ಫ್ರಾನ್ಸ್| ನ್ಯೂ ಕ್ಯಾಲೆಡೋನಿಯಾದಲ್ಲಿ ತುರ್ತು ಪರಿಸ್ಥಿತಿ, 200 ಮಂದಿ ಬಂಧನ, ಟಿಕ್‌ಟಾಕ್ ಬ್ಯಾನ್

Date:

ಸತತ ಮೂರು ರಾತ್ರಿಗಳ ಕಾಲ ನಡೆದ ಭಾರೀ ದಂಗೆಯ ಬಳಿಕ ಗುರುವಾರ ಫ್ರಾನ್ಸ್ ನ್ಯೂ ಕ್ಯಾಲೆಡೋನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಟಿಕ್‌ಟಾಕ್ ಬ್ಯಾನ್ ಮಾಡಿದೆ. ಜೊತೆಗೆ 200 ಮಂದಿ ಬಂಧನ ಮಾಡಿದೆ.

ನ್ಯೂ ಕ್ಯಾಲೆಡೋನಿಯಾದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಪ್ರಸ್ತುತ ಫ್ರಾನ್ಸ್ ತನ್ನ ಯೋಧರನ್ನು ನ್ಯೂ ಕ್ಯಾಲೆಡೋನಿಯಾದ ಬಂದರುಗಳು ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿದೆ.

ಪೆಸಿಫಿಕ್ ದ್ವೀಪಸಮೂಹದಲ್ಲಿ ಹೊಸ ಮತದಾನದ ನಿಯಮಗಳನ್ನು ಪರಿಚಯಿಸುವ ಫ್ರಾನ್ಸ್ ಪ್ರಸ್ತಾಪದ ವಿರುದ್ಧ ಸ್ಥಳೀಯ ಜನರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಗುಂಡೇಟಿನಿಂದ ಪೊಲೀಸ್ ಅಧಿಕಾರಿ ಮತ್ತು ಹಲವಾರು ಮಂದಿ ಸಾವನ್ನಪ್ಪಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಅಘೋಷಿತ ತುರ್ತು ಪರಿಸ್ಥಿತಿ | ಅಂಬೇಡ್ಕರ್ ರಚಿತ ಸಂವಿಧಾನ ನಾಶಕ್ಕೆ ಬಿಜೆಪಿ ಪಿತೂರಿ: ಶರದ್ ಪವಾರ್

ನಾಲ್ಕು ದಿನಗಳ ಕಾಲ ಈ ಗಲಭೆ ನಡೆದಿದ್ದು, ನ್ಯೂ ಕ್ಯಾಲೆಡೋನಿಯಾದ ರಸ್ತೆಗಳಲ್ಲಿ ಬರೀ ಸುಟ್ಟ ವಾಹನಗಳು, ಕಲ್ಲು, ಸಿಮೆಂಟ್ ತುಂಡುಗಳು ಕಂಡುಬಂದಿದೆ. ಸಾಮಾನ್ಯವಾಗಿ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುವ ನಗರದ ರಸ್ತೆಗಳಲ್ಲಿ ಪ್ರಸ್ತುತ ಶಸ್ತ್ರಸಜ್ಜಿತ ವಾಹನಗಳು ಸಂಚರಿಸುತ್ತಿದೆ.

ಭದ್ರತಾ ಪಡೆಗಳು ದಂಗೆಯ ಐದು ಶಂಕಿತ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದೆ. ಘರ್ಷಣೆಗಳು ಭುಗಿಲೆದ್ದ ನಂತರ 200 ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಲಾಗಿದೆ. 64 ಪೊಲೀಸರು ಸೇರಿದಂತೆ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಲಿಂಗತ್ವ ಅಲ್ಪಸಂಖ್ಯಾತ ಗೇಬ್ರಿಯಲ್ ಅಟ್ಟಲ್ ಫ್ರಾನ್ಸ್‌ನ ನೂತನ ಪ್ರಧಾನಿ

ಟಿಕ್‌ಟಾಕ್ ಬ್ಯಾನ್

ಬಂದರುಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಕ್ಷಿಸಲು ಸೈನಿಕರನ್ನು ಕಳುಹಿಸಲಾಗಿದೆ ಎಂದು ಫ್ರೆಂಚ್ ಪ್ರಧಾನಿ ಗೇಬ್ರಿಯಲ್ ಅಟಲ್ ಅವರು ತಿಳಿಸಿದ್ದಾರೆ. ಇನ್ನು ಗಲಭೆಕೋರರು ಟಿಕ್‌ಟಾಕ್ ಅನ್ನು ಬಳಸುತ್ತಿದ್ದರಿಂದ ಅದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಗುರುವಾರ ಬೆಳಿಗ್ಗೆ, ಎಎಫ್‌ಪಿ ಟಿಕ್‌ಟಾಕ್‌ನಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿರುವ 20ರಷ್ಟು ಖಾತೆಗಳನ್ನು ಗುರುತಿಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೆಕ್ಕಾಗೆ ಹಜ್ ಯಾತ್ರೆಗೆ ತೆರಳಿದ್ದ 550 ಯಾರ್ತಾರ್ಥಿಗಳು ಬಿಸಿಲಾಘಾತದಿಂದ ಸಾವು

ಮೆಕ್ಕಾಗೆ ಈ ವರ್ಷ ಹಜ್‌ ಯಾತ್ರೆಗೆ ತೆರಳಿದ್ದ 550 ಯಾರ್ತಾರ್ಥಿಗಳು ತೀವ್ರ...

ನಿಜ್ಜಾರ್ ಸಾವಿಗೆ ಕೆನಡಾ ಸಂಸತ್‌ನಲ್ಲಿ ಮೌನಾಚರಣೆ: ಭಾರತ ಆಕ್ರೋಶ

ಖಲಿಸ್ತಾನಿ ಉಗ್ರಗಾಮಿ ಹರ್‌ದೀಪ್‌ ಸಿಂಗ್‌ ನಿಜ್ಜರ್ ಸಾವಿನ ಮೊದಲ ವರ್ಷದ ನೆನಪಿಗಾಗಿ...

ಮಾಲ್ಡೀವ್ಸ್‌| ಸೇತುವೆ ದುರಸ್ತಿ ವೇಳೆ ಭಾರತೀಯ ಕಾರ್ಮಿಕ ಸಾವು; ಎರಡು ತಿಂಗಳಲ್ಲಿ 2ನೇ ಪ್ರಕರಣ

ಮಾಲ್ಡೀವ್ಸ್‌ನ ರಾಜಧಾನಿಯಲ್ಲಿನ ಪ್ರಮುಖ ಸೇತುವೆ ದುರಸ್ತಿ ಸಮಯದಲ್ಲಿ ಕುಸಿದುಬಿದ್ದ ಭಾರತೀಯ ಕಾರ್ಮಿಕರೊಬ್ಬರು...

ಹ್ಯಾಕ್ ಆಗುವ ಸಾಧ್ಯತೆ; ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದ ಎಲಾನ್‌ ಮಸ್ಕ್‌

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನ ಮಾಲೀಕ ಎಲಾನ್‌ ಮಸ್ಕ್‌, ಕೃತಕ ಬುದ್ಧಿಮತ್ತೆ(ಎಐ) ಅಥವಾ...