ಅಮೆರಿಕಕ್ಕೆ ಬನ್ನಿ, ನಮ್ಮವರಿಗೆ ಕಲಿಸಿ, ವಾಪಸ್‌ ಹೋಗಿ: ಟ್ರಂಪ್‌ನ ನೂತನ H-1B ವೀಸಾ ನೀತಿ

Date:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಹೊಸ ರೀತಿಯ H-1B ವೀಸಾ ನೀತಿಯನ್ನು ರೂಪಿಸಿದೆ. ವಿದೇಶಿ ನುರಿತ ಕಾರ್ಮಿಕರನ್ನು ತಾತ್ಕಾಲಿಕವಾಗಿ ಅಮೆರಿಕಕ್ಕೆ ಕರೆತಂದು ಅಮೆರಿಕನ್ನರಿಗೆ ಹೈ-ಟೆಕ್ ಉದ್ಯೋಗಗಳಲ್ಲಿ ತರಬೇತಿ ನೀಡಿ, ನಂತರ ಅವರ ದೇಶಕ್ಕೆ ಕಳುಹಿಸುವುದು.

- Advertisement -

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಯೋಜನೆಯ ಬಗ್ಗೆ ತಿಳಿಸಿರುವ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಟ್ರಂಪ್ ಸರ್ಕಾರದ ಹೊಸ ನೀತಿಯನ್ನು “ಜ್ಞಾನ ವರ್ಗಾವಣೆ” ಮಾದರಿಯೆಂದು ತಿಳಿಸಿದ್ದಾರೆ. ಇದರ ಉದ್ದೇಶ ಅಮೆರಿಕದಲ್ಲಿ ಕುಸಿದಿರುವ ಉತ್ಪಾದನಾ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವುದಾಗಿದೆ. 20-30 ವರ್ಷಗಳಿಂದ ನಾವು ನಿಖರ ಉತ್ಪಾದನಾ ಉದ್ಯೋಗಗಳನ್ನು ವಿದೇಶಕ್ಕೆ ಕಳುಹಿಸಿದ್ದೇವೆ. ರಾತ್ರೋರಾತ್ರಿ ಹಡಗುಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಸೆಮಿಕಂಡಕ್ಟರ್ ಉದ್ಯಮವನ್ನು ಅಮೆರಿಕಕ್ಕೆ ಮರಳಿ ತರಬೇಕು. ಅರಿಜೋನಾದಲ್ಲಿ ದೊಡ್ಡ ಕಾರ್ಖಾನೆಗಳು ಬರುತ್ತಿವೆ. ಇವೆಲ್ಲಕ್ಕೂ ನಮ್ಮರಿಗೆ ತರಬೇತಿ ಅಗತ್ಯ ಎಂದು ಬೆಸೆಂಟ್‌ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ವಿದೇಶಿ ನುರಿತ ಕಾರ್ಮಿಕರನ್ನು 3, 5 ಅಥವಾ 7 ವರ್ಷಗಳ ಕಾಲ ಕರೆತಂದು ಅಮೆರಿಕನ್ನರಿಗೆ ತರಬೇತಿ ನೀಡಿಸಿ, ನಂತರ ಅವರನ್ನು ಅವರ ದೇಶಕ್ಕೆ ಕಳುಹಿಸಲಾಗುವುದು. ಅಮೆರಿಕನ್ನರು ಈಗಲೇ ಈ ಉದ್ಯೋಗಗಳನ್ನು ಮಾಡಲು ಸಾಧ್ಯವಿಲ್ಲ, ಆದರೆ ಶೀಘ್ರದಲ್ಲೇ ಸಾಧ್ಯ ಎಂದು ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ

ಹಡಗು ನಿರ್ಮಾಣ, ಸೆಮಿಕಂಡಕ್ಟರ್ ತಯಾರಿಕೆ – ಇದನ್ನು ಹಲವು ವರ್ಷಗಳಿಂದ ಅಮೆರಿಕದಲ್ಲಿ ಮಾಡಿಲ್ಲ. ವಿದೇಶಿ ಪಾಲುದಾರರು ಬಂದು ಅಮೆರಿಕನ್ನರಿಗೆ ಕಲಿಸುತ್ತಾರೆ. ಈ ಯೋಜನೆ ಟ್ರಂಪ್‌ರ ಮಹತ್ವಾಕಾಂಕ್ಷಿ ಗುರಿ. ಮುಖ್ಯ ಉದ್ಯಮಗಳನ್ನು ಅಮೆರಿಕಕ್ಕೆ ಮರಳಿ ತಂದು ಆಮದು ಅವಲಂಬನೆ ಕಡಿಮೆ ಮಾಡುವುದಾಗಿದೆ ಎಂದು ಬೆಸೆಂಟ್ ಹೇಳಿದ್ದಾರೆ.

ಕಳೆದ 20-30 ವರ್ಷಗಳಿಂದ ಅಮೆರಿಕವು ಸೂಕ್ಷ್ಮ ಉತ್ಪಾದನಾ ಕ್ಷೇತ್ರದಲ್ಲಿ ಹಿಂದುಳಿದಿದೆ. ಈಗ ನಾವು ಅದನ್ನು ಹಿಂತಿರುಗಿಸಬೇಕಾಗಿದೆ. ಚಿಪ್ ನಿರ್ಮಾಣ ಮತ್ತು ಶಿಪ್ ನಿರ್ಮಾಣದಂತಹ ಕೈಗಾರಿಕೆಗಳನ್ನು ಪುನಃ ಅಮೆರಿಕದಲ್ಲಿ ಸ್ಥಾಪಿಸುವ ಗುರಿ ಇದೆ ಎಂದು ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.

ಈ ಕ್ಷಣಕ್ಕೆ ಅಮೆರಿಕನ್ನರು ಆ ಕೆಲಸವನ್ನು ಮಾಡಲಾರರು, ಇನ್ನೂ ಸಿದ್ಧರಿಲ್ಲ. ವಿದೇಶಿ ತಜ್ಞರು ಬಂದು ಕಲಿಸಿದರೆ ಅದು ಅಮೆರಿಕಕ್ಕೆ ಅನುಕೂಲ ಎಂದು ಬೆಸೆಂಟ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...