ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮಹಿಳಾ ಕೈದಿಗಳ ಸಂಖ್ಯೆ! ಅಮೆರಿಕಕ್ಕೆ ಮೊದಲ ಸ್ಥಾನ- ಒಂದು ಆತಂಕಕಾರಿ ವರದಿ

Date:

ವರದಿಗಳ ಪ್ರಕಾರ ಜಗತ್ತಿನಾದಿಯಾಗಿ ರೂಢಿಯಲ್ಲಿರುವ ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಆರ್ಥಿಕ ಅಸಮಾನತೆಗಳು ಮಹಿಳೆಯರು ಅಪರಾಧಗಳಲ್ಲಿ ತೊಡಗಿಕೊಳ್ಳಲು ಕಾರಣ. ಬಡತನ ಅಸಮಾನತೆಗಳಿಂದ ರೋಸಿ ಹೋದವರ ಪ್ರಮಾಣವೂ ಗಣನೀಯವಾಗಿದೆ. ಮಹಿಳೆಯರು ತಮ್ಮ ಕುಟುಂಬದ ಲಾಲನೆ ಪಾಲನೆಗೆ ಅನೈತಿಕ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿದೆ.

- Advertisement -

ಹೆಣ್ಣು ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ಮೂಲ. ಆಕೆ ಜಗತ್ತಿನ ಅಂತಃಸತ್ವ. ಅಪರಾಧ ಪ್ರಕರಣಗಳಲ್ಲಿ ಸೆರೆ ಸೇರುವ ಪ್ರತಿ ಮಹಿಳಾ ಕೈದಿಯು ತನ್ನ ಕುಟುಂಬದ ಗಟ್ಟಿ ಬೇರಾಗಿರುತ್ತಾಳೆ. ಆಕೆಯ ದೀರ್ಘ ಅನುಪಸ್ಥಿತಿ ಜಗದ ಅಸ್ಥಿರತೆಗೆ ಕಾರಣವಾಗುತ್ತದೆ. ಜಗತ್ತಿನಾದಂತ್ಯ ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಪುರುಷ ಕೈದಿಗಳ ಸಂಖ್ಯೆ 22% ಹೆಚ್ಚಾದರೆ ಮಹಿಳಾ ಕೈದಿಗಳ ಪ್ರಮಾಣದಲ್ಲಿ 57% ಏರಿಕೆ ಕಂಡುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ...

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ...

ಸ್ಟಿಂಗ್ ಆಪರೇಷನ್ | ಭ್ರಷ್ಟಾಚಾರ ಬಯಲಿಗೆಳೆಯುವ ಸಾಧನವಾಗಬೇಕೇ ವಿನಾ...

ಆಡಳಿತ ಪಕ್ಷವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಆದರೆ, ವಿರೋಧ ಪಕ್ಷಗಳಿಗೂ ತಮ್ಮ ಆರೋಪಗಳನ್ನು ಸಮರ್ಥಿಸುವ ಹೊಣೆಗಾರಿಕೆ ಇದೆ. ರಾಜಕೀಯ ಲಾಭಕ್ಕಾಗಿ ಗಂಭೀರ ಆರೋಪಗಳನ್ನು ಮುಂದಿಡುವುದು ಮತ್ತು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು...

ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು ಬೇಡ್ತಿ-ಧರ್ಮ-ವರದಾ ನದಿ ಜೋಡಣೆ ಎಂಬ ಅವಳಿ ಗುಮ್ಮಗಳು ಎದ್ದು ಕುಳಿತು ಬೆಚ್ಚಿ ಬೀಳಿಸಿವೆ. ಸ್ವರ್ಣವಲ್ಲೀ ಸ್ವಾಮಿ, ಎಂಪಿ ಕಾಗೇರಿ ಮತ್ತು...

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪುರುಷರಿಗಿಂತ ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ಮಹಿಳಾ ಕೈದಿಗಳು ಹೆಚ್ಚಿರುವ ಜಗತ್ತಿನ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.

2025 ಬಿಡುಗಡೆಯಾದ ವಿಶ್ವ ಮಹಿಳಾ ಕೈದಿಗಳ ಪಟ್ಟಿಯ ಆರನೇ ಆವೃತ್ತಿಯ ಪ್ರಕಾರ 2000 ಇಸವಿಯಿಂದ ಈಚೆಗೆ ಮಹಿಳಾ ಕೈದಿಗಳ ಪ್ರಮಾಣ ಹೆಚ್ಚುತ್ತಿದೆ. ICPR ವರದಿಯ ಪ್ರಕಾರ ಜಗತ್ತಿನ ನಾನಾ ದೇಶಗಳ ಕಾರಾಗೃಹಗಳಲ್ಲಿ  ಒಟ್ಟು 7,33,000 ಮಹಿಳೆಯರು ಸೆರೆವಾಸದಲ್ಲಿದ್ದಾರೆ, ಅಮೆರಿಕದಲ್ಲಿ  1,74,607 ಮಹಿಳಾ ಕೈದಿಗಳಿದ್ದು ಮೊದಲ ಸ್ಥಾನದಲ್ಲಿದೆ, ಚೀನಾ ಎರಡನೇ ಸ್ಥಾನದಲ್ಲಿದ್ದು 1,45,000 ಮಹಿಳಾ ಕೈದಿಗಳಿದ್ದಾರೆ.

ಕ್ರಮವಾಗಿ ಥೈಲ್ಯಾಂಡ್‌, ಬ್ರೆಜಿಲ್‌, ರಷ್ಯಾ ಮೊದಲ ಐದು ದೇಶಗಳ ಪಟ್ಟಿಯಲ್ಲಿವೆ. ಭಾರತ ಆರನೇ ಸ್ಥಾನದಲ್ಲಿದೆ. ಭಾರತದ ಕಾರಾಗೃಹಗಳಲ್ಲಿ 23,000 ಜನ ಮಹಿಳಾ ಕೈದಿಗಳು ಸೆರೆವಾಸ ಅನುಭವಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಕ್ಷುಲ್ಲಕ ಕಾರಣಕ್ಕೆ ಜೈಲು ಪಾಲಾದವರು, ದಂಡ ಪಾವತಿಸಲು ಸಾಧ್ಯವಾಗದೆ ಸೆರೆಯಲ್ಲಿ ಧಿರ್ಘಕಾಲದಿಂದ ಬಂಧಿತರಾದ ಕೈದಿಗಳ ಸಂಖ್ಯೆ ಹೆಚ್ಚಿದೆ.

ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಾಗಲು ಕಾರಣಗಳೇನು?

ವರದಿಗಳ ಪ್ರಕಾರ ಜಗತ್ತಿನಾದಿಯಾಗಿ ರೂಢಿಯಲ್ಲಿರುವ ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಆರ್ಥಿಕ ಅಸಮಾನತೆಗಳು ಮಹಿಳೆಯರು ಅಪರಾಧಗಳಲ್ಲಿ ತೊಡಗಿಕೊಳ್ಳಲು ಕಾರಣ. ಬಡತನ ಅಸಮಾನತೆಗಳಿಂದ ರೋಸಿ ಹೋದವರ ಪ್ರಮಾಣವೂ ಗಣನೀಯವಾಗಿದೆ. ಮಹಿಳೆಯರು ತಮ್ಮ ಕುಟುಂಬದ ಲಾಲನೆ ಪಾಲನೆಗೆ ಅನೈತಿಕ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿದೆ.

ಗರ್ಭಪಾತ ಹಲವು ದೇಶಗಳಲ್ಲಿ ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ ಅಂತಹ ರಾಷ್ಟ್ರಗಳಲ್ಲಿ ಅನಿವಾರ್ಯ ಕಾರಣಗಳಿಗೆ ಒಳಗಾಗಿ ಗರ್ಭಪಾತ ಮಾಡಿಸಿಕೊಂಡ ಮಹಿಳೆಯರನ್ನು ಬಂಧಿಸಿ, ದೀರ್ಘಕಾಲದ ಶಿಕ್ಷೆಗೆ ಗುರಿಪಡಿಸಲಾಗಿದೆ. ಇನ್ನೊಂದಷ್ಟು ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ಅನೈತಿಕ ಹಾಗೂ ಕಾನೂನಿನ ಪರಿಧಿಯಲ್ಲಿ ನಿಷೇಧಿಸಲಾಗಿದೆ ಆದರೆ ಜೀವನ ನಿರ್ವಹಣೆಗಾಗಿ, ಇನ್ಯಾವುದೋ ಒತ್ತಡಗಳಲ್ಲಿ ಸಿಲುಕಿ ವೇಶ್ಯಾವಾಟಿಕೆ ವೃತ್ತಿ ನಿರ್ವಹಿಸಿದವರನ್ನು ಮಹಿಳಾ ಕೈದಿಗಳನ್ನಾಗಿಸಿ ಸೆರೆಯಲ್ಲಿಡಲಾಗಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಆತ್ಮಹತ್ಯೆಯನ್ನು ಅಪರಾಧವೆಂದು ಪರಿಗಣಿಸುವ ಕಾನೂನಿಗೆ ಒಳಪಡುವ ದೇಶಗಳಲ್ಲಿ ಈ ಕಾರಣಕ್ಕೆ ಸೆರೆಮನೆ ಸೇರಿದ ಮಹಿಳೆಯರ ಸಂಖ್ಯೆಯು ಕಡಿಮೆಯಿಲ್ಲ. ಹೀಗೆ ಗಂಡಿನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೆಲ್ಲ ಆತ್ಮಹತ್ಯೆಯನ್ನೇ ಬದಲಿ ಮಾರ್ಗವಾಗಿ ಆಯ್ದುಕೊಳ್ಳರು, ತೀವ್ರ ಆಘಾತಕ್ಕೆ ಹಿಂಸೆಗೆ ಒಳಗಾದವರು ಕಾನೂನಿನ ಮೇಲೆ ಭರವಸೆ ಕಳೆದು ಸೇಡಿನ ಮಾರ್ಗ ಹಿಡಿಯುತ್ತಾರೆ. ತಮ್ಮ ರಕ್ಷಣೆಯ ಹೊಣೆ ಹೊತ್ತವರು ಸಹ ಮಹಿಳಾಪರಾಧಿಗಳ ಪಟ್ಟಿಯಲ್ಲಿದ್ದಾರೆ.

8192

ಮಹಿಳಾ ಕೈದಿಗಳ ಸಂಖ್ಯೆಯ ಹೆಚ್ಚಳ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಬಹುದೆ?

ಜಗತ್ತಿನಾದ್ಯಂತ 19,000 ಮಕ್ಕಳು ತಮ್ಮ ಬಂಧಿತ ತಾಯಿಯರೊಂದಿಗೆ ಸೆರೆಮನೆಯಲ್ಲಿ ದಿನ ತಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯ ಅಧ್ಯಯನದ ಪ್ರಕಾರ ಈ ಮಕ್ಕಳು ಜೈಲಿನಿಂದ ಹೊರಬಂದ ತರುವಾಯದ ಬದುಕು ಸಾಮಾನ್ಯ ಮಕ್ಕಳ ಬದುಕಿನಂತೆ ಇರಲಾರದು. ಸಮಾಜದ ಪರಿಚಯವಿಲ್ಲದೆ, ಗೋಡೆಗಳ ಮಧ್ಯೆ ಕೈದಿಗಳ ಜೊತೆಗೆ ಬಾಲ್ಯ ಕಳೆದ ಮಕ್ಕಳು ಹೊರ ಜಗತ್ತಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಕೀಳರಿಮೆ, ಮಾನಸಿಕ ಅಭದ್ರತೆ ಇವರನ್ನು ಇನ್ನಿಲ್ಲದೆ ಕಾಡುತ್ತದೆ ಎನ್ನಲಾಗಿದೆ.

ಇದು ಕಾರಾಗೃಹದಲ್ಲಿ ತಾಯಿಯೊಂದಿಗೆ ಬದುಕುತ್ತಿರುವ ಮಕ್ಕಳ ಕತೆಯಾದರೆ, ಕಾರಾಗೃಹದಲ್ಲಿರುವ ತಾಯಂದಿರಿಂದ ಪ್ರತ್ಯೇಕವಾಗಿ ನೆರೆ-ಹೊರೆ, ಸಂಬಂಧಿಕರ ಸುಪರ್ದಿಯಲ್ಲಿ ಜೀವಿಸುತ್ತಿರುವ ಮಕ್ಕಳ ಸಂಖ್ಯೆ 1.45 ಮಿಲಿಯನ್‌. ತಾಯಿಯಿಂದ ದೂರವಾಗಿ ಬೆಳೆಯುವ ಮಕ್ಕಳು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಾರೆ. ಸರಿಯಾದ ಪಾಲನೆ ಪೋಷಣೆ ದೊರೆಯದೆ ಅಪೌಷ್ಟಿಕತೆ ಇವರನ್ನ ಬಾಧಿಸುತ್ತಿದೆ. ಜೊತೆಗೆ ಅಸುರಕ್ಷತೆಯ ಭಾವ ಕಾಡುವ ಸಂಭವವಿರುತ್ತದೆ.

ವಿಶ್ವಾದ್ಯಂತ ಮಹಿಳಾ ಕೈದಿಗಳ ಪ್ರಮಾಣ ಹೆಚ್ಚುತಿದ್ದಂತೆ ಕಾರಾಗೃಹಗಳು ಮಹಿಳಾ ಅಪರಾಧಿಗಳ ಶಿಕ್ಷೆ ಮತ್ತು ಪಶ್ಚಾತ್ತಾಪಕ್ಕೆ ಸೂಕ್ತ ತಾಣವಲ್ಲ ಎಂದು ಕಾನೂನು ವಿದ್ವಾಂಸರು ಹಾಗೂ ಮಹಿಳಾ ಪರ ಹೋರಾಟಗಾರರು ವಾದಿಸುತ್ತ ಬಂದಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಬಂಧಿತರಾದವರಲ್ಲಿ ಹಲವರು ಹಿಂಸಾತ್ಮಕ ಕೃತ್ಯಗಳಿಂದ ಸೆರೆ ಸೇರಿದವರಲ್ಲ. ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ 72% ಮಹಿಳಾ ಕೈದಿಗಳು ಈ ಗುಂಪಿಗೆ ಸೇರಿದವರು ಎಂದು ದಿ ಗಾರ್ಡಿಯನ್‌ ವರದಿ ಮಾಡಿದೆ.

ಇದನ್ನೂ ಓದಿ ಪ. ಬಂಗಾಳ | ಜೈಲುಗಳಲ್ಲೇ ಗರ್ಭಿಣಿಯರಾದ ಕೈದಿಗಳು; ಹೊರಜಗತ್ತನ್ನು ಕಾಣದೆ ಬೆಳೆಯುತ್ತಿರುವ ಮಕ್ಕಳು

ಕಾರಾಗೃಹ ಸೇರಿರುವ 80% ಮಹಿಳೆಯರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಯುರೋಪಿನ ಒಟ್ಟು ಆತ್ಮಹತ್ಯಾ ಪ್ರಕರಣಗಳಲ್ಲಿ ಮಹಿಳಾ ಸೆರೆವಾಸಿಗಳ ಸಂಖ್ಯೆ ಸಾಮಾನ್ಯ ಪ್ರಜೆಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಮಹಿಳಾ ಕೈದಿಗಳ ಮೇಲೆ ಕಾರಾಗೃಹದಲ್ಲಿಯೂ ತಪ್ಪದ ಲೈಂಗಿಕ ದೌರ್ಜನ್ಯ, ಭದ್ರತಾ ತಪಾಸಣೆಯ ವೇಳೆ ವಸ್ತ್ರ ರಹಿತಗೊಳಿಸುವುದು ಹಾಗೂ ಜೀತದಾಳುಗಳಂತೆ ಇವರಿಂದ ದುಡಿಸಿಕೊಳ್ಳುವುದು ಮಹಿಳಾಪರಾಧಿಗಳ ಆತ್ಮಹತ್ಯೆಗೆ ಕಾರಣವಾಗಿದೆ.

ದಿ ಗಾರ್ಡಿಯನ್‌ ವರದಿಯಂತೆ ಮಹಿಳಾಪರಾಧಿಗಳನ್ನು ಜೈಲಿನಲ್ಲಿನ ಪುರುಷ ಅಪರಾಧಿಗಳೊಡನೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಲಾಗುತ್ತದೆ, ಒಪ್ಪದಿದ್ದರೆ ಅತ್ಯಾಚಾರ ಮಾಡಲಾಗುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭ ಧರಿಸುವ ಕೈದಿಗಳಿಗೆ ಜೈಲಿನಲ್ಲಿಯೇ ಹೆರಿಗೆ ಮಾಡಿಸಲಾಗುತ್ತದೆ. ಹೆರಿಗೆಯ ಸಮಯದಲ್ಲೂ ಗರ್ಭಿಣಿಯರ ಕೈಗೆ ಕೋಳ ತೊಡಿಸಿ ಮಂಚಕ್ಕೆ ಕಟ್ಟಿ ಹಾಕುವ ಅಮಾನುಷ ಕಾನೂನನ್ನು ಎಲ್ಲೆಡೆ ಪರಿಪಾಲಿಸಲಾಗುತ್ತಿದೆ.

ಹೀಗಾಗಿಯೇ ಬ್ರಿಟಿಷ್‌ ವಕೀಲೆ ಹಾಗೂ ʼಬಿಯಾಂಡ್‌ ವಾಲ್ಸ್‌ʼ ಸದಸ್ಯೆ ಸಬ್ರಿನಾ ಮಹತಾನಿ, “ಜೈಲಿನ ವ್ಯಾಖ್ಯಾನವನ್ನೇ ಪುನರ್‌ ಪರೀಕ್ಷಿಸಲು ಕರೆ ನೀಡುತ್ತಾರೆ. ಜೈಲಿನಲ್ಲಿರುವ ಬಹುಪಾಲು ಮಹಿಳೆಯರಿಗೆ ಕಾರಾಗೃಹದಲ್ಲಿರಿಸಿ ಶಿಕ್ಷಿಸುವ ಅಗತ್ಯವೇ ಇಲ್ಲ. ಅವರಿಂದ ಜಗತ್ತಿಗೆ ಯಾವ ಅಪಾಯವೂ ಇಲ್ಲ, 20 ವರ್ಷಗಳ ಕಾಲ ಕಾರಾಗೃಹದ ಮಹಿಳೆಯರೊಂದಿಗೆ ಕಾರ್ಯ ನಿರ್ವಹಿಸಿದ ಅನುಭವದ ಮೇರೆಗೆ ಸೆರೆಶಿಕ್ಷೆ ಮಹಿಳೆಯರ ಪಾಲಿಗೆ ಪ್ರಪಂಚದಾದ್ಯಂತ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಮನಗಂಡಿದ್ದೇನೆ. ಜೈಲು ಸೇರಿದವರು ಹೊರ ಬರುವ ವೇಳೆಗೆ ಧನಾತ್ಮಕ ಪರಿವರ್ತನೆಗೆ ಒಳಗಾಗಿರಬೇಕು. ಆದರೆ ವಾಸ್ತವ ಹಾಗಿಲ್ಲ, ಈಗಾಗಲೇ ದೌರ್ಜನ್ಯಕ್ಕೆ ಒಳಗಾದವರು, ಸಮಾಜದ ಕೆಳಸ್ಥಾನದಲ್ಲಿರುವ ಮಹಿಳೆಯರು ಕಾರಾಗೃಹದಿಂದ ಹೊರ ಬರುವಾಗ ದುಪ್ಪಟ್ಟು ಆಘಾತಕ್ಕೆ ಒಳಗಾಗಿರುವುದನ್ನು ನಾವು ನೋಡುತ್ತಿದ್ದೇವೆ. ಆದರಿಂದ ಸೆರೆಮನೆ ಪುನರ್ವಸತಿಯ ಅಥವಾ ಪರಿವರ್ತನೆಯ ಕೇಂದ್ರವಾಗಲು ವಿಫಲವಾಗಿದೆ” ಎಂದಿದ್ದಾರೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ; ರಾಜ್ಯವನ್ನು ಪ್ರಪಾತಕ್ಕೆ ತಳ್ಳಿದ ಬಿಜೆಪಿ ಧೋರಣೆ

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ...

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ ನಾಮ ಹಾಕಿದ ಅದಾನಿ ವೃತ್ತಾಂತ

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ...

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು...