ನು ಹುಡುಕಿ ಪತ್ರಕರ್ತೆಯ ಸುರಕ್ಷಿತ ಬಿಡುಗಡೆಯ ಆಶ್ವಾಶನೆ ನೀಡಿವೆ.

ಇರಾಕ್‌ನಲ್ಲಿನ ಅಮೆರಿಕ ಎಂಬಸಿಯು ನಿರಂತರವಾಗಿ ತನ್ನ ದೇಶದ ನಾಗರಿಕರು ಇರಾಕ್‌ ತೊರೆದು ದೇಶಕ್ಕೆ ಮರಳಬೇಕೆಂದು ಎಚ್ಚರಿಕೆ ನೀಡುತ್ತಾ ಬಂದಿದೆ. ಇರಾನಿಯನ್‌ ಬೆಂಬಲಿತ ಪಡೆಗಳಿಂದ ಅಮೆರಿಕನ್ನರಿಗೆ ಜೀವ ಬೆದರಿಕೆ, ಅಪಹರಣದ ಅಪಾಯಗಳು ಎದುರಾಗಬಹುದು. ಆದರಿಂದ ಎಂತಹ ಸಂದರ್ಭದಲ್ಲೂ ಇರಾಕ್‌ನತ್ತ ಪ್ರಯಾಣ ಮಾಡದಿರುವಂತೆ ಅಮೆರಿಕ ಎಂಬೆಸಿ ತನ್ನ ಪ್ರಜೆಗಳನ್ನು ಎಚ್ಚರಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...