ಸೂಡಾನ್‌ | ಆರ್‌ಎಸ್‌ಎಫ್‌ ಪಡೆಗಳಿಂದ ಭಾರತೀಯನ ಅಪಹರಣ, ಶಾರೂಕ್‌ ಬಗ್ಗೆ ಪ್ರಶ್ನೆ!

Date:

ಸೂಡಾನಿನ ಅಶಾಂತಿಯ ಮಧ್ಯೆ ಭಾರತದ ಒಡಿಶಾ ರಾಜ್ಯದ ಜಗತ್ಸಿಂಘಪುರ ಜಿಲ್ಲೆಯ ಆದರ್ಶ್‌ ಬೆಹೇರಾ (36) ಅವರನ್ನು ರಾಪಿಡ್‌ ಸಪೋರ್ಟ್‌ ಫೋರ್ಸ್‌ (ಆರ್‌ಎಸ್‌ಎಫ್) ದಾಳಿಕೋರರು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಸೂಡಾನಿನ ಅಲ್‌ ಫಾಶಿರ್‌ ನಗರದಲ್ಲಿರುವ ಸುಕರಾತಿ ಪ್ಲಾಸ್ಟಿಕ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬೆಹೇರಾ ಅವರನ್ನು ಆರ್‌ಎಸ್‌ಎಫ್‌ ಪಡೆಗಳು ನ್ಯಾಲಾ ನಗರಕ್ಕೆ ಕರೆದುಕೊಂಡು ಹೋಗಿರುವ ಸಾಧ್ಯತೆಗಳಿವೆ.

- Advertisement -

ಸುದ್ದಿ ಮಾಧ್ಯಮ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ಆದರ್ಶ್‌ ಬೆಹೇರಾ ಅವರು ಇಬ್ಬರು ಸಶಸ್ತ್ರ ಆರ್‌ಎಸ್‌ಎಫ್‌ ಯೋಧರ ನಡುವೆ ಕುಳಿತಿರುವ ದೃಶ್ಯ ಕಾಣಿಸುತ್ತದೆ. ಒಬ್ಬ ಯೋಧ ಅವರೊಂದಿಗೆ ಹಾಸ್ಯಮಾಡುತ್ತಾ “ನಿಮಗೆ ಶಾರುಖ್‌ ಖಾನ್‌ ಗೊತ್ತೇ?” ಎಂದು ಕೇಳಿದರೆ, ಮತ್ತೊಬ್ಬ ಯೋಧ ಅವರು “ಡಾಗಾಲೋ ಗುಡ್‌” ಎಂದು ಹೇಳುವಂತೆ ಒತ್ತಾಯಿಸುತ್ತಾನೆ. ಡಾಗಾಲೋ ಎಂದರೆ ಆರ್‌ಎಸ್‌ಎಫ್‌ನ ನಾಯಕ ಮೊಹಮ್ಮದ್‌ ಹಮ್ದಾನ್‌ ಡಾಗಾಲೋ (ಹೆಮೆಟಿ) ಎಂಬವರನ್ನು ಸೂಚಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಬೆಹೇರಾ ಅವರ ಪತ್ನಿ ಸುಸ್ಮಿತಾ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, “ನನ್ನ ಪತಿ ಕಳೆದ ಎರಡು ವರ್ಷಗಳಿಂದ ಸೂಡಾನಿನಲ್ಲಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ 8 ಮತ್ತು 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ದಯವಿಟ್ಟು ಸರ್ಕಾರ ನಮ್ಮ ಪತಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಿ” ಎಂದು ಮನವಿ ಮಾಡಿದ್ದಾರೆ.

ಇದನ್ನು ಓದಿದ್ದೀರಾ? ಸುಡಾನ್‌ | ಆರ್‌ಎಸ್‌ಎಫ್‌ನಿಂದ ಭೀಕರ ನರಮೇಧ: ಮೂರು ದಿನಗಳಲ್ಲಿ 1,500ಕ್ಕೂ ಹೆಚ್ಚು ಮಂದಿ ಹತ್ಯೆ

ಸೂಡಾನಿನ ಅಲ್‌ ಫಾಶಿರ್‌ನಲ್ಲಿ ಕಳೆದ 18 ತಿಂಗಳಿನಿಂದ ಆರ್‌ಎಸ್‌ಎಫ್‌ ಮತ್ತು ಸೂಡಾನೀಸ್‌ ಆರ್ಮ್ಡ್‌ ಫೋರ್ಸ್‌ (SAF) ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾವಿರಾರು ಜನರು ಬಲಿಯಾಗಿದ್ದಾರೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ಆರ್‌ಎಸ್‌ಎಫ್‌ ಪಡೆಗಳ ವಿರುದ್ಧ ಯುದ್ಧ ಅಪರಾಧದ ತನಿಖೆ ಆರಂಭಿಸಲು ಎಚ್ಚರಿಕೆ ನೀಡಿದೆ.

ಭಾರತದಲ್ಲಿನ ಸೂಡಾನಿನ ರಾಯಭಾರಿ ಡಾ. ಮೊಹಮ್ಮದ್‌ ಅಬ್ದಲ್ಲಾ ಅಲಿ ಎಲ್ಟೊಮ್‌ ಮಾತನಾಡಿ, “ಅಲ್‌ ಫಾಶಿರ್‌ನಲ್ಲಿ ಸಂಪೂರ್ಣ ಸಂಪರ್ಕ ವ್ಯತ್ಯಯವಾಗಿದೆ. ಯಾವುದೇ ಸಂಪರ್ಕ ಸಾಧ್ಯವಿಲ್ಲ. ನಾವು ಅವರ ಸುರಕ್ಷತೆಯ ಬಗ್ಗೆ ಆಶಾಭಾವನೆ ಹೊಂದಿದ್ದೇವೆ ಮತ್ತು ಅವರು ಶೀಘ್ರದಲ್ಲೇ ಭಾರತಕ್ಕೆ ಸುರಕ್ಷಿತವಾಗಿ ಮರಳಲಿ ಎಂದು ಬಯಸುತ್ತೇವೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...