ಗಾಜಾದ ಮನೆಗಳಲ್ಲಿ ಇಸ್ರೇಲಿ ಸೈನಿಕರ ವಿಕೃತಿಯಾಟಕ್ಕೆ ಎಲ್ಲೆಡೆ ಆಕ್ರೋಶ

Date:

ಇಸ್ರೇಲ್‌ ಸೈನಿಕರು ಗಾಜಾದಲ್ಲಿರುವ ಖಾಲಿಯಿರುವ ಪ್ಯಾಲಿಸ್ತೇನ್‌ ಮನೆಗಳಲ್ಲಿ ಮಹಿಳೆಯರ ಒಳ ಉಡುಪುಗಳೊಂದಿಗೆ ಫೋಟೋ – ವಿಡಿಯೋ ಶೂಟ್‌ ಮಾಡಿಕೊಂಡು ಆಟವಾಡುತ್ತಿರುವ ವಿಡಿಯೋಗಳು ಹಾಗೂ ಫೋಟೋಗಳು ಎಲ್ಲಡೆ ವೈರಲ್‌ ಆಗಿದ್ದು, ಸೈನಿಕರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ವಿಡಿಯೋವೊಂದರಲ್ಲಿ ಬಂದೂಕು ಹಿಡಿದು ಕುರ್ಚಿಯಲ್ಲಿ ಕುಳಿತ ಸೈನಿಕನೊಬ್ಬ ಮತ್ತೊಬ್ಬ ಸೈನಿಕನಿಗೆ ಮಹಿಳೆಯರ ಒಳ ಉಡುಪನ್ನು ಬಾಯಿಗೆ ಹಾಕುತ್ತಿರುವುದು ಕಂಡು ಬಂದಿದೆ.

ಮತ್ತೊಂದು ವಿಡಿಯೋದಲ್ಲಿ ಸೈನಿಕನೊಬ್ಬ ಮಹಿಳಾ ಒಳ ಉಡುಪುಗಳನ್ನು ಧರಿಸಿರುವ ಮನುಷ್ಯಾಕೃತಿಯನ್ನು ಹಿಡಿದುಕೊಂಡು” ನಾನು ಸುಂದರ ಪತ್ನಿಯನ್ನು ಕಂಡುಕೊಂಡು ಗಾಜಾದಲ್ಲಿ ಈ ಮಹಿಳೆಯೊಂದಿಗೆ  ಗಂಭೀರ ಸಂಬಂಧ ಹೊಂದಿದ್ದೇನೆ” ಎಂದು ಹೇಳುತ್ತಾನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಯಿಟರ್ಸ್ ಪರಿಶೀಲಿಸಿದ ಒಳ ಉಡುಪು ಮತ್ತು ಮನುಷ್ಯಾಕೃತಿ ಚಿತ್ರಗಳು ಮತ್ತು ವಿಡಿಯೋಗಳನ್ನು ಪ್ಯಾಲೇಸ್ಟಿನಿಯನ್ ವರದಿಗಾರ ಯೂನಿಸ್ ತಿರಾವಿ ಅವರು ಮರು ಪೋಸ್ಟ್ ಮಾಡಿದ ನಂತರ ಹತ್ತಾರು ಬಾರಿ ವೀಕ್ಷಿಸಲಾಗಿದೆ.

ಮಹಿಳಾ ಒಳ ಉಡುಪುಗಳ ಪ್ಯಾಕೆಟ್‌ಗಳಿಂದ ಆವೃತವಾಗಿರುವ ಹಾಸಿಗೆಯ ಮುಂದೆ ಸೈನಿಕನೊಬ್ಬ ತನ್ನ ಗನ್‌ನೊಂದಿಗೆ ಪೋಸ್ ನೀಡುತ್ತಿರುವುದನ್ನು ಒಂದು ಫೋಟೋ ತೋರಿಸುತ್ತದೆ. ಇನ್ನೊಬ್ಬ ಸೈನಿಕನು ಅರೆಬೆತ್ತಲೆ ಗೊಂಬೆಯನ್ನು ಮುದ್ದಿಸುತ್ತಿರುವುದನ್ನು ತೋರಿಸುತ್ತದೆ.

ಇಸ್ರೇಲಿ ಸೈನಿಕರ ವರ್ತನೆಯ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವಕ್ತಾರ ರವೀನಾ ಶಮ್‌ದಾಸಾನಿ, “ಈ ಸೈನಿಕರು ಪ್ಯಾಲೆಸ್ತೀನ್ ಮಹಿಳೆಯರು ಮಾತ್ರವಲ್ಲದೆ ಎಲ್ಲ ಮಹಿಳೆಯರನ್ನು ಅವಮಾನಿಸುತ್ತಾರೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೌರತ್ವ ಪ್ರಮಾಣಪತ್ರ ಪೂಜಾರಿ ಕೊಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?

“ಇಂತಹ ಚಿತ್ರಗಳ ಪೋಸ್ಟ್ ಪ್ಯಾಲೇಸ್ಟಿನಿಯನ್ ಮಹಿಳೆಯರಿಗೆ ಮತ್ರವಲ್ಲದೆ ಎಲ್ಲ ಮಹಿಳೆಯರಿಗೆ ಅವಮಾನಕರವಾಗಿದೆ” ಎಂದು ತಿಳಿಸಿದ್ದಾರೆ

ಇದಕ್ಕೆ ಪ್ರತಿಕ್ರಿಯೆಸಿರುವ ಇಸ್ರೇಲ್ ರಕ್ಷಣಾ ಪಡೆಯ ವಕ್ತಾರರು, ಸೈನಿಕರು ಆದೇಶಗಳು ಮತ್ತು ಮೌಲ್ಯಗಳನ್ನು ಅನುಸರಿಸಬೇಕೆಂದು ಮಿಲಿಟರಿ ನಿರೀಕ್ಷಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊಗಳು ಮತ್ತು ಭಾವಚಿತ್ರಗಳ ಬಗ್ಗೆ ತನಿಖೆ ಮಾಡುವುದಾಗಿ ತಿಳಿಸಿದೆ.

ಆದಾಗ್ಯೂ, ಈ ವರ್ತನೆಯಲ್ಲಿ ಭಾಗಿಯಾದ ಸೈನಿಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿರುವ ಬಗ್ಗೆ ಇಸ್ರೇಲ್ ರಕ್ಷಣಾ ಪಡೆ ಯಾವುದೇ ಮಾಹಿತಿ ನೀಡಿಲ್ಲ.

ಕಳೆದ ವರ್ಷ ಅಕ್ಟೋಬರ್ 7 ರಿಂದ ಯುದ್ಧದಲ್ಲಿ ಸಿಲುಕಿರುವ ಇಸ್ರೇಲ್ ಮತ್ತು ಹಮಾಸ್ ಯುದ್ಧದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್ ಮೇಲೆ ಶೀಘ್ರ ಇರಾನ್ ದಾಳಿ ಸಾಧ್ಯತೆ: ಬೈಡನ್ ಎಚ್ಚರಿಕೆ

ಸಿರಿಯಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್ ಶೀಘ್ರವೇ ಇಸ್ರೇಲ್ ಮೇಲೆ ದಾಳಿ...

ವಂಚನೆ ಪ್ರಕರಣದಲ್ಲಿ ವಿಯೆಟ್ನಾಂ ಶತ ಕೋಟ್ಯಾಧೀಶೆಗೆ ಮರಣ ದಂಡನೆ

ದೇಶದ ಅತೀ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂ ನ ರಿಯಲ್‌...

ಇಂಗ್ಲೆಂಡ್‌ನಲ್ಲಿ 12 ಮಂದಿ ಭಾರತೀಯರ ಬಂಧನ

ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 11 ಮಂದಿ ಪುರುಷರು ಮತ್ತು...

‘ಹಿಗ್ಸ್ ಬೋಸಾನ್’ ಕಂಡುಹಿಡಿದ ಭೌತಶಾಸ್ತ್ರಜ್ಞ ಪೀಟರ್ ಹಿಗ್ಸ್ ನಿಧನ

ಹಿಗ್ಸ್ ಬೋಸಾನ್ ಎಂದು ಕರೆಯಲ್ಪಡುವ ಸೃಷ್ಟಿಯ ಮೂಲ ಧಾತು (ಗಾಡ್ ಪಾರ್ಟಿಕಲ್...